ಅಧಿಕ ಕೊಲೆಸ್ಟ್ರಾಲ್ ನಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ. ಅಷ್ಟಕ್ಕೂ ಈ ಸಮಸ್ಯೆ ಬರುವುದು ಅನಾರೋಗ್ಯಕರ ಅಭ್ಯಾಸಗಳಿಂದ. ಅಧಿಕ ಕೊಬ್ಬಿನ ಆಹಾರ, ಯಾವುದೇ ಚಟುವಟಿಕೆ ಮಾಡದೇ ಇರುವುದು ಧೂಮಪಾನ ಮತ್ತು ಮದ್ಯಪಾನದಿಂದ ಅಧಿಕ ಕೊಲೆಸ್ಟ್ರಾಲ್ ಸಮಸ್ಯೆ ಉಂಟಾಗುತ್ತದೆ. ಈ ಸಮಸ್ಯೆಯು ಹೃದಯದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಪಾರ್ಶ್ವವಾಯು, ಬಾಹ್ಯ ಅಪಧಮನಿ ಕಾಯಿಲೆ ಮತ್ತು ಅನ್ಯೂರಿಮ್‌ಗಳ ಅಪಾಯಗಳು ಹೆಚ್ಚಾಗುತ್ತವೆ. ಅದಕ್ಕಾಗಿಯೇ ತಜ್ಞರು ಕೊಲೆಸ್ಟ್ರಾಲ್ ಬಗ್ಗೆ ಜಾಗರೂಕರಾಗಿರಲು ಸಲಹೆ ನೀಡುತ್ತಾರೆ. ಆದರೆ ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾದಾಗ ಕೆಲವೊಂದು ಲಕ್ಷಣಗಳು ಕಂಡು ಬರುತ್ತವೆ ಎಂಬುದನ್ನು ನೀವು ಗಮನಿಸಬೇಕು. ಹಾಗೂ ಆ ಬಗ್ಗೆ ಎಚ್ಚರಿಕೆಯಿಂದರಬೇಕು. ಅವುಗಳು ಯಾವುವು ಅನ್ನೋದನ್ನು ಒಮ್ಮೆ ನೋಡಿ ಬಿಡೋಣ
ಸೆಳೆತ: ಕಾಲುಗಳು ಮತ್ತು ಪಾದಗಳಲ್ಲಿನ ಹೆಚ್ಚು ಹೆಚ್ಚು ಸೆಳತ ಕಂಡು ಬರುತ್ತದೆ. ಇದು ಅಧಿಕ ಕೊಲೆಸ್ಟ್ರಾಲ್‌ನ ಸೂಚನೆ ಆಗಿರಬಹುದು ಎಂಬುದು ತಜ್ಞರ ಅಂದಾಜಾಗಿದೆ. ಅಧಿಕ ಕೊಲೆಸ್ಟ್ರಾಲ್ ಮಟ್ಟವು ಅಪಧಮನಿಗಳಲ್ಲಿ ಪ್ಲೇಕ್ ರಚನೆಗೆ ಕಾರಣವಾಗುತ್ತದೆಯಂತೆ. ಇದನ್ನು ಅಪಧಮನಿಕಾಠಿಣ್ಯ ಎಂದೂ ಸಾಮಾನ್ಯವಾಗಿ ಕರೆಯಲಾಗುತ್ತದೆ. ಈ ಪ್ಲೇಕ್ ಅಪಧಮನಿಗಳನ್ನು ಕಿರಿದಾಗಿಸುತ್ತದೆ ಮತ್ತು ರಕ್ತದ ಹರಿವನ್ನು ಕಡಿಮೆ ಮಾಡುತ್ತದೆ. ಕಾಲುಗಳು ಮತ್ತು ಪಾದಗಳಿಗೆ ರಕ್ತದ ಹರಿವು ಕಡಿಮೆಯಾಗುವುದರಿಂದ ಮರಗಟ್ಟುವಿಕೆ, ನೋವು ಮತ್ತು ಜುಮ್ಮೆನಿಸುವಿಕೆ ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
ಅಮೆರಿಕನ್ ಜರ್ನಲ್ ಆಫ್ ಕಾರ್ಡಿಯಾಲಜಿಯಲ್ಲಿ ಪ್ರಕಟವಾದ 2018ರ ಅಧ್ಯಯನವು ಹೆಚ್ಚಿನ ಕೊಲೆಸ್ಟ್ರಾಲ್ ಮಟ್ಟವನ್ನು ಹೊಂದಿರುವ ಜನರು ಕೈ ಮತ್ತು ಪಾದಗಳಲ್ಲಿ ಮರಗಟ್ಟುವಿಕೆ ಅನುಭವಿಸುವ ಸಾಧ್ಯತೆ ಶೇ 50ರಷ್ಟು ಹೆಚ್ಚು ಎಂದು ಕಂಡು ಹಿಡಿದಿದೆ. ಡೇವಿಡ್ ಲಿ, ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಖ್ಯಾತ ಹೃದ್ರೋಗ ತಜ್ಞ ಡಾ. ಮಾರ್ಟಿನ್, ಎಂಡಿ ಭಾಗವಹಿಸಿದ್ದರು.
ಕಣ್ಣುಗಳು: ಅಧಿಕ ಕೊಲೆಸ್ಟ್ರಾಲ್‌ನಿಂದ ಕಣ್ಣುಗಳು ಅಪಾಯಕ್ಕೆ ಸಿಲುಕುತ್ತವೆ. ಅಧಿಕ ಕೊಲೆಸ್ಟ್ರಾಲ್ ನಿಂದಾಗಿ ಕ್ಸಾಂಥೆಲಾಸ್ಮಾ ಎಂಬ ಸಮಸ್ಯೆ ಉಂಟಾಗುತ್ತದೆ. ಇದರರ್ಥ ಹಳದಿ ಕೊಬ್ಬು ಕಣ್ಣುರೆಪ್ಪೆಗಳಲ್ಲಿ ಸಂಗ್ರಹಗೊಳ್ಳುತ್ತವೆ. ಕಣ್ಣುಗಳ ಕೆಳಗೆ ಚರ್ಮವು ಕಿತ್ತಳೆ ಅಥವಾ ಹಳದಿ ಬಣ್ಣಕ್ಕೆ ತಿರುಗುತ್ತದೆ. ಅಥವಾ ಆ ಬಣ್ಣಗಳಲ್ಲಿ ಕಲೆಗಳು ಕಾಣಿಸಿಕೊಳ್ಳುತ್ತವೆ. ಹಳದಿ, ಕಿತ್ತಳೆ ಮತ್ತು ಬಿಳಿ ಕಲೆಗಳು ಕಂಡು ಬಂದರೆ, ವೈದ್ಯಕೀಯ ಪರಿಭಾಷೆಯಲ್ಲಿ ಅದನ್ನು ಆರ್ಕಸ್ ಸೆನಿಲಿಸ್ ಎಂದು ಕರೆಯುತ್ತಾರೆ. ಇವು ದೇಹದಲ್ಲಿ ಹೆಚ್ಚಿದ ಕೊಲೆಸ್ಟ್ರಾಲ್‌ನ ಚಿಹ್ನೆಗಳಾಗಿವೆ. ಇವುಗಳು ಕಾಣಿಸಿಕೊಂಡರೆ, ವೈದ್ಯರನ್ನು ಸಂಪರ್ಕಿಸುವುದು ಉತ್ತಮ.
ಎದೆನೋವು: ಪದೇ ಪದೇ ಎದೆನೋವು ಅಥವಾ ಎದೆಯಲ್ಲಿ ಅಸ್ವಸ್ಥತೆ ಇದ್ದರೆ ಅದನ್ನು ಲಘುವಾಗಿ ತೆಗೆದುಕೊಳ್ಳಬೇಡಿ. ಇದು ಅಧಿಕ ಕೊಲೆಸ್ಟ್ರಾಲ್‌ನ ಸಂಕೇತ ಎಂದು ಹೇಳಲಾಗುತ್ತದೆ. ಸರಿಯಾದ ಸಮಯಕ್ಕೆ ವೈದ್ಯರನ್ನು ಕಾಣದಿದ್ದರೆ... ಈ ಸಮಸ್ಯೆ ಹೆಚ್ಚುತ್ತದೆ ಎನ್ನುತ್ತಾರೆ ತಜ್ಞರು. ಅಲ್ಲದೇ ಉಸಿರಾಟಕ್ಕೆ ತೊಂದರೆಯಾದರೂ ಅದು ಅಧಿಕ ಕೊಲೆಸ್ಟ್ರಾಲ್‌ನ ಲಕ್ಷಣ ಎಂಬುದು ನುರಿತ ಆರೋಗ್ಯ ತಜ್ಞರ ಆಂಬೋಣ
ಆಯಾಸ:ಬಿಡುವಿಲ್ಲದ ಜೀವನ ಮತ್ತು ಕೆಲಸದ ಒತ್ತಡದಿಂದ ಆಯಾಸ ಅನಿವಾರ್ಯ ಎಂದು ಎಲ್ಲರಿಗೂ ತಿಳಿದಿದೆ. ಹೇಗಾದರೂ, ಸಾಕಷ್ಟು ವಿಶ್ರಾಂತಿ ಪಡೆದ ನಂತರವೂ ನೀವು ದಣಿವು ಮತ್ತು ಆಲಸ್ಯವನ್ನು ಅನುಭವಿಸಿದರೆ, ನೀವು ವೈದ್ಯರನ್ನು ಸಂಪರ್ಕಿಸಬೇಕು. ಕಾರಣವು ಅಧಿಕ ಕೊಲೆಸ್ಟ್ರಾಲ್‌ನ ಚಿಹ್ನೆ ಎಂದು ಹೇಳಲಾಗುತ್ತದೆ.