ETV Bharat / bharat

ಛತ್ತೀಸ್​ಗಢದಲ್ಲಿ ಭದ್ರತಾ ಸಿಬ್ಬಂದಿಯಿಂದ ಎನ್​ಕೌಂಟರ್: 12 ನಕ್ಸಲರ ಹತ್ಯೆ - NAXALS KILLED IN ENCOUNTER

ಛತ್ತೀಸ್​ಗಢದಲ್ಲಿ ಭದ್ರತಾ ಸಿಬ್ಬಂದಿಯ ಎನ್​ಕೌಂಟರ್​ಗೆ 12 ನಕ್ಸಲರು ಹತರಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Encounter
ಭದ್ರತಾ ಸಿಬ್ಬಂದಿ - ನಕ್ಸಲೀಯರ ನಡುವೆ ಗುಂಡಿನ ಚಕಮಕಿ (ETV Bharat)
author img

By ETV Bharat Karnataka Team

Published : Jan 18, 2025, 9:17 AM IST

ಬಿಜಾಪುರ\ಸುಕ್ಮಾ: ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ನಿನ್ನೆ ಬೆಳಗ್ಗೆ ಭದ್ರತಾ ಸಿಬ್ಬಂದಿ ಮತ್ತು ನಕ್ಸಲೀಯರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ 12 ನಕ್ಸಲರು ಹತರಾಗಿದ್ದಾರೆ. ನಕ್ಸಲರ ಮೃತದೇಹಗಳನ್ನು ಉಸೂರು ಬಳಿಯ ನಂಬಿ ಕ್ಯಾಂಪ್‌ಗೆ ತರಲಾಗಿದ್ದು, ಗುರುತು ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದಕ್ಷಿಣ ಬಸ್ತಾರ್ ಪ್ರದೇಶದ ಕಾಡುಗಳಲ್ಲಿ ಹೆಚ್ಚಿನ ಸಂಖ್ಯೆಯ ನಕ್ಸಲರು ಇರುವ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಬಿಜಾಪುರ, ಸುಕ್ಮಾ ಮತ್ತು ದಾಂತೇವಾಡೆಯಿಂದ ಜಿಲ್ಲಾ ಮೀಸಲು ಗಾರ್ಡ್ (ಡಿಆರ್‌ಜಿ) ಪಡೆಗಳು, ಕಮಾಂಡೋ ಬೆಟಾಲಿಯನ್ ಫಾರ್ ರೆಸಲ್ಯೂಟ್ ಆಕ್ಷನ್ (ಕೋಬ್ರಾ) ಮತ್ತು ಸಿಆರ್‌ಪಿಎಫ್‌ನ 229 ನೇ ಬೆಟಾಲಿಯನ್ ಕಾರ್ಯಾಚರಣೆ ಪ್ರಾರಂಭಿಸಿದ್ದವು.

ಬಿಜಾಪುರದ ಪೂಜಾರಿ ಕಂಕೇರ್ ಮತ್ತು ಮರುದ್ಬಾಕ ಅರಣ್ಯಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ಭದ್ರತಾ ಪಡೆಗಳನ್ನು ಕಂಡ ನಕ್ಸಲರು ಗುಂಡಿನ ದಾಳಿ ಆರಂಭಿಸಿದ್ದರು. ಅದಕ್ಕೆ ಪ್ರತಿಯಾಗಿ ಭದ್ರತಾ ಸಿಬ್ಬಂದಿ ಗುಂಡಿನ ದಾಳಿ ನಡೆಸಿದ್ದರು.

''ಬಸ್ತಾರ್ ಐಜಿ ಸುಂದರರಾಜ್ ಪಿ ಮತ್ತು ಸಿಆರ್‌ಪಿಎಫ್ ಐಜಿ ಸಂಪೂರ್ಣ ಕಾರ್ಯಾಚರಣೆಯ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ನಿನ್ನೆ ಎನ್‌ಕೌಂಟರ್ ವೇಳೆ ಮೃತಪಟ್ಟ 12 ನಕ್ಸಲರನ್ನು ಗುರುತಿಸುವ ಪ್ರಕ್ರಿಯೆ ನಡೆಯುತ್ತಿದೆ'' ಎಂದು ಬಿಜಾಪುರ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹತ್ಯೆಯಾದ ನಕ್ಸಲೀಯರು ಬಸ್ತಾರ್‌ನಲ್ಲಿರುವ ನಕ್ಸಲೀಯರ ಪ್ರಬಲ ಘಟಕವಾದ PLGA (ಪೀಪಲ್ಸ್ ಲಿಬರೇಶನ್ ಗೆರಿಲ್ಲಾ ಆರ್ಮಿ, PLGA) ನ ಸದಸ್ಯರು ಎಂದು ಬಸ್ತಾರ್ ಐಜಿ ಹೇಳಿದ್ದಾರೆ. ಹತ್ಯೆಯಾದ ನಕ್ಸಲೀಯರ ಗುರುತು ಇನ್ನೂ ಪತ್ತೆಯಾಗಿಲ್ಲ.

"ಪಿಎಲ್‌ಜಿಎ ಬೆಟಾಲಿಯನ್ ನಂ. 1 ಎಂಬುದು ಬುಡಕಟ್ಟು ಜನಾಂಗದ ಪ್ರಾಬಲ್ಯವಿರುವ ಬಸ್ತಾರ್ ಪ್ರದೇಶದಲ್ಲಿನ ಪ್ರಬಲ ಮಾವೋವಾದಿಗಳ ಸಂಘಟನೆ ಎಂದು ಪರಿಗಣಿಸಲಾಗಿದೆ. ದಕ್ಷಿಣ ಬಸ್ತಾರ್‌ನಲ್ಲಿ ಭದ್ರತಾ ಪಡೆಗಳ ಮೇಲೆ ಅನೇಕ ಮಾರಣಾಂತಿಕ ದಾಳಿಗಳನ್ನು ನಡೆಸಲಾಗಿದೆ" ಎಂದು ಐಜಿ ಸುಂದರರಾಜ್ ಹೇಳಿದ್ದಾರೆ.

2025 ರಲ್ಲಿ ಬಸ್ತಾರ್‌ನಲ್ಲಿ ನಡೆದ ಪ್ರಮುಖ ಎನ್‌ಕೌಂಟರ್‌ಗಳು:

ಗರಿಯಾಬಂದ್‌ನ ಎನ್‌ಕೌಂಟರ್ : ಜನವರಿ 3 ರಂದು ಗರಿಯಾಬಂದ್ ಜಿಲ್ಲೆಯ ಇಂಡಗಾಂವ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಭದ್ರತಾ ಪಡೆಗಳು ಮತ್ತು ನಕ್ಸಲೀಯರ ನಡುವೆ ಮೊದಲ ಎನ್‌ಕೌಂಟರ್ ನಡೆಯಿತು. ಈ ಕಾರ್ಯಾಚರಣೆಯಲ್ಲಿ ಮೂವರು ನಕ್ಸಲರು ಹತರಾಗಿದ್ದರು.

ಅಬುಜ್ಮದ್ ಅರಣ್ಯದಲ್ಲಿ ಎನ್‌ಕೌಂಟರ್: ಜನವರಿ 5 ರಂದು ಈ ವರ್ಷದ ಎರಡನೇ ಎನ್‌ಕೌಂಟರ್ ಅಬುಜ್ಮದ್ ಅರಣ್ಯದಲ್ಲಿ ನಡೆದಿದೆ. ಎನ್‌ಕೌಂಟರ್ ನಡೆದಾಗ ದಾಂತೇವಾಡ, ನಾರಾಯಣಪುರ, ಬಸ್ತಾರ್ ಮತ್ತು ಕೊಂಡಗಾಂವ್ ಪ್ರದೇಶಗಳ ಡಿಆರ್‌ಜಿ ಮತ್ತು ಎಸ್‌ಟಿಎಫ್ ಸಿಬ್ಬಂದಿ ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿದ್ದರು. ಈ ವೇಳೆ ಐವರು ನಕ್ಸಲೀಯರು ಹತ್ಯೆಯಾಗಿದ್ದು, ಅವರಲ್ಲಿ ಇಬ್ಬರು ಮಹಿಳೆಯರು ಇದ್ದರು.

ಸುಕ್ಮಾ ಎನ್‌ಕೌಂಟರ್ : ಜನವರಿ 9 ರಂದು ಸುಕ್ಮಾ-ಬಿಜಾಪುರ ಜಿಲ್ಲೆಗಳ ಗಡಿ ಪ್ರದೇಶದಲ್ಲಿ ಎನ್‌ಕೌಂಟರ್ ನಡೆದಿದ್ದು, ಈ ವೇಳೆ ಮೂವರು ನಕ್ಸಲೀಯರು ಹತರಾಗಿದ್ದಾರೆ.

ಬಿಜಾಪುರದಲ್ಲಿ ಎನ್‌ಕೌಂಟರ್ : ಜನವರಿ 12 ರಂದು ಬಿಜಾಪುರ ಜಿಲ್ಲೆಯ ಮದ್ದೀಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಭದ್ರತಾ ಪಡೆಗಳು ಮತ್ತು ನಕ್ಸಲೀಯರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಈ ವೇಳೆ ಮೂವರು ನಕ್ಸಲೀಯರು ಹತರಾಗಿದ್ದರು.

ಇದನ್ನೂ ಓದಿ : ಛತ್ತೀಸ್‌ಗಢದಲ್ಲಿ ಎನ್​ಕೌಂಟರ್: 3 ನಕ್ಸಲರ ಹತ್ಯೆ, ಶಸ್ತ್ರಾಸ್ತ್ರ ವಶ - NAXALITES ENCOUNTER

ETV Bharat Logo

Copyright © 2025 Ushodaya Enterprises Pvt. Ltd., All Rights Reserved.