ETV Bharat / health

ಬೆಳಗ್ಗೆ ಬಿಸಿ ನೀರು ಕುಡಿದರೆ ಹೃದಯ ಸಂಬಂಧಿ ಕಾಯಿಲೆ ದೂರ: ಇನ್ನಷ್ಟು ಲಾಭಗಳು ನಿಮಗೆ ತಿಳಿದರೆ ಅಚ್ಚರಿ ಪಡುತ್ತೀರಿ! - BENEFITS OF HOT WATER DRINKING

Drinking Hot Water at Morning Benefits: ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರು ಕುಡಿದರೆ ತ್ವಚೆಯ ಮೇಲಿನ ಸುಕ್ಕು ಮಾಯವಾಗುತ್ತದೆ. ಗಂಟಲು ನೋವು, ಸೈನಸ್ ಸಮಸ್ಯೆಗಳಿಗೂ ಪರಿಹಾರ ಲಭಿಸುತ್ತದೆ ಎಂದು ತಜ್ಞರು ತಿಳಿಸುತ್ತಾರೆ.

DRINKING HOT WATER MORNING BENEFITS  DRINKING HOT WATER BENEFITS  BENEFITS OF HOT WATER DRINKING  BENEFITS OF HOT WATER INTAKE
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Health Team

Published : Nov 23, 2024, 3:07 PM IST

Drinking Hot Water at Morning Benefits: ನಮ್ಮಲ್ಲಿ ಹೆಚ್ಚಿನವರು ಹಗಲಿನಲ್ಲಿ ಸರಿಯಾಗಿ ನೀರು ಕುಡಿಯುವುದಿಲ್ಲ. ಬೆಳಗ್ಗೆ ಉಗುರು ಬೆಚ್ಚಗಿನ ನೀರು ಕುಡಿಯುವುದರಿಂದ ದೇಹದಲ್ಲಿ ಹಲವು ಬದಲಾವಣೆಗಳು ಆಗುತ್ತವೆ ಎನ್ನುತ್ತಾರೆ ಆರೋಗ್ಯ ತಜ್ಞರು. ಬೆಳಗ್ಗೆ ಎದ್ದ ನಂತರ ಬಿಸಿ ನೀರು ಕುಡಿಯುವುದರಿಂದ ಆಗುವ ಲಾಭಗಳು ತಿಳಿದರೆ ಶಾಕ್ ಆಗುತ್ತೀರಿ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರು ಕುಡಿದರೆ ಯಾವೆಲ್ಲಾ ಪ್ರಯೋಜನಗಳು ಲಭಿಸುತ್ತವೆ ಎಂಬುದನ್ನು ತಿಳಿಯೋಣ.

ಖಾಲಿ ಹೊಟ್ಟೆಯಲ್ಲಿ ಬಿಸಿನೀರನ್ನು ಸೇವಿಸುವುದರಿಂದ ರಕ್ತನಾಳಗಳು ಕ್ರಿಯಾಶೀಲವಾಗುತ್ತವೆ. ಜೊತೆಗೆ ದೇಹದಾದ್ಯಂತ ರಕ್ತ ಪೂರೈಕೆಯನ್ನು ವೇಗಗೊಳಿಸುತ್ತದೆ. ಪರಿಣಾಮವಾಗಿ ವಿವಿಧ ಘಟಕಗಳ ಕಾರ್ಯಕ್ಷಮತೆ ಸುಧಾರಿಸುತ್ತದೆ ಎಂದು ತಜ್ಞರು ತಿಳಿಸುತ್ತಾರೆ. ಯುರೋಪಿಯನ್ ಜರ್ನಲ್ ಆಫ್ ಅಪ್ಲೈಡ್ ಫಿಸಿಯಾಲಜಿಯಲ್ಲಿ ಪ್ರಕಟವಾದ ಅಧ್ಯಯನವು ಹೃದ್ರೋಗ ತಡೆಗಟ್ಟುವಲ್ಲಿ ವಿಶೇಷವಾಗಿ ಸಹಾಯಕವಾಗಿದೆ ಎಂದು ತೋರಿಸಿದೆ. ಜಪಾನ್ ಮತ್ತು ಅಮೆರಿಕದ ವೈದ್ಯರು ಜುನ್ ಸುಗವಾರಾ ಮತ್ತು ತ್ಸುಬಾಸಾ ಟೊಮೊಟೊ (Jun Sugawara and Tsubasa Tomoto) ಅವರು, Effects of Hot Water Immersion on Cardiovascular Function ಎಂಬ ವಿಷಯದ ಸಂಶೋಧನೆಯಲ್ಲಿ ಭಾಗವಹಿಸಿದ್ದರು.

ಗಂಟಲು ನೋವು: ಚಳಿಗಾಲದಲ್ಲಿ ಗಂಟಲು ನೋವು ಸಾಮಾನ್ಯ ಸಮಸ್ಯೆಯಾಗಿದೆ. ಜೊತೆಗೆ ಶೀತದಿಂದ ಕಫ ಮತ್ತು ಕೆಮ್ಮು ತೊಂದರೆ ಆಗುತ್ತದೆ. ಇಂತಹ ಎಲ್ಲ ಸಮಸ್ಯೆಗಳಿಗೆ ಬಿಸಿನೀರು ಉತ್ತಮ ಮಾರ್ಗ ಎನ್ನುತ್ತಾರೆ ತಜ್ಞರು.

ಜೀರ್ಣಾಂಗ ವ್ಯವಸ್ಥೆ ಸುಧಾರಿಸುತ್ತೆ: ಜೀರ್ಣಾಂಗ ವ್ಯವಸ್ಥೆ ಸ್ವಚ್ಛಗೊಳಿಸಲು ಬೆಚ್ಚಗಿನ ನೀರು ಸಹಾಯ ಮಾಡುತ್ತದೆ ಎಂದು ತಜ್ಞರು ವಿವರಿಸುತ್ತಾರೆ. ತಣ್ಣೀರಿಗಿಂತ ಬಿಸಿನೀರು ಆಹಾರ ಬೇಗ ಜೀರ್ಣವಾಗಲು ಸಹಕಾರಿಯಾಗಿದೆ. ಬಿಸಿನೀರು ದೇಹದ ಉಷ್ಣತೆ ಹೆಚ್ಚಿಸುತ್ತದೆ. ಇದರ ಪರಿಣಾಮವಾಗಿ ಜೀರ್ಣಕ್ರಿಯೆಯ ಪ್ರಕ್ರಿಯೆಯು ಆರೋಗ್ಯಕರವಾಗಿರುತ್ತದೆ. ಹೆಚ್ಚಿನ ಕ್ಯಾಲೋರಿಗಳು ಬರ್ನ್​ ಆಗುತ್ತದೆ. ಇದಲ್ಲದೆ, ಇದು ಹೊಟ್ಟೆ ತುಂಬಿದ ಭಾವನೆಯನ್ನು ಉಂಟುಮಾಡುತ್ತದೆ. ಜೊತೆಗೆ ತೆಗೆದುಕೊಳ್ಳುವ ಆಹಾರದ ಪ್ರಮಾಣವನ್ನು ಕಡಿಮೆ ಮಾಡುತ್ತದೆ ಎಂದು ತಜ್ಞರು ತಿಳಿಸುತ್ತಾರೆ.

ಸೈನಸ್ ಸಮಸ್ಯೆಗೆ ಪರಿಹಾರ: ಕೆಲವರಿಗೆ ಬೆಳಗ್ಗೆ ಮೂಗು ಕಟ್ಟಿಕೊಂಡಿರುತ್ತದೆ. ಉಸಿರಾಟ ಸರಿಯಾಗಿ ಆಗುತ್ತಿಲ್ಲ. ಅಂತಹವರು ಬಿಸಿನೀರು ಸೇವಿಸಿದರೆ ಆ ಸಮಸ್ಯೆ ಕಡಿಮೆಯಾಗುತ್ತದೆ. ಇದರಿಂದ ಸೈನಸ್ ಸಮಸ್ಯೆ ನಿಯಂತ್ರಣಕ್ಕೆ ಬರುತ್ತದೆ ಎನ್ನಲಾಗಿದೆ ಎಂದು ವೈದ್ಯರು ಹೇಳುತ್ತಾರೆ.

ನರಮಂಡಲದ ಮೇಲೆ ಪರಿಣಾಮ: ಬೆಚ್ಚಗಿನ ನೀರು ನರಮಂಡಲದ ಮೇಲೆ ಪರಿಣಾಮ ಬೀರುತ್ತದೆ. ಇದು ನರಗಳ ಕೆಲಸವನ್ನು ವೇಗಗೊಳಿಸುತ್ತದೆ ಮತ್ತು ಒತ್ತಡವನ್ನು ಉಂಟುಮಾಡುವ ಕಾರ್ಟಿಸೋಲ್ ಹಾರ್ಮೋನ್ ಅನ್ನು ನಿಯಂತ್ರಣಕ್ಕೆ ತರುತ್ತದೆ ಎಂದು ಎಂದು ತಜ್ಞರು ವಿವರಿಸುತ್ತಾರೆ.

ತ್ವಚೆಯಲ್ಲಿ ಸುಕ್ಕುಗಳು: ಬೆಳಗ್ಗೆ ಬಿಸಿ ನೀರಿನಿಂದ ಕುಡಿಯುವುದರಿಂದ ದೇಹದಲ್ಲಿರುವ ಕಲ್ಮಶಗಳು ಹೊರಹೋಗುತ್ತವೆ. ಇದನ್ನು ಡಿಟಾಕ್ಸಿಂಗ್ ಎಂದು ಕರೆಯಲಾಗುತ್ತದೆ. ದೇಹದಲ್ಲಿರುವ ಕಲ್ಮಶಗಳನ್ನು ಹೊರಹಾಕಿದಾಗ ತ್ವಚೆ ಫ್ರೆಶ್ ಆಗುತ್ತದೆ. ಇದು ಚರ್ಮದ ಸುಕ್ಕುಗಳನ್ನು ಕಡಿಮೆ ಮಾಡುತ್ತದೆ. ಬಿಸಿನೀರು ದೇಹವನ್ನು ಹೈಡ್ರೇಟ್ ಮಾಡಲು ಸಹಾಯ ಮಾಡುತ್ತದೆ ಎಂದು ತಜ್ಞರು ತಿಳಿಸುತ್ತಾರೆ.

ಓದುಗರಿಗೆ ವಿಶೇಷ ಸೂಚನೆ: ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಹಾಗೂ ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನ, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ನೀಡಿದ್ದೇವೆ.

ಇವುಗಳನ್ನೂ ಓದಿ:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.