ಹೈದರಾಬಾದ್: ಆರೋಗ್ಯಯುತ ಜೀವನಶೈಲಿಗೆ ರಾತ್ರಿ ಸಮಯದಲ್ಲಿ ಕನಿಷ್ಠ 7 ರಿಂದ 8 ಗಂಟೆಗಳ ಕಾಲ ನಿದ್ದೆ ಅವಶ್ಯ. ಆದರೆ, ಈ ನಿದ್ದೆ ಅವಧಿ ವಯಸ್ಸಿಗೆ ಅನುಗುಣವಾಗಿ ಬದಲಾಗುವುದು ಇದೆ. ಆದರೆ, ಇತ್ತೀಚಿನ ವರದಿಯಲ್ಲಿ ವಯಸ್ಸು ಮಾತ್ರವಲ್ಲ, ಲಿಂಗ ಕೂಡ ಈ ನಿದ್ರೆಯ ಅವಧಿ ಮೇಲೆ ಪರಿಣಾಮ ಬೀರಲಿದೆ ಎಂದು ತೋರಿಸಿದೆ. ಈ ಅಧ್ಯಯನದ ಅನುಸಾರ ಪುರುಷರಿಗಿಂತ ಮಹಿಳೆಯರು ನಿದ್ದೆ ಕೊಂಚ ಅಧಿಕ ಬೇಕು ಎಂದು ಸಲಹೆ ನೀಡಿದೆ.
2014ರಲ್ಲಿನ ಸ್ಲೀಪ್ ಜರ್ನಲ್ನಲ್ಲಿ ಪ್ರಕಟವಾದ ಮಾಹಿತಿಯಂತೆ ಮಹಿಳೆಯರು ಸರಾಸರಿ 7 ಗಂಟೆ 40 ನಿಮಿಷ ನಿದ್ರೆ ಮಾಡಿದರೆ, ಪುರುಷರಿಗೆ 7 ಗಂಟೆ 20 ನಿಮಿಷ ಅವಧಿ ಸಾಕು ಎಂದಿದೆ. ಈ ಅಧ್ಯಯನ ಅನುಸಾರ ಮಹಿಳೆಯರು ಪುರುಷರಿಗಿಂತ 20 ನಿಮಿಷ ಹೆಚ್ಚು ನಿದ್ದೆ ಮಾಡಬೇಕಂತೆ. ಈ ಅಧ್ಯಯನವನ್ನು 40 ವರ್ಷ ಮೇಲ್ಪಟ್ಟ 2,100 ಜನರನ ನಿದ್ರೆಯ ಅವಲೋಕಿಸಿದೆ. ಇದರ ಆಧಾರದ ಮೇಲೆ ಲಿಂಗಾಧಾರಿತವಾಗಿ ನಿದ್ರೆಯ ಮಾದರಿಯನ್ನು ತಿಳಿಸಲಾಗಿದೆ. ಇನ್ನು ಮಹಿಳೆಯರು ಯಾಕೆ ಪುರುಷರಿಗಿಂತ ಹೆಚ್ಚಿನ ನಿದ್ದೆ ಅವಶ್ಯಕತೆ ಹೊಂದಿದ್ದಾರೆ ಎಂಬದಕ್ಕೆ ಅನೇಕ ಅಂಶಗಳು ಕಾರಣವಾಗುತ್ತದೆ. ಅವುಗಳೆಂದರೆ,
ನಿದ್ರಾಹೀನತೆ, ಆತಂಕ, ಖಿನ್ನತೆ: ಈ ಅಧ್ಯಯನದಲ್ಲಿ ಕಂಡು ಬಂದಿರುವ ಪ್ರಮುಖ ಅಂಶಗಳು ಈ ಮೂರು ಆಗಿದೆ, ಸಂಶೋಧಕರು ಸೂಚಿಸುವಂತೆ, ಮಹಿಳೆಯರು ಪುರುಷರಿಗೆ ಹೋಲಿಕೆ ಮಾಡಿದರೆ, ಶೇ 40ರಷ್ಟು ನಿದ್ರಾಹೀನತೆ ಸಮಸ್ಯೆ ಹೊಂದಿದ್ದಾರೆ. ಜೊತೆಗೆ ದುಪ್ಪಟ್ಟು ಆತಂಕ ಮತ್ತು ಖಿನ್ನತೆ ಅಂಶ ಹೊಂದಿದ್ದಾರೆ. ಈ ಮಾನಸಿಕ ಅಂಶಗಳು ಶಾಂತ ನಿದ್ರೆ ಪಡೆಯುವ ಮಹಿಳೆಯರ ಸಾಮರ್ಥ್ಯ ಗಮನಾರ್ಹವಾಗಿ ಅಡ್ಡಿಯಾಗುತ್ತದೆ.
ಹಾರ್ಮೋನ್ ಬದಲಾವಣೆ: ಹಾರ್ಮೋನ್ಗಳ ಏರಿಳಿತವೂ ಮಹಿಳೆಯ ನಿದ್ರೆಯ ಮಾದರಿ ಮೆಲೆ ಹೆಚ್ಚು ಪ್ರಭಾವ ಹೊಂದಿದೆ, ಮಹಿಳೆಯರು ತಮ್ಮ ಜೀವನದ ಎಲ್ಲ ಹಂತದಲ್ಲಿ ಮಾಸಿಕ ಆಧಾರದ ಮೇಲೆ ಹಾರ್ಮೋನ್ ಬದಲಾವಣೆಯ ಚಕ್ರವನ್ನು ಹೊಂದಿರುತ್ತದೆ. ಇದರಿಂದ ಅವರಲ್ಲಿ ನಿದ್ರೆ ಅಡೆ-ತಡೆ ನಿರಂತರವಾಗಿರುತ್ತದೆ. ಪ್ರೊಜೆಸ್ಟ್ರನ್ನಲ್ಲಿನ ಏರಿಳಿತ ಮತ್ತು ಋತುಚಕ್ರದ ವೇಳೆಯಲ್ಲಿ ಈಸ್ಟ್ರೋಜನ್ ಮಟ್ಟವೂ ನಿದ್ರೆಯ ತಡೆಗೆ ಕೊಡುಗೆ ನೀಡುತ್ತದೆ. ಇದು ಹೆಚ್ಚಿನ ನಿದ್ರೆ ಹೊಂದಲು ಕಾರಣವಾಗಿರುವ ಅಂಶಗಳಲ್ಲಿ ಒಂದಾಗಿದೆ.
ಗರ್ಭಧಾರಣೆ ಮತ್ತು ಮೆನೋಪಾಸ್:ಗರ್ಭಾವಸ್ಥೆಯಲ್ಲಿ ಮಹಿಳೆಯರಲ್ಲಿ ಖಿನ್ನತೆ, ಸ್ಲೀಪ್ ಅಪ್ನಿಯಾ, ಕಾಲುಗಳಲ್ಲಿ ಅಸಂತೋಷದಾಯಕ ಅನುಭವಗಳು ಕಾಡುತ್ತದೆ. ಅದೇ ರೀತಿ ಮೆನೋಪಾಸ್ ಸಮಯದಲ್ಲಿ ಅವರು ಹಾಟ್ ಫ್ಲಶ್ಸ್ ಮತ್ತು ಬೆವರುವಿಕೆಯನ್ನು ಶೇ 85ರಷ್ಟು ಮಹಿಳೆಯರು ಹೊಂದುತ್ತಾರೆ. ಈ ಲಕ್ಷಣಗಳು ನಿದ್ರೆಗೆ ತಡೆಯಾಗುತ್ತದೆ.
ಉತ್ತಮ ನಿದ್ದೆಗೆ ಮುನ್ನೆಚ್ಚರಿಕೆ ಕ್ರಮ:ನಿದ್ರಾಹೀನತೆಯ ಪ್ರತಿಕೂಲ ಪರಿಣಾಮಗಳನ್ನು ತಗ್ಗಿಸಲು ಮತ್ತು ಅತ್ಯುತ್ತಮ ನಿದ್ರೆಯ ನೈರ್ಮಲ್ಯವನ್ನು ಉತ್ತೇಜಿಸಲು, ಹಲವಾರು ಮುನ್ನೆಚ್ಚರಿಕೆ ಕ್ರಮಗಳನ್ನು ಅಳವಡಿಸಿಕೊಳ್ಳಬಹುದು.
- ನಿಯಮಿತ ವ್ಯಾಯಾಮ ಅಭ್ಯಾಸ ರೂಢಿಸಿಕೊಳ್ಳುವುದರಿಂದ ವಿಶ್ರಾಂತಿ ಮತ್ತು ನಿದ್ರೆಯ ಗುಣಮಟ್ಟ ಅಭಿವೃದ್ಧಿ
- ಸುಸ್ಧಿರ ನಿದ್ರೆ ಅವಧಿಯನ್ನು ನಿರ್ವಹಣೆಗೆ ಪ್ರಯತ್ನಿಸಿ. ಪ್ರತಿ ದಿನ ನಿಯಮಿತ ಸಮಯದಲ್ಲಿ ಹಾಸಿಗೆ ಹೋಗುವುದು ಮತ್ತು ಎಚ್ಚರಗೊಳ್ಳುವುದು ರೂಢಿಸಿಕೊಳ್ಳುವುದರಿಂದ ದೇಹದ ಆಂತರಿಕ ಗಡಿಯಾರವನ್ನು ನಿಯಂತ್ರಿಸಬಹುದು.
- ನಿದ್ರೆಗೆ ಪೂರಕ ಪರಿಸರ ಸೃಷ್ಟಿ ಮಾಡುವುದು ಅಂದರೆ, ಆರಾಮದಾಯಕ ಹಾಸಿಗೆ ಮತ್ತು ದಿಂಬಿನ ಬಳಕೆ, ಗದ್ದಲ, ಬೆಳಕು ಮತ್ತು ತಾಪಮಾನದ ಏರಳಿತಗಳಿಂದ ದೂರಾ ಇರುವಂತೆ ನೋಡಿಕೊಳ್ಳಿ.
- ನಿದ್ರೆಗೆ ಮುನ್ನ ಕೆಫೆನ್ ಮತ್ತು ಆಲ್ಕೋಹಾನ್ ಸೇವನೆಯಿಂದ ದೂರ ಇರುವುದು.
- ನಿದ್ರೆಗೆ ಜಾರುವ ಕೆಲವು ಸಮುದಲ್ಲಿ ಸ್ಕ್ರೀನ್ ಟೈಂನಿಂದ ದೂರ ಇರುವುದು ಉತ್ತಮ., ಎಲೆಕ್ಟ್ರಾನಿಕ್ ಸಾಧನಗಳು ನೈಸರ್ಗಿಕ ನಿದ್ರೆಯ ಸೈಕಲ್ಗೆ ಅಡ್ಡಿ ಉಂಟು ಮಾಡುತ್ತದೆ.
ಇದನ್ನೂ ಓದಿ: ವಿಶ್ವ ನಿದ್ರಾ ದಿನ: ಉತ್ತಮ ಆರೋಗ್ಯಕ್ಕೆ ಬೇಕೇ ಬೇಕು ಅಗತ್ಯ ನಿದ್ದೆ