ETV Bharat / bharat

ಚೆನ್ನೈನ ಎರಡನೇ ವಿಮಾನ ನಿಲ್ದಾಣ ವಿರೋಧಿಸಿ ಜ.20ರಂದು ನಟ ವಿಜಯ್​ ಪ್ರತಿಭಟನೆ - POLITICIAN VIJAY TO LEAD PROTEST

2022ರಿಂದ ಈ ಯೋಜನೆಗೆ 20 ಗ್ರಾಮವಾಸಿಗಳು ವಿರೋಧಿಸುತ್ತಿದ್ದು, ಈ ಪ್ರತಿಭಟನೆ ಮೂಲಕ ಅವರನ್ನು ಬೆಂಬಲಿಸುವ ಉದ್ದೇಶ ಹೊಂದಲಾಗಿದೆ.

Actor politician Vijay to lead protest march against Parandur airport on January 20
ನಟ, ರಾಜಕಾರಣಿ ವಿಜಯ್​ (ಎಎನ್​ಐ)
author img

By ETV Bharat Karnataka Team

Published : Jan 18, 2025, 1:34 PM IST

ಚೆನ್ನೈ: ಗ್ರೀನ್​ಫೀಲ್ಡ್​​ ವಿಮಾನ ನಿಲ್ದಾಣದ ಪ್ರಸ್ತಾವನೆಯೊಂದಿಗೆ ಕಾಂಚೀಪುರ್​ ಜಿಲ್ಲೆಯ ಎಗನಪುರಂ ಗ್ರಾಮದಲ್ಲಿ ಚೆನ್ನೈನ ಎರಡನೇ ವಿಮಾನ ನಿಲ್ದಾಣ ವಿರೋಧಿಸಿ ತಮಿಳು ನಟ ಹಾಗೂ ಟಿವಿಕೆ ಅಧ್ಯಕ್ಷ ವಿಜಯ್​ ಪ್ರತಿಭಟನಾ ಮೆರವಣಿಗೆಗೆ ಸಜ್ಜಾಗಿದ್ದಾರೆ.

ಜನವರಿ 20ರಂದು ಅವರು ಪ್ರತಿಭಟನೆ ನಡೆಸಲಿದ್ದು, ಈ ಸಂಬಂಧ ಕಾಂಚೀಪುರಂಜಿಲ್ಲೆ ಎಂಗನಪುರಂ ಭೇಟಿಗೆ ಅನುಮತಿಯನ್ನು ಕೇಳಿದ್ದಾರೆ. 2022ರಿಂದ ಈ ಯೋಜನೆಗೆ 20 ಗ್ರಾಮವಾಸಿಗಳು ವಿರೋಧಿಸುತ್ತಿದ್ದು, ಈ ಪ್ರತಿಭಟನೆ ಮೂಲಕ ವಿಜಯ್​ ಅವರನ್ನು ಬೆಂಬಲಿಸುವ ಉದ್ದೇಶ ಹೊಂದಿದ್ದಾರೆ.

ಈ ಕುರಿತು ಸಭೆ ನಡೆಸಲು ಜನ 19 ಅಥವಾ 20ರಂದು ಅನುಮತಿ ನೀಡುವಂತೆ ವಿಜಯ್​ ಕಾಂಚೀಪುರಂ ಪೊಲೀಸರಿಗೆ ಅನುಮತಿ ಕೋರಿದ್ದರು. ಜನವರಿ 20ರಂದು ಪ್ರತಿಭಟನಾ ಸಭೆಗೆ ಅವಕಾಶ ನೀಡಲಾಗಿದೆ. ಈ ಹಿನ್ನಲೆ ಟಿವಿಕೆ ಕಚೇರಿ ಪ್ರತಿಭಟನಾ ಸಮಿತಿ ನಾಯಕರ ಜೊತೆಗೆ ಸಿದ್ಧತೆ ಆರಂಭಿಸಿದೆ. ಪ್ರತಿಭಟನೆ ನಡೆಸಲು ಐದು ಎಕರೆ ಜಾಗವನ್ನು ಟಿವಿಕೆ ರಾಜ್ಯ ಅಧಿಕಾರಿಗಳು ಗುರುತಿಸಿದ್ದು, ಸಿದ್ಧತಾ ಕಾರ್ಯ ನಡೆಸಿದ್ದಾರೆ.

ಎಂಗನಪುರಂ ಗ್ರಾಮದಲ್ಲಿ ಅಂಬೇಡ್ಕರ್​ ಪ್ರತಿಮೆ ಬಳಿ ಇರುವ ಖಾಲಿ ಮೈದಾನದಲ್ಲಿ ವಿಜಯ್​, ಇಲ್ಲಿನ ಉದ್ದೇಶಿಸಿ ಮಾತನಾಡಲಿದ್ದು, ಟಿವಿಕೆ ಪ್ರಧಾನ ಕಾರ್ಯದರ್ಶಿ ಎನ್​ ಆನಂದ್​ ತಿಳಿಸಿದ್ದು, ಈ ಕುರಿತು ಶುಕ್ರವಾರ ಸ್ಥಳಪರಿಶೀಲನೆ ನಡೆಸಿದರು

2022ರ ಆಗಸ್ಟ್​​ನಲ್ಲಿ ಪರಂದುರ್​ನಲ್ಲಿ ಗ್ರೀನ್​ಫೀಲ್ಡ್​​ ವಿಮಾನ ನಿಲ್ದಾಣ ಕುರಿತು ಕೇಂದ್ರ ಸರ್ಕಾರ ಘೋಷಿಸದಾಗಿನಿಂದ ನಿವಾಸಿಗಳು ಪ್ರತಿಭಟನೆ ನಡೆಸಿದ್ದು, ಈ ಯೋಜನೆಯಿಂದ ಪರಿಸರ ಹಾನಿ ಹಾಗೂ ಕೃಷಿ ಭೂಮಿ ನಷ್ಟಕ್ಕೆ ಕಾರಣವಾಗಲಿದೆ ಎಂದಿದ್ದಾರೆ. ಈ ವಿಮಾನ ನಿಲ್ದಾಣಕ್ಕಾಗಿ 20 ಹಳ್ಳಿಗಳ 5,746 ಎಕರೆ ಭೂ ಸ್ವಾಧೀನ ನಡೆಸಬೇಕಿದ್ದು, 2028ರೊಳಗೆ ಈ ವಿಮಾನ ನಿಲ್ದಾಣ ಪೂರ್ಣಗೊಳಿಸುವ ಯೋಜನೆ ಹೊಂದಲಾಗಿದೆ.

ಈ ಯೋಜನೆಯಲ್ಲಿ ಎಂಗನಪುರಂ ಗ್ರಾಮ ನಿವಾಸಿಗಳು ಅತಿ ಹೆಚ್ಚು ಹಾನಿಗೆ ಒಳಗಾಗಲಿದ್ದು, ಇಲ್ಲಿನ ಫಲವತ್ತಾದ ಭೂಮಿ ಹಾಗೂ ಪರಿಸರ ಸೂಕ್ಷ್ಮ ನೀರಿನ ಮೂಲಗಳು ಹಾನಿಯಾಗಲಿದೆ. ಇದು ನಮ್ಮ ಜೀವನೋಪಯ ಹಾಗೂ ಸ್ಥಳೀಯ ಪರಿಸರ ವ್ಯವಸ್ಥೆ ಮೇಲೆ ಪರಿಣಾಮ ಬೀರಲಿದೆ ಎಂದು ಪ್ರತಿಭಟನೆ ನಡೆಸಿದ್ದಾರೆ.

ಈಗಾಗಲೇ ರಾತ್ರಿ ಪ್ರತಿಭಟನೆ ಸೇರಿದಂತೆ ಹಲವು ರೀತಿಯಲ್ಲಿ ಧರಣಿಗಳ ಮೂಲಕ ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಗ್ರಾಮ ಸಭೆ, ಚುನಾವಣೆಗಳನ್ನು ಕೂಡ ಗ್ರಾಮಸ್ಥರು ಬಾಯ್​ಕಾಟ್​ ಮಾಡಿದ್ದಾರೆ. ಕಳೆದ 900 ದಿನಗಳಿಂದ ಗ್ರಾಮದಲ್ಲಿ ಸಾಗುತ್ತಿರುವ ಪ್ರತಿಭಟನೆ ಹಿನ್ನಲೆ ಗ್ರಾಮಕ್ಕೆ ಬ್ಯಾರಿಕೇಡ್​ಗಳನ್ನು ಹಾಕಿ ಹೊರಗಿನವರ ಪ್ರವೇಶಕ್ಕೆ ನಿರಾಕರಿಸಲಾಗಿದೆ. (ಐಎಎನ್​ಎಸ್​)

ಇದನ್ನೂ ಓದಿ: ಛತ್ತೀಸ್​ಗಢದಲ್ಲಿ ಭದ್ರತಾ ಸಿಬ್ಬಂದಿಯಿಂದ ಎನ್​ಕೌಂಟರ್: 12 ನಕ್ಸಲರ ಹತ್ಯೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.