ETV Bharat / entertainment

ಸಂಜೆ ಅಮೆರಿಕಕ್ಕೆ ತೆರಳಲಿರುವ ನಟ ಶಿವರಾಜ್​ಕುಮಾರ್​​: ಡಿ.24ಕ್ಕೆ ಸರ್ಜರಿ - SHIVARAJKUMAR TO US

ಜನಪ್ರಿಯ ನಟ ಶಿವರಾಜ್​ಕುಮಾರ್ ಚಿಕಿತ್ಸೆಗಾಗಿ ಇಂದು ಸಂಜೆ ಅಮೆರಿಕಕ್ಕೆ ಪ್ರಯಾಣ ಬೆಳೆಸಲಿದ್ದಾರೆ.

actors with Shivaraj Kumar
ಶಿವರಾಜ್​ಕುಮಾರ್​​ ಜೊತೆ ಸಿನಿ ಗಣ್ಯರು (Photo: ETV Bharat)
author img

By ETV Bharat Entertainment Team

Published : 3 hours ago

ಕನ್ನಡ ಚಿತ್ರರಂಗದ ಹ್ಯಾಟ್ರಿಕ್​ ಹೀರೋ ಶಿವರಾಜ್​ಕುಮಾರ್​ ತಮ್ಮ ಅನಾರೋಗ್ಯದ ಚಿಕಿತ್ಸೆಗಾಗಿ ಇಂದು ಸಂಜೆ ಅಮೆರಿಕಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಸಿನಿಮಾ ಮೇಲಿನ ಒಲವು, ಪರಿಶ್ರಮ, ಅಮೋಘ ಅಭಿನಯದಿಂದ ಚಂದನವನದಲ್ಲಿ ತಮ್ಮದೇ ಆದ ಸ್ಟಾರ್​ಡಮ್​​ ಗಿಟ್ಟಿಸಿಕೊಂಡಿರುವ ನಟ ತಮ್ಮ ಎಲ್ಲಾ ಬದ್ಧತೆಗಳನ್ನು ಪೂರ್ಣಗೊಳಿಸಿ, ವಿದೇಶಕ್ಕೆ ತೆರಳುತ್ತಿದ್ದಾರೆ.

ನಿಮಗೆ ಈಗಾಗಲೇ ತಿಳಿಸಿರುವಂತೆ, ಅನಾರೋಗ್ಯದ ಹಿನ್ನೆಲೆ ಅಮೆರಿಕದಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಲಿದ್ದಾರೆ. ಅಮೆರಿಕದ ಫ್ಲೋರಿಡಾದಲ್ಲಿರುವ ಮಿಯಾಮಿಯಲ್ಲಿ ಡಿಸೆಂಬರ್ 24ರಂದು ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲಿದ್ದಾರೆ. ಸರ್ಜರಿ ಬಳಿಕ ವಿಶ್ರಾಂತಿ ಪಡೆಯಲಿದ್ದಾರೆ. ಸದ್ಯ ವಿವಿಧ ಸೋಷಿಯಲ್​ ಮೀಡಿಯಾ ಪ್ಲ್ಯಾಟ್​​​​ಫಾರ್ಮ್​​​ಗಳಲ್ಲಿ ಅಭಿಮಾನಿಗಳು ಶೀಘ್ರ ಗುಣಮುಖರಾಗಿ ಬನ್ನಿ ಶಿವಣ್ಣ ಎಂದು ಹಾರೈಸುತ್ತಿದ್ದಾರೆ.

actors with Shivaraj Kumar
ಶಿವರಾಜ್​ಕುಮಾರ್​​ ಜೊತೆ ಸಿನಿ ಗಣ್ಯರು (Photo: ETV Bharat)

ಇತ್ತೀಚೆಗೆ ಶಿವಮೊಗ್ಗದಲ್ಲಿ ಮಾತನಾಡಿದ್ದ ಹ್ಯಾಟ್ರಿಕ್​ ಹೀರೋ, ಸದ್ಯ ನಾನು ಆರೋಗ್ಯವಾಗಿದ್ದೇನೆ. ಬರುವ ತಿಂಗಳು ಅಮೆರಿಕಕ್ಕೆ ತೆರಳಿ ಚಿಕಿತ್ಸೆ ಪಡೆಯಲಿದ್ದೇನೆ. ಜನವರಿಯಿಂದ ಪುನಃ ಶೂಟಿಂಗ್‌ನಲ್ಲಿ ಭಾಗಿಯಾಗಲಿದ್ದೇನೆ ಎಂದು ತಿಳಿಸಿದ್ದರು.

ಸಖತ್​ ಯಂಗ್ ಅಂಡ್​​​ ಎನರ್ಜಿಟಿಕ್ ಶಿವರಾಜ್​​ಕುಮಾರ್ ಯುವಪೀಳಿಗೆಗೆ ಸ್ಫೂರ್ತಿ ಅಂತಲೇ ಹೇಳಬಹುದು. ಅಂದು ಇಂದು ಎಂದೆಂದಿಗೂ ಎವರ್​​ಗ್ರೀನ್​ ಸ್ಟಾರ್​​. ಇವರಿಗೆ ವಯಸ್ಸು ಲೆಕ್ಕಕ್ಕೇ ಇಲ್ಲ. ಅರವತ್ತೆರಡಾದ್ರೂ ಯುವ ನಟರೂ ನಾಚುವಂತಹ ಲುಕ್​, ಫಿಟ್ನೆಸ್, ಎನರ್ಜಿ ಹೊಂದಿರುವ ತಾರೆ. ಹಲವು ಪ್ರಾಜೆಕ್ಟ್​ಗಳು ನಟನ ಕೈಯಲ್ಲಿದ್ದು, ಸದ್ಯ ಆರೋಗ್ಯದ ಕಡೆ ಸಂಪೂರ್ಣ ಗಮನ ಹರಿಸಿದ್ದಾರೆ. ಮುಂದಿನ ದಿನಗಳಲ್ಲಿ ಅಭಿಮಾನಿಗಳಿಗೆ ಅದ್ಭುತ ಸಿನಿಮಾ ನೀಡೋ ಹುಮ್ಮಸ್ಸಿನಲ್ಲಿರುವ ಸೆಂಚುರಿ ಸ್ಟಾರ್​​ ಪ್ರಸ್ತುತ ಹೆಲ್ತ್​​ ಕಡೆ ತಮ್ಮ ಗಮನ ವಹಿಸಿದ್ದಾರೆ. ಆರೋಗ್ಯವಿದ್ದರೆ ಎಲ್ಲವೂ. ಹಾಗಾಗಿ, ಇದೀಗ ಚಿಕಿತ್ಸೆಗೆ ಮುಂದಾಗಿದ್ದಾರೆ. ಈವರೆಗೆ ಮನೆಯಲ್ಲೇ ಕೆಲ ಥೆರಪಿ ಮಾಡಿಸಿಕೊಂಡಿದ್ದರು.

ಇದನ್ನೂ ಓದಿ: ಶಾಲೆ ಪ್ರಾರಂಭಿಸುತ್ತಿರುವ ಅಶ್ವಿನಿ: 20 ವರ್ಷಗಳ ಬಳಿಕ ನನಸಾಯ್ತು ಅಪ್ಪು​ ಕನಸು

ಈ ಹಿಂದೆ ಶಿವಣ್ಣನ ಆಪ್ತರೋರ್ವರು ಈಟಿವಿ ಭಾರತದೊಂದಿಗೆ ಮಾತನಾಡಿ, ಭಯ ಪಡುವ ಅಗತ್ಯವಿಲ್ಲ. ಶಿವಣ್ಣ ಸಹ ಈ ಬಗ್ಗೆ ತಿಳಿಸಿದ್ದಾರೆ. ಡಿಸೆಂಬರ್ ತಿಂಗಳಲ್ಲಿ ಪತ್ನಿ ಗೀತಾ ಸೇರಿದಂತೆ ಕೆಲ ಸ್ನೇಹಿತರು, ಕಟುಂಬಸ್ಥರು ಅಮೆರಿಕಕ್ಕೆ ಪ್ರಯಾಣ ಬೆಳಲಿದ್ದಾರೆ. ಅಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿ, ಒಂದಷ್ಟು ದಿನಗಳ ಕಾಲ ಚಿಕಿತ್ಸೆ ಪಡೆದುಕೊಳ್ಳಲಿದ್ದಾರೆ ಎಂದು ಹೇಳಿದ್ದರು.

ಇದನ್ನೂ ಓದಿ: 'ಶ್..ಅಂದಿನಿಂದಲೂ ನನಗೆ ಉಪೇಂದ್ರ ಅಂದ್ರೆ ವಿಶೇಷ ಪ್ರೀತಿ': ಶಿವರಾಜ್​ಕುಮಾರ್​

ಕರುನಾಡ ಚಕ್ರವರ್ತಿಯ ಸಿನಿಮಾಗಳ ಬಗ್ಗೆ ಗಮನಿಸುವುದಾದರೆ, ಕೊನೆಯ 'ಭೈರತಿ ರಣಗಲ್' ಸೂಪರ್​ ಹಿಟ್​​ ಆಗಿದೆ. ಇತ್ತೀಚೆಗಷ್ಟೇ ಹೊಸ ಸಿನಿಮಾ ಘೋಷಣೆಯಾಗಿದೆ. ಕನ್ನಡ ಚಿತ್ರರಂಗದ ಯಶಸ್ವಿ ನಿರ್ದೇಶಕರಾದ ಪವನ್‌ ಒಡೆಯರ್‌ ಜೊತೆ ಶಿವಣ್ಣ ಕೈ ಜೋಡಿಸಿದ್ದಾರೆ. ಉಳಿದಂತೆ ಅರ್ಜುನ್ ಜನ್ಯ ನಿರ್ದೇಶನದ '45', ಹೇಮಂತ್ ರಾವ್ ಅವರ ಭೈರವನ‌ ಕೊನೆ ಪಾಠ, 'A for ಆನಂದ್​​' ಹೀಗೆ 8 ರಿಂದ 10 ಸಿನಿಮಾಗಳು ಶಿವರಾಜ್​ಕುಮಾರ್​​ ಅವರ ಬಳಿ ಇದೆ. ನಟ ಶೀಘ್ರವೇ ಗುಣಮುಖರಾಗಿ, ಚಿತ್ರೀಕರಣದಲ್ಲಿ ಭಾಗಿಯಾಗಲಿ ಅನ್ನೋದು ಕೋಟ್ಯಂತರ ಅಭಿಮಾನಿಗಳ ಹಾರೈಕೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.