ETV Bharat / bharat

ನಾಳೆ ಮೌನಿ ಅಮವಾಸ್ಯೆ: ಮಹಾ ಕುಂಭ ಮೇಳದಲ್ಲಿ 10 ಕೋಟಿ ಭಕ್ತರಿಂದ ಪವಿತ್ರ ಸ್ನಾನ ಸಾಧ್ಯತೆ - MAHA KUMBH HOLY DIP

ಹಿಂದುಗಳ ಪ್ರಮುಖ ದಿನಗಳಲ್ಲಿ ಮೌನಿ ಅಮವಾಸ್ಯೆ ಕೂಡಾ ಮಹತ್ವದ್ದು. ಈ ದಿನ ಕೋಟ್ಯಂತರ ಜನರು ಸಂಗಮದಲ್ಲಿ ಪವಿತ್ರ ಸ್ನಾನ ಮಾಡುತ್ತಾರೆ.

maha-kumbh-over-15-cr-devotees-take-dip-another-10-cr-expected-on-mauni-amavasya
ಸಂಗ್ರಹ ಚಿತ್ರ (IANS)
author img

By ETV Bharat Karnataka Team

Published : Jan 28, 2025, 2:28 PM IST

ಪ್ರಯಾಗ್​ರಾಜ್(ಉತ್ತರ ಪ್ರದೇಶ): ಈಗಾಗಲೇ ಮಕರ ಸಂಕ್ರಾಂತಿ, ಪೌರ್ಣಿಮೆ ಸೇರಿದಂತೆ ಮಹತ್ವದ ದಿನಗಳಂದು ಮಹಾಕುಂಭದಲ್ಲಿ ಕೋಟ್ಯಂತರ ಭಕ್ತರು ಪವಿತ್ರ ಸ್ನಾನ ಮಾಡಿದ್ದಾರೆ. ನಾಳೆ ಅಂದರೆ, ಬುಧವಾರ ಮೌನಿ ಅಮಾವಾಸ್ಯೆಯಾಗಿದ್ದು, ಇದೂ ಕೂಡ ಮತ್ತೊಂದು ಪವಿತ್ರ ಸ್ನಾನಕ್ಕೆ ಪ್ರಮುಖವಾದ ದಿನವಾಗಿದೆ. ಈ ದಿನ 10 ಕೋಟಿ ಭಕ್ತರು ತ್ರಿವೇಣಿ ಸಂಗಮದಲ್ಲಿ ಸ್ನಾನ ನಡೆಸುವ ಸಾಧ್ಯತೆ ಇದೆ ಎಂದು ಉತ್ತರ ಪ್ರದೇಶ ಸರ್ಕಾರ ಅಂದಾಜಿಸಿದೆ. ಈ ನಿಟ್ಟಿನಲ್ಲಿ ಭದ್ರತಾ ಕ್ರಮಕ್ಕೆ ಮುಂದಾಗಿದೆ.

ಜನವರಿ 13ರಿಂದ ಪ್ರಾರಂಭವಾದ ಈ ಮಹಾ ಕುಂಭದಲ್ಲಿ 17 ದಿನದಲ್ಲಿ 15 ಕೋಟಿ ಯಾತ್ರಿಕರು ಈಗಾಗಲೇ ಪವಿತ್ರ ಸ್ನಾನ ನಡೆಸಿದ್ದಾರೆ. ನಾಳೆ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುವ ಹಿನ್ನೆಲೆಯಲ್ಲಿ ಸಿದ್ಧತೆ ನಡೆಸಲಾಗಿದೆ ಎಂದು ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ.

ನಾಳೆ ಮೇಳದ ಪ್ರದೇಶದಲ್ಲಿ ಎಐಚಾಲಿತ ಸಿಸಿಟಿವಿ ಕ್ಯಾಮೆರಾ, ಡ್ರೋನ್​ಗಳ ಮೂಲಕ ತ್ರಿವೇಣಿ ಸಂಗಮದ ಜೊತೆಗೆ ಹರಡಿರುವ ಹಲವು ಹೆಕ್ಟೇರ್​ ಪ್ರದೇಶದಲ್ಲಿ ಕಣ್ಗಾವಲು ಹೆಚ್ಚಿಸಲಾಗಿದೆ. ಮೇಳ ಪ್ರದೇಶವನ್ನು ಮುಂದಿನ ಕೆಲವು ದಿನಕ್ಕಾಗಿ ವಾಹನಮುಕ್ತ ವಲಯವಾಗಿ ಘೋಷಿಸಲಾಗಿದೆ. ಪ್ರಯಾಗ್‌ರಾಜ್​ ಆಡಳಿತ ಕೂಡ ಸ್ಥಳೀಯರಿಗೂ ಕೂಡ ಹಿರಿಯ ನಾಗರಿಕರನ್ನು ಸಂಗಮದ ಬಳಿ ಕರೆತರಲು ದ್ವಿಚಕ್ರ ಅಥವಾ ನಡಿಗೆ ಮೂಲಕ ಬನ್ನಿ ಎಂದು ಜಿಲ್ಲಾಧಿಕಾರಿ ರವೀಂದ್ರ ಕುಮಾರ್​ ಮಂದರ್​ ತಿಳಿಸಿದ್ದಾರೆ.

ಉತ್ತರ ಪ್ರದೇಶ ಸರ್ಕಾರದ ಪ್ರಕಾರ, ಮಕರ ಸಂಕ್ರಾಂತಿ ಒಂದೇ ದಿನ 3.5 ಕೋಟಿ ಭಕ್ತರು, ಸಂತರು ಮತ್ತು ಕಲ್ಪವಾಸಿಗಳು ಅಮೃತ್​ ಸ್ನಾನ ನಡೆಸಿದ್ದರು.

ಇಂದು ಬೆಳಗ್ಗೆ ಕೂಡ 8ರ ಹೊತ್ತಿಗೆ 45 ಲಕ್ಷ ಜನರು ಪವಿತ್ರ ಸ್ನಾನ ಮಾಡಿದ್ದಾರೆ. ಬುಧವಾರ ಮೌನಿ ಅವಮಾಸ್ಯೆ ಹಿನ್ನೆಲೆಯಲ್ಲಿ ಇದನ್ನು ವಿಶೇಷ ಎಂದು ಪರಿಗಣಿಸುವ ಕಾರಣ ಸಂಗಮದ ಸ್ಥಳದಲ್ಲಿ ಹೆಲಿಕಾಪ್ಟರ್​ ಮೂಲಕ ಹೂವಿನ ದಳದ ಮಳೆ ಸುರಿಸಲು ರಾಜ್ಯ ಸರ್ಕಾರ ಯೋಜನೆ ರೂಪಿಸಿದೆ.

ಅಪಾರ ಸಂಖ್ಯೆಯಲ್ಲಿ ಜನರ ಆಗಮನವಾಗುವ ಹಿನ್ನೆಲೆಯಲ್ಲಿ ನಗರದಲ್ಲಿ 1 ರಿಂದ 18 ತರಗತಿಯ ಎಲ್ಲಾ ಶಾಲೆಗೆ ಜನವರಿ 28, 29 ಮತ್ತು 30ರಂದು ರಜೆ ಘೋಷಣೆ ಮಾಡಲಾಗಿದೆ. ಅಲಹಾಬಾದ್​ ಹೈಕೋರ್ಟ್​ ಕೂಡ ಮೌನಿ ಅಮವಾಸ್ಯೆಗೆ ರಜೆ ಘೋಷಿಸಿದೆ.

ಇದನ್ನೂ ಓದಿ: ಉತ್ತರ ಪ್ರದೇಶ: ಮರದ ನಿರ್ಮಿತಿ​ ಕುಸಿದು ಬಿದ್ದು ಐವರು ಸಾವು, 40 ಮಂದಿಗೆ ಗಾಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.