ಹೈದರಾಬಾದ್: ವಿಶ್ವ ಕ್ಯಾನ್ಸರ್ ದಿನವನ್ನು ಫೆ. 4ರಂದು ಆಚರಿಸಲಾಗುವುದು. ಈ ವೇಳೆ ವಿಶ್ವ ಆರೋಗ್ಯ ಸಂಸ್ಥೆ ನೀಡಿದ ವರದಿಯಲ್ಲಿ 2022ರಲ್ಲಿ ಭಾರತದಲ್ಲಿ 14.1 ಲಕ್ಷ ಹೊಸ ಕ್ಯಾನ್ಸರ್ ಪ್ರಕರಣಗಳು ಕಂಡು ಬಂದಿದ್ದು, 9.1 ಲಕ್ಷ ಕ್ಯಾನ್ಸರ್ ರೋಗಿಗಳ ಸಾವಿನ ಬಗ್ಗೆ ವರದಿಯಾಗಿದೆ. ದೇಶದಲ್ಲಿ ಸ್ತನ ಕ್ಯಾನ್ಸರ್ ಸಾಮಾನ್ಯ ಎನ್ನುವಂತಾಗಿದೆ.
ಕ್ಯಾನ್ಸರ್ ಹೊರೆ ಜಾಗತಿಕವಾಗಿ ಹೆಚ್ಚಿದೆ. ಪುರುಷರಲ್ಲಿ ತುಟಿ, ಬಾಯಿ ಮತ್ತು ಶ್ವಾಸಕೋಶದ ಕ್ಯಾನ್ಸರ್ ಕಂಡುಬರುತ್ತಿದೆ. ಬಾಯಿಯ ಕ್ಯಾನ್ಸರ್ 15.6ರಷ್ಟಿದ್ದರೆ, ಶ್ವಾಸಕೋಶದ ಕ್ಯಾನ್ಸರ್ 8.5ರಷ್ಟಿದೆ. ಇನ್ನು ಮಹಿಳೆಯರಲ್ಲಿ ಸ್ತನ ಮತ್ತು ಗರ್ಭಕಂಠದ ಕ್ಯಾನ್ಸರ್ ಹೆಚ್ಚಿದ್ದು, ಕ್ರಮವಾಗಿ ಶೇ 27 ಮತ್ತು 18ರಷ್ಟಿದೆ ಎಂದು ಡಬ್ಲ್ಯೂಎಚ್ಒನ ಕ್ಯಾನ್ಸರ್ ಏಜೆನ್ಸಿಯಾಗಿರುವ ಇಂಟರ್ನ್ಯಾಷನಲ್ ಏಜೆನ್ಸಿ ಫಾರ್ ರಿಸರ್ಜ್ ಆನ್ ಕ್ಯಾನ್ಸರ್ ಅಂದಾಜಿಸಿದೆ.
ಕ್ಯಾನ್ಸರ್ ಪತ್ತೆಯಾದ ಐದು ವರ್ಷದೊಳಗೆ ವ್ಯಕ್ತಿಯ ಉಳಿಯುವಿಕೆ ದರ ದೇಶದಲ್ಲಿ 32.6ಲಕ್ಷ ಇದೆ. ಜಾಗತಿಕವಾಗಿ 2 ಕೋಟಿ ಹೊಸ ಕ್ಯಾನ್ಸರ್ ಪತ್ತೆಯಾಗಿದ್ದರೆ ಅದರಲ್ಲಿ 97 ಲಕ್ಷ ಜನರು ಸಾವೀಗಿಡಾಗುತ್ತಿದ್ದಾರೆ. ಕ್ಯಾನ್ಸರ್ ಪತ್ತೆಯಾದ ಐದು ವರ್ಷದೊಳಗೆ 5.3 ಕೋಟಿ ಜನರು ಬದುಕುಳಿಯುತ್ತಿದ್ದಾರೆ. 5 ರಲ್ಲಿ ಒಬ್ಬರಿಗೆ ಜೀವಿತಾವಧಿಯಲ್ಲಿ ಕ್ಯಾನ್ಸರ್ ಅಭಿವೃದ್ಧಿ ಆಗುತ್ತಿದೆ. 9ರಲ್ಲಿ ಓರ್ವ ಪುರುಷ ಮತ್ತು 12ರಲ್ಲಿ ಓರ್ವ ಮಹಿಳೆ ಇದರಿಂದ ಸಾವನ್ನಪ್ಪುತ್ತಿದ್ದಾರೆ.
ಭಾರತದಲ್ಲಿ, 75 ವರ್ಷಕ್ಕೆ ಮುಂಚೆಯೇ ಕ್ಯಾನ್ಸರ್ ಬೆಳವಣಿಗೆಯ ಅಪಾಯ ಶೇಕಡಾ 10.6 ಎಂದು ಲೆಕ್ಕಹಾಕಲಾಗಿತ್ತು. ಆದರೆ ಅದೇ ವಯಸ್ಸಿನಲ್ಲಿ ಕ್ಯಾನ್ಸರ್ ಸಾವಿನ ಅಪಾಯವು ಶೇ 7.2ರಷ್ಟು ಎಂದು ಕಂಡುಬಂದಿದೆ. ಕ್ಯಾನ್ಸರ್ನ ಜಾಗತಿಕ ಅಪಾಯವು ಕ್ರಮವಾಗಿ ಶೇ 20 ರಷ್ಟು ಮತ್ತು 9.6ರಷ್ಟಿದೆ.
ಐಎಆರ್ಸಿ ಯ ಅಂದಾಜಿನ ಪ್ರಕಾರ 2022 ರಲ್ಲಿ ಜಾಗತಿಕವಾಗಿ 10 ವಿಧದ ಕ್ಯಾನ್ಸರ್ ಒಟ್ಟಾರೆಯಾಗಿ ಮೂರನೇ ಎರಡರಷ್ಟು ಹೊಸ ಪ್ರಕರಣಗಳು ಮತ್ತು ಸಾವು ವರದಿಯಾಗಿದೆ. ಈ ದತ್ತಾಂಶವು 185 ದೇಶಗಳು ಮತ್ತು 36 ಬಗೆಯ ಕ್ಯಾನ್ಸರ್ ಕುರಿತುವರಿಸಿದೆ.