Benefits of Leaving Tea: ಪ್ರತಿದಿನ ಬೆಳಗ್ಗೆ ಹಾಗೂ ಸಂಜೆ ಟೀ ಕುಡಿಯುವುದು ಬಹುತೇಕರ ಜೀವನದ ಭಾಗವಾಗಿಬಿಟ್ಟಿದೆ. ಅನೇಕ ಜನರು ಬೆಳಿಗ್ಗೆ ಹಾಸಿಗೆಯಿಂದ ಎದ್ದ ತಕ್ಷಣವೇ ಚಹಾ ಸೇವನೆ ಮಾಡುತ್ತಾರೆ. ಕೆಲವರಿಗಂತೂ ಟೀ ಕುಡಿಯದೇ ಇದ್ದರೆ ದಿನವೇ ಆರಂಭವಾಗುವುದಿಲ್ಲ. ಹೆಚ್ಚಿನ ಜನರು ಉಪಾಹಾರದ ಸಮಯದಲ್ಲಿ ಟೀ ಕುಡಿಯುತ್ತಾರೆ. ಅನೇಕ ಜನರು ದಿನಕ್ಕೆ ಅನೇಕ ಬಾರಿ ಟೀ ಸೇವಿಸುತ್ತಾರೆ. ಇನ್ನು ಕೆಲವರು ಚಹಾಕ್ಕೆ ಎಷ್ಟು ವ್ಯಸನಿಯಾಗಿದ್ದಾರೆ ಅಂದ್ರೆ ಆಗಾಗ ಚಹಾ ಕುಡಿಯುತ್ತಲೇ ಇರುತ್ತಾರೆ. ಅತಿಯಾಗಿ ಚಹಾ ಕುಡಿಯುವುದು ಆರೋಗ್ಯಕ್ಕೆ ಹಾನಿಕಾರಕ. ಒಬ್ಬ ವ್ಯಕ್ತಿಯು ಒಂದು ತಿಂಗಳು ಚಹಾ ಕುಡಿಯುವುದನ್ನು ನಿಲ್ಲಿಸಿದರೆ ಏನಾಗುತ್ತದೆ ಎಂದು ಇದೀಗ ಅರಿತುಕೊಳ್ಳೋಣ.
1 ತಿಂಗಳು ಟೀ ಕುಡಿಯದಿದ್ದರೆ ಲಭಿಸುವ ಲಾಭಗಳೇನು?: ದೇಶದಲ್ಲಿ ಸುಮಾರು ಶೇ.90ರಷ್ಟು ಜನರು ಟೀ ತುಂಬಾ ಇಷ್ಟಪಡುತ್ತಾರೆ. ಕೆಲವು ಜನರಿಗೆ ಬೆಳಗ್ಗೆ ಎದ್ದ ತಕ್ಷಣವೇ ಟೀ ಕುಡಿಯಬೇಕು ಅನಿಸುತ್ತದೆ. ಇನ್ನು ಕೆಲವರು ಒಂದು ದಿನದಲ್ಲಿ ಲೆಕ್ಕವಿಲ್ಲದಷ್ಟು ಬಾರಿ ಟೀ ಸೇವಿಸುತ್ತಾರೆ. ಕೆಫೀನ್ ಅಂಶವು ಚಹಾದಲ್ಲಿ ಇರುತ್ತದೆ. ಜನರು ಅದಕ್ಕೆ ದಾಸರಾಗುತ್ತಾರೆ. ಚಹಾವು ಶಕ್ತಿ ಹಾಗೂ ತಾಜಾತನದ ಮೂಲ. ನಾವು ಪ್ರತಿದಿನ ಕುಡಿಯುವ ಚಹಾದಲ್ಲಿರುವ ಸಕ್ಕರೆಯ ಪ್ರಮಾಣವು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು.
ಚಹಾ ಪ್ರಿಯರು ಒಂದು ತಿಂಗಳು ಚಹಾ ಕುಡಿಯದೇ ಇರುವುದು ದೊಡ್ಡ ಸವಾಲು ಆಗುತ್ತದೆ. ಚಹಾ ಕುಡಿಯುವ ಬಯಕೆಯನ್ನು ನಿಗ್ರಹಿಸುವುದರಿಂದ ಆರೋಗ್ಯಕ್ಕೆ ಲೆಕ್ಕವಿಲ್ಲದಷ್ಟು ಪ್ರಯೋಜನಗಳನ್ನು ಪಡೆಯಬಹುದು. ನಾವು ಕುಡಿಯುವ ಚಹಾದಲ್ಲಿ ಹೆಚ್ಚಿನ ಪ್ರಮಾಣದ ಶುಗರ್ ಇರುತ್ತದೆ. ಇದರಿಂದ ದೇಹದಲ್ಲಿ ಕ್ಯಾಲೊರಿಗಳು ಹೆಚ್ಚಾಗುತ್ತದೆ. ಚಹಾದಲ್ಲಿ ಹೆಚ್ಚುವರಿ ಸಕ್ಕರೆ ಜೀರ್ಣಾಂಗ ವ್ಯವಸ್ಥೆಗೆ ಪರಿಣಾಮ ಬೀರುತ್ತದೆ.
ಒಂದು ತಿಂಗಳು ಸಕ್ಕರೆ ಸೇವಿಸದಿದ್ದರೆ ಲಭಿಸುವ ಲಾಭಗಳೇನು?: ಒಂದು ತಿಂಗಳು ಹೆಚ್ಚು ಸಕ್ಕರೆ ಇರುವ ಚಹಾ ಕುಡಿಯುವುದನ್ನು ನಿಲ್ಲಿಸಿದರೆ, ನಿಮ್ಮ ಜೀರ್ಣಕ್ರಿಯೆ ಸುಧಾರಿಸುತ್ತದೆ. ಜೊತೆಗೆ ತೂಕವೂ ಕಡಿಮೆಯಾಗುತ್ತದೆ. ಇದರೊಂದಿಗೆ ಅನೇಕ ಆರೋಗ್ಯದ ಸಮಸ್ಯೆಗಳನ್ನು ತಡೆಯಬಹುದು. ಒಂದು ತಿಂಗಳವರೆಗೆ ಸಕ್ಕರೆ ಚಹಾ ಕುಡಿಯದಿದ್ದರೆ, ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು. ಏಕೆಂದರೆ ಹೆಚ್ಚುವರಿ ಸಕ್ಕರೆ ಸೇವನೆಯು ಮೊಡವೆಗಳಿಗೆ ಕಾರಣವಾಗುವ ಸಾಧ್ಯತೆ ಇರುತ್ತದೆ. ಸಕ್ಕರೆಯನ್ನು ಸಂಪೂರ್ಣವಾಗಿ ತ್ಯಜಿಸಿದ ಮೊದಲ ಕೆಲವು ದಿನಗಳಲ್ಲಿ ನೀವು ಕಡು ಬಯಕೆಗಳು ಹಾಗೂ ಆಯಾಸದಂತಹ ಹೊರಗೆ ಬರಬಹುದು.
ಒಂದು ತಿಂಗಳು ಹೆಚ್ಚು ಸಕ್ಕರೆ ಇರುವ ಚಹಾ ಸೇವಿಸುವುದನ್ನು ತಪ್ಪಿಸುವುದರಿಂದ ಮಾನಸಿಕ ಆರೋಗ್ಯ ಸುಧಾರಿಸುತ್ತದೆ ಎಂದು ಅನೇಕ ಅಧ್ಯಯನಗಳು ಬಹಿರಂಗವಾಗಿವೆ. ಸಕ್ಕರೆ ಮಿಶ್ರಿತ ಚಹಾ ಕುಡಿಯುವುದರಿಂದ ಚರ್ಮದ ಮೇಲೆ ದದ್ದುಗಳು ಹಾಗೂ ಗುಳ್ಳೆಗಳು ಉಂಟಾಗುತ್ತದೆ. ನಿಮ್ಮ ಚರ್ಮವನ್ನು ಆರೋಗ್ಯವಾಗಿಡಲು ಸ್ವೀಟ್ ಚಹಾ ಕುಡಿಯದೇ ಇರುವುದು ಉತ್ತಮ.
ಚಹಾ ಕುಡಿಯುವ ಅಭ್ಯಾಸವನ್ನು ತಪ್ಪಿಸುವುದರಿಂದ ಎದೆಯುರಿ, ತಲೆತಿರುಗುವಿಕೆ ಹಾಗೂ ಹೃದಯ ಬಡಿತದಲ್ಲಿನ ಏರಿಳಿತಗಳಂತಹ ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು. ನಿಮ್ಮ ಕೈಗಳು ನಡುಗುತ್ತಿದ್ದರೆ ಚಹಾ ಸೇವಿಸುವುದರಿಂದ ಸಮಸ್ಯೆ ಉಲ್ಬಣಗೊಳ್ಳಬಹುದು. ನೀವು ಚಹಾ ಕುಡಿಯುವುದನ್ನು ನಿಲ್ಲಿಸಿದರೆ ಅಧಿಕ ರಕ್ತದೊತ್ತಡ ಸಾಮಾನ್ಯ ಸ್ಥಿತಿಗೆ ಬರುತ್ತದೆ ಎಂದು ತಜ್ಞರು ತಿಳಿಸುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಈ ವೆಬ್ಸೈಟ್ಗಳನ್ನು ವೀಕ್ಷಿಸಬಹುದು:
- https://www.webmd.com/diet/ss/slideshow-effects-cut-added-sugar
- https://www.nhs.uk/live-well/eat-well/how-to-eat-a-balanced-diet/how-to-cut-down-on-sugar-in-your-diet/
- https://pmc.ncbi.nlm.nih.gov/articles/PMC9966020/
ಓದುಗರಿಗೆ ಮುಖ್ಯ ಸೂಚನೆ: ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆ ಆಧರಿಸಿ ನಾವು ಈ ಮಾಹಿತಿ ನಿಮಗೆ ನೀಡಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.