Spot Jogging Benefits Weight Loss: ಬಹುತೇಕ ಜನರು ಉದ್ಯೋಗ, ವ್ಯಾಪಾರ, ವಹಿವಾಟುಗಳಲ್ಲಿ ತೊಡಗಿಸಿಕೊಳ್ಳುವುದರಿಂದ ವ್ಯಾಯಾಮಕ್ಕೆ ಸಮಯ ನೀಡಲಾಗುತ್ತಿಲ್ಲ. ಆದರೆ, ಕೇವಲ 10 ನಿಮಿಷಗಳವರೆಗೆ ವ್ಯಾಯಾಮಕ್ಕೆ ಮೀಸಲಿಟ್ಟರೆ ಸಾಕು ಅನೇಕ ಪ್ರಯೋಜನಗಳನ್ನು ಪಡೆಯಬಹುದಾಗಿದೆ ಎಂದು ತಜ್ಞರು ತಿಳಿಸುತ್ತಾರೆ. ಆ ವ್ಯಾಯಾಮ ಯಾವುದು ಹಾಗೂ ಅದನ್ನು ಹೇಗೆ ಮಾಡಲಾಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ.
ಹೃದಯದ ಆರೋಗ್ಯಕ್ಕೆ ಒಳ್ಳೆಯದು: ಹತ್ತು ನಿಮಿಷವರೆಗೆ ತಾವು ಇರುವ ಸ್ಥಳದಲ್ಲಿ ಜಾಗಿಂಗ್ ಮಾಡುವುದು ಹೃದಯದ ಕಾರ್ಯಕ್ಷಮತೆಯನ್ನು ಸುಧಾರಿಸಲು ಸಾಧ್ಯವಾಗುತ್ತದೆ. ಇದಷ್ಟೇ ಅಲ್ಲ ರಕ್ತ ಸಂಚಾರ ಸುಧಾರಿಸುತ್ತದೆ ಹಾಗೂ ಹೃದಯ ಸಂಬಂಧಿ ರೋಗಗಳು ಕಡಿಮೆಯಾಗುತ್ತವೆ ಎಂದು ತಜ್ಞರು ಸಲಹೆ ನೀಡುತ್ತಾರೆ (ಸಂಶೋಧನಾ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ ನೋಡಿ).
ತೂಕ ಇಳಿಕೆಗೆ ಸಹಾಯ: ದೇಹದ ಕೊಬ್ಬನ್ನು ಕರಗಿಸಲು ಜಾಗಿಂಗ್ ತುಂಬಾ ಉಪಯುಕ್ತವಾಗಿದೆ. ಜಾಗಿಂಗ್ ಮಾಡಿದರೆ 100 ಕ್ಯಾಲೊರಿಗಳಷ್ಟು ಕೊಬ್ಬನ್ನು ಕರಗಿಸಬಹುದು ಅಧ್ಯಯನವೊಂದು ತಿಳಿಸುತ್ತದೆ. ಜಾಗಿಂಗ್ನಿಂದ ಸುಲಭವಾಗಿ ತೂಕ ಇಳಿಸಿಕೊಳ್ಳಲು ಸಾಧ್ಯವಾಗುತ್ತದೆ. 2018ರಲ್ಲಿ ಜರ್ನಲ್ ಆಫ್ ಸ್ಪೋರ್ಟ್ಸ್ ಸೈನ್ಸ್ ಅಂಡ್ ಮೆಡಿಸಿನ್‌ನಲ್ಲಿ (Journal of Sports Science and Medicine) ಪ್ರಕಟವಾದ 'ತೂಕ ನಷ್ಟ ಮತ್ತು ದೇಹದ ಸಂಯೋಜನೆಯ ಮೇಲೆ ಸ್ಪಾಟ್ ಜಾಗಿಂಗ್‌ನ ಪರಿಣಾಮಗಳು' (The effects of spot jogging on weight loss and body composition) ಎಂಬ ಅಧ್ಯಯನದಲ್ಲಿ ಈ ವಿಷಯ ತಿಳಿದುಬಂದಿದೆ. (ಸಂಶೋಧನಾ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ)
ಸ್ನಾಯುಗಳು ಸದೃಢ: ಈ ವ್ಯಾಯಾಮ ಸ್ನಾಯುಗಳನ್ನು ಬಲಪಡಿಸುತ್ತದೆ. ಇದು ದಿನವಿಡೀ ನಿಮ್ಮನ್ನು ಚೈತನ್ಯಶೀಲವಾಗಿಡುವುದಲ್ಲದೆ. ಬೇಸರ ಹಾಗೂ ಆಯಾಸ ನಿಯಂತ್ರಿಸಲು ಸಹಾಯ ಮಾಡುತ್ತದೆ.
ಆತಂಕ & ಒತ್ತಡ: ಸ್ಪಾಟ್ ಜಾಗಿಂಗ್ ಆತಂಕ ಹಾಗೂ ಒತ್ತಡ ಕಡಿಮೆ ಮಾಡಲು ತುಂಬಾ ಸಹಾಯ ಮಾಡುತ್ತದೆ. ಇದು ಮನಸ್ಥಿತಿಯನ್ನು ಸುಧಾರಿಸುವ ಹಾರ್ಮೋನ್ ಎಂಡಾರ್ಫಿನ್‌ಗಳನ್ನು ಬಿಡುಗಡೆ ಮಾಡುತ್ತದೆ ಎಂದು ತಜ್ಞರು ತಿಳಿಸುತ್ತಾರೆ.
ಸಾಕಷ್ಟು ಶಕ್ತಿ ಲಭಿಸುತ್ತೆ: ಹತ್ತು ನಿಮಿಷಗಳ ವ್ಯಾಯಾಮ ನಿಮಗೆ ದಿನಕ್ಕೆ ಸಾಕಷ್ಟು ಶಕ್ತಿ ನೀಡುತ್ತದೆ. ಇದರ ಪರಿಣಾಮ ಇತರ ಕೆಲಸಗಳನ್ನು ಬಹಳ ಸಕ್ರಿಯವಾಗಿ ಮಾಡಬಹುದು ಎಂದು ತಜ್ಞರು ಹೇಳುತ್ತಾರೆ.
ಒಳ್ಳೆಯ ನಿದ್ರೆ: ಕೆಲಸದ ಒತ್ತಡದಿಂದಾಗಿ ಅನೇಕ ಜನರು ನಿದ್ರಾಹೀನತೆಯಿಂದ ಬಳಲುತ್ತಿರುವರು ಬೆಳಗ್ಗೆ ಬೇಗನೆ ಎದ್ದು ಜಾಗಿಂಗ್ ಮಾಡುವುದರಿಂದ ರಾತ್ರಿ ಚೆನ್ನಾಗಿ ನಿದ್ರೆ ಮಾಡಲು ಸಹಾಯವಾಗುತ್ತದೆ ಎಂದು ಸಂಶೋಧನಕರು ವಿವರಿಸುತ್ತಾರೆ.
ಶುಗರ್ ಲೆವಲ್ ನಿಯಂತ್ರಣ: ಮಧುಮೇಹದಿಂದ ಬಳಲುತ್ತಿರುವವರು ಪ್ರತಿದಿನ ಹತ್ತು ನಿಮಿಷ ಜಾಗಿಂಗ್‌ಗೆ ಮೀಸಲಿಟ್ಟರೆ, ಅವರ ರಕ್ತದಲ್ಲಿನ ಶುಗರ್ ಲೆವಲ್ ನಿಯಂತ್ರಣದಲ್ಲಿರುತ್ತದೆ ಎಂದು ತಜ್ಞರು ಸಲಹೆ ನೀಡುತ್ತಾರೆ.
ಚರ್ಮದ ಆರೈಕೆ: ತಜ್ಞರು ತಿಳಿಸುವ ಪ್ರಕಾರ, ಬೆಳಿಗ್ಗೆ ಬೇಗನೆ ಎದ್ದು ಸ್ವಲ್ಪ ನೀರು ಕುಡಿದು ಜಾಗಿಂಗ್ ಮಾಡುವುದರಿಂದ ದೇಹಕ್ಕೆ ಶಕ್ತಿ ಲಭಿಸುತ್ತದೆ. ಇದು ಚರ್ಮವನ್ನು ಕಾಂತಿಯುತವಾಗಿಸಲು ಹಾಗೂ ವಯಸ್ಸಾದಂತೆ ಕಾಣುವುದಿಲ್ಲ ಎಂದು ತಜ್ಞರು ತಿಳಿಸುತ್ತಾರೆ.
ತುಂಬಾ ಆರಾಮದಾಯಕ: ತಜ್ಞರು ತಿಳಿಸುವ ಪ್ರಕಾರ, ಸ್ಪಾಟ್ ಜಾಗಿಂಗ್ ಮಾಡುವುದರಿಂದ ಹೆಚ್ಚು ಆರಾಮದಾಯಕವಾಗಿದೆ. ನಿಂತುಕೊಂಡು ತೋಳುಗಳನ್ನು ಚಾಚಲು ಸಾಕಷ್ಟು ಸ್ಥಳವಿದ್ದರೆ ಸಾಕು. ನೀವು ಎಷ್ಟೇ ಕಾರ್ಯನಿರತರಾಗಿದ್ದರೂ, ಜಾಗಿಂಗ್‌ಗೆ ಹತ್ತು ನಿಮಿಷ ಮೀಸಲಿಟ್ಟರೆ ಸಾಕು ದೇಹದ ಆರೋಗ್ಯ ತುಂಬಾ ಒಳ್ಳೆಯದಾಗಿದೆ ಎಂದು ಅವರು ವಿವರಿಸುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಈ ವೆಬ್ಸೈಟ್ಗಳನ್ನು ವೀಕ್ಷಿಸಬಹುದು:
ಓದುಗರಿಗೆ ಮುಖ್ಯ ಸೂಚನೆ: ಈ ಲೇಖನದಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ, ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ಒದಗಿಸುತ್ತಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣತ ವೈದ್ಯರ ಸಲಹೆಗಳನ್ನು ತೆಗೆದುಕೊಳ್ಳುವುದು ಉತ್ತಮ.