ಕರ್ನಾಟಕ

karnataka

ETV Bharat / international

ಗಾಜಾ ಮೇಲೆ ಇಸ್ರೇಲ್​ ವೈಮಾನಿಕ ದಾಳಿಗೆ 13 ಮಕ್ಕಳು ಸೇರಿ 41ಕ್ಕೂ ಹೆಚ್ಚು ಜನರ ಸಾವು: ಹೆಜ್ಬುಲ್ಲಾದಿಂದಲೂ ಪ್ರತಿ ದಾಳಿ

ಇಸ್ರೇಲ್​ನ ದಾಳಿ ಪ್ರತೀಕಾರವಾಗಿ ಇಸ್ರೇಲ್​ ಮಿಲಿಟರಿ ನೆಲೆಗಳ ಮೇಲೆ ಹೆಜ್ಬುಲ್ಲಾ ಡ್ರೋನ್​ ದಾಳಿ ನಡೆಸಿ ನಾಲ್ವರು ಸೈನಿಕರುನ್ನು ಕೊಂದು ಹಾಕಿದೆ. ಮತ್ತೊಂದು ಕಡೆ ಇಸ್ರೇಲಿ ಶೆಲ್ ದಾಳಿಗೆ 19 ಮಂದಿ ಪ್ಯಾಲಿಸ್ಟೇನಿಯನ್ನರು ಮೃತಪಟ್ಟಿದ್ದಾರೆ.

By PTI

Published : 4 hours ago

Etv Bharat4-soldiers-killed-in-hezbollah-drone-attack-on-army-base-israel-military
Etv Bharaಲೆಬನಾನ್​ ಮೇಲೆ ಇಸ್ರೇಲ್​ ದಾಳಿ ಮುಂದುವರಿಕೆ: ಹಿಜ್ಬುಲ್ಲಾದಿಂದ ಪ್ರತಿದಾಳಿ 4 ಸೈನಿಕರು ಸಾವುt (AP)

ದೇರ್ ಅಲ್-ಬಲಾಹ್ (ಗಾಜಾ ಪಟ್ಟಿ):ಮಧ್ಯ ಇಸ್ರೇಲ್‌ನ ಸೇನಾ ನೆಲೆಯ ಮೇಲೆ ಹಿಜ್ಬುಲ್ಲಾ ಡ್ರೋನ್ ದಾಳಿ ಮಾಡಿದ್ದು, ನಾಲ್ವರು ಇಸ್ರೇಲ್​ ಯೋಧರು ಸಾವನ್ನಪ್ಪಿದ್ದಾರೆ ಮತ್ತು ಏಳು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಸೇನಾಪಡೆ ತಿಳಿಸಿದೆ, ಇಸ್ರೇಲ್ ಲೆಬನಾನ್​ ಮೇಲೆ ದಾಳಿ ಆರಂಭಿಸಿದ ನಂತರ ಉಗ್ರಗಾಮಿ ಗುಂಪು ಭಾನುವಾರ ನಡೆಸಿದ ಅತ್ಯಂತ ಭೀಕರ ದಾಳಿ ಇದಾಗಿದೆ.

ಗುರುವಾರ ಹಿಜ್ಬುಲ್ಲಾ ನೆಲೆಗಳ ಮೇಲೆ ಇಸ್ರೇಲ್​ ವೈಮಾನಿಕ ದಾಳಿ ನಡೆಸಿ ಸುಮಾರು 22 ಜನರನ್ನು ಕೊಂದು ಹಾಕಿತ್ತು. ಇದಕ್ಕೆ ಪ್ರತಿಯಾಗಿ ದಾಳಿ ನಡೆಸಿದ ಭಯೋತ್ಪಾದಕ ಗುಂಪು ಇಸ್ರೇಲ್​​ ಮೇಲೆ ಪ್ರತೀಕಾರ ತೀರಿಸಿಕೊಂಡಿದೆ, ಡ್ರೋನ್‌ಗಳ ಸ್ಕ್ವಾಡ್ರನ್‌ಗಳ ದಾಳಿಯ ಸಮಯದಲ್ಲಿ ಇಸ್ರೇಲಿ ವಾಯು ರಕ್ಷಣಾ ವ್ಯವಸ್ಥೆ ಗಳ ಮೇಲೆ ಡಜನ್‌ಗಟ್ಟಲೆ ಕ್ಷಿಪಣಿಗಳನ್ನು ಉಡಾಯಿಸಲಾಗಿದೆ. ಇಸ್ರೇಲ್‌ನ ಗಣ್ಯ ಗೋಲಾನಿ ಬ್ರಿಗೇಡ್ ಅನ್ನು ಗುರಿಯಾಗಿಸಿಕೊಂಡು ಹೆಜ್ಬುಲ್ಲಾ ಈ ದಾಳಿ ನಡೆಸಿದೆ,

ಹೆಜ್ಬುಲ್ಲಾ ನಡೆಸಿದ ಈ ದಾಳಿಯಲ್ಲಿ 61 ಮಂದಿ ಗಾಯಗೊಂಡಿದ್ದಾರೆ ಎಂದು ಇಸ್ರೇಲ್‌ನ ರಾಷ್ಟ್ರೀಯ ರಕ್ಷಣಾ ಸೇವೆ ತಿಳಿಸಿದೆ. ಇಸ್ರೇಲ್‌ನ ಸುಧಾರಿತ ವಾಯು ರಕ್ಷಣಾ ವ್ಯವಸ್ಥೆ ಮೇಲೆ ಡ್ರೋನ್‌ಗಳು ಅಥವಾ ಕ್ಷಿಪಣಿಗಳಿಂದ ನಡೆಸಿದ ದಾಳಿಯಲ್ಲಿ ಅನೇಕ ಜನರು ಗಾಯಗೊಂಡಿರುವುದು ಅಪರೂಪ. ಗಾಜಾದಲ್ಲಿ ಯುದ್ಧ ಪ್ರಾರಂಭವಾದಾಗಿನಿಂದ ಹೆಜ್ಬುಲ್ಲಾ ಮತ್ತು ಇಸ್ರೇಲ್ ನಡುವೆ ದಾಳಿ - ಪ್ರತಿದಾಳಿಗಳು ನಡೆಯುತ್ತಲೇ ಇವೆ.

ಗಾಜಾ ಶಾಲೆಯ ಮೇಲೆ ಇಸ್ರೇಲಿ ಶೆಲ್ ದಾಳಿಗೆ 41 ಮಂದಿ ಸಾವು: ಗಾಜಾದಲ್ಲಿ ಭಾನುವಾರ ಇಸ್ರೇಲ್​​ ನಡೆಸಿದ ವೈಮಾನಿಕ ದಾಳಿಯಲ್ಲಿ 13 ಮಕ್ಕಳು ಸೇರಿದಂತೆ ಕನಿಷ್ಠ 41 ಜನರು ಸಾವನ್ನಪ್ಪಿದ್ದಾರೆ ಎಂದು ಅಂತಾರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ.

ಅಲ್ ಅವ್ಡಾ ಮತ್ತು ಅಲ್ ಅಕ್ಸಾ ಆಸ್ಪತ್ರೆಗಳ ಅಧಿಕಾರಿಗಳ ಪ್ರಕಾರ, ಗಾಜಾದ ನುಸೆರಾತ್ ನಿರಾಶ್ರಿತರ ಶಿಬಿರದಲ್ಲಿರುವ ಅಲ್ ಮುಫ್ತಿ ಶಾಲೆಯಲ್ಲಿ ಇಸ್ರೇಲಿ ದಾಳಿಯಲ್ಲಿ ಕನಿಷ್ಠ 22 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಮೃತಪಟ್ಟವರಲ್ಲಿ ಒಂದು ಶಿಶು ಕೂಡ ಸೇರಿದೆ. ವೈದ್ಯಕೀಯ ತಂಡಗಳು ಮಗುವನ್ನು ಉಳಿಸಲು ಪದೇ ಪದೇ ಪ್ರಯತ್ನಿಸಿದರೂ ಆಸ್ಪತ್ರೆಗೆ ತಲುಪಿದ ಸ್ವಲ್ಪ ಸಮಯದಲ್ಲೇ ಮಗು ಸಾವನ್ನಪ್ಪಿತು.

ವಿಶ್ವಸಂಸ್ಥೆಯ ರಿಲೀಫ್ ಅಂಡ್ ವರ್ಕ್ಸ್ ಏಜೆನ್ಸಿ ಫಾರ್ ಪ್ಯಾಲೆಸ್ಟೈನ್ ರೆಫ್ಯೂಜೀಸ್ (UNRWA) ಶಾಲೆಯಲ್ಲಿ 5,000 ಕ್ಕೂ ಹೆಚ್ಚು ಸ್ಥಳಾಂತರಗೊಂಡ ಜನರು ಆಶ್ರಯ ಪಡೆಯುತ್ತಿದ್ದಾರೆ ಎಂದು ಗಾಜಾದ ನಾಗರಿಕ ರಕ್ಷಣೆಯನ್ನು ಉಲ್ಲೇಖಿಸಿ ಅಂತಾರಾಷ್ಟ್ರೀಯ ಮಾಧ್ತಮ ವರದಿ ಮಾಡಿದೆ. ಏತನ್ಮಧ್ಯೆ, ಉತ್ತರ ಗಾಜಾದಲ್ಲಿ, ಅಲ್ ಶಾತಿ ಕ್ಯಾಂಪ್‌ನಲ್ಲಿ ಮಾರ್ಬಲ್ಸ್ ಆಡುತ್ತಿದ್ದಾಗ ಇಸ್ರೇಲಿ ನಡೆಸಿದ ವೈಮಾನಿಕ ದಾಳಿಯಲ್ಲಿ ಐದು ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಗಾಜಾ ನಗರದ ಅಲ್ ಶಿಫಾ ಆಸ್ಪತ್ರೆ ತಿಳಿಸಿದೆ.

ಏತನ್ಮಧ್ಯೆ, ದೇರ್ ಅಲ್-ಬಾಲಾಹ್‌ನಲ್ಲಿರುವ ಅಲ್-ಅಕ್ಸಾ ಹುತಾತ್ಮರ ಆಸ್ಪತ್ರೆಯ ಹೊರಗಡೆ ಸೋಮವಾರ ಬೆಳಗ್ಗೆ ಹಲವು ಸ್ಫೋಟಗಳು ಸಂಭವಿಸಿದ್ದು, ಹಲವು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ನಡುವೆ ಇಸ್ರೇಲ್ ಮೇಲೆ ಕ್ಷಿಪಣಿ ದಾಳಿಗಳು ಹೆಚ್ಚುತ್ತಿರುವ ಹಿನ್ನೆಲೆ ಪ್ರತಿರಕ್ಷಣಾ ವ್ಯವಸ್ಥೆಗಾಗಿ ಹೊಸ ವಾಯು-ರಕ್ಷಣಾ ವ್ಯವಸ್ಥೆಯನ್ನು ಕಳುಹಿಸುವುದಾಗಿ ಅಮೆರಿಕ ಘೋಷಿಸಿದ ದಿನವೇ ಇಸ್ರೇಲ್‌ ಮೇಲೆ ಹಿಜ್ಬುಲ್ಲಾದಿಂದ ಮಾರಣಾಂತಿಕ ದಾಳಿ ನಡೆದಿದೆ.

ಗಾಜಾದಲ್ಲಿ ಹಮಾಸ್ ಮತ್ತು ಲೆಬನಾನ್‌ನಲ್ಲಿ ಹೆಜ್ಬುಲ್ಲಾ ಜೊತೆ ಇರಾನ್ ಬೆಂಬಲಿತ ಉಗ್ರಗಾಮಿ ಗುಂಪುಗಳು ಇಸ್ರೇಲ್​ ವಿರುದ್ಧದ ಯುದ್ಧದಲ್ಲಿ ಪಾಲ್ಗೊಂಡಿವೆ. ಈ ತಿಂಗಳ ಆರಂಭದಲ್ಲಿ ಕ್ಷಿಪಣಿ ದಾಳಿಗೆ ಪ್ರತೀಕಾರವಾಗಿ ಇರಾನ್ ಮೇಲೆ ಇಸ್ರೇಲ್​ ಮುಗಿ ಬೀಳುವ ಸಾಧ್ಯತೆ ಇದೆ. ಅತ್ತ ಇಸ್ರೇಲ್ ದಾಳಿಗೆ ತಕ್ಕ ಪ್ರತ್ಯುತ್ತರ ನೀಡುವುದಾಗಿ ಇರಾನ್ ಕೂಡಾ ಹೇಳಿದೆ.

ಇದನ್ನು ಓದಿ:ಅ.15 ರಂದು ಪಾಕಿಸ್ತಾನದಾದ್ಯಂತ ಪಿಟಿಐ ಪ್ರತಿಭಟನೆ: ಶಾಂಘೈ ಶೃಂಗಸಭೆಗೆ ಎದುರಾಯ್ತು ಸಂಕಷ್ಟ

ABOUT THE AUTHOR

...view details