ಬೆಂಗಳೂರು: ಜೀವನ ಶೈಲಿ ಬದಲಾವಣೆ ತಿನ್ನುವ ಅಭ್ಯಾಸ, ದೈಹಿಕ ಚಟುವಟಿಕೆಯ ಕೊರತೆ, ದೀರ್ಘಾವಧಿ ಕಾಲ ಒಂದೇ ಸ್ಥಳದಲ್ಲಿ ಕುಳಿತುಕೊಳ್ಳುವುದರಿಂದ ಅಧಿಕ ತೂಕದ ಸಮಸ್ಯೆ ಸಾಮಾನ್ಯವಾಗಿ ಕಾಡುತ್ತದೆ. ತೂಕ ಕಳೆದು ಕೊಳ್ಳುವ ವಿಚಾರದಲ್ಲಿ ಅನೇಕ ಪ್ರಯೋಗ ಕಸರತ್ತನ್ನು ಮಾಡಿ ಯಾವುದು ಬೆಸ್ಟ್ ಎಂಬ ತೀರ್ಮಾನಕ್ಕೆ ಬರುತ್ತೇವೆ. ಈ ತೂಕ ಕಳೆದುಕೊಳ್ಳಲು ವಿವಿಧ ವ್ಯಾಯಾಮದ ಮಾರ್ಗವನ್ನು ಅನುಸರಿಸಿ, ಶಿಸ್ತಿನ ಡಯಟ್ ಕೂಡ ಪಾಲಿಸುತ್ತೇವೆ. ಕೆಲವು ವೇಳೆ ತೂಕ ನಿರ್ವಹಣೆಗೆ ವಾಕಿಂಗ್ ಸಹಾಯ ಮಾಡಿದರೆ, ಮೆಟ್ಟಿಲು ಹತ್ತುವುದು ಬೆಸ್ಟ್ ಎಂಬ ವಾದವನ್ನು ಕೆಲವರು ಮಂಡಿಸುತ್ತಾರೆ. ಹಾಗಾದರೆ ಯಾವುದು ಪರಿಣಾಮಕಾರಿ ಎಂಬ ಮಾಹಿತಿ ಇಲ್ಲಿದೆ.
ಮೆಟ್ಟಿಲು ಹತ್ತುವುದರಿಂದ ಪ್ರಯೋಜನ: ತೂಕ ನಿರ್ವಹಣೆ: ತಜ್ಞರ ಪ್ರಕಾರ, ಮೆಟ್ಟಿಲು ಹತ್ತುವುದರಿಂದ ದೇಹದ ಕೊಬ್ಬು ಕರಗುತ್ತದೆ. ಜೊತೆಗೆ ತೊಡೆ ಮತ್ತು ಕಾಲು ಮತ್ತು ಹೊಟ್ಟೆ ಸುತ್ತ ಶೇಖರಣೆಯಾಗಿರುವ ಕೊಬ್ಬಿನ ಇಳಿಕೆ ಮಾಡಬಹುದು ಎನ್ನುತ್ತಾರೆ. ಮೆಟ್ಟಿಲು ಹತ್ತುವ ಪ್ರಕ್ರಿಯೆ ಮೂರು ಪಟ್ಟು ವೇಗದಲ್ಲಿ ಕೊಬ್ಬನ್ನು ಕರಗಿಸುತ್ತದೆ. ಇದರಿಂದ ಶೀಘ್ರ ತೂಕ ಕಳೆದುಕೊಳ್ಳಬಹುದು ಎಂಬ ಮಾಹಿತಿಯನ್ನು 2001ರ ಅಮೆರಿಕನ್ ಜರ್ನಲ್ ಆಫ್ ಕ್ಲಿನಿಕಲ್ ನ್ಯೂಟ್ರಿಷಿಯನ್ನಲ್ಲಿ ಪ್ರಕಟಿಸಲಾಗಿದೆ. ಸಂಶೋಧನೆಯಲ್ಲಿ ಅಧಿಕ ತೂಕ ಹೊಂದಿದ ಜನರು ಮೆಟ್ಟಿಲ ವ್ಯಾಯಮದಿಂದ ತೂಕ ಕಳೆದುಕೊಂಡಿರುವುದಾಗಿ ತಿಳಿಸಿದ್ದಾರೆ.
ಹೃದಯದ ಆರೋಗ್ಯಕ್ಕೆ ಉತ್ತಮ: ಮೆಟ್ಟಿಲು ಹತ್ತುವುದರಿಂದ ಹೃದಯದ ಬಡಿತ ಹೆಚ್ಚುತ್ತದೆ. ಇದರಿಂದ ರಕ್ತದ ಪರಿಚಲನೆ ಹೆಚ್ಚುತ್ತದೆ. ಇದು ಹೃದಯ ರೋಗ, ಪಾರ್ಶ್ವವಾಯ ಮತ್ತು ರಕ್ತದೊತ್ತಡದ ಅಪಾಯವನ್ನು ಕಡಿಮೆ ಮಾಡುತ್ತದೆ. ಆದರೆ, ಹೃದಯ ಸಮಸ್ಯೆ ಹೊಂದಿರುವವರು ಮೆಟ್ಟಿಲು ಹತ್ತುವುದು ಸೂಕ್ತವಲ್ಲ. ಅಧಿಕ ರಕ್ತದೊತ್ತ ಹೊಂದಿರುವವರು ಕೂಡ ವೈದ್ಯರ ಸಲಹೆ ಮೇರೆಗೆ ಮೆಟ್ಟಿಲು ಹತ್ತುವುದು ಸೂಕ್ತ.
ಮನಸ್ಥಿತಿ ಸುಧಾರಣೆ: ವ್ಯಾಯಮವೂ ಎಂರೋರ್ಫಿನ್ಸ್ ಅನ್ನು ಉತ್ತೇಜಿಸುತ್ತದೆ. ಇದು ಮೂಡ್ ಮತ್ತು ಒತ್ತಡ ಕಡಿಮೆ ಮಾಡುತ್ತದೆ. ಜೊತೆಗೆ ಆತಂಕ ಮತ್ತು ಖಿನ್ನತೆ ಕಡಿಮೆ ಮಾಡಲು ಸಾಧ್ಯವಾಗುತ್ತದೆ.
ನಡಿಗೆಯಿಂದಾಗುವ ಪ್ರಯೋಜನ: ವಾಕಿಂಗ್ ಅತ್ಯಂತ ಸುಲಭದಾಯಕ ಮತ್ತು ಯಾರು ಯಾವಾಗ ಬೇಕಾದರೂ ನಡೆಸುವ ಸರಳ ವ್ಯಾಯಾಮ. ತಜ್ಞರು ಹೇಳುವಂತೆ, ಬೆಳಗಿನ ಹೊತ್ತು ಅರ್ಧ ಗಂಟೆ ವಾಕಿಂಗ್ ಆರೋಗ್ಯಕ್ಕೆ ಉತ್ತಮ.