ಅನೇಕರು ಗಟ್ಟಿಮುಟ್ಟಾದ ಉದ್ದನೆ ಕೂದಲು ಹೊಂದಿದ್ದಿರಾ? ಆದರೆ ಆ ಕೇಶರಾಶಿಯನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿದ್ದೀರಾ? ಅದರ ಚಿಂತೆ ಬಿಟ್ಟು ಬಿಡಿ. ನಾವದಕ್ಕೆ ಪರಿಹಾರವನ್ನು ಹೇಳುತ್ತೇವೆ ನೋಡಿ. ಹೊಸ ಕೂದಲುಗಳು ಬೆಳೆಯದಿದ್ದರೂ ಪರವಾಗಿಲ್ಲ, ಇರುವ ಕೂದಲು ಉದುರದಂತೆ ತಡೆಯುವುದೇ ಈಗಿನ ದೊಡ್ಡ ಸವಾಲಾಗಿದೆ. ಕೂದಲು ಉದುರುವುದನ್ನು ತಡೆಯುವ ಒಂದು ವಿಧಾನವೆಂದರೆ ಹಾನಿಕಾರಕ ಶಾಂಪೂಗಳು ಮತ್ತು ನೀವು ಬಳಸುವ ವಿವಿಧ ತೈಲಗಳನ್ನು ನಿಲ್ಲಿಸುವುದೇ ಆಗಿದೆ. ಇನ್ನೊಂದು ವಿಧಾನವೆಂದರೆ ನಮ್ಮ ಮನೆಯಲ್ಲಿ ಕೆಲವು ನೈಸರ್ಗಿಕ ಪದಾರ್ಥಗಳು ದೊರೆಯುತ್ತವೆ. ನೀವು ಅಂತಹ ನೈಸರ್ಗಿಕ ಪದಾರ್ಥಗಳೊಂದಿಗೆ ಕೂದಲಿನ ಆರೋಗ್ಯವನ್ನು ಸುಲಭವಾಗಿ ಕಾಪಾಡಿಕೊಳ್ಳಬಹುದು. ಆ ಬಗ್ಗೆ ಈಗ ಕಂಡುಹಿಡಿಯೋಣ.
ಸಮತೋಲಿತ ಆಹಾರ:ಕೂದಲು ಬೆಳವಣಿಗೆಯನ್ನು ಉತ್ತೇಜಿಸಲು, ಕೂದಲು ಉದುರುವಿಕೆಯನ್ನು ತಡೆಯಲು ಸಮತೋಲಿತ ಆಹಾರದ ಸೇವನೆ ಹೆಚ್ಚು ಸಹಕಾರಿಯಾಗಿದೆ. ನೀವು ಮಾಡಬೇಕಾದ ಮೊದಲನೆಯ ಕೆಲಸ ಎಂದರೆ ಸಮತೋಲಿತ ಆಹಾರವನ್ನು ಸೇವಿಸುವುದು. ಅಂದರೆ ನೀವು ಸೇವಿಸುವ ಆಹಾರದಲ್ಲಿ ಪ್ರೊಟೀನ್ ಅಧಿಕವಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ವಿಶೇಷವಾಗಿ ಕೆರಾಟಿನ್, ವಿಟಮಿನ್-ಬಿ7 ನಂತಹ ಜೀವಸತ್ವಗಳು, ಕಬ್ಬಿಣ ಮತ್ತು ಸತುವಿನಂತಹ ಖನಿಜಗಳಿರುವ ಆಹಾರವನ್ನು ಸೇವನೆ ಮಾಡಬೇಕು. ಈ ವಿಟಮಿನ್ಗಳು ಕೂದಲನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತವೆ. ಇವುಗಳ ಜೊತೆಗೆ, ಕೂದಲಿನ ಅಂಗಾಂಶಗಳ ಬೆಳವಣಿಗೆ ಮತ್ತು ಶಕ್ತಿಗಾಗಿ ಕಬ್ಬಿಣ ಮತ್ತು ಸತುವು ಹೊಂದಿರುವ ಆಹಾರಗಳ ನಿಯಮಿತ ಬಳಕೆ ಅತ್ಯವಶ್ಯ. ಇದರಿಂದ ಉದ್ದವಾದ, ಬಲವಾದ ಕೂದಲನ್ನು ಹೊಂದಲು ನಿಮಗೆ ಸಹಾಯವಾಗುತ್ತದೆ.
ತಲೆ ಮಸಾಜ್: ಪ್ರತಿದಿನ ಕನಿಷ್ಠ ನಾಲ್ಕು ನಿಮಿಷಗಳ ಕಾಲ ಕೂದಲಿಗೆ ಮಸಾಜ್ ಮಾಡುವುದರಿಂದ ಕೂದಲನ್ನು ಬೇರುಗಳಿಂದ ಬಲವಾಗಿ ಮತ್ತು ಆರೋಗ್ಯಕರವಾಗಿ ಇರುವಂತೆ ಮಾಡಬಹುದು ಎಂಬುದು ಅಧ್ಯಯನದಿಂದ ಸಾಬೀತಾಗಿದೆ. ತಲೆ ಮಸಾಜ್ ಮಾಡುವುದರಿಂದ ಕೂದಲು ಕಿರುಚೀಲಗಳಿಗೆ ರಕ್ತದ ಹರಿವನ್ನು ಹೆಚ್ಚಿಸುತ್ತದೆ. ಕಾಲಾನಂತರದಲ್ಲಿ ಕೂದಲು ದಪ್ಪವಾಗಿ ಮತ್ತು ಬಲವಾಗಿ ಬೆಳೆಯಲು ಸಹಾಯ ಮಾಡುತ್ತದೆ. ಕೂದಲು ಬೆಳವಣಿಗೆ ಮತ್ತು ಆರೋಗ್ಯಕರ ಕಿರುಚೀಲಗಳಿಗೆ ಉತ್ತಮ ರಕ್ತ ಪರಿಚಲನೆ ಮುಖ್ಯವಾಗಿದೆ. ಹಾಗಾಗಿ ದಿನಕ್ಕೆ ಕನಿಷ್ಠ ನಾಲ್ಕು ನಿಮಿಷಗಳ ಕಾಲ ಉಗುರು ಬೆಚ್ಚಗಿನ ಎಣ್ಣೆಯಿಂದ ಮಸಾಜ್ ಮಾಡುವ ಅಭ್ಯಾಸವನ್ನು ರೂಡಿಸಿಕೊಳ್ಳುವುದು ಉತ್ತಮ.
ಅಲೋವೆರಾ: ಅಲೋವೆರಾ ಒಂದು ಪವಾಡಯುತ ಔಷಧವಾಗಿದೆ. ಇದು ವಿವಿಧ ಕಾಯಿಲೆಗಳನ್ನು ಗುಣಪಡಿಸುತ್ತದೆ. ನಮ್ಮ ಮನೆಯಲ್ಲಿ ಯಾವಾಗಲೂ ಇರಬೇಕು ಮತ್ತು ಇಟ್ಟುಕೊಳ್ಳಬೇಕು . ವಿವಿಧ ಗಾಯಗಳು, ಸೋಂಕುಗಳು ಮತ್ತು ಚರ್ಮದ ಸಮಸ್ಯೆಗಳಿಗೆ ಲೋಳೆಸರ ಉತ್ತಮ ಪರಿಹಾರವಾಗಿ ಕಾರ್ಯನಿರ್ವಹಿಸುತ್ತದೆ. ಅಲ್ಲದೇ, ಅಲೋವೆರಾ ನಿಮ್ಮ ಕೂದಲಿಗೆ ತುಂಬಾ ಪೋಷಣೆ ನೀಡುತ್ತದೆ. ಇದರ ನೈಸರ್ಗಿಕ ಆರ್ಧ್ರಕ ಗುಣಲಕ್ಷಣಗಳು ಒಣ ಕೂದಲಿನಿಂದ ಉಂಟಾಗುವ ತುರಿಕೆ ಮತ್ತು ಬೆವರಿನಿಂದ ಉಂಟಾಗುವ ಕಿರಿಕಿರಿಯನ್ನು ನಿವಾರಿಸುತ್ತದೆ. ಅಲ್ಲದೇ, ಅದರ ತೇವಾಂಶವು ನಿಮ್ಮ ಸಂಪೂರ್ಣ ನೆತ್ತಿಯ ನೈಸರ್ಗಿಕ ಕಂಡಿಷನರ್ ಆಗಿ ಕಾರ್ಯನಿರ್ವಹಿಸುತ್ತದೆ. ಹೀಗೆ ಮಾಡುವುದರಿಂದ ಬರುವ ಅಂತಿಮ ಫಲಿತಾಂಶ ಎಂದರೆ ಆರೋಗ್ಯಕರ ಹಾಗೂ ಸುಂದರ ಕೂದಲು.
ಎಗ್ ಮಾಸ್ಕ್ : ಎಗ್ ಮಾಸ್ಕ್ ಅತ್ಯುತ್ತಮ, ಮನೆಯಲ್ಲಿ ತಯಾರಿಸಿದ ಹೇರ್ ಮಾಸ್ಕ್‌ಗಳಲ್ಲಿ ಇದು ಒಂದಾಗಿದೆ. ಮೊಟ್ಟೆಗಳಲ್ಲಿ ಪ್ರೋಟೀನ್ ತುಂಬಿರುತ್ತದೆ. ಇದು ಬಯೋಟಿನ್, ಫೋಲೇಟ್, ವಿಟಮಿನ್-ಎ, ವಿಟಮಿನ್-ಡಿ ಮುಂತಾದ ಇತರ ಪೋಷಕಾಂಶಗಳನ್ನು ಸಹ ಒಳಗೊಂಡಿದೆ, ಇದು ನಿಮ್ಮ ಕೂದಲನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಈ ಎಲ್ಲ ಪೋಷಕಾಂಶಗಳು ನಿಮ್ಮ ನೆತ್ತಿ ಮತ್ತು ಕೂದಲು ಕಿರುಚೀಲಗಳನ್ನು ಪೋಷಿಸಲು ಸಹಾಯ ಮಾಡುತ್ತದೆ. ಆದರೆ ಮೊಟ್ಟೆಗೆ ಅಲರ್ಜಿಯಂತಹ ಸಮಸ್ಯೆ ಇರುವವರು ಇದರಿಂದ ದೂರವಿರಬೇಕು.