ETV Bharat / international

ವನವಾಟುದಲ್ಲಿ ಭಾರಿ ಭೂಕಂಪ: ಸತ್ತವರ ಸಂಖ್ಯೆ 14ಕ್ಕೆ ಏರಿಕೆ, ನೂರಾರು ಮಂದಿಗೆ ಗಾಯ - VANUATU EARTHQUAKE

ವನವಾಟುವಿನಲ್ಲಿ ಭಾರಿ ಭೂಕಂಪನ ಸಂಭವಿಸಿದ್ದು, 14 ಮಂದಿ ಮೃತಪಟ್ಟಿದ್ದು, ನೂರಾರು ಜನರು ಗಾಯಗೊಂಡಿದ್ದಾರೆ. ಅಪಾರ ಪ್ರಮಾಣದ ಹಾನಿಯಾಗಿದೆ.

Vanuatu earthquake death toll rises to 14
ವನವಾಟುದಲ್ಲಿ ಭಾರಿ ಭೂಕಂಪ: ಸತ್ತವರ ಸಂಖ್ಯೆ 14ಕ್ಕೆ ಏರಿಕೆ (IANS)
author img

By ETV Bharat Karnataka Team

Published : 3 hours ago

ಸಿಡ್ನಿ,ಆಸ್ಟ್ರೇಲಿಯಾ: ವನವಾಟುದಲ್ಲಿ ಮಂಗಳವಾರ ಸಂಭವಿಸಿದ ಪ್ರಬಲ ಭೂಕಂಪನದಲ್ಲಿ ಕನಿಷ್ಠ 14 ಜನರು ಸಾವನ್ನಪ್ಪಿದ್ದು,ನೂರಾರು ಜನರು ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಇನ್ನೂ ಏರಿಕೆ ಆಗುವ ಸಾಧ್ಯತೆಗಳಿವೆ.

ಭಾರಿ ಭೂಕಂಪದಿಂದಾಗಿ ರಸ್ತೆಗಳಿಗೆ ಹಾನಿಯಾಗಿದ್ದು, ವಿದ್ಯುತ್ ಮತ್ತು ಫೋನ್ ಲೈನ್‌ಗಳ ಸಂಪರ್ಕ ಕಡಿತಗೊಂಡಿವೆ. ಇದರಿಂದಾಗಿ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ ಎಂದು ತಿಳಿದು ಬಂದಿದೆ. ಸರ್ಕಾರಿ ಮೂಲಗಳನ್ನು ಉಲ್ಲೇಖಿಸಿ ರೆಡ್‌ಕ್ರಾಸ್ ಸಾವಿನ ಸಂಖ್ಯೆಯನ್ನು ವರದಿ ಮಾಡಿದೆ. ಸ್ಥಳೀಯ ಮಾಧ್ಯಮಗಳು ಈ ಹಿಂದೆ ಏಳು ಮಂದಿ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದವು ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿತ್ತು.

ಇನ್ನೂ ನಡುಗುತ್ತಲೇ ಇದೆ ಭೂಮಿ: ಮಂಗಳವಾರ ವನವಾಟುವಿನ ರಾಜಧಾನಿ ಪೋರ್ಟ್ ವಿಲಾದಲ್ಲಿ 7.3 ತೀವ್ರತೆಯ ಭೂಕಂಪ ಸಂಭವಿಸಿದ್ದು ಭಾರಿ ಪ್ರಮಾಣದ ಹಾನಿ ಸಂಭವಿಸಿದೆ. ಬುಧವಾರ ಮುಂಜಾನೆ ಸಹ 5.5 ರ ತೀವ್ರತೆಯ ಹಲವಾರು ಪುನರಾವರ್ತಿತ ಭೂಕಂಪಗಳು ಸಂಭವಿಸಿವೆ ಎಂದು ಅಮೆರಿಕದ ಜಿಯೋಲಾಜಿಕಲ್ ಸರ್ವೆ ಹೇಳಿದೆ. ಫಿಜಿ ಮೂಲದ ಪೆಸಿಫಿಕ್‌ನ ರೆಡ್‌ಕ್ರಾಸ್‌ನ ಮುಖ್ಯಸ್ಥ ಕೇಟೀ ಗ್ರೀನ್‌ವುಡ್ ಸಾಮಾಜಿಕ ಮಾಧ್ಯಮದಲ್ಲಿ 200 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಹೇಳಿದ್ದಾರೆ.

ಆಸ್ಟ್ರೇಲಿಯಾದ ವಿದೇಶಾಂಗ ವ್ಯವಹಾರಗಳು ಮತ್ತು ವ್ಯಾಪಾರ ಇಲಾಖೆ (DFAT) ಈ ಪ್ರದೇಶದಲ್ಲಿ ಹಲವಾರು ಆಸ್ಟ್ರೇಲಿಯನ್ನರು ಇದ್ದರೆ ಎಂದು ಹೇಳಿದ್ದರು. ಆದರೆ, ಅಲ್ಲಿನ ಉಪ ಪ್ರಧಾನ ಮಂತ್ರಿ ರಿಚರ್ಡ್ ಮಾರ್ಲ್ಸ್ ಭೂಕಂಪದಲ್ಲಿ ಆಸ್ಟ್ರೇಲಿಯನ್ನರು ಯಾರೂ ಗಾಯಗೊಂಡಿಲ್ಲ ಎಂದು ಹೇಳಿದ್ದಾರೆ. ಮಂಗಳವಾರ ರಾತ್ರಿ ಹೇಳಿಕೆಯೊಂದನ್ನು ನೀಡಿರುವ ಆಸ್ಟ್ರೇಲಿಯಾ ವಿದೇಶಾಂಗ ವ್ಯವಹಾರಗಳ ಸಚಿವ ಪೆನ್ನಿ ವಾಂಗ್ , ಭೂಕಂಪವು ಗಮನಾರ್ಹ ಹಾನಿಯನ್ನುಂಟುಮಾಡಿದೆ ಎಂದು ತಿಳಿಸಿದ್ದಾರೆ. ಆಸ್ಟ್ರೇಲಿಯಾ ವನವಾಟುದಲ್ಲಿ ಭೂಕಂಪದಿಂದ ಸಂಕಷ್ಟಕ್ಕೆ ಒಳಗಾಗಿರುವವ ನೆರವಿಗೆ ನಿಲ್ಲುವುದಾಗಿ ಹೇಳಿದ್ದಾರೆ.

ಮತ್ತೆ ಮತ್ತೆ ಭೂಮಿ ಕಂಪಿಸುತ್ತಿರುವುದರಿಂದ ಜನರು ಭೀತಿಗೊಂಡಿದ್ದು, ಮನೆಗಳ ಒಳಗೆ ಇರಲು ನಿರಾಕರಿಸುತ್ತಿದ್ದಾರೆ. ಮನೆಯಿಂದ ಹೊರಗಡೆ ಬಂದು ಹಲವು ರಸ್ತೆಗಳಲ್ಲೇ ಟೆಂಟ್​ ಹಾಕಿದ್ದಾರೆ. ರಕ್ಷಣಾ ಕಾರ್ಯಾಚರಣೆ ಸಮರೋಪಾದಿಯಲ್ಲಿ ಮುಂದುವರೆದಿದೆ. ಸಾವಿನ ಸಂಖ್ಯೆ ಮತ್ತಷ್ಟು ಏರಿಕೆ ಆಗುವ ಸಾಧ್ಯತೆಗಳಿವೆ.

ವನವಾಟು ಗಣರಾಜ್ಯದ ಬಗ್ಗೆ ನಿಮಗೆಷ್ಟು ಗೊತ್ತು?: 83 ದ್ವೀಪಗಳಿಂದ ಕೂಡಿರುವ ವನವಾಟು ಅಂದಾಜು 277,000 ಜನಸಂಖ್ಯೆ ಹೊಂದಿರುವ ಒಂದು ಪುಟ್ಟ ಗಣರಾಜ್ಯವಾಗಿದೆ. 1980 ರಲ್ಲಿ ಫ್ರಾನ್ಸ್ ಮತ್ತು ಗ್ರೇಟ್ ಬ್ರಿಟನ್‌ನಿಂದ ಸ್ವಾತಂತ್ರ್ಯ ಗಳಿಸಿದ ರಾಷ್ಟ್ರವಾಗಿದೆ.

ವನವಾಟು ವಿಶ್ವಸಂಸ್ಥೆ, ವಿಶ್ವ ವ್ಯಾಪಾರ ಒಕ್ಕೂಟ ಡಬ್ಲ್ಯುಟಿಒ, ದಕ್ಷಿಣ ಪೆಸಿಫಿಕ್ ಆಯೋಗ, ಪೆಸಿಫಿಕ್ ದ್ವೀಪಗಳ ವೇದಿಕೆ, ಆಫ್ರಿಕನ್ ದೇಶಗಳು ಮತ್ತು ಕಾಮನ್ವೆಲ್ತ್ ರಾಷ್ಟ್ರಗಳ ಸದಸ್ಯ ರಾಷ್ಟ್ರವಾಗಿದೆ.

ಇದನ್ನು ಓದಿ:ಸಿರಿಯಾದಲ್ಲಿ 8 ಲಕ್ಷಕ್ಕೂ ಅಧಿಕ ಜನರ ಸ್ಥಳಾಂತರ: ಭಾನುವಾರ 2 ಲಕ್ಷ ಸಿರಿಯನ್ನರು ಸ್ವದೇಶಕ್ಕೆ ಆಗಮನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.