ETV Bharat / state

ಮುಡಾ ಹಗರಣ ಮಹತ್ತರ ತಿರುವು ಪಡೆದುಕೊಂಡಿದೆ: ಬಿ ವೈ ವಿಜಯೇಂದ್ರ - B Y VIJAYENDRA

300 ಕೋಟಿ ಮೌಲ್ಯದ ಮುಡಾ ಸ್ಥಿರಾಸ್ತಿಯನ್ನು ಇಡಿ ಮುಟ್ಟುಗೋಲು ಹಾಕಿಕೊಂಡ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ ಮಾತನಾಡಿದರು.

bjp-state-president-b-y-vijayendra
ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ (ETV Bharat)
author img

By ETV Bharat Karnataka Team

Published : Jan 18, 2025, 1:55 PM IST

ಬೆಂಗಳೂರು: ಮುಡಾ ಹಗರಣ ಮಹತ್ತರ ತಿರುವು ಪಡೆದುಕೊಂಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು. ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡಿ 300 ಕೋಟಿ ಮೌಲ್ಯದ ಸ್ಥಿರಾಸ್ತಿ ಮುಟ್ಟುಗೋಲು ಹಾಕಿಕೊಂಡಿದೆ. ಇದರರ್ಥ ಸಿಎಂ ಅವರು ಕುಟುಂಬಕ್ಕೆ 14 ಸೈಟು ಪಡೆದುಕೊಂಡಿದ್ದಾರೆ. ಮುಡಾಗೆ ಕೋಟಿ ಕೋಟಿ ನಷ್ಟ ಆಗಿದೆ. ಅಕ್ರಮವಾಗಿ ಮುಡಾ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಇದರಿಂದಲೂ ಭಾರಿ ನಷ್ಟ ಆಗಿದೆ ಎಂದು ತಿಳಿಸಿದರು.

ಆರ್​ಟಿಐ ಕಾರ್ಯಕರ್ತ ಹಾಗೂ ಮುಡಾ ಅಕ್ರಮದ ವಿರುದ್ಧ ಹೋರಾಟ ಮಾಡುತ್ತಿರುವ ಸ್ನೇಹಮಹಿ‌ ಕೃಷ್ಣ ಅವರಿಗೆ ಅಭಿನಂದನೆ‌ ಸಲ್ಲಿಸಿದ‌ ವಿಜಯೇಂದ್ರ ಅವರು, ಸ್ನೇಹಮಯಿ ಕೃಷ್ಣಾ ಅವರ ಮೇಲೆಯೇ ಸರ್ಕಾರ ‌ಆರೋಪ‌ ಮಾಡಿ ಅವರನ್ನು ಬಂಧಿಸಲು ಹೋಗಿತ್ತು. ಇಡಿ ಮುಟ್ಟುಗೋಲು ಹಿನ್ನೆಲೆ ಸಿದ್ದರಾಮಯ್ಯ ಅವರು ಆರೋಪಿ ಸ್ಥಾನದಲ್ಲಿ ಮತ್ತೆ ನಿಲ್ಲುವಂತಾಗಿದೆ. ತಕ್ಷಣ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಒತ್ತಾಯಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ ಮಾತನಾಡಿದರು (ETV Bharat)

ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಆಕ್ರೋಶ: ಬಿಜೆಪಿಯವರು ಅನುದಾನ ವಾಪಸ್ ಕೊಡಲಿ ಎಂಬ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರ ಬಂದು ಎರಡು ವರ್ಷವಾದರೂ ಅನುದಾನ ಇಲ್ಲ. ಶಾಸಕರು ಹತಾಶರಾಗಿದ್ದಾರೆ. ಎರಡು ವರ್ಷವಾದರೂ ಅನುದಾನ ಕೊಟ್ಟಿಲ್ಲ. ಇವರ ಯೋಗ್ಯತೆಗೆ ಯಾವ ರೀತಿ ಸರ್ಕಾರ ನಡೆಸ್ತಿದ್ದಾರೆ. ನಮಗೇನು ಅನುದಾನ ಕೊಟ್ಟು ಉಪಕಾರ ಮಾಡ್ತಿದ್ದಾರಾ? ಕ್ಷೇತ್ರಗಳಿಗೆ ಹಣ ಕೊಡೋದು ಕರ್ತವ್ಯ, ಉಪಕಾರ ಅಲ್ಲ. ಅನುದಾನವನ್ನು ತಕ್ಷಣ ಬಿಡುಗಡೆ ಮಾಡಲಿ ಎಂದು ಆಗ್ರಹಿಸಿದರು.

ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆ : ನಮ್ಮದು ಆಂತರಿಕ ಪ್ರಜಾಪ್ರಭುತ್ವ ವ್ಯವಸ್ಥೆಯಿರುವ ಪಕ್ಷ. ನಮಗೆ ಪಕ್ಷದ ಹಿರಿಯರು, ವರಿಷ್ಠರು ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ರು. ನಾನು ಆಗಿನಿಂದಲೂ ಸರ್ಕಾರದ ವಿರುದ್ಧ ಸತತ ಹೋರಾಟ ಮಾಡ್ತಿದ್ದೇನೆ. ನನ್ನ ನೇತೃತ್ವದಲ್ಲಿ ಪಕ್ಷ ಸಂಘಟನೆ ಮಾಡ್ತಿರುವ ಬಗ್ಗೆ ಕಾರ್ಯಕರ್ತರಲ್ಲಿ ಸಮಾಧಾನ ಇದೆ. ಆದರೆ ನಮ್ಮ ಪಕ್ಷದ ಕೆಲ ಹಿರಿಯ ಮುಖಂಡರು ಅಲ್ಲೊಂದು ಇಲ್ಲೊಂದು ಹೇಳಿಕೆ ಕೊಡ್ತಿದ್ದಾರೆ. ಇದನ್ನು ನಾನು ಇಲ್ಲ ಅಂತ ಹೇಳುವುದಿಲ್ಲ. ಮುಂದಿನ ರಾಜ್ಯಾಧ್ಯಕ್ಷ‌ರ ಚುನಾವಣೆಗೆ ಶಿವರಾಜ್ ಸಿಂಗ್ ಚೌಹಾಣ್ ಅವರೇ ಉಸ್ತುವಾರಿ ಆಗಿದ್ದಾರೆ. ಅತೀ ಶೀಘ್ರದಲ್ಲೇ ಯಾರನ್ನು ಅಧ್ಯಕ್ಷ ಮಾಡಬೇಕು ಅಂತ ಚೌಹಾಣ್ ಅವರು ಎಲ್ಲ ಹಿರಿಯರ ಜತೆ ಚರ್ಚಿಸಿ, ಉತ್ತಮ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಹೇಳಿದರು.

ನನ್ನನ್ನೇ ಮುಂದುವರೆಸುವ ವಿಶ್ವಾಸ : ನನ್ನ ಒಂದು ವರ್ಷದ ಪರಿಶ್ರಮದ ಪರಿಣಾಮವಾಗಿ ವರಿಷ್ಠರು ನನ್ನನ್ನೇ ರಾಜ್ಯಾಧ್ಯಕ್ಷರನ್ನಾಗಿ ಮುಂದುವರೆಸುತ್ತಾರೆ ಅನ್ನುವ ದೃಢ ವಿಶ್ವಾಸ ನನಗೆ ಇದೆ ಎಂದರು.

ಭ್ರಷ್ಟಾಚಾರ ಮರೆಮಾಚಲು ಜಾತಿಗಣತಿ ಮುನ್ನಲೆಗೆ : ಭ್ರಷ್ಟಾಚಾರ ಮರೆಮಾಚಲು ಜಾತಿಗಣತಿಯನ್ನು ಮುನ್ನಲೆಗೆ ತಂದಿದ್ದಾರೆ ಎಂದು ಟೀಕಿಸಿದ ವಿಜಯೇಂದ್ರ ಅವರು, ವಾಲ್ಮೀಕಿ ನಿಗಮ, ಮುಡಾದಲ್ಲಿ ಹಗರಣ ಆಗಿದೆ. ಕಿಯೋನಿಕ್ಸ್ ನಲ್ಲಿ ಗುತ್ತಿಗೆದಾರರು ದಯಾಮರಣ ಕೋರಿದ್ದಾರೆ. ಇನ್ನೊಂದು ಕಡೆ ಆತ್ಮಹತ್ಯೆಗಳು ಆಗುತ್ತಿವೆ. ಜಾತಿ ಗಣತಿ ಹಿಂದೆ ಒಳ್ಳೆ ಉದ್ದೇಶ ಇದೆಯೋ, ದುರುದ್ದೇಶ ಇದೆಯೋ ಅಂತ ಜನ ಪ್ರಶ್ನೆ ಮಾಡ್ತಿದ್ದಾರೆ ಎಂದು ಹೇಳಿದರು.

ಸಿದ್ದರಾಮಯ್ಯನವರು ನಿಜವಾಗಿಯೂ ಪ್ರಾಮಾಣಿಕರಾಗಿದ್ದರೆ 2016ರಲ್ಲಿ ವರದಿ ಕೈ ಸೇರಿದ್ದಾಗಲೇ ಜಾರಿ ಮಾಡಬೇಕಿತ್ತು. ಇಷ್ಟು ವರ್ಷ ಕಾರಣ‌ಗಳನ್ನು ಮುಂದೂಡಿದ್ರು. ಇದು ರಾಜಕೀಯ ಷಡ್ಯಂತ್ರ, ಜಾತಿ ಜನಗಣತಿಯನ್ನು ರಾಜಕೀಯ ಚದುರಂಗ ಅನ್ಕೊಂಡಿದ್ದಾರೆ. ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಜಾತಿ ಜನಗಣತಿ ಅಸ್ತ್ರ ಬಿಟ್ಟು ಜಾತಿ-ಜಾತಿಗಳ ನಡುವೆ ವಿಷಬೀಜ ಬಿತ್ತುತ್ತಿರೋದು ಅಕ್ಷಮ್ಯ ಅಪರಾಧ ಎಂದರು.

ಇದನ್ನೂ ಓದಿ : ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ ಆಗಲ್ಲ, ಯಾವುದೇ ಕ್ಷಣದಲ್ಲಿ ರಾಜೀನಾಮೆ ಕೊಡಬಹುದು: ಬಿ.ವೈ.ವಿಜಯೇಂದ್ರ - B Y VIJAYENDRA

ETV Bharat Logo

Copyright © 2025 Ushodaya Enterprises Pvt. Ltd., All Rights Reserved.