ETV Bharat / international

ನರೇಂದ್ರ ಮೋದಿ ಬದಲಾವಣೆಯ ಹರಿಕಾರ, ಅವರಲ್ಲಿದೆ ದಿವ್ಯಶಕ್ತಿ: ಬ್ರಿಟನ್​ ಮಾಜಿ ಪ್ರಧಾನಿ ಜಾನ್ಸನ್ ಶ್ಲಾಘನೆ - FORMER UK PM JOHNSON

ಪ್ರಧಾನಿ ನರೇಂದ್ರ ಮೋದಿ ಬದಲಾವಣೆಯ ಹರಿಕಾರ ಎಂದು ಬ್ರಿಟನ್​ನ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಶ್ಲಾಘಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಬ್ರಿಟನ್ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ (ಸಂಗ್ರಹ ಚಿತ್ರ)
ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಬ್ರಿಟನ್ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ (ಸಂಗ್ರಹ ಚಿತ್ರ) (IANS)
author img

By PTI

Published : Oct 13, 2024, 3:47 PM IST

ಲಂಡನ್: ಪ್ರಧಾನಿ ನರೇಂದ್ರ ಮೋದಿ ಬದಲಾವಣೆಯ ಹರಿಕಾರ ಎಂದು ಬ್ರಿಟನ್​ನ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಶ್ಲಾಘಿಸಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಹೊಸ ಆತ್ಮಚರಿತ್ರೆಯಲ್ಲಿ ತಮ್ಮ ಬಿಡುವಿಲ್ಲದ ರಾಜಕೀಯ ಜೀವನದ ಬಗೆಗಿನ ಮಾಹಿತಿಗಳನ್ನು ಹಂಚಿಕೊಂಡಿರುವ ಬೋರಿಸ್​, ಮೋದಿ ಅವರನ್ನು ಮೊದಲ ಬಾರಿಗೆ ಭೇಟಿಯಾದಾಗ ಅವರಲ್ಲಿನ ದಿವ್ಯ ಶಕ್ತಿಯ ಅನುಭೂತಿ ತಮಗಾಗಿತ್ತು ಎಂದು ಹೇಳಿದ್ದಾರೆ.

ಬೋರಿಸ್​ ಅವರ ಅನ್​ಲೀಶ್ಡ್​ (Unleashed) ಹೆಸರಿನ ಆತ್ಮಚರಿತ್ರೆಯು ಇದೇ ವಾರ ಯುಕೆಯಲ್ಲಿ ಬಿಡುಗಡೆಯಾಗಿದೆ. ಭಾರತದೊಂದಿಗೆ ಬ್ರಿಟನ್​ ಸಂಬಂಧದ ಬಗ್ಗೆ ಇಂದಿಡೀ ಅಧ್ಯಾಯವನ್ನು ಇದರಲ್ಲಿ ಮೀಸಲಿಡಲಾಗಿದೆ. ಇಂಡೋ-ಪೆಸಿಫಿಕ್ ವಲಯದಲ್ಲಿ ಭಾರತ-ಯುಕೆಗಳ ಸ್ನೇಹದ ಬಗ್ಗೆ ಒತ್ತಿ ಹೇಳಿರುವ ಬೋರಿಸ್, ಮೋದಿಯವರಲ್ಲಿ ನಿಖರ ಪಾಲುದಾರ ಮತ್ತು ಸ್ನೇಹಿತನನ್ನು ಕಂಡುಕೊಳ್ಳುವ ಮೂಲಕ ಭಾರತದೊಂದಿಗೆ ಮುಕ್ತ ವ್ಯಾಪಾರ ಸಂಬಂಧಗಳನ್ನು ಬೆಸೆದ ಕೀರ್ತಿ ತನಗೆ ಸಲ್ಲಬೇಕು ಎಂದು ಬರೆದಿದ್ದಾರೆ.

ತಾವು ಲಂಡನ್ ಮೇಯರ್ ಆಗಿದ್ದಾಗ ಥೇಮ್ಸ್ ನದಿಯ ದಡದಲ್ಲಿರುವ ತಮ್ಮ ಸಿಟಿ ಹಾಲ್ ಕಚೇರಿಗೆ ಮೋದಿ ಭೇಟಿ ನೀಡಿದಾಗ, ಅವರೊಂದಿಗಿನ ಮೊದಲ ಭೇಟಿಯ ವಿವರವನ್ನು ಬ್ರಿಟನ್ ಮತ್ತು ಭಾರತ ಎಂಬ ಅಧ್ಯಾಯದಲ್ಲಿ ಜಾನ್ಸನ್ ಹಂಚಿಕೊಂಡಿದ್ದಾರೆ. ತಾವಿಬ್ಬರೂ ಟವರ್ ಸೇತುವೆಯ ಬಳಿಯ ಪ್ಲಾಜಾದ ಕೆಳಭಾಗದಲ್ಲಿ ಮೋದಿಯವರ ಬೆಂಬಲಿಗರ ಗುಂಪನ್ನುದ್ದೇಶಿಸಿ ಮಾತನಾಡಿದ್ದನ್ನು ಅವರು ಪುಸ್ತಕದಲ್ಲಿ ಸ್ಮರಿಸಿದ್ದಾರೆ.

"ಅವರು ನನ್ನ ಕೈಯನ್ನು ಮೇಲಕ್ಕೆತ್ತಿ ಹಿಂದಿಯಲ್ಲಿ ಯಾವುದೋ ಘೋಷಣೆ ಕೂಗಿದರು. ಅದನ್ನು ಬಾಯಿಂದ ನನಗೆ ಉಚ್ಚರಿಸಲು ಸಾಧ್ಯವಾಗದಿದ್ದರೂ ಅವರಲ್ಲಿದ್ದ ಯಾವುದೋ ಒಂದು ದಿವ್ಯ ಶಕ್ತಿಯ ಅನುಭವ ನನಗಾಯಿತು. ಭಾರತ-ಬ್ರಿಟನ್​ಗಳ ಮಧ್ಯದ ಸಂಬಂಧ ವೃದ್ಧಿಗೆ ಅಗತ್ಯವಿರುವ ಬದಲಾವಣೆಗಳನ್ನು ಮಾಡಬಲ್ಲಂಥ ವ್ಯಕ್ತಿಯಾಗಿರುವ ಮೋದಿ ಅವರ ಸಹವಾಸವನ್ನು ಅಂದಿನಿಂದಲೂ ನಾನು ಆನಂದಿಸಿದ್ದೇನೆ. ಮೋದಿಯವರೊಂದಿಗೆ, ನಾವು ಉತ್ತಮ ಮುಕ್ತ-ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಳ್ಳುವುದು ಮಾತ್ರವಲ್ಲದೆ ಸ್ನೇಹಿತರಾಗಿ ಮತ್ತು ಸಮಾನವಾಗಿ ದೀರ್ಘಕಾಲೀನ ಪಾಲುದಾರಿಕೆಯನ್ನು ನಿರ್ಮಿಸಬಹುದು ಎಂಬುದು ನನಗೆ ಖಾತ್ರಿಯಿದೆ" ಎಂದು ಅವರು ಬರೆದಿದ್ದಾರೆ.

2012 ರಲ್ಲಿ ಮೇಯರ್ ವ್ಯಾಪಾರ ನಿಯೋಗದೊಂದಿಗೆ ಭಾರತಕ್ಕೆ ಭೇಟಿ ನೀಡಿದಾಗ ಹಿಂದೂ ರಾಷ್ಟ್ರೀಯವಾದಿ ನಾಯಕನಾಗಿರುವ ಮೋದಿಯವರನ್ನು ಭೇಟಿಯಾಗದಂತೆ ಯುಕೆ ವಿದೇಶಾಂಗ ಕಚೇರಿ ಎಚ್ಚರಿಕೆ ನೀಡಿದ್ದನ್ನು ಜಾನ್ಸನ್ ಬಹಿರಂಗಪಡಿಸಿದ್ದಾರೆ. ಅಲ್ಲದೆ ಯಾರನ್ನು ಸಮಸ್ಯೆ ಎಂದು ಬಿಂಬಿಸಲಾಗಿತ್ತೋ ಅವರಿಂದಲೇ ಭಾರತ-ಯುಕೆ ಸಂಬಂಧಗಳು ಐತಿಹಾಸಿಕವಾಗಿ ಉತ್ತುಂಗಕ್ಕೇರಿದವು ಎಂದು ಅವರು ಹೇಳಿದ್ದಾರೆ.

ಸದ್ಯ 60 ವರ್ಷ ವಯಸ್ಸಿನ ಹಿರಿಯ ರಾಜಕಾರಣಿ ಮತ್ತು ಲೇಖಕ ಬೋರಿಸ್, ಭಾರತದ ಮೇಲೆ ತಮಗಿರುವ ಅಪಾರ ಪ್ರೀತಿಯ ಬಗ್ಗೆಯೂ ಹೇಳಿಕೊಂಡಿದ್ದಾರೆ. ತಮ್ಮ ಮಾಜಿ ಪತ್ನಿ ಮರೀನಾ ವೀಲರ್​​ ಕುಟುಂಬವು ಭಾರತದಲ್ಲಿ ಬೇರು ಹೊಂದಿದ್ದು, ತನ್ನ ಮಕ್ಕಳು ಸಿಖ್ ಪರಂಪರೆಯನ್ನು ಪ್ರತಿನಿಧಿಸುತ್ತಾರೆ ಎಂದು ಅವರು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ : 50 ವರ್ಷಗಳ ನಂತರ ಸಹರಾ ಮರುಭೂಮಿಯಲ್ಲಿ ಪ್ರವಾಹ! ಬಸವಳಿದ ಬುವಿಗೆ ಮತ್ತೆ ಬಂತು ಜೀವಕಳೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.