ETV Bharat / state

ಉಪ್ಪಿನಂಗಡಿಯಲ್ಲಿ ಕಾಡುಕೋಣ ಬೇಟೆ: ದಾಳಿ ವೇಳೆ ಒಣ ಮಾಂಸ ಪತ್ತೆ- ಆರ್‌ಎಫ್ಓ ರಾಘವೇಂದ್ರ ಮಾಹಿತಿ

ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ವಲಯ ಅರಣ್ಯ ವ್ಯಾಪ್ತಿಯಲ್ಲಿ ಕಾಡು ಪ್ರಾಣಿ ಬೇಟೆ ಪ್ರಕರಣ ಬೆಳಕಿಗೆ ಬಂದಿದೆ. ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸುವ ವೇಳೆ ಒಣಗಿಸಿಟ್ಟಿರುವ ಕಾಡುಪ್ರಾಣಿಗಳ ಮಾಂಸ ಪತ್ತೆಯಾಗಿದೆ.

author img

By ETV Bharat Karnataka Team

Published : 3 hours ago

ಪತ್ತೆಯಾದ ಒಣ ಮಾಂಸ
ಪತ್ತೆಯಾದ ಒಣ ಮಾಂಸ (ETV Bharat)

ಉಪ್ಪಿನಂಗಡಿ,ದ.ಕ: ಉಪ್ಪಿನಂಗಡಿ ವಲಯ ಅರಣ್ಯ ವ್ಯಾಪ್ತಿಯ ಪಶ್ಚಿಮ ಘಟ್ಟ ತಪ್ಪಲಲ್ಲಿ ಬರುವ ಮೀಸಲು ಅರಣ್ಯ ಪ್ರದೇಶದಲ್ಲಿ ನಿರಂತರವಾಗಿ ಕಾಡು ಪ್ರಾಣಿಗಳ ಬೇಟೆ ನಡೆಯುತ್ತಿದೆ. ಶುಕ್ರವಾರ ಹಗಲಿನಲ್ಲೇ 4 ಮಂದಿ ಬೇಟೆಗಾರರು ಭಾರಿ ಗಾತ್ರದ ಕಾಡುಕೋಣವನ್ನು ಗುಂಡು ಹೊಡೆದು ಕೊಂದು ಹಾಕಿದ್ದಾರೆ ಎಂಬ ಪ್ರಕರಣ ಬೆಳಕಿಗೆ ಬಂದಿದೆ.

"ಬೂಡುಜಾಲು ಅರಣ್ಯದ ಅಂಚಿನಲ್ಲಿ ಇರುವ ತೋಟಕ್ಕೆ ಕಾಡುಕೋಣವೊಂದು ಮೇವು ತಿನ್ನಲು ಬರುತ್ತಿದ್ದ ಮಾಹಿತಿಯನ್ನು ಅರಿತ ತಂಡವು ಗುರುವಾರ ರಾತ್ರಿ ತೋಟದ ಮನೆಯೊಂದರಲ್ಲಿ ಕಾದು ಕುಳಿತ್ತಿತ್ತು. ನಂತರದಲ್ಲಿ ಭೇಟೆಯಾಡಿ ಕೊಂದ ಕಾಡುಕೋಣವನ್ನು ಕತ್ತರಿಸಿ ಶಿಬಾಜೆಯ ಪಿಕ್‌ಅಪ್​ ವಾಹನದಲ್ಲಿ ಕೃತ್ಯದ ಪ್ರಮುಖ ಆರೋಪಿ ರಾಜು ಎಂಬುವರ ಮನೆಗೆ ಸಾಗಿಸಿ ಅಲ್ಲಿ ಮಾಂಸ ಮಾಡಿ ಶೇಖರಿಸಿ ಇಟ್ಟಿರುವ ಮಾಹಿತಿಯನ್ನು ಆಧರಿಸಿ ಅರಣ್ಯ ಸಿಬ್ಬಂದಿಗಳು ಶಿಬಾಜೆಯ ರಾಜು ಎಂಬುವರ ಮನೆಗೆ ಸೇರಿದಂತೆ ಮೂರು ಮನೆಗಳಿಗೆ ದಾಳಿ ನಡೆಸಿದ್ದಾರೆ. ಈ ವೇಳೆ ಒಣಗಿಸಿರುವ ಕಾಡುಪ್ರಾಣಿಗಳ ಮಾಂಸ ಪತ್ತೆಯಾಗಿದೆ. ಈ ಪ್ರಕರಣದಲ್ಲಿ ಇನ್ನೂ ಕೆಲವರು ಕೂಡ ಭಾಗಿಯಾಗಿದ್ದು ಈ ಬಗ್ಗೆ ತನಿಖೆ ನಡೆಯುತ್ತಿದೆ" ಎಂದು ಉಪ್ಪಿನಂಗಡಿ ವಲಯ ಆರ್‌ಎಫ್​ಒ ರಾಘವೇಂದ್ರ ಅವರು ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.

ಮೀಸಲು ಅರಣ್ಯ ಪ್ರದೇಶದಿಂದ ಈ ರೀತಿಯಾಗಿ ಭೇಟೆಯಾಡಿ ನಂತರ ಮಾಂಸ ಮಾಡಿ ಅದನ್ನು ಒಣಗಿಸಿ ಕೇರಳದ ಹಲವು ಭಾಗಗಳಿಗೆ 1 ಕೆ.ಜಿ.ಗೆ ರೂಪಾಯಿ 1,300 ರಿಂದ 1,500ಗೆ ವ್ಯಾಪಾರ ಮಾಡಲಾಗುತ್ತಿತ್ತು. ಮಾತ್ರವಲ್ಲದೇ ಕಾಡು ಪ್ರಾಣಿಗಳನ್ನು ಮಾಂಸ ಮಾಡಿ ಒಣಗಿಸಿ 3, 5 ಹಾಗೂ 10 ಕೆ.ಜಿ.ಯ ಪ್ಯಾಕ್ ಮಾಡಿ ಸ್ಥಳೀಯ ಕೆಲವು ವ್ಯಕ್ತಿಗಳಿಗೂ ಇದೇ ದರದಲ್ಲಿ ಮಾರಾಟ ಮಾಡಲಾಗುತ್ತಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ಮುಂದುವರೆದಿದೆ.

ಇದನ್ನೂ ಓದಿ: ರಾಮನಗರ: ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಜಿಂಕೆ ಮಾಂಸ ವಶಕ್ಕೆ ಪಡೆದ ಅರಣ್ಯಾಧಿಕಾರಿಗಳು - Forest officers seized deer meat

ETV Bharat Logo

Copyright © 2024 Ushodaya Enterprises Pvt. Ltd., All Rights Reserved.