ETV Bharat / state

ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆಗೆ ರಾಜ್ಯಪಾಲರ ಒಪ್ಪಿಗೆ - MICRO FINANCE REGULATION ORDINANCE

ಮೈಕ್ರೋ ಫೈನಾನ್ಸ್ ನಿಯಂತ್ರಿಸುವ ಸುಗ್ರೀವಾಜ್ಞೆಗೆ ರಾಜ್ಯಪಾಲರು ಒಪ್ಪಿಗೆ ನೀಡಿದ್ದು, ಸರ್ಕಾರವು ಈ ಬಗ್ಗೆ ಅಧಿಸೂಚನೆ ಹೊರಡಿಸಿದೆ.

MICRO FINANCE REGULATION ORDINANCE
ರಾಜ್ಯಪಾಲ ಗೆಹ್ಲೋಟ್, ವಿಧಾನಸೌಧ (ETV Bharat)
author img

By ETV Bharat Karnataka Team

Published : Feb 12, 2025, 8:27 PM IST

Updated : Feb 12, 2025, 8:39 PM IST

ಬೆಂಗಳೂರು: ಕೆಲ ಸಲಹೆಗಳೊಂದಿಗೆ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರು ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ನಿಯಂತ್ರಣ ಹೇರುವ ಸುಗ್ರೀವಾಜ್ಞೆಗೆ ಇಂದು ಒಪ್ಪಿಗೆ ಸೂಚಿಸಿದ್ದು, ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ.

ಕಳೆದ ವಾರ ಹೆಚ್ಚಿನ ಸ್ಪಷ್ಟನೆ ಕೋರಿ ರಾಜ್ಯಪಾಲರು ಕರ್ನಾಟಕ ಮೈಕ್ರೋ ಫೈನಾನ್ಸ್‌ (ಬಲವಂತ ಕ್ರಮಗಳ ನಿಯಂತ್ರಣ) ಸುಗ್ರೀವಾಜ್ಞೆ-2025 ಕರಡನ್ನು ವಾಪಸ್​​ ಕಳುಹಿಸಿದ್ದರು. ಈ ಸಂಬಂಧ ಸರ್ಕಾರ ಸವಿವರವಾಗಿ ಸ್ಪಷ್ಟೀಕರಣದೊಂದಿಗೆ ಉತ್ತರ ನೀಡಿತ್ತು. ಇದೀಗ ರಾಜ್ಯಪಾಲರು ಕೆಲ ಸಲಹೆಗಳೊಂದಿಗೆ ಸುಗ್ರೀವಾಜ್ಞೆಗೆ ಒಪ್ಪಿಗೆ ಸೂಚಿಸಿದ್ದಾರೆ. ಸುಗ್ರೀವಾಜ್ಞೆ ಹೆಸರು ಬದಲಾಯಿಸಿ 'ಕರ್ನಾಟಕ ಕಿರು ಸಾಲ ಮತ್ತು ಸಣ್ಣ ಸಾಲ (ಬಲವಂತ ಕ್ರಮಗಳ ಪ್ರತಿಬಂಧಕ) ಅಧ್ಯಾದೇಶ 2025' ಜಾರಿಗೊಳಿಸಿ ಅಧಿಸೂಚನೆ ಹೊರಡಿಸಲಾಗಿದೆ.

ಸರ್ಕಾರಕ್ಕೆ ರಾಜ್ಯಪಾಲರ ಸಲಹೆಗಳು:

  • ಆರ್‌ಬಿಐ ಅಡಿ ನೋಂದಾಯಿತ, ಸಹಕಾರಿ, ಸಣ್ಣ ಹಣಕಾಸು ಸಂಸ್ಥೆಗಳಿಗೆ ವ್ಯಾಪಾರ ವ್ಯವಹಾರಕ್ಕೆ ಯಾವುದೇ ಅಡ್ಡಿಯಾಗದಂತೆ ಎಚ್ಚರಿಕೆ ವಹಿಸಬೇಕು.
  • ಈಗಾಗಲೇ ಸಾಲ ನೀಡಿರುವ ಮೈಕ್ರೋ ಫೈನಾನ್ಸ್ ಸಂಸ್ಥೆಗಳು, ಸಾಲದಾತರು ಈ ಸುಗ್ರೀವಾಜ್ಞೆಯಿಂದ ಅವರ ಸಾಲ, ಹಾಗೂ ಬಡ್ಡಿ ವಸೂಲಾತಿಗೆ ಅಡ್ಡಿಯಾಗಬಹುದು ಮತ್ತು ಕಾನೂನು ಹೋರಾಟಕ್ಕೆ ಆಸ್ಪದ ಕಲ್ಪಿಸಬಹುದು. ಈ ಸಂಬಂಧ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು.
  • ಸಂವಿಧಾನದ ಕಲಂ 19 ಮತ್ತು 32ರ ಅಡಿ ನೈಸರ್ಗಿಕ ನ್ಯಾಯ ಪಡೆಯಲು (Natural Justice) ಅವಕಾಶವಿದೆ. ಹೀಗಾಗಿ ಅವರ ಹಕ್ಕು ಮತ್ತು ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟಾಗದಂತೆ‌ ಎಚ್ಚರಿಕೆ ವಹಿಸಬೇಕು.

ಆದಷ್ಟು ಶೀಘ್ರವಾಗಿ ವಿಧಾನಮಂಡಲದಲ್ಲಿ ಮಂಡಿಸಿ, ಸಮಗ್ರವಾಗಿ ಚರ್ಚಿಸಿ ವಿಧೇಯಕ ತರುವಂತೆ ರಾಜ್ಯಪಾಲರು ಸರ್ಕಾರಕ್ಕೆ ಸೂಚಿಸಿದ್ದಾರೆ.

ಸುಗ್ರೀವಾಜ್ಞೆಯಲ್ಲಿರುವ ಅಂಶಗಳು:

ಸುಗ್ರೀವಾಜ್ಞೆಯಲ್ಲಿ ಸಾಲಗಾರರಿಗೆ ಹಿಂಸೆ, ಕಿರುಕುಳ ನೀಡುವ ಮೈಕ್ರೊ ಫೈನಾನ್ಸ್‌ ಕಂಪನಿಗಳು ಅಥವಾ ಲೇವಾದೇವಿದಾರರಿಗೆ ಗರಿಷ್ಠ 10 ವರ್ಷದವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಮತ್ತು 5 ಲಕ್ಷ ರೂ.ಗಳವರೆಗೆ ವಿಸ್ತರಿಸಬಹುದಾದ ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ, ನೋಂದಣಿ ಪ್ರಾಧಿಕಾರವು ಅಂತಹ ಸಂಸ್ಥೆಗಳ ನೋಂದಣಿಯನ್ನು ಅಮಾನತು ಅಥವಾ ರದ್ದುಪಡಿಸುವ ಕಠಿಣ ನಿಯಮ ಕೂಡ ಈ ಸುಗ್ರೀವಾಜ್ಞೆಯಲ್ಲಿದೆ.

ಪ್ರತಿಯೊಂದು ಮೈಕ್ರೊ ಫೈನಾನ್ಸ್‌ ಕಂಪನಿ ಅಥವಾ ಲೇವಾದೇವಿದಾರ ಏಜೆನ್ಸಿ ಸ್ಥಳೀಯವಾಗಿ ನೋಂದಾಯಿತ ಕಚೇರಿ ಹೊಂದಿರಬೇಕು. ಸಾಲಗಾರರಿಗೆ ವಿಧಿಸುವ ಬಡ್ಡಿ ದರದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಬೇಕು. ಸಾಲಗಾರರಿಗೆ ನೀಡುವ ಸಾಲದ ಕಾರ್ಡ್‌ನಲ್ಲಿ ವಿಧಿಸಿದ ಬಡ್ಡಿ, ಸಾಲಕ್ಕೆ ಸಂಬಂಧಿಸಿದ ಎಲ್ಲ ಷರತ್ತುಗಳು ಮತ್ತು ನಿಬಂಧನೆಗಳು, ಸಾಲ ಮರುಪಾವತಿ ವಿವರಗಳನ್ನು ಸಾಲಗಾರನಿಗೆ ಅರ್ಥವಾಗುವ ಭಾಷೆಯಲ್ಲಿ ನೀಡಬೇಕು. ಸಾಲಗಾರರ ಜೊತೆ ಕನ್ನಡದಲ್ಲಿಯೇ ಸಂವಹನ ಮಾಡಬೇಕು ಎಂದು ಸುಗ್ರೀವಾಜ್ಞೆಯಲ್ಲಿ ವಿವರಿಸಲಾಗಿದೆ.

ಈ ಸುಗ್ರೀವಾಜ್ಞೆ ಜಾರಿಗೂ ಮೊದಲು ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಅಥವಾ ಸಾಲ ನೀಡಿಕೆ ಏಜೆನ್ಸಿಗಳು ಅಥವಾ ಸಂಸ್ಥೆಗಳು ಅಥವಾ ಲೇವಾದೇವಿದಾರರು ನೋಂದಾಯಿತವಲ್ಲದಿದ್ದರೆ ಮತ್ತು ಲೈಸೆನ್ಸ್ ರಹಿತವಾಗಿದ್ದರೆ, ಸಾಲಗಾರನು ಪಾವತಿಸಬೇಕಾದ, ಯಾವುದಾದರೂ ಬಡ್ಡಿಯ ಮೊತ್ತವಿದ್ದಲ್ಲಿ ಅದನ್ನೂ ಒಳಗೊಂಡಂತೆ ''ಸಮಾಜದ ದುರ್ಬಲ ವರ್ಗದವರಿಗಾಗಿ'' ಮುಂಗಡ ನೀಡಿದ ಪ್ರತಿಯೊಂದು ಸಾಲವನ್ನು ಸಂಪೂರ್ಣವಾಗಿ ತೀರಿಕೆಯಾಗಿದೆಯೆಂದು ಭಾವಿಸಲಾಗುವುದು.‌

ಸುಗ್ರೀವಾಜ್ಞೆಯ ಇತರ ಅಂಶಗಳೇನು?:

  • ಕಿರುಕುಳದ ಪ್ರಮಾಣ ನೋಡಿಕೊಂಡು ಸಂಸ್ಥೆಯ ಪರವಾನಗಿ ರದ್ಧುಪಡಿಸುವುದು.
  • ಸಾಲ ನೀಡುವಾಗ ಯಾವುದೇ ಅಡಮಾನ ಪಡೆಯುವಂತಿಲ್ಲ.
  • ಸಾಲ ವಸೂಲಿ ವೇಳೆ ಸಾಲಗಾರರಿಗೆ ಹಿಂಸೆ, ಹಲ್ಲೆ, ಅವಮಾನ ಮಾಡುವುದು ನಿಷಿದ್ಧ.
  • ಬಲವಂತವಾಗಿ ಸ್ಥಿರಾಸ್ತಿ, ದಾಖಲೆ ಕಸಿದು ದಬ್ಬಾಳಿಕೆ, ದೌರ್ಜನ್ಯ ಎಸಗುವಂತಿಲ್ಲ.
  • ಸಾಲ ವಸೂಲಾತಿಗೆ ಗೂಂಡಾಗಳ ಬಳಕೆ, ಮನೆಗೆ ಭೇಟಿ ನೀಡುವುದು, ಬೆದರಿಕೆ ಹಾಕಿದರೆ ಗಂಭೀರ ಅಪರಾಧ.
  • ಸಾಲಗಾರರ ದೈನಂದಿನ ಕೆಲಸಗಳಿಗೆ ಅಡ್ಡಿ ತೊಂದರೆ ನೀಡಿದರೆ ಲೈಸೆನ್ಸ್ ರದ್ದು.
  • ಗ್ರಾಹಕರಿಂದ ಸ್ವೀಕರಿಸಿದ ಹಣಕ್ಕೆ ಅಧಿಕೃತ ಸಹಿ ಮಾಡಿದ ರಶೀದಿ ನೀಡುವುದು ಕಡ್ಡಾಯ.
  • ಸಾಲ ಪಡೆದವರು ಬಡ್ಡಿ, ಕಂತು ಪಾವತಿ ವಿವರ ಕೇಳಿದರೆ ಸಂಸ್ಥೆಗಳು ಕೊಡಬೇಕು.
  • ಯಾವುದಾದರೂ ಬಡ್ಡಿಯಿದ್ದಲ್ಲಿ ಅದನ್ನೂ ಒಳಗೊಂಡಂತೆ ಅಂಥ ಸಾಲದ ಯಾವುದೇ ಮೊತ್ತದ ವಸೂಲಾತಿಗಾಗಿ ಸಾಲಗಾರನ ವಿರುದ್ಧ ಯಾವುದೇ ದಾವೆ ಅಥವಾ ವ್ಯವಹರಣೆಯನ್ನು ಯಾವುದೇ ನ್ಯಾಯಾಲಯ ಪುರಸ್ಕರಿಸತಕ್ಕದ್ದಲ್ಲ.
  • ಯಾವುದೇ ಮೈಕ್ರೋ ಫೈನಾನ್ಸ್ ಸಂಸ್ಥೆ (MFI) ಅಥವಾ ಸಾಲ ನೀಡಿಕೆ ಏಜೆನ್ಸಿ ಅಥವಾ ಸಂಸ್ಥೆ ಅಥವಾ ಲೇವಾದೇವಿದಾರನು ಆತನಿಗೆ/ಆಕೆಗೆ ಅದರ ಅಧಿಕೃತ ಪ್ರತಿನಿಧಿ ಯುಕ್ತವಾಗಿ ಸಹಿಮಾಡಿದ ಪಾವತಿಯ ರಸೀದಿಯನ್ನು ನೀಡಿದ ಹೊರತು ಯಾವುದೇ ಸಾಲದ ಕಾರಣಕ್ಕಾಗಿ ಸಾಲಗಾರನಿಂದ ಯಾವುದೇ ಪಾವತಿಯನ್ನು ಸ್ವೀಕರಿಸತಕ್ಕದ್ದಲ್ಲ.
  • ಪ್ರತಿಯೊಂದು ಮೈಕ್ರೋ ಫೈನಾನ್ಸ್ ಸಂಸ್ಥೆ (MFI) ಅಥವಾ ಸಾಲ ನೀಡಿಕೆ ಏಜೆನ್ಸಿ ಅಥವಾ ಸಂಸ್ಥೆ ಅಥವಾ ಲೇವಾದೇವಿದಾರನು ಮುಂಬರುವ ತ್ರೈಮಾಸಿಕ ಮತ್ತು ಸಂದರ್ಭಾನುಸಾರವಾಗಿ ಹಣಕಾಸು ವರ್ಷದ 10ನೇ ದಿನಾಂಕಕ್ಕೆ ಮೊದಲು ನೋಂದಣಿ ಪ್ರಾಧಿಕಾರಕ್ಕೆ ಸಾಲಗಾರರ ಪಟ್ಟಿ, ಪ್ರತಿಯೊಬ್ಬರಿಗೆ ನೀಡಲಾದ ಸಾಲ ಮತ್ತು ಮಾಡಲಾದ ಮರುಪಾವತಿಯ ಮೇಲೆ ವಿಧಿಸಿದ ಬಡ್ಡಿದರವನ್ನು ತೋರುವ ತ್ರೈಮಾಸಿಕ ವರದಿ ಮತ್ತು ವಾರ್ಷಿಕ ವರದಿಯನ್ನು ಸಲ್ಲಿಸತಕ್ಕದ್ದು.
  • ತ್ರೈಮಾಸಿಕ ಮತ್ತು ವಾರ್ಷಿಕ ವರದಿಯನ್ನು ಸಲ್ಲಿಸಲು ವಿಫಲವಾದ ಮೈಕ್ರೋ ಫೈನಾನ್ಸ್ ಸಂಸ್ಥೆ (MFI) ಅಥವಾ ಸಾಲ ನೀಡಿಕೆ ಏಜೆನ್ಸಿ ಅಥವಾ ಸಂಸ್ಥೆ ಅಥವಾ ಲೇವಾದೇವಿದಾರನು, ಆರು ತಿಂಗಳುಗಳ ಕಾರವಾಸದೊಂದಿಗೆ ಅಥವಾ ಹತ್ತು ಸಾವಿರ ರೂಪಾಯಿಗಳಿಗೆ ವಿಸ್ತರಿಸಬಹುದಾದ ಜುಲ್ಮಾನೆಯೊಂದಿಗೆ ಅಥವಾ ಅವೆರಡರಿಂದಲೂ ದಂಡನೆ.

ಇದನ್ನೂ ಓದಿ: ಅಪಘಾತದಿಂದ ವಾಹನದೊಳಗೆ ಸಿಲುಕಿದ್ದ ಡ್ರೈವರ್‌ ಕಾಲು : ಸುರಕ್ಷಿತವಾಗಿ ಹೊರ ತೆಗೆದ ಸ್ಪೀಕರ್ ಖಾದರ್

Last Updated : Feb 12, 2025, 8:39 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.