ETV Bharat / state

ಜಂಬೂ ಸವಾರಿ ಯಶಸ್ವಿ: ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಸಿಎಫ್

ಮೈಸೂರು ದಸರಾ ಜಂಬೂ ಸವಾರಿ ಮೆರವಣಿಗೆ ಯಶಸ್ಸಿನ ಹಿನ್ನೆಲೆಯಲ್ಲಿ ನಾಡಿನ ಅಧಿದೇವತೆ ಚಾಮುಂಡೇಶ್ವರಿಗೆ ಡಿಸಿಎಫ್ ಐ.ಬಿ.ಪ್ರಭುಗೌಡ ವಿಶೇಷ ಪೂಜೆ ಸಲ್ಲಿಸಿದ್ದಾರೆ.

chamundeshwari
ಚಾಮುಂಡಿ ಬೆಟ್ಟದಲ್ಲಿ ಡಿಸಿಎಫ್ ಐ.ಬಿ.ಪ್ರಭುಗೌಡ, ಇತರರು (ETV Bharat)
author img

By ETV Bharat Karnataka Team

Published : Oct 14, 2024, 9:45 AM IST

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿ ಮೆರವಣಿಗೆ ಯಶಸ್ವಿಯಾದ ಹಿನ್ನೆಲೆಯಲ್ಲಿ ವನ್ಯಜೀವಿ ವಿಭಾಗದ ಡಿಸಿಎಫ್ ಐ.ಬಿ.ಪ್ರಭುಗೌಡ ಅವರು ಚಾಮುಂಡೇಶ್ವರಿ ಬೆಟ್ಟಕ್ಕೆ ತೆರಳಿ ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದರು.

ಹುಣಸೂರಿನ ವೀರನಹೊಸಳ್ಳಿಯಲ್ಲಿ ಗಜಪಡೆ ಪಯಣದ ಮೂಲಕ ಅರಮನೆಗೆ ಆಗಮಿಸಿ, ಸುಮಾರು ಒಂದೂವರೆ ತಿಂಗಳು 14 ಆನೆಗಳು ನಿತ್ಯ ಎಲ್ಲ ಹಂತದ ತಾಲೀಮಿನಲ್ಲಿ ಭಾಗವಹಿಸಿ, ದಸರಾ ಮಹೋತ್ಸವ ಯಶಸ್ವಿಗೊಳಿಸಿದ್ದವು. ಕ್ಯಾಪ್ಟನ್ ಅಭಿಮನ್ಯು ನೇತೃತ್ವದ 14 ಆನೆಗಳಿಗೆ ಯಾವುದೇ ತೊಂದರೆಯಾಗದೇ ಹಾಗೂ ಆನೆಗಳಿಂದ ಯಾವುದೇ ಅಪಾಯದ ಸನ್ನಿವೇಶ ಎದುರಾಗದೇ, ಜಂಬೂ ಸವಾರಿ ಮೆರವಣಿಗೆ ನಡೆದಿದೆ. ದಸರಾದಲ್ಲಿ 11 ಆನೆಗಳು ಕೂಡ ಶಾಂತವಾಗಿ ಯಶಸ್ವಿಗೊಳಿಸಿದ್ದರಿಂದ ಡಿಸಿಎಫ್​ ಚಾಮುಂಡೇಶ್ವರಿ ದೇವಾಲಯಕ್ಕೆ ಹೋಗಿ ವಿಶೇಷ ಪೂಜೆ ಮಾಡಿಸಿದರು.

chamundeshwari
ಚಾಮುಂಡಿ ಬೆಟ್ಟದಲ್ಲಿ ಡಿಸಿಎಫ್ ಐ.ಬಿ.ಪ್ರಭುಗೌಡ, ಇತರರು (ETV Bharat)

ಕಂಜನ್ - ಧನಂಜಯ್ ಜಗಳ: ಆಹಾರಕ್ಕಾಗಿ ಕಂಜನ್ ಆನೆಯನ್ನು ಧನಂಜಯ ಆನೆ ಅರಮನೆ ಆವರಣದಿಂದ ಆಚೆ ಓಡಿಸಿಕೊಂಡು ಹೋಗಿತ್ತು. ಈ ಘಟನೆ ಬಳಿಕ ಆನೆಗಳ ಬಳಿ ಮಾವುತರು ಹಾಗೂ ಕಾವಡಿಗರು, ಅರಣ್ಯ ಇಲಾಖೆ ಸಿಬ್ಬಂದಿ ಹೊರತುಪಡಿಸಿ, ಎಲ್ಲರಿಗೂ ನಿರ್ಬಂಧ ವಿಧಿಸಲಾಗಿತ್ತು. ಎಲ್ಲ ರೀತಿಯಲ್ಲೂ ಅಚ್ಚುಕಟ್ಟಾಗಿ ಗಜಪಡೆಯನ್ನು ನಿರ್ವಹಣೆ ಮಾಡಲಾಗಿತ್ತು.

ಇದನ್ನೂ ಓದಿ: ಅಂಬಾರಿ ಕೊಡುವುದು ತಡವಾಯಿತು ಎಂಬ ವಿಚಾರಕ್ಕೆ ಸ್ವತಃ ಪ್ರಮೋದಾದೇವಿ ಒಡೆಯರ್ ಸ್ಪಷ್ಟನೆ

ಗಜಪಡೆ ಬಗ್ಗೆ ಈಟಿವಿ ಭಾರತದ ಜೊತೆ ಮಾತನಾಡಿದ್ದ ಡಿಸಿಎಫ್ ಪ್ರಭುಗೌಡ, ''ದಸರಾದಲ್ಲಿ ಈ ಬಾರಿ ಹೊಸ ಆನೆಗಳು ಭಾಗವಹಿಸಿದ್ದವು. ಅವುಗಳನ್ನು ನಿಭಾಯಿಸುವ ಬಗ್ಗೆ ಸ್ವಲ್ಪ ಸವಾಲಾಗಿತ್ತು. ಆದರೆ ಕಾವಾಡಿಗರು ಮತ್ತು ಮಾವುತರು ಬಹಳ ಶ್ರಮಪಟ್ಟು ಆನೆಗಳನ್ನು ಪಳಗಿಸಿದ್ದಾರೆ. ಇಡೀ ಅರಣ್ಯ ಇಲಾಖೆಯ ತಂಡ ಜಂಬೂ ಸವಾರಿಗೆ ಶ್ರಮಪಟ್ಟು ಕೆಲಸ ಮಾಡಿದ್ದರಿಂದ ಮೈಸೂರು ದಸರಾ ಯಶಸ್ವಿಯಾಗಿದೆ. 14 ಆನೆಗಳೂ ಕೂಡ ವಿಶೇಷವಾಗಿವೆ. ಅಭಿಮನ್ಯು ಯಶಸ್ವಿಯಾಗಿ ಅಂಬಾರಿಯನ್ನು ಹೊತ್ತಿದ್ದಾನೆ. ಮುಂದಿನ ವರ್ಷದ ಅಂಬಾರಿ ಯಾವ ಆನೆ ಹೊರಬೇಕು ಎಂದು ಚರ್ಚೆ ಮಾಡೋಣ. ಆನೆಯನ್ನು ಆಯ್ಕೆ ಮಾಡುವ ಸಮಯದಲ್ಲಿ ಸಲಹೆ, ಸೂಚನೆಗಳನ್ನು ಪರಿಗಣಿಸಿ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ'' ಎಂದು ಹೇಳಿದ್ದರು.

ಇದನ್ನೂ ಓದಿ: ಯಶಸ್ವಿಯಾಗಿ ಜಂಬೂಸವಾರಿ ಹೊತ್ತ AK47 ಖ್ಯಾತಿಯ ಅಭಿಮನ್ಯು; ಮಾವುತನ ವಿಶೇಷ ಸಂದರ್ಶನ

ಇದನ್ನೂ ಓದಿ: ಆನೆಗಳು ಅಚ್ಚುಕಟ್ಟಾಗಿ ತಮ್ಮ ಜವಾಬ್ದಾರಿ ನಿರ್ವಹಿಸಿವೆ, ಅಭಿಮನ್ಯು ಇಸ್ ದ ಬೆಸ್ಟ್: ಡಿಸಿಎಫ್​ ಪ್ರಭುಗೌಡ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.