ಎರ್ನಾಕುಲಂ(ಕೇರಳ): ಮಾಜಿ ಪತ್ನಿ ಹಾಗೂ ಮಗಳು ನೀಡಿದ ದೂರಿನ ಮೇರೆಗೆ ಕಡವಂತ್ರ ಪೊಲೀಸರು ಮಲಯಾಳಂ ನಟ ಬಾಲನನ್ನು ಬಂಧಿಸಿದ್ದಾರೆ. ಇಂದು ಬೆಳಗ್ಗೆ ಕೊಚ್ಚಿಯಲ್ಲಿರುವ ಫ್ಲಾಟ್‌ನಲ್ಲಿ ಬಾಲಾ ಅವರನ್ನು ವಶಕ್ಕೆ ಪಡೆಯಲಾಗಿದೆ.
ಇಂದು ನ್ಯಾಯಾಲಯಕ್ಕೆ ಬಾಲರನ್ನು ಹಾಜರುಪಡಿಸಲಾಗುವುದು. ಮಹಿಳೆಯನ್ನು ಅವಮಾನಿಸಿದ ಮತ್ತು ಮಕ್ಕಳ ಹಕ್ಕುಗಳ ಕಾಯ್ದೆಯ ಸೆಕ್ಷನ್‌ಗಳನ್ನು ಉಲ್ಲಂಘಿಸಿದ ಆರೋಪದ ಮೇರೆಗೆ ದೂರು ದಾಖಲಾಗಿದೆ.
ಇತ್ತೀಚೆಗೆ, ನಟ ಬಾಲಾ ತನ್ನ ಮಾಜಿ ಪತ್ನಿ ಮತ್ತು ಮಗಳೊಂದಿಗಿನ ಸಂಬಂಧದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಟೀಕೆಗಳನ್ನು ಮಾಡಿದ್ದರು. ಇದಕ್ಕೆ ಪ್ರತಿಯಾಗಿ ತಾಯಿ, ಮಗಳು ದೂರು ದಾಖಲಿಸಿದ್ದಾರೆ. ದೂರಿನಲ್ಲಿ ಬಾಲಾ ಅವರು ಸಾಮಾಜಿಕ ಮಾಧ್ಯಮದ ಪೋಸ್ಟ್‌ಗಳ ಮೂಲಕ ಅವಮಾನಿಸಿದ್ದಾರೆ. ಮತ್ತು ಅವರ ವೀಡಿಯೊಗಳು ತಮ್ಮ ಮಗಳಿಗೆ ಭಾವನಾತ್ಮಕವಾಗಿ ಹಾನಿ ಮಾಡಿದೆ ಎಂದು ಉಲ್ಲೇಖಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ದೂರಿನಲ್ಲಿ ಸತ್ಯಾಂಶ ಕಂಡು ಬಂದಿದ್ದು, ಇದರ ಆಧಾರದ ಮೇಲೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಇದನ್ನೂ ಓದಿ: ಬಂಗಾಳ ವೈದ್ಯೆ ಕೊಲೆ ಕೇಸ್: ಮತ್ತೆ 77 ವೈದ್ಯರಿಂದ ಸಾಮೂಹಿಕ ರಾಜೀನಾಮೆ ಎಚ್ಚರಿಕೆ