ETV Bharat / health

ನೀವು ಆಗಾಗ್ಗೆ ಉದ್ಯಾನಗಳಿಗೆ ತೆರಳುತ್ತೀರಾ?: ಹಾಗಾದ್ರೆ ಈ ವಿಷಯಗಳು ನಿಮಗೆ ತಿಳಿದಿರಲಿ! - BENEFITS OF PARKS AND GREEN SPACES

Benefits of Parks and Green Spaces: ಪ್ರಕೃತಿಯಲ್ಲಿ ಸಮಯ ಕಳೆಯುವುದರಿಂದ ದೇಹದ ಆರೋಗ್ಯ ಮತ್ತು ಮಾನಸಿಕ ಆರೋಗ್ಯಕ್ಕೆ ತುಂಬಾ ಅನೇಕ ಪ್ರಯೋಜನಗಳು ಲಭಿಸುತ್ತವೆ ಎಂದು ತಜ್ಞರು ತಿಳಿಸುತ್ತಾರೆ.

BENEFITS OF PARKS AND GREEN SPACES  ADVANTAGES OF SPENDING TIME NATURE  ADVANTAGES OF SPENDING TIME IN PARK  SPENDING TIME IN NATURE BENIFITS
ಸಾಂದರ್ಭಿಕ ಚಿತ್ರ (Getty Images)
author img

By ETV Bharat Health Team

Published : Nov 22, 2024, 6:45 PM IST

Benefits of Parks and Green Spaces: ಪ್ರಕೃತಿಯಲ್ಲಿ ಸಮಯ ಕಳೆಯುವುದರಿಂದ ದೇಹದ ಆರೋಗ್ಯ ಮತ್ತು ಮಾನಸಿಕ ಆರೋಗ್ಯಕ್ಕೆ ತುಂಬಾ ಅನೇಕ ಪ್ರಯೋಜನಗಳು ಲಭಿಸುತ್ತವೆ ಎಂದು ತಜ್ಞರು ತಿಳಿಸುತ್ತಾರೆ.ನೀವು ಉದ್ಯಾನಗಳಿಗೆ ಹೋಗುತ್ತೀರಾ? ಹಾಗಾದ್ರೆ ನಿಮಗಿದು ತಿಳಿದಿದೆಯೇ? ಉದ್ಯಾನದಲ್ಲಿ ಸಮಯ ಕಳೆಯುವುದು ಅಥವಾ ಸುಮಾರು ಒಂದು ಗಂಟೆ ವಿಶ್ರಾಂತಿ ಪಡೆಯುವುದರಿಂದ ಹಲವು ಪ್ರಯೋಜನಗಳು ಲಭಿಸುತ್ತವೆ ಎಂದು ತಜ್ಞರು ತಿಳಿಸುತ್ತಾರೆ. ಮನಸ್ಸನ್ನು ಉಲ್ಲಾಸಗೊಳಿಸುವುದರ ಜೊತೆಗೆ ದೈಹಿಕ ಮತ್ತು ಮಾನಸಿಕ ಪ್ರಯೋಜನಗಳು ದೊರೆಯುತ್ತದೆ ಎಂದು ವಿವರಿಸಲಾಗಿದೆ. ಉದ್ಯಾನಗಳಲ್ಲಿ ಕಾಲ ಕೆಳೆಯುವುದರಿಂದ ಯಾವೆಲ್ಲಾ ಲಾಭಗಳು ಲಭಿಸುತ್ತದೆ ಎಂಬುದನ್ನು ತಿಳಿಯೋಣ.

ಒತ್ತಡ ಕಡಿಮೆಯಾಗುತ್ತೆ: ಹಾರ್ವರ್ಡ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ಜರ್ನಲ್ ಉದ್ಯಾನಗಳಲ್ಲಿ ವಾಕಿಂಗ್​ ಮಾಡುವುದರಿಂದ ಒತ್ತಡ ಕಡಿಮೆಯಾಗುತ್ತದೆ. ದೇಹ ಹಾಗೂ ಮನಸ್ಸು ಶಾಂತವಾಗಲು ಸಾಧ್ಯವಾಗುತ್ತದೆ ಎಂದು ಬಹಿರಂಗಪಡಿಸಿದೆ. ಹಾರ್ವರ್ಡ್ ಪ್ರೊಫೆಸರ್ ಹೀದರ್ ಎಲಿಯಾಸೆನ್ ತಿಳಿಸುವ ಪ್ರಕಾರ, ಒತ್ತಡವನ್ನು ಹೆಚ್ಚಿಸುವುದರಿಂದ ಕಾರ್ಟಿಸೋಲ್ ಹಾರ್ಮೋನ್ ಮಟ್ಟವು ಹೆಚ್ಚಾಗುವುದನ್ನು ತಡೆಯಬಹುದು. ಉದ್ಯಾನವನಗಳಲ್ಲಿನ ತಾಜಾ ಗಾಳಿ, ನೈಸರ್ಗಿಕ ಬೆಳಕು, ಮರಗಳು ಮತ್ತು ಸಸ್ಯಗಳು ಆತಂಕವನ್ನು ಕಡಿಮೆ ಮಾಡುತ್ತದೆ. ಜೊತೆಗೆ ಮನಸ್ಸನ್ನು ಶಾಂತಗೊಳಿಸುತ್ತದೆ ಎಂದು ಸಂಶೋಧನಕರು ವಿವರಿಸುತ್ತಾರೆ.

ಏಕಾಗ್ರತೆ ಹೆಚ್ಚಿಸುತ್ತೆ: ಹಸಿರು ಮರಗಳ ಮಧ್ಯೆ ಸಮಯ ಕಳೆಯುವುದರಿಂದ ಜ್ಞಾಪಕಶಕ್ತಿ ಹೆಚ್ಚಿಸಬಹುದು. ಜೊತೆಗೆ ಗುರಿಯತ್ತ ಗಮನಹರಿಸಬಹುದು ಎಂದು ಅನೇಕ ಅಧ್ಯಯನಗಳು ತೋರಿಸುತ್ತವೆ. ಇದು ಆತಂಕವನ್ನು ಹೋಗಲಾಡಿಸುತ್ತದೆ. ಮಾನಸಿಕ ಶಾಂತಿಯನ್ನು ನೀಡುತ್ತದೆ. ಮತ್ತು ಏಕಾಗ್ರತೆ ಹೆಚ್ಚಿಸುತ್ತದೆ. ಅದಕ್ಕಾಗಿಯೇ ಉದ್ಯಾನಗಳಲ್ಲಿ ಸ್ವಲ್ಪ ಸಮಯ ಕಳೆಯಲು ತಜ್ಞರು ಸಲಹೆ ನೀಡುತ್ತಾರೆ. ಈ ರೀತಿ ಮಾಡುವುದರಿಂದ ಮೆದುಳು ಚುರುಕಾಗಿ ಕೆಲಸ ಮಾಡುತ್ತದೆ. ಮತ್ತು ಜಾಗೃತವಾಗಿರುತ್ತದೆ ಎಂದು ತಜ್ಞರು ತಿಳಿಸುತ್ತಾರೆ.

ರೋಗನಿರೋಧಕ ಶಕ್ತಿ ವೃದ್ಧಿ: ಉದ್ಯಾನಗಳಲ್ಲಿ ಸಮಯ ಕಳೆಯುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ವಿಶೇಷವಾಗಿ ದೇಹವನ್ನು ರಕ್ಷಿಸುವ ಬಿಳಿ ರಕ್ತ ಕಣಗಳು ಹೆಚ್ಚಾಗುತ್ತವೆ. ಅಲ್ಲದೇ ಸೂರ್ಯನ ಬಿಸಿಲಿಗೆ ವಿಟಮಿನ್ ಡಿ ಒದಗಿಸಿ ದೇಹ ರಕ್ಷಿಸುತ್ತದೆ ಎಂದು ಸಂಶೋಧಕರು ಮಾಹಿತಿ ನೀಡುತ್ತಾರೆ.

ದೈಹಿಕ ಕ್ಷಮತೆ ಹೆಚ್ಚುತ್ತೆ: ಉದ್ಯಾನದಲ್ಲಿ ವಾಕಿಂಗ್, ಜಾಗಿಂಗ್​ನಂತಹ ದಿನನಿತ್ಯದ ವ್ಯಾಯಾಮ ಮಾಡುವುದರಿಂದ ಹಲವು ಪ್ರಯೋಜನಗಳಿವೆ. ಹೀಗೆ ಮಾಡುವುದರಿಂದ ಬಾಡಿ ಬ್ಯಾಲೆನ್ಸಿಂಗ್ ಜೊತೆಗೆ ಸ್ನಾಯುಗಳು ಬಲಗೊಳ್ಳುತ್ತವೆ. ಹೃದಯ ಮತ್ತು ಮಧುಮೇಹದಂತಹ ದೀರ್ಘಕಾಲದ ಕಾಯಿಲೆಗಳು ಬರುವ ಸಾಧ್ಯತೆಗಳು ಕಡಿಮೆಯಾಗುತ್ತವೆ ಎಂದು ತಜ್ಞರು ಹೇಳುತ್ತಾರೆ.

ಉತ್ತಮ, ಆರಾಮದಾಯಕ ನಿದ್ದೆ ಬರುತ್ತೆ: ಉದ್ಯಾನಗಳಲ್ಲಿ ಸಮಯ ಕಳೆಯುವುದರಿಂದ ರಾತ್ರಿಯಲ್ಲಿ ಚೆನ್ನಾಗಿ ನಿದ್ರೆ ಮಾಡಬಹುದು. ವಿಶೇಷವಾಗಿ ಬೆಳಿಗ್ಗೆ ಮತ್ತು ಸಂಜೆ ಸೂರ್ಯನ ಕಿರಣಗಳಿಂದ ಅನೇಕ ಪ್ರಯೋಜನಗಳಿವೆ. ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದರಿಂದ ಮೆಲಟೋನಿನ್ ಎಂಬ ಹಾರ್ಮೋನ್ ಉತ್ಪಾದನೆ ಹೆಚ್ಚಾಗುತ್ತದೆ. ಮತ್ತು ರಾತ್ರಿಯಲ್ಲಿ ನೀವು ಆರಾಮವಾಗಿ ಮಲಗಲು ಸಹಾಯ ಮಾಡುತ್ತದೆ ಎಂದು ಸಂಶೋದಕರು ತಿಳಿಸುತ್ತಾರೆ.

ಒಂಟಿತನ ಹೋಗಲಾಡಿಸುತ್ತೆ: ಪಾರ್ಕ್‌ಗಳಲ್ಲಿ ಸುತ್ತಾಡುವುದರಿಂದ ಹೊಸ ಸ್ನೇಹಿತರನ್ನು ಪಡೆಯಬಹುದು ಹಾಗೂ ಸಾಮಾಜಿಕ ಸಂಪರ್ಕಗಳನ್ನು ಹೆಚ್ಚಿಸಬಹುದು. ಜೊತೆಗೆ ಮಾನಸಿಕ ಆರೋಗ್ಯಕ್ಕೆ ಅವು ತುಂಬಾ ಉಪಯುಕ್ತವಾಗಿವೆ. ವಿಶೇಷವಾಗಿ ಒಂಟಿತನದಿಂದ ಹೊರಗೆ ತರಲು ಸಾಧ್ಯವಾಗುತ್ತದೆ ಎನ್ನುತ್ತಾರೆ.

ರಕ್ತದೊತ್ತಡ ನಿಯಂತ್ರಿಸುತ್ತೆ: ನಿಸರ್ಗದ ಮಧ್ಯೆ ನಡೆದಾಡುವುದರಿಂದ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಬಹುದು. ಹೀಗೆ ಮಾಡುವುದರಿಂದ ರಕ್ತದೊತ್ತಡ ನಿಯಂತ್ರಣವಾಗುವುದಲ್ಲದೆ ಅಧಿಕ ರಕ್ತದೊತ್ತಡ ಮತ್ತು ಹೃದಯ ಸಂಬಂಧಿ ಸಮಸ್ಯೆಗಳನ್ನು ತಡೆಯುತ್ತದೆ ಎಂದು ಸಂಶೋಧನೆ ವಿವರಿಸುತ್ತದೆ.

ಸೃಜನಶೀಲತೆ ಹೆಚ್ಚುತ್ತೆ: ನೀವು ಒತ್ತಡಕ್ಕೊಳಗಾಗಿದ್ದೀರಾ? ಕೆಲಸಗಳನ್ನು ಹೇಗೆ ಮಾಡಬೇಕೆಂದು ಲೆಕ್ಕಾಚಾರ ಮಾಡಲು ಹೆಣಗಾಡುತ್ತಿದೆಯೇ? ವಿಶ್ರಾಂತಿ ಪಡೆಯಲು ಉದ್ಯಾನಕ್ಕೆ ಹೋಗಿ ವಿಶ್ರಾಂತಿ ಪಡೆದರೆ ಸಾಕು ಎಂದು ತಜ್ಞರು ಸಲಹೆ ನೀಡುತ್ತಾರೆ. ಹೀಗೆ ಮಾಡುವುದರಿಂದ ಮನಸ್ಸು ಉಲ್ಲಾಸಗೊಳ್ಳುತ್ತದೆ. ಬಾಡಿ ರೀಚಾರ್ಜ್ ಆಗುತ್ತದೆ ಮತ್ತು ಹೆಚ್ಚು ಕ್ರಿಯಾಶೀಲತೆಯಿಂದ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದು ತಜ್ಞರು ತಿಳಿಸುತ್ತಾರೆ.

ಸಕಾರಾತ್ಮಕತೆ ಹೆಚ್ಚುತ್ತೆ: ಹಸಿರು ಮರಗಳಿಂದ ಸುತ್ತುವರಿದ ಪ್ರಕೃತಿಯನ್ನು ಆನಂದಿಸಲು ಸಮಯ ಕಳೆಯುವುದು ನಮ್ಮಲ್ಲಿ ಸಕಾರಾತ್ಮಕತೆ ಹೆಚ್ಚುತ್ತದೆ. ಇದರಿಂದ ಮಾನಸಿಕ ಆರೋಗ್ಯದ ಜತೆಗೆ ಭಾವನೆಗಳೂ ನಿಯಂತ್ರಣದಲ್ಲಿರುತ್ತವೆ.

ದೀರ್ಘಕಾಲದ ಕಾಯಿಲೆಗಳು ಕಡಿಮೆ: ಉದ್ಯಾನಗಳು ಮತ್ತು ಹಸಿರು ಸ್ಥಳಗಳಲ್ಲಿ ಹೆಚ್ಚು ಸಮಯ ಕಳೆಯುವವರಿಗೆ ದೀರ್ಘಕಾಲದ ಕಾಯಿಲೆಗಳು ಬರುವ ಸಾಧ್ಯತೆ ಕಡಿಮೆ ಇರುತ್ತದೆ ಎಂದು ತಜ್ಞರು ಹೇಳುತ್ತಾರೆ. ಉದ್ಯಾನಗಳಲ್ಲಿ ಒಂದು ಗಂಟೆ ಸಾಮಾನ್ಯ ವ್ಯಾಯಾಮ ಮಾಡುವವರಿಗೆ ಮಧುಮೇಹ ಮತ್ತು ಹೃದಯದ ಸಮಸ್ಯೆಗಳು ಬರುವುದಿಲ್ಲ. ಇದರಿಂದ ಆರೋಗ್ಯ ಸುಧಾರಿಸುತ್ತದೆ ಹಾಗೂ ಅವರ ಜೀವಿತಾವಧಿ ಕೂಡ ಹೆಚ್ಚುತ್ತದೆ ಎಂದು ತಜ್ಞರು ಮಾಹಿತಿ ನೀಡುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ಈ ವೆಬ್​ಸೈಟ್​ನ್ನು ವೀಕ್ಷಿಸಬಹುದು:

https://www.hsph.harvard.edu/news/hsph-in-the-news/spend-time-outdoors-itll-improve-your-health-say-experts/

ಓದುಗರಿಗೆ ಮುಖ್ಯ ಸೂಚನೆ: ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಹಾಗೂ ಸಲಹೆಗಳು ನಿಮ್ಮ ತಿಳುವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನ, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ನೀಡಿದ್ದೇವೆ.

ಇವುಗಳನ್ನು ಓದಿ:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.