ETV Bharat / state

ಬೆಂಗಳೂರು: ಕುಡಿದ ಮತ್ತಿನಲ್ಲಿ ಸ್ನೇಹಿತರ ನಡುವೆ ಗಲಾಟೆ, ಓರ್ವನ ಹತ್ಯೆ - MAN MURDERED BY FRIEND

ಇಬ್ಬರು ಸ್ನೇಹಿತರ ನಡುವೆ ಗಲಾಟೆ ನಡೆದು, ಓರ್ವನ ಕೊಲೆಯಾದ ಪ್ರಕರಣ ಬೆಂಗಳೂರಿನಲ್ಲಿ ನಡೆದಿದೆ.

murder case
ಯೋಗೇಂದ್ರ ಸಿಂಗ್, ಆರೋಪಿ ಉಮೇಶ್ (ETV Bharat)
author img

By ETV Bharat Karnataka Team

Published : Oct 14, 2024, 10:24 AM IST

ಬೆಂಗಳೂರು: ಮದ್ಯದ ಅಮಲಿನಲ್ಲಿ ಸ್ನೇಹಿತರ ನಡುವೆ ಆರಂಭವಾದ ಗಲಾಟೆ ಹತ್ಯೆಯಲ್ಲಿ ಅಂತ್ಯವಾದ ಘಟನೆ ಭಾನುವಾರ ತಡರಾತ್ರಿ ಹೊಸ ಗುಡ್ಡದಹಳ್ಳಿಯ ಕಲಾ ವೈನ್ಸ್ ಸ್ಟೋರ್ಸ್ ಬಳಿ ನಡೆದಿದೆ.

ಯೋಗೇಂದ್ರ ಸಿಂಗ್ (25) ಎಂಬಾತನ ಕುತ್ತಿಗೆಗೆ ಬಾಟಲಿಯಿಂದ ಚುಚ್ಚಿ ಕೊಲೆ ಮಾಡಲಾಗಿದ್ದು, ಆರೋಪಿ ಉಮೇಶ್ ಎಂಬವನನ್ನು ಬ್ಯಾಟರಾಯನಪುರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನರಸಾಪುರ ಇಂಡಸ್ಟ್ರಿಯಲ್ ಏರಿಯಾದ ಕಂಪನಿಯೊಂದರಲ್ಲಿ ಮಿನಿ ಬಸ್ ಚಾಲಕನಾಗಿದ್ದ ಯೋಗೇಂದ್ರ ಸಿಂಗ್, ಅಲ್ಲಿಯೇ ವಾಸವಿದ್ದ. ದಸರಾ ರಜೆ ಹಿನ್ನೆಲೆಯಲ್ಲಿ ಇತ್ತೀಚೆಗೆ ಕಸ್ತೂರಬಾ ನಗರದಲ್ಲಿರುವ ತನ್ನ ಮನೆಗೆ ಬಂದಿದ್ದ ಯೋಗೇಂದ್ರ ಸಿಂಗ್, ತಡರಾತ್ರಿ ಸ್ನೇಹಿತ ಉಮೇಶ್ ಜೊತೆಗೂಡಿ ಮದ್ಯಪಾನ ಮಾಡಿದ್ದರು. ಪಾನಮತ್ತರಾಗಿದ್ದ ಇಬ್ಬರೂ ಸ್ನೇಹಿತರು ಹಳೆಯ ಜಗಳದ ವಿಚಾರವಾಗಿ ಮತ್ತೆ ಗಲಾಟೆ ಮಾಡಿಕೊಂಡಿದ್ದರು. ಅದೇ ವೇಳೆ ಆರೋಪಿ ಉಮೇಶ್ ಬಾಟಲಿಯಿಂದ ಯೋಗೇಂದ್ರ ಸಿಂಗ್‌ನ ಕುತ್ತಿಗೆ ಇರಿದಿದ್ದಾನೆ. ಪರಿಣಾಮ ಯೋಗೇಂದ್ರ ಸಿಂಗ್ ಮೃತಪಟ್ಟಿದ್ದಾನೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಆನ್​​ಲೈನ್ ಟ್ರೇಡಿಂಗ್​ನಿಂದ 20 ಲಕ್ಷ ಸಾಲ; ಇಎಂಐ ಕಟ್ಟಲಾಗದೇ ಮನೆಬಿಟ್ಟು ಹೋದ ವ್ಯಕ್ತಿ

ಮೃತ ಯೋಗೇಂದ್ರ ಸಿಂಗ್‌ನ ತಂದೆ ನೀಡಿದ ದೂರಿನ ಅನ್ವಯ ಬ್ಯಾಟರಾಯನಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಸಂಬಂಧ ಆರೋಪಿಯನ್ನು ವಶಕ್ಕೆ ಪಡೆದು, ಮುಂದಿನ ತನಿಖೆ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ನಿಲ್ಲಿಸಿದ್ದ ಸ್ಕೂಟರ್‌ಗೆ ಟಚ್ ಆಗಿ ಬಿದ್ದ ಬಾಲಕ, ಗೂಡ್ಸ್​ ವಾಹನದ ಚಕ್ರಕ್ಕೆ ಸಿಲುಕಿ ಸಾವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.