Does Drinking Water Before Meals Help Lose Weight: ಬಹುತೇಕರು ಅಧಿಕ ತೂಕದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ತಮ್ಮ ತೂಕ ಇಳಿಸಿಕೊಳ್ಳಲು ವಿವಿಧ ವ್ಯಾಯಾಮಗಳನ್ನು ಮಾಡುತ್ತಾರೆ. ಜೊತೆಗೆ ತಮ್ಮ ದೈನಂದಿನ ಆಹಾರ ಕ್ರಮದಲ್ಲಿ ಅನೇಕ ಬದಲಾವಣೆಗಳನ್ನು ಮಾಡಿಕೊಳ್ಳುತ್ತಾರೆ. ಇದರಲ್ಲಿ ಇನ್ನು ಕೆಲವರು ನೈಸರ್ಗಿಕವಾದ ಪರಿಹಾರಗಳ ಮೂಲಕ ಕೆಲವು ಟಿಪ್ಸ್ ಪಾಲಿಸುತ್ತಾರೆ. ಆದ್ರೆ, ಕೆಲವರು ಊಟಕ್ಕೆ ಮುನ್ನ ನೀರು ಕುಡಿಯುವುದರಿಂದ ತೂಕ ಇಳಿಸಿಕೊಳ್ಳಲು ತುಂಬಾ ಸಹಾಯವಾಗುತ್ತದೆ ಎಂದು ಹೇಳುತ್ತಾರೆ. ಈ ರೀತಿ ಮಾಡುವುದರಿಂದ ತೂಕ ಇಳಿಕೆ ಮಾಡಿಕೊಳ್ಳಬಹುದಾ? ಇದರಲ್ಲಿ ಸತ್ಯ ಇದೆಯಾ? ಈ ಬಗ್ಗೆ ಆರೋಗ್ಯ ತಜ್ಞರು ಏನು ತಿಳಿಸುತ್ತಾರೆ ಎಂಬುದನ್ನು ಸಂಪೂರ್ಣವಾಗಿ ತಿಳಿದುಕೊಳ್ಳೋಣ.
ಹೊಟ್ಟೆ ತುಂಬಿದ ಅನುಭವವಾಗುತ್ತೆ: ಊಟಕ್ಕೂ ಮುನ್ನ ನೀರು ಕುಡಿಯುವುದರಿಂದ ಹೊಟ್ಟೆ ತುಂಬಿದ ಅನುಭವ ಆಗುತ್ತದೆ. ನಮ್ಮ ಹೊಟ್ಟೆಯಲ್ಲಿ ಅನೇಕ ನರಗಳಿವೆ. ನೀವು ನೀರು ಕುಡಿಯುವಾಗ, ಈ ನರಗಳು ಮೆದುಳಿಗೆ ಊಟ ಮಾಡದಂತೆ ಸಂಕೇತಗಳನ್ನು ಕಳುಹಿಸುತ್ತವೆ. ಇದರ ಪರಿಣಾಮವಾಗಿ ಕಡಿಮೆ ಆಹಾರವನ್ನು ಸೇವಿಸುವುದರಿಂದ ತೂಕ ಇಳಿಸಿಕೊಳ್ಳಲು ತುಂಬಾ ಸಹಾಯವಾಗುತ್ತದೆ. ಅನೇಕ ಸಂಶೋಧನೆಗಳಲ್ಲಿ ಈ ವಿಷಯವು ಬಹಿರಂಗವಾಗಿದೆ ಎಂದು ತಜ್ಞರು ವಿವರಿಸುತ್ತಾರೆ.
ಊಟಕ್ಕೆ ಮೊದಲು ನೀರು ಕುಡಿದವರು, ನೀರು ಕುಡಿಯದವರಿಗಿಂತ ಕಡಿಮೆ ಆಹಾರ ಸೇವಿಸುತ್ತಾರೆ. ರಾಷ್ಟ್ರೀಯ ಆರೋಗ್ಯ ಸಂಸ್ಥೆಯ ತಂಡವು ನಡೆಸಿದ ಮತ್ತೊಂದು ಸಂಶೋಧನೆಯಲ್ಲಿ, ಊಟಕ್ಕೆ ಮೊದಲು ನೀರು ಕುಡಿದವರು ಮತ್ತು ಕುಡಿಯದವರನ್ನು ಪರೀಕ್ಷೆ ನಡೆಸಲಾಯಿತು. ಸುಮಾರು 12 ವಾರಗಳ ವೀಕ್ಷಣೆಯ ಬಳಿಕ ನೀರು ಕುಡಿದವರು ತೂಕ ಇಳಿಸಿಕೊಂಡವರಿಗೆ ಹೋಲಿಕೆ ಮಾಡಿದರೆ, ನೀರು ಕುಡಿದವರು ತಮ್ಮ ದೇಹದ ತೂಕ ಕಳೆದುಕೊಂಡಿದ್ದಾರೆ ಎಂದು ಸಂಶೋಧಕರಿಗೆ ಸ್ಪಷ್ಟವಾಗಿ ತಿಳಿದಿದೆ. ಸಂಬಂಧಿತ ಸಂಶೋಧನಾ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಹಸಿವಾಗ ನೀರು ಕುಡಿಯಿರಿ: ನಮಗೆ ಅನೇಕ ಬಾರಿ ಹಸಿವಾಗುತ್ತದೆ. ಅಂತಹ ಸಮಯದಲ್ಲಿ ಏನನ್ನಾದರೂ ತಿನ್ನಲು ಪ್ರಯತ್ನ ಮಾಡುತ್ತೇವೆ. ಹಾಗೆ ಭಾವಿಸುವುದು ಯಾವಾಗಲೂ ಹಸಿವು ಆಗುತ್ತದೆ ಎಂದರ್ಥವಲ್ಲ. ಕೆಲವೊಮ್ಮೆ ಬಾಯಾರಿಕೆದಾಗ ಹಸಿವು ಆದಂತೆ ಅನಿಸಬಹುದು. ಆ ಸಂದರ್ಭದಲ್ಲಿ ಸ್ವಲ್ಪ ನೀರು ಕುಡಿಯುವುದರಿಂದ ಹೆಚ್ಚುವರಿ ಕ್ಯಾಲೊರಿಗಳನ್ನು ಸೇವಿಸುವುದನ್ನು ತಪ್ಪಿಸಲು ಸಾಧ್ಯವಾಗುತ್ತದೆ. ಹೆಚ್ಚು ಆಹಾರ ಸೇವಿಸದೇ ಇದ್ದರೆ, ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ ಎಂದು ಸಂಶೋಧಕರು ಹೇಳುತ್ತಾರೆ.
ವ್ಯಾಯಾಮಕ್ಕೂ ಮುನ್ನ ನೀರು ಕುಡಿಯಿರಿ: ಅನೇಕ ಜನರು ವ್ಯಾಯಾಮದ ಸಮಯದಲ್ಲಿ ಸ್ನಾಯು ನೋವು, ಆಯಾಸ ಹಾಗೂ ಸ್ನಾಯು ಸೆಳೆತದಂತಹ ಸಮಸ್ಯೆಗಳಿಂದ ಬಳಲುತ್ತಾರೆ. ಏಕೆಂದರೆ, ದೇಹವು ನಿರ್ಜಲೀಕರಣಗೊಂಡಿರುತ್ತದೆ. ದೇಹವು ಹೈಡ್ರೀಕರಿಸಲ್ಪಟ್ಟಿದೆಯೇ ಎಂದು ಖಚಿತಪಡಿಸಿಕೊಳ್ಳಲು ವ್ಯಾಯಾಮದ ಮೊದಲು ನೀರು ಕುಡಿಯುವುದು ತುಂಬಾ ಮುಖ್ಯವಾಗಿರುತ್ತದೆ.
ಕೊಬ್ಬು ಕರಗಿಸಲು ನೀರು ಅಗತ್ಯ: ತಜ್ಞರು ತಿಳಿಸುವ ಪ್ರಕಾರ, ದೇಹದಲ್ಲಿ ಸಂಗ್ರಹವಾದ ಕೊಬ್ಬನ್ನು ಕರಗಿಸಲು ನೀರು ಕೂಡ ಅವಶ್ಯವಾಗಿದೆ. ನಿರ್ಜಲೀಕರಣದಿಂದಾಗಿ ಕೊಬ್ಬು ಕರಗಿಸುವ ಪ್ರಕ್ರಿಯೆಯು ನಿಲ್ಲುತ್ತದೆ. ಇದರಿಂದ ದೇಹದಲ್ಲಿನ ನೀರಿನ ಮಟ್ಟ ಕಡಿಮೆ ಮಾಡುತ್ತದೆ. ಹೆಚ್ಚು ನೀರನ್ನು ಸೇವಿಸುವುದರಿಂದ ಕೊಬ್ಬು ಕರಗಿಸಲು ಪೂರಕವಾಗಿ ಕಾರ್ಯನಿರ್ವಹಿಸುತ್ತದೆ ಎಂದು ತಜ್ಞರು ವಿವರಿಸುತ್ತಾರೆ.
ತಂಪು ಪಾನೀಯಗಳ ಬದಲು ನೀರು ಕುಡಿಯೋದು ಒಳ್ಳೆಯದು: ನಾವು ಸಾಮಾನ್ಯವಾಗಿ ಸೇವಿಸುವಂತಹ ಹೆಚ್ಚಿನ ಕ್ಯಾಲೋರಿ ಹೊಂದಿರುವ ತಂಪು ಪಾನೀಯಗಳ ಬದಲು ನೀರು ಕುಡಿಯುವುದು ಒಳ್ಳೆಯದು. ನೀರು ಕುಡಿಯುವುದರಿಂದ ತೂಕ ಇಳಿಸಿಕೊಳ್ಳಲು ಸಹಾಯ ಮಾಡುವ ಸಾಮರ್ಥ್ಯ ಹೊಂದಿದೆ. ಹಣ್ಣಿನ ರಸಗಳು, ಆಲ್ಕೋಹಾಲ್ ಮತ್ತು ಸೋಡಾದಂತಹ ಪಾನೀಯಗಳನ್ನು ಸೇವಿಸುವ ಬದಲು ಹೆಚ್ಚು ನೀರು ಕುಡಿಯುವುದರಿಂದ ದೀರ್ಘಕಾಲೀನ ತೂಕ ನಷ್ಟವಾಗುತ್ತದೆ ಎಂದು ರಾಷ್ಟ್ರೀಯ ಆರೋಗ್ಯ ಸಂಸ್ಥೆಯ ಸಂಶೋಧನಾ ತಂಡ ನಡೆಸಿದ ಸಂಶೋಧನೆಯಲ್ಲಿ ಕಂಡುಬಂದಿದೆ. ಸಂಬಂಧಿತ ಸಂಶೋಧನಾ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಮಾಹಿತಿಗಾಗಿ ಈ ವೆಬ್ಸೈಟ್ನ್ನು ವೀಕ್ಷಿಸಬಹುದು:
ಓದುಗರಿಗೆ ಸೂಚನೆ: ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆ ಆಧರಿಸಿ ನಾವು ಈ ಮಾಹಿತಿ ನಿಮಗೆ ನೀಡಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.