ETV Bharat / international

ಸಿರಿಯಾದಲ್ಲಿ 8 ಲಕ್ಷಕ್ಕೂ ಅಧಿಕ ಜನರ ಸ್ಥಳಾಂತರ: ಭಾನುವಾರ 2 ಲಕ್ಷ ಸಿರಿಯನ್ನರು ಸ್ವದೇಶಕ್ಕೆ ಆಗಮನ - SYRIA CONFLICT

ಸಿರಿಯಾದಲ್ಲಿ ಯುದ್ಧ ಬಿಕ್ಕಟ್ಟು ಆರಂಭವಾದ ನಂತರ 8 ಲಕ್ಷಕ್ಕೂ ಅಧಿಕ ಜನ ಸ್ಥಳಾಂತರಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.

ಸಿರಿಯಾ ನಿರಾಶ್ರಿತರು
ಸಿರಿಯಾ ನಿರಾಶ್ರಿತರು (IANS)
author img

By ETV Bharat Karnataka Team

Published : Dec 17, 2024, 4:17 PM IST

ವಿಶ್ವಸಂಸ್ಥೆ(ನ್ಯೂಯಾರ್ಕ್ ಸಿಟಿ): ಸಿರಿಯಾದಲ್ಲಿ ಇತ್ತೀಚಿನ ಯುದ್ಧ ಬಿಕ್ಕಟ್ಟಿನ ಸ್ಥಿತಿಯಿಂದಾಗಿ 8,80,000ಕ್ಕೂ ಅಧಿಕ ಜನರು ಸ್ಥಳಾಂತರಗೊಂಡಿದ್ದಾರೆ ಎಂದು ವಿಶ್ವಸಂಸ್ಥೆಯ ಮಾನವೀಯ ಪರಿಹಾರ ಕಾರ್ಯಕರ್ತರು ತಿಳಿಸಿದ್ದಾರೆ. ಸ್ಥಳಾಂತರಗೊಂಡವರಲ್ಲಿ ಸುಮಾರು 6 ಪ್ರತಿಶತದಷ್ಟು ಜನರು ಕನಿಷ್ಠ ಒಂದು ರೀತಿಯ ಅಂಗವೈಕಲ್ಯದೊಂದಿಗೆ ಬದುಕುತ್ತಿದ್ದಾರೆ ಎಂದು ಯುಎನ್ ಕಾರ್ಯಕರ್ತರು ಅಂದಾಜಿಸಿದ್ದಾರೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

"ಹೊರದೇಶಗಳಲ್ಲಿ ಆಶ್ರಯ ಪಡೆದಿದ್ದ ಸಿರಿಯನ್ನರು ನಿರಂತರವಾಗಿ ಸ್ವದೇಶಕ್ಕೆ ಮರಳುತ್ತಿದ್ದಾರೆ. ಭಾನುವಾರ ಒಂದೇ ದಿನದಲ್ಲಿ 2 ಲಕ್ಷ 20 ಸಾವಿರದಷ್ಟು ಸಿರಿಯನ್ನರು ಸ್ವದೇಶಕ್ಕೆ ಮರಳಿದ್ದಾರೆ" ಎಂದು ಯುಎನ್ ಮಾನವೀಯ ವ್ಯವಹಾರಗಳ ಸಮನ್ವಯ ಕಚೇರಿ (ಒಸಿಎಚ್ಎ) ತಿಳಿಸಿದೆ. ಇದಲ್ಲದೆ ಈಶಾನ್ಯ ಸಿರಿಯಾದಾದ್ಯಂತ ಸುಮಾರು 250 ಸಾಮೂಹಿಕ ಕೇಂದ್ರಗಳಲ್ಲಿ 40,000ಕ್ಕೂ ಹೆಚ್ಚು ಸ್ಥಳಾಂತರಗೊಂಡ ಜನರು ವಾಸಿಸುತ್ತಿದ್ದಾರೆ.

ವಿಶ್ವಸಂಸ್ಥೆ ಮತ್ತು ಪಾಲುದಾರರು ಆಹಾರ, ನೀರು, ನಗದು, ಡೇರೆಗಳು ಮತ್ತು ಕಂಬಳಿಗಳನ್ನು ಪೂರೈಸುವ ಮೂಲಕ ನಿರಾಶ್ರಿತರಿಗೆ ನೆರವು ನೀಡುವುದನ್ನು ಮುಂದುವರಿಸಿದ್ದಾರೆ ಎಂದು ಕಚೇರಿ ತಿಳಿಸಿದೆ. ವಿಶ್ವಸಂಸ್ಥೆಯು ವೈದ್ಯಕೀಯ ತಂಡಗಳು ಮತ್ತು ವೈದ್ಯಕೀಯ ಸರಬರಾಜುಗಳನ್ನು ಸಹ ನಿಯೋಜಿಸುತ್ತಿದೆ. ಜೊತೆಗೆ, ಬ್ಯಾಕಪ್ ಜನರೇಟರ್​ಗಳನ್ನು ಚಾಲನೆಯಲ್ಲಿಡಲು ಇಂಧನವನ್ನು ಸಹ ಪೂರೈಸಲಾಗುತ್ತಿದೆ.

ಸಿರಿಯನ್ ಅರಬ್ ರೆಡ್ ಕ್ರೆಸೆಂಟ್ ಮತ್ತು ಇಂಟರ್ ನ್ಯಾಷನಲ್ ಕಮಿಟಿ ಆಫ್ ದಿ ರೆಡ್ ಕ್ರಾಸ್, ಯುಎನ್ ಚಿಲ್ಡ್ರನ್ಸ್ ಫಂಡ್ (ಯುನಿಸೆಫ್) ಸಹಯೋಗದೊಂದಿಗೆ ಸಿರಿಯಾದ ಅಲೆಪ್ಪೊ ಗವರ್ನರೇಟ್​ನಲ್ಲಿರುವ ತಿಶ್ರೀನ್ ಅಣೆಕಟ್ಟು ದುರಸ್ತಿಗೊಳಿಸಲು ಶುಕ್ರವಾರ ಜಂಟಿ ಕಾರ್ಯಾಚರಣೆ ನಡೆಸಲಾಯಿತು.

ಕಳೆದ ವಾರ ಅಣೆಕಟ್ಟಿನ ಬಳಿ ಬಂಡುಕೋರರ ಹೋರಾಟ ಭುಗಿಲೆದ್ದಿದ್ದರಿಂದ ಸುದೀರ್ಘಾವಧಿಯವರೆಗೆ ವಿದ್ಯುತ್ ಕಡಿತ ಉಂಟಾಯಿತು. ಅಲ್ಲದೆ ನೀರು ಮತ್ತು ಇತರ ಅಗತ್ಯ ಸೇವೆಗಳಿಗೂ ಅಡ್ಡಿಯಾಗಿತ್ತು. ಇದರಿಂದ ಲಕ್ಷಾಂತರ ಜನರ ಜೀವನ ಅತಂತ್ರಕ್ಕೆ ಸಿಲುಕಿತ್ತು.

ಮಾನವೀಯ ವ್ಯವಹಾರಗಳ ವಿಶ್ವಸಂಸ್ಥೆಯ ಅಧೀನ ಪ್ರಧಾನ ಕಾರ್ಯದರ್ಶಿ ಮತ್ತು ತುರ್ತು ಪರಿಹಾರ ಸಂಯೋಜಕ ಟಾಮ್ ಫ್ಲೆಚರ್ ಸೋಮವಾರ ಡಮಾಸ್ಕಸ್​ನಲ್ಲಿ ಸಿರಿಯನ್ ರಾಜಕೀಯ ಪರಿವರ್ತನಾ ಅಧಿಕಾರಿಗಳನ್ನು ಭೇಟಿಯಾಗಿ ಪರಿಹಾರ ಪ್ರಕ್ರಿಯೆಗಳ ಬಗ್ಗೆ ಚರ್ಚಿಸಿದರು.

ಏತನ್ಮಧ್ಯೆ, ಲೆಬನಾನ್​ನಲ್ಲಿ ಹಗೆತನ ಕೊನೆಗೊಂಡಿದೆ ಎಂದು ನವೆಂಬರ್ 27ರಂದು ಘೋಷಿಸಿದ ನಂತರ ಸಿರಿಯಾದಿಂದ ಲೆಬನಾನ್ ಗೆ ಶುಕ್ರವಾರದವರೆಗೆ ಸುಮಾರು 30,000 ಸ್ಥಳಾಂತರಗೊಂಡ ಜನರು ಮರಳಿದ್ದಾರೆ ಎಂದು ಲೆಬನಾನ್ ಅಧಿಕಾರಿಗಳು ಅಂದಾಜಿಸಿದ್ದಾರೆ ಎಂದು ಯುಎನ್ ನಿರಾಶ್ರಿತರ ಸಂಸ್ಥೆ ವರದಿ ಮಾಡಿದೆ.

ಔಪಚಾರಿಕ ಮತ್ತು ಅನೌಪಚಾರಿಕ ಗಡಿ ದಾಟುವಿಕೆಗಳ ಮೂಲಕ ಪ್ರತಿದಿನ ಏರಿಳಿತದ ಚಲನೆಗಳು ಮುಂದುವರಿದಿವೆ ಎಂದು ಅಂತರರಾಷ್ಟ್ರೀಯ ವಲಸೆ ಸಂಸ್ಥೆ ವರದಿ ಮಾಡಿದೆ. ಡಮಾಸ್ಕಸ್ ಸ್ವಾಧೀನದ ನಂತರ ಸಿರಿಯನ್ ಗಡಿ ಪೋಸ್ಟ್​ಗಳಲ್ಲಿನ ಅಧಿಕಾರಿಗಳು ತಮ್ಮ ಹುದ್ದೆಗಳನ್ನು ತ್ಯಜಿಸಿದ್ದಾರೆ ಎಂದು ಪರಿಹಾರ ಕಾರ್ಯಕರ್ತರು ಈ ಹಿಂದೆ ವರದಿ ಮಾಡಿದ್ದರು.

ಇದನ್ನೂ ಓದಿ: ವಿಶ್ವಾಸಮತ ಸೋತ ಚಾನ್ಸಲರ್ ಶೋಲ್ಜ್: ಜರ್ಮನಿಯಲ್ಲಿ ಅವಧಿ ಪೂರ್ವ ಚುನಾವಣೆ ಸಾಧ್ಯತೆ - CHANCELLOR OLAF SCHOLZ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.