ETV Bharat / bharat

ಸ್ವಾಮಿತ್ವ ಯೋಜನೆ ಅಡಿ 65 ಲಕ್ಷ ಆಸ್ತಿ ಕಾರ್ಡ್ ವಿತರಿಸಲಿರುವ ಪ್ರಧಾನಿ; ಏನಿದು ಯೋಜನೆ, ಯಾರಿಗೆಲ್ಲ ಪ್ರಯೋಜನ?​​ - WHAT IS SVAMITVA SCHEME

ಸ್ವಾಮಿತ್ವ ಯೋಜನೆ ಅಡಿ ಇಂದು ವಿಡಿಯೋ ಕಾನ್ಫರೆನ್ಸ್​ ಮೂಲಕ ಫಲಾನುಭವಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಕಾರ್ಡ್​ ಹಂಚಲಿದ್ದಾರೆ.

PM Modi to distribute over 65 lakh property cards under SVAMITVA scheme today
ಙಪ್ರಧಾನಿ ನರೇಂದ್ರ ಮೋದಿ (ಐಎಎನ್​ಎಸ್​​)
author img

By ETV Bharat Karnataka Team

Published : Jan 18, 2025, 11:20 AM IST

ನವದೆಹಲಿ: ಭಾರತದ ಗ್ರಾಮಗಳ ಸಬಲೀಕರಣ ಪ್ರಯತ್ನಗಳಲ್ಲಿ ಪ್ರಮುಖವಾಗಿರುವ 'ಸ್ವಾಮಿತ್ವ' ಯೋಜನೆ ಅಡಿ ಇಂದು ಪ್ರಧಾನಿ ನರೇಂದ್ರ ಮೋದಿ ಅವರು 65 ಲಕ್ಷ ಕುಟುಂಬಗಳಿಗೆ ಆಸ್ತಿ ಕಾರ್ಡ್​​ ವಿತರಿಸಲಿದ್ದಾರೆ. ಇಂದು ಮಧ್ಯಾಹ್ನ 12.30ಕ್ಕೆ ವಿಡಿಯೋ ಕಾನ್ಫರೆನ್ಸ್​ ಮೂಲಕ ಈ ಯೋಜನೆ ಫಲಾನುಭವಿಗಳಿಗೆ ಕಾರ್ಡ್​ ಹಂಚಲಿದ್ದು, ಅವರೊಂದಿಗೆ ಮಾತುಕತೆ ನಡೆಸಿ, ದೇಶವನ್ನು ಉದ್ದೇಶಿ ಮೋದಿ ಮಾತನಾಡಲಿದ್ದಾರೆ.

ಛತ್ತೀಸ್‌ಗಢ, ಗುಜರಾತ್, ಹಿಮಾಚಲ ಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ, ಮಿಜೋರಾಂ, ಒಡಿಶಾ, ಪಂಜಾಬ್, ರಾಜಸ್ಥಾನ ಮತ್ತು ಉತ್ತರ ಪ್ರದೇಶ ಹಾಗೂ ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್​​ ಸೇರಿದಂತೆ 10 ರಾಜ್ಯಗಳ 50 ಸಾವಿರಕ್ಕೂ ಹೆಚ್ಚು ಗ್ರಾಮದ ಆಸ್ತಿ ಮಾಲೀಕರಿಗೆ ಕಾರ್ಡ್​ ವಿತರಣೆ ಮಾಡಲಾಗುವುದು. ಸ್ವಾಮಿತ್ವ ಯೋಜನೆ ಅಡಿ 2.25 ಕೋಟಿ ಆಸ್ತಿ ಕಾರ್ಡ್​ ವಿತರಣೆಗೆ ಸಿದ್ಧತೆ ನಡೆಸಲಾಗಿದ್ದು, ಒಂದೇ ದಿನದಲ್ಲಿ 65 ಲಕ್ಷ ಕಾರ್ಡ್​​ಗಳನ್ನು ವಿತರಿಸಲಾಗುತ್ತಿದೆ.

ಏನಿದು ಸ್ವಾಮಿತ್ವ ಯೋಜನೆ?: ಸ್ವಾಮಿತ್ವ (ಗ್ರಾಮ ಪ್ರದೇಶಗಳಲ್ಲಿ ಸುಧಾರಿತ ತಂತ್ರಜ್ಞಾನದೊಂದಿಗೆ ಗ್ರಾಮಗಳ ಸಮೀಕ್ಷೆ ಮತ್ತು ಮ್ಯಾಪಿಂಗ್) ಯೋಜನೆಯನ್ನು 2020ರ ಏಪ್ರಿಲ್​ 4ರಂದು ಪ್ರಾರಂಭ ಮಾಡಲಾಗಿದ್ದು, ಗ್ರಾಮ ವಾಸಿಗಳಿಗೆ ತಮ್ಮ ಆಸ್ತಿ ಹಕ್ಕಿನ ಮಾಲೀಕತ್ವ ನೀಡುವ ಗುರಿಯನ್ನು ಇದು ಹೊಂದಿದೆ. ಈ ಯೋಜನೆ ಅಡಿ, ಆಸ್ತಿ ಮಾಲೀಕರಿಗೆ ಹಕ್ಕಿನ ದಾಖಲೆಯನ್ನು ನೀಡಲಾಗುವುದು. ಈ ಆಸ್ತಿ ಕಾರ್ಡ್​ ಅನ್ನು ಸುಧಾರಿತ ಡ್ರೋನ್​ ಮತ್ತು ಜಿಐಎಸ್​ ತಂತ್ರಜ್ಞಾನದ ಮೂಲಕ ಮಾಪನ ಮಾಡಲಾಗುವುದು.

ಇದು ಪಂಚಾಯತ್​ ರಾಜ್​ ಸಚಿವಾಲಯದ ಉಪಕ್ರಮವಾಗಿದ್ದು, ಅದರ ಮೂಲಕ ಇದನ್ನು ಜಾರಿ ಮಾಡಲಾಗುತ್ತಿದೆ. ಇದು ಗ್ರಾಮೀಣ ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸುವ ಮತ್ತು ಭೂ ಮಾಲೀಕತ್ವ ನೀಡುವ ಮೂಲಕ ಆಡಳಿತದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ.

ಗ್ರಾಮೀಣ ಸಮುದಾಯವನ್ನು ಸಬಲೀಕರಣಗೊಳಿಸುವ ಮತ್ತು ಭೂ ಮಾಲೀಕತ್ವದ ಭರವಸೆ ನೀಡುವ ಮೂಲಕ ಅವರ ಆರ್ಥಿಕ ಪ್ರಗತಿ ಉತ್ತೇಜಿಸುವಲ್ಲಿ ಸರ್ಕಾರದ ಬದ್ಧತೆಯನ್ನು ಇದು ಹೊಂದಿದೆ. ಆಸ್ತಿ ಮಾಲೀಕತ್ವವನ್ನು ನೀಡುವ ಮೂಲಕ ಗ್ರಾಮೀಣ ನಿವಾಸಿಗಳಿಗೆ ಸಾಲ, ಸರ್ಕಾರಿ ಸೌಲಭ್ಯ ಮತ್ತು ಸೇವೆ ಸೌಲಭ್ಯವನ್ನು ಉತ್ತಮಗೊಳಿಸುವ ಹಾಗೂ ಸಾಮಾಜಿಕ ಮತ್ತು ಆರ್ಥಿಕ ಸ್ಥಿರತೆ ಉತ್ತೇಜಿಸಲಾಗುವುದು.

ಸ್ವಾಮಿತ್ವ ಯೋಜನೆಯು ಗ್ರಾಮೀಣ ಆಡಳಿತದಲ್ಲಿ ಮಾರ್ಪಡುವಿಕೆ ಮತ್ತು ಆಸ್ತಿ ಮಾಲೀಕರಿಗೆ ಕಾನೂನು ಮಾನ್ಯತೆಯನ್ನು ಖಾತ್ರಿ ಪಡಿಸುವಲ್ಲಿ ಪ್ರಮುಖವಾಗಿದೆ. ವಿಶೇಷವಾಗಿ ಗ್ರಾಮಗಳಲ್ಲಿ ಭೂ ದಾಖಲೆಗಳು ಅಪೂರ್ಣ ಮತ್ತು ಗೈರಾಗಿರುವಲ್ಲಿ ಇದು ಮಾಲೀಕತ್ವ ನೀಡುವಲ್ಲಿ ಪ್ರಮುಖವಾಗಿದೆ.

ಈ ಕಾರ್ಯಕ್ರಮದಲ್ಲಿ ಪಂಚಾಯತ್ ರಾಜ್ ಸಚಿವ ರಾಜೀವ್ ರಂಜನ್ ಸಿಂಗ್ ಲಾಲನ್, ಕೇಂದ್ರ ಪಂಚಾಯತ್ ರಾಜ್ ರಾಜ್ಯ ಸಚಿವ ಎಸ್.ಪಿ.ಸಿಂಗ್ ಬಾಘೇಲ್ ಮತ್ತು ಪಂಚಾಯತ್ ರಾಜ್ ಸಚಿವಾಲಯದ ಕಾರ್ಯದರ್ಶಿ ವಿವೇಕ್ ಭಾರದ್ವಾಜ್ ಭಾಗವಹಿಸಲಿದ್ದಾರೆ. (ಐಎಎನ್​ಎಸ್​)

ಇದನ್ನೂ ಓದಿ: ಮಂಜುಗಟ್ಟುವ ಚಳಿಯಲ್ಲಿಯೂ ನಾಗಾಸಾಧುಗಳು ಹೇಗಿರ್ತಾರೆ? ಆ ಶಕ್ತಿ ಸಿದ್ಧಿಸಿದ್ದು ಹೇಗೆ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.