ಸಿಯೋಲ್(ಉತ್ತರ ಕೊರಿಯಾ): ಉಕ್ರೇನ್ ವಿರುದ್ಧದ ಹೋರಾಟದಲ್ಲಿ ಮೃತಪಟ್ಟ ಉತ್ತರ ಕೊರಿಯಾದ ಸೈನಿಕನೊಬ್ಬನ ದೇಹಕ್ಕೆ ರಷ್ಯಾದ ಸೈನಿಕನೊಬ್ಬ ಬೆಂಕಿ ಹಚ್ಚುತ್ತಿರುವ ವಿಡಿಯೋ ಒಂದನ್ನು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ ಸ್ಕಿ ಹಂಚಿಕೊಂಡಿದ್ದಾರೆ. ಉತ್ತರ ಕೊರಿಯಾದ ಸೈನಿಕರು ರಷ್ಯಾದ ಪರವಾಗಿ ಯುದ್ಧದಲ್ಲಿ ಹೋರಾಡುತ್ತಿರುವುದನ್ನು ಮರೆಮಾಚಲು ರಷ್ಯಾ ಸೈನಿಕರು ಇಂಥ ಕೃತ್ಯ ಎಸಗುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಜೆಲೆನ್ ಸ್ಕಿ ಮಂಗಳವಾರ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ಅಪ್ಲೋಡ್ ಮಾಡಿದ್ದು, "ಉತ್ತರ ಕೊರಿಯಾದ ಸೈನಿಕರು ಮೃತ ಪಟ್ಟ ನಂತರವೂ ರಷ್ಯನ್ನರು ಅವರ ಮುಖ ಗುರುತು ಸಿಗದಂತೆ ಮಾಡುತ್ತಿದ್ದಾರೆ" ಎಂದು ಬರೆದಿದ್ದಾರೆ. ವೀಡಿಯೊದಲ್ಲಿ ಭಾಗಶಃ ಸುಟ್ಟ ಶವ ಕಾಣಿಸುತ್ತದೆ.
Even after years of war, when we thought the Russians could not get any more cynical, we see something even worse.
— Volodymyr Zelenskyy / Володимир Зеленський (@ZelenskyyUa) December 16, 2024
Russia not only sends the North Korean troops to storm Ukrainian positions, but also tries to conceal losses of these people.
They tried to hide the presence of… pic.twitter.com/KYyGF1rxP8
30 ಸೆಕೆಂಡುಗಳ ವೀಡಿಯೊದಲ್ಲಿ ಉತ್ತರ ಕೊರಿಯಾದ ಶಂಕಿತ ಸೈನಿಕನ ಹತ್ತಿರದಿಂದ ಸೆರೆಹಿಡಿದ ದೃಶ್ಯ ಮತ್ತು ಏಷ್ಯಾ ಮೂಲದ ವ್ಯಕ್ತಿಗಳ ಲಕ್ಷಣಗಳನ್ನು ಹೊಂದಿರುವ ಸೈನಿಕನೊಬ್ಬ ದೃಶ್ಯ ಸೆರೆಹಿಡಿಯದಂತೆ ಹೇಳುತ್ತಿರುವುದನ್ನು ತೋರಿಸುವ ದೃಶ್ಯಾವಳಿಗಳು ಕಾಣಿಸಿವೆ.
ಯುದ್ಧದಲ್ಲಿ ಉತ್ತರ ಕೊರಿಯಾದ ಸೈನಿಕರನ್ನು ಬಳಸಿಕೊಳ್ಳುತ್ತಿರುವುದಕ್ಕೆ ಮತ್ತು ಅವರ ಉಪಸ್ಥಿತಿಯನ್ನು ಮರೆಮಾಚಲು ಪ್ರಯತ್ನಿಸಿದ್ದಕ್ಕಾಗಿ ರಷ್ಯಾದ ಮಿಲಿಟರಿಯನ್ನು ಜೆಲೆನ್ ಸ್ಕಿ ಖಂಡಿಸಿದ್ದಾರೆ. ಯೋಧರಿಗೆ ಇಂಥ ಅಗೌರವ ತೋರ್ಪಡಿಕೆಗೆ ಮಾಸ್ಕೋ ಹೊಣೆಗಾರನಾಗಿದೆ ಎಂದು ಅವರು ಆರೋಪಿಸಿದ್ದಾರೆ.
"ಉಕ್ರೇನ್ ನೆಲೆಗಳ ಮೇಲೆ ದಾಳಿ ಮಾಡಲು ರಷ್ಯಾ ಉತ್ತರ ಕೊರಿಯಾದ ಪಡೆಗಳನ್ನು ಕಳುಹಿಸುವುದು ಮಾತ್ರವಲ್ಲ, ಇವರ ಸಾವುಗಳನ್ನು ಕೂಡಮರೆಮಾಚಲು ಪ್ರಯತ್ನಿಸುತ್ತಿದೆ. ಯುದ್ಧದಲ್ಲಿ ಕೊಲ್ಲಲ್ಪಟ್ಟ ಉತ್ತರ ಕೊರಿಯಾದ ಸೈನಿಕರ ಮುಖಗಳನ್ನು ಅವರು ಅಕ್ಷರಶಃ ಸುಡುತ್ತಿದ್ದಾರೆ" ಎಂದು ಅವರು ಹೇಳಿದರು.
ಉಕ್ರೇನ್ ಪಡೆಗಳ ವಿರುದ್ಧದ ಹೋರಾಟದಲ್ಲಿ ಸುಮಾರು 200 ರಷ್ಯಾ ಮತ್ತು ಉತ್ತರ ಕೊರಿಯಾದ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಉಕ್ರೇನ್ ರಕ್ಷಣಾ ಗುಪ್ತಚರ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಉಕ್ರೇನ್ ವಿರುದ್ಧದ ರಷ್ಯಾದ ಯುದ್ಧದಲ್ಲಿ ದೊಡ್ಡ ಪ್ರಮಾಣದಲ್ಲಿ ಉತ್ತರ ಕೊರಿಯಾದ ಸೈನಿಕರು ಸಾವಿಗೀಡಾಗಿದ್ದಾರೆ ಎಂದು ವಾಷಿಂಗ್ಟನ್ ದೃಢಪಡಿಸಿದೆ.
ಉಕ್ರೇನ್ ಯುದ್ಧವನ್ನು ಕೊನೆಗೊಳಿಸುವ ಬಗ್ಗೆ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮತ್ತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ಸ್ಕಿ ಅವರೊಂದಿಗೆ ಮಾತನಾಡುವುದಾಗಿ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಹೇಳಿದ್ದಾರೆ. ಫ್ಲೋರಿಡಾದ ಪಾಮ್ ಬೀಚ್ನಲ್ಲಿರುವ ತಮ್ಮ ಮಾರ್-ಎ-ಲಾಗೋ ಕ್ಲಬ್ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಟ್ರಂಪ್, ಯುದ್ಧ ನಿಲ್ಲಬೇಕಿದೆ ಎಂದರು. ಯುದ್ಧ ಪೀಡಿತ ಬಹುತೇಕ ಪ್ರದೇಶವು ಧ್ವಂಸವಾಗಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ : ಸಿರಿಯಾದಲ್ಲಿ 8 ಲಕ್ಷಕ್ಕೂ ಅಧಿಕ ಜನರ ಸ್ಥಳಾಂತರ: ಭಾನುವಾರ 2 ಲಕ್ಷ ಸಿರಿಯನ್ನರು ಸ್ವದೇಶಕ್ಕೆ ಆಗಮನ - SYRIA CONFLICT