ದುಬೈ (ಯುನೈಟೆಡ್ ಅರಬ್ ಎಮಿರೇಟ್ಸ್): 20 ವರ್ಷಗಳ ಹಿಂದೆ, ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಶುಕ್ರವಾರದ ಪ್ರಾರ್ಥನೆಯಲ್ಲಿ ಜನಸಮೂಹದ ಮುಂದೆ ನಿಂತು ಯುನೈಟೆಡ್ ಸ್ಟೇಟ್ಸ್‌ನ ಮತದಾನದ ಪ್ರಮಾಣವನ್ನು ಖಂಡಿಸಿದ್ದರು. ಅಧ್ಯಕ್ಷೀಯ ಚುನಾವಣೆಗಳನ್ನು ನಡೆಸುವ ಕೆಲವು ದೇಶಗಳಲ್ಲಿ ಸಂಬಂಧಿಸಿದಂತೆ, ಒಂದು ರಾಷ್ಟ್ರದಲ್ಲಿ ಶೇ.35 ಅಥವಾ ಶೇ.40 ಮತದಾನ ನಡೆಯುವುದು ನಾಚಿಕೆಗೇಡಿನ ಸಂಗತಿ. ಆ ದೇಶದ ಜನರು ತಮ್ಮ ರಾಜಕೀಯ ವ್ಯವಸ್ಥೆಯನ್ನು ನಂಬುವುದಿಲ್ಲ, ಅವರು ಅದರ ಬಗ್ಗೆ ಕಾಳಜಿ ವಹಿಸುವುದಿಲ್ಲ ಮತ್ತು ಅವರಿಗೆ ಯಾವುದೇ ಭರವಸೆ ಇಲ್ಲ ಎಂಬುದು ಇದರಿಂದ ಸ್ಪಷ್ಟವಾಗಿದೆ ಎಂದು ಖಮೇನಿ 2001 ರಲ್ಲಿ ಹೇಳಿದ್ದರು.
ಸದ್ಯ ಇರಾನ್ ಈಗ ಅಯತೊಲ್ಲಾ ಈ ಹಿಂದೆ ಹೇಳಿದ್ದ ಪರಿಸ್ಥಿಯನ್ನು ಎದುರಿಸುತ್ತಿದೆ. ಹೌದು, 1979 ರ ಇಸ್ಲಾಮಿಕ್ ಕ್ರಾಂತಿಯ ನಂತರ ಎರಡನೇ ಬಾರಿಗೆ ಇರಾನ್ ಅಧ್ಯಕ್ಷೀಯ ಚುನಾವಣೆ ಶುಕ್ರವಾರ ನಡೆಯಲಿದೆ. ಇದಕ್ಕೂ ಮೊದಲು ಕಳೆದ ವಾರ ನಡೆದ ಚುನಾವಣೆಯಲ್ಲಿ ಕೇವಲ 39.9 ರಷ್ಟು ಮತದಾರರು ಮಾತ್ರ ಮತ ಚಲಾಯಿಸಿದ್ದರು.
24.5 ಮಿಲಿಯನ್‌ಗಿಂತಲೂ ಹೆಚ್ಚಿನ ಮತಗಳಲ್ಲಿ, 1 ಮಿಲಿಯನ್‌ಗಿಂತಲೂ ಹೆಚ್ಚು ಮತಗಳನ್ನು ತಿರಸ್ಕರಿಸಲಾಗಿತ್ತು. ಸಾಮಾನ್ಯವಾಗಿ ಜನರು ಮತದಾನ ಮಾಡುವುದು ತಮ್ಮ ಜವಾಬ್ದಾರಿ ಎಂದು ಅರಿತ್ತಿದ್ದಾರೆ. ಆದರೆ, ಚುನಾವಣಾ ಕಣದಲ್ಲಿರುವ ಎಲ್ಲ ಅಭ್ಯರ್ಥಿಗಳನ್ನು ತಿರಸ್ಕರಿಸಲು ಬಯಸುತ್ತಾರೆ ಎಂಬುದು ಇದರ ಸಂಕೇತವಾಗಿದೆ.
ಆರ್ಥಿಕತೆ ಕುಸಿತದಿಂದ ಜನರಲ್ಲಿ ಆಕ್ರೋಶ:ಇದರ ಮಧ್ಯೆ ಇರಾನ್‌ನ ಆರ್ಥಿಕತೆ ಕುಸಿತಕೊಂಡ ವರ್ಷಗಳ ಬಳಿಕ ಸಾರ್ವಜನಿಕರಲ್ಲಿ ಆಕ್ರೋಶ ತೀವ್ರಗೊಂಡಿದೆ. ಜೊತೆಗೆ ಭಿನ್ನಾಭಿಪ್ರಾಯದ ಮೇಲೆ ರಕ್ತಸಿಕ್ತ ದಮನಗಳು, ಪೊಲೀಸರು ತಮ್ಮ ಇಚ್ಛೆಯಂತೆ ತಲೆಗೆ ಸ್ಕಾರ್ಫ್ ಧರಿಸದಿದ್ದಕ್ಕಾಗಿ ಮಹ್ಸಾ ಅಮಿನಿಯರನ್ನು ಬಂಧಿಸಿದ್ದರು. ನಂತರ ಅವರು ಸಾವನ್ನಪ್ಪಿದ್ದರು ಇದರಿಂದ 2022ರಲ್ಲಿ ಸಾಮೂಹಿಕ ಪ್ರತಿಭಟನೆಗಳು ನಡೆದಿದ್ದವು. ಇರಾನ್ ಯುರೇನಿಯಂ ಸಂಗ್ರಹ ಸಾಮರ್ಥ್ಯ ಹೆಚ್ಚಿಸಿರುವುದರಿಂದ ಪಶ್ಚಿಮ ದೇಶಗಳೊಂದಿಗೆ ಉದ್ವಿಗ್ನತೆಯೂ ಹೆಚ್ಚಾಗಿದೆ.
ಹಾರ್ಡ್ - ಲೈನ್ ಮಾಜಿ ಪರಮಾಣು ಸಮಾಲೋಚಕ ಸಯೀದ್ ಜಲೀಲಿ ಅವರು ಸುಧಾರಣಾವಾದಿ ಮಸೌದ್ ಪೆಜೆಶ್ಕಿಯಾನ್ ಅವರನ್ನು ಚುನಾವಣಾ ಕಣದಲ್ಲಿ ಎದುರಿಸುತ್ತಿದ್ದಾರೆ. ಅಧ್ಯಕ್ಷ ಸ್ಥಾನವನ್ನು ಗೆಲ್ಲಲು ಜಲೀಲಿಗೆ ಭಾರಿ ಪ್ರಮಾಣದ ಮತಗಳ ಅಗತ್ಯವಿದೆ. ಮತ್ತೊಂದೆಡೆ, ಪೆಜೆಶ್ಕಿಯಾನ್ ಬೆಂಬಲಿಗರು, ಜಲೀಲಿ ಗೆದ್ದರೆ ಕರಾಳ ದಿನಗಳನ್ನು ಎದುರಿಸಬೇಕಾಗುತ್ತಿದೆ ಎಂದು ಜನರನ್ನು ಎಚ್ಚರಿಸುತ್ತಿದ್ದಾರೆ.
"ನಾನು ಈ ಹಿಂದೆ ಮತ ಚಲಾಯಿಸಲಿಲ್ಲ ಮತ್ತು ಮುಂದೆ ಮತ ಚಲಾಯಿಸುವುದಿಲ್ಲ, ಏಕೆಂದರೆ ಮಹ್ಸಾ ಮತ್ತು ಯುವಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಯಾರೂ ಕ್ಷಮೆಯಾಚಿಸಲಿಲ್ಲ" ಎಂದು ಗ್ರಾಫಿಕ್ ವಿನ್ಯಾಸವನ್ನು ಅಧ್ಯಯನ ಮಾಡುತ್ತಿರುವ 23 ವರ್ಷದ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಲೈಲಾ ಸೆಯೆಡಿ ಹೇಳಿದರು.
ಗೆಲುವು ಸಾಧಿಸಲು ಶೇ.50ಕ್ಕಿಂತ ಹೆಚ್ಚು ಮತ ಪಡೆಯಬೇಕು:ಇರಾನ್ ಕಾನೂನಿನ ಪ್ರಕಾರ, ಯಾವುದೇ ಒಬ್ಬ ಅಭ್ಯರ್ಥಿ ಗೆಲುವು ಸಾಧಿಸಬೇಕು ಎಂದರೆ, ಚಲಾವಣೆಯಾದ ಒಟ್ಟು ಮತಗಳ ಪೈಕಿ ಶೇ.50ಕ್ಕಿಂತ ಹೆಚ್ಚು ಮತ ಪಡೆಯಬೇಕು. ಕಳೆದ ಶನಿವಾರ ಬಿಡುಗಡೆಯಾದ ಫಲಿತಾಂಶಗಳಲ್ಲಿ, ಪೆಜೆಶ್ಕಿಯಾನ್ 10.4 ಮಿಲಿಯನ್ ಮತಗಳನ್ನು ಪಡೆದಿದ್ದರೆ, ಜಲೀಲಿ 9.4 ಮಿಲಿಯನ್ ಮತಗಳನ್ನು ಪಡೆದಿದ್ದರು.