ETV Bharat / health

ಯಾವ ವಯಸ್ಸಿನವರು ದಿನಕ್ಕೆ ಎಷ್ಟು ಸಮಯ ವಾಕಿಂಗ್​ ಮಾಡಿದರೆ ಉತ್ತಮ?: ನಡಿಗೆಯಿಂದ ಲಭಿಸುತ್ತೆ ಅನೇಕ ಲಾಭಗಳು - HOW MUCH TIME WALKING PER DAY

How Much Time Walking per Day: ಯಾವ ವಯಸ್ಸಿನವರು ದಿನಕ್ಕೆ ಎಷ್ಟು ಹೊತ್ತು ವಾಕಿಂಗ್ ಮಾಡಿದರೆ ಉತ್ತಮ? ನಡಿಗೆಯಿಂದ ದೊರೆಯುವ ಲಾಭಗಳ ಬಗ್ಗೆ ತಜ್ಞರು ನೀಡಿರುವ ಮಾಹಿತಿ ಇಲ್ಲಿದೆ ನೋಡಿ.

HOW MUCH TIME WALKING PER DAY  HOW MANY HOURS WALKING A DAY  AS PER AGE HOW MUCH WALK IN A DAY  WALKING AS PER YOUR AGE
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Health Team

Published : Nov 22, 2024, 7:19 PM IST

Updated : Nov 23, 2024, 12:21 PM IST

How Much Time Walking per Day: ವಾಕಿಂಗ್ ನಾವು ಮಾಡಬಹುದಾದ ವ್ಯಾಯಾಮದಲ್ಲಿ ಸರಳ ಹಾಗೂ ಅತ್ಯಂತ ಪರಿಣಾಮಕಾರಿಯಾಗಿದೆ. ಇದರಿಂದ ಹೃದಯದ ಆರೋಗ್ಯದಿಂದ ಹಿಡಿದು ಮಾನಸಿಕ ನೆಮ್ಮದಿಯವರೆಗೆ ಅನೇಕ ಪ್ರಯೋಜನಗಳಿವೆ. ಹಾಗೆಯೇ ವಾಕಿಂಗ್​ ಮಾಡುವುದು ತುಂಬಾ ಸುಲಭ. ಎಲ್ಲ ವಯಸ್ಸಿನ ಜನರು ಇದನ್ನು ಬಹಳ ಸುಲಭವಾಗಿ ಮಾಡಬಹುದು. ನಿತ್ಯದ ನಡಿಗೆ ದೀರ್ಘಾವಧಿಯಲ್ಲಿ ನಿಮ್ಮನ್ನು ಆರೋಗ್ಯವಾಗಿರಿಸುತ್ತದೆ ಎಂದು ತಜ್ಞರು ಹೇಳುತ್ತಾರೆ. ಆದರೆ, ಪ್ರತಿಯೊಬ್ಬ ವ್ಯಕ್ತಿಯ ವಯಸ್ಸಿನ ಆಧಾರದ ಮೇಲೆ ವಾಕಿಂಗ್‌ಗೆ ಇಂತಿಷ್ಟು ಸಮಯ ಮೀಸಲು ಇಡಬೇಕಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.

ಪ್ರತಿಯೊಬ್ಬರ ಅವರ ದೈಹಿಕ ಸ್ಥಿತಿಗತಿ ಹಾಗೂ ಸಾಮರ್ಥ್ಯಗಳ ಆಧಾರದ ಮೇಲೆ ಏಷ್ಟು ಸಮಯ ವಾಕಿಂಗ್​ ಮಾಡಬೇಕು ಎಂಬುದನ್ನು ನಿರ್ಧರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಅಮೆರಿಕದ ಸರ್ಟಿಫೈಡ್ ಕೋಚ್ ಹಾಗೂ ಟ್ರೈನರ್ ಬೆಥನಿ ರುಟ್ಲೆಜ್ ಅವರು ಯಾವ ವಯಸ್ಸಿನವರು ಎಷ್ಟು ಹೊತ್ತು ವಾಕಿಂಗ್​ ಮಾಡಬೇಕು ಎಂಬುದನ್ನು ಸಂಪೂರ್ಣವಾಗಿ ವಿವರಿಸಿದ್ದಾರೆ

ಯಾರು ಎಷ್ಟು ಹೊತ್ತು ವಾಕಿಂಗ್​ ಮಾಡಬೇಕು?:

18 ರಿಂದ 30 ವಯಸ್ಸಿನವರು: ಯುವಕರು ಸಾಮಾನ್ಯವಾಗಿ ತಮ್ಮ ಸ್ನಾಯುವಿನ ಬಲದಿಂದಾಗಿ ತುಂಬಾ ಶಕ್ತಿಯುತವಾಗಿರುತ್ತಾರೆ. ಇದರ ಪರಿಣಾಮವಾಗಿ ದಿನಕ್ಕೆ 30ರಿಂದ 60 ನಿಮಿಷಗಳ ಕಾಲ ನೀವು ಸುಲಭವಾಗಿ ಚುರುಕಾಗಿ ನಡೆಯಬಹುದು. ಹೀಗೆ ಮಾಡುವುದರಿಂದ ದೇಹದ ತೂಕ ಹತೋಟಿಯಲ್ಲಿರುತ್ತದೆ. ಜೊತೆಗೆ ಒತ್ತಡ ಕಡಿಮೆಯಾಗಿ ಹೃದಯ ಸಂಬಂಧಿ ಕಾಯಿಲೆಗಳು ಬರುವ ಸಾಧ್ಯತೆಗಳು ಕೂಡ ಕಡಿಮೆಯಾಗುತ್ತವೆ. ವಿಶೇಷವಾಗಿ ಕುಳಿತು ಕೆಲಸ ಮಾಡುವವರು ಆಗಾಗ ಎದ್ದು ಓಡಾಡಲು ಎಂದು ತಜ್ಞರು ನೀಡುತ್ತಾರೆ.

31ರಿಂದ 50 ವಯಸ್ಸಿನವರು: ಈ ವಯಸ್ಸಿನವರು 30ರಿಂದ 45 ನಿಮಿಷಗಳ ಕಾಲ ನಡೆಯಬೇಕು. ಇದರಿಂದ ತೂಕ ನಿಯಂತ್ರಣದಲ್ಲಿರುತ್ತದೆ. ಮತ್ತು ಸ್ನಾಯುಗಳು ಬಲಗೊಳ್ಳುತ್ತವೆ. ಇದು ದೀರ್ಘಕಾಲದ ಕಾಯಿಲೆಗಳಿಂದ ರಕ್ಷಿಸುವುದಲ್ಲದೇ ಮಾನಸಿಕವಾಗಿಯೂ ಶಾಂತವಾಗಿರುವಂತೆ ಮಾಡುತ್ತದೆ. ಊಟದ ವಿರಾಮದ ಸಮಯದಲ್ಲಿ ಮತ್ತು ನಿಮಗೆ ಕೆಲಸದಲ್ಲಿ ಸಮಯವಿದ್ದಾಗ ಸ್ವಲ್ಪ ನಡೆಯಬೇಕು ಎಂದು ಸಂಶೋಧಕರು ತಿಳಿಸುತ್ತಾರೆ.

51ರಿಂದ 65 ವಯಸ್ಸಿನವರು: ಈ ವಯಸ್ಸಿನರು 30ರಿಂದ 40 ನಿಮಿಷಗಳು ವಾಕಿಂಗ್​ ಮಾಡಿದರೆ ಸಾಕಾಗುತ್ತದೆ. ದೇಹದಲ್ಲಿನ ಬದಲಾವಣೆಗಳಿಂದಾಗಿ, ಸ್ನಾಯುಗಳು ಮತ್ತು ಜೀರ್ಣಾಂಗ ವ್ಯವಸ್ಥೆಯ ಕಾರ್ಯವು ಕಡಿಮೆಯಾಗುತ್ತಿದೆ. ಇದರಿಂದ ವ್ಯಾಯಾಮ ಮಾಡಲು ಸೂಚಿಸಲಾಗುತ್ತದೆ. ಇಂತಹವರು ವಾಕಿಂಗ್ ಮಾಡುವುದರಿಂದ ಮೂಳೆಗಳು ಹಾಗೂ ಕೀಲುಗಳು ಆರೋಗ್ಯಕರವಾಗಿರುತ್ತವೆ. ಅಗತ್ಯ ಬಿದ್ದರೆ ಕೈ ಕೋಲಿನಂತಹ ವಸ್ತುಗಳ ಸಹಾಯದಿಂದ ನಡೆಯಬೇಕಾಗುತ್ತದೆ. ನೋವು ತಪ್ಪಿಸಲು ವಾಕಿಂಗ್ ಸಮಯದಲ್ಲಿ ಪೂರ್ವ- ವಾಕಿಂಗ್ ವಾರ್ಮ್- ಅಪ್ ಮತ್ತು ನಂತರದ ವಾಕಿಂಗ್ ಕೂಲ್- ಡೌನ್ ಚಟುವಟಿಕೆಗಳನ್ನು ಮಾಡಬೇಕು ಎಂದು ತಜ್ಞರು ವಿವರಿಸುತ್ತಾರೆ.

66 ರಿಂದ 75 ವಯಸ್ಸಿನವರು: ಇವರು ನಿತ್ಯ 20ರಿಂದ 30 ನಿಮಿಷಗಳ ಕಾಲ ನಡೆಯುವುದರಿಂದ ವಯಸ್ಸಾದವರಿಗೆ ಅನೇಕ ಪ್ರಯೋಜನಗಳಿವೆ. ಈ ವಯಸ್ಸಿನಲ್ಲಿ ವಾಕಿಂಗ್ ಮಾಡುವುದರಿಂದ ಸಮತೋಲನ ಕಾಯ್ದುಕೊಳ್ಳಬಹುದು. ಜೊತೆಗೆ ನೋವನ್ನು ತಪ್ಪಿಸಬಹುದು. ಇದು ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಯುತ್ತದೆ. ವಯಸ್ಸಾದವರಲ್ಲಿ ವಾಕಿಂಗ್ ಸ್ಮರಣಶಕ್ತಿ ಸುಧಾರಿಸುತ್ತದೆ ಎಂದು ಹಲವಾರು ಅಧ್ಯಯನಗಳು ತೋರಿಸಿವೆ. ಅಲ್ಲದೇ, ದೀರ್ಘಕಾಲದ ಕಾಯಿಲೆಗಳು ಹಾಗೂ ಕೀಲು ನೋವು ಹೊಂದಿರುವ ಜನರು ತಲಾ 15 ನಿಮಿಷಗಳ ಎರಡು ಅವಧಿಗಳಲ್ಲಿ ನಡೆಯಲು ಸಂಶೋಧಕರು ಸಲಹೆ ನೀಡುತ್ತಾರೆ.

75 ವರ್ಷಕ್ಕಿಂತ ಮೇಲ್ಪಟ್ಟವರು: 75 ವರ್ಷ ಮೇಲ್ಪಟ್ಟ ಹಿರಿಯರು 15ರಿಂದ 20 ನಿಮಿಷಗಳ ಕಾಲ ನಡೆದರೆ ಕೀಲುಗಳು ಮತ್ತು ಸ್ನಾಯುಗಳು ಆರೋಗ್ಯಕರವಾಗಿರುತ್ತವೆ. ವಾಕಿಂಗ್​ ಮಾಡುವುದರಿಂದ ಸಮತೋಲನವು ಸಂಭವಿಸುತ್ತದೆ. ಮತ್ತು ಆಯತಪ್ಪಿ ಕೆಳಗೆ ಬೀಳುವುದಿಲ್ಲ. ಜೊತೆಗೆ ಇದರಿಂದ ಇನ್ನೂ ಹಲವು ಲಾಭಗಳಾಗಲಿವೆ ಎಂದು ತಜ್ಞರು ಹೇಳುತ್ತಾರೆ.

ನಡೆಯುವಾಗ ಸಮತಟ್ಟಾದ ಮತ್ತು ಸುರಕ್ಷಿತ ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳಿ. ಇದರೊಂದಿಗೆ, ನಡೆಯಲು ಶೂಗಳನ್ನು ಧರಿಸಲು ಮತ್ತು ಸಾಕಷ್ಟು ಎಚ್ಚರಿಕೆಯನ್ನು ವಹಿಸಲು ಸಲಹೆ ವಹಿಸಬೇಕಾಗುತ್ತದೆ. ನೀವು 20ರಿಂದ 60 ನಿಮಿಷಗಳ ಕಾಲ ನಡೆಯಬೇಕು ಎಂದು ಸಂಶೋಧನೆ ಹೇಳುತ್ತದೆ. ಆದರೆ, ನೀವು ಎಷ್ಟು ಸಮಯ ನಡೆಯಬೇಕು ಎಂಬುದು ನಿಮ್ಮ ದೇಹದ ಸ್ಥಿತಿಯ ಮೇಲೆ ಅವಲಂಬಿತವಾಗಿರುತ್ತದೆ. ನಡೆಯುವಾಗ ನೀವು ತೊಂದರೆಗಳನ್ನು ಎದುರಿಸಿದರೆ, ನಡಿಗೆಯಲ್ಲಿ ಬದಲಾವಣೆಗಳನ್ನು ಮಾಡಲು ಅಥವಾ ವಿಶ್ರಾಂತಿ ತೆಗೆದುಕೊಳ್ಳಬೇಕು ಎಂದು ತಜ್ಞರು ತಿಳಿಸುತ್ತಾರೆ.

ಓದುಗರಿಗೆ ಸೂಚನೆ: ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಹಾಗೂ ಸಲಹೆಗಳು ನಿಮ್ಮ ತಿಳುವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನ, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ನೀಡಿದ್ದೇವೆ.

ಇವುಗಳನ್ನೂ ಓದಿ:

ಈ ರೂಲ್ಸ್ ಪ್ರಕಾರ ವಾಕಿಂಗ್ ಮಾಡಿದರೆ ಹೃದಯದ ಸಮಸ್ಯೆಗಳು ದೂರ: ಸಂಶೋಧನೆ

ಬೆಳಗಿನ ವಾಕಿಂಗ್​ ವೇಳೆ ಈ ತಪ್ಪುಗಳನ್ನು ಮಾಡಿದ್ರೆ ಉಪಯೋಗಕ್ಕಿಂತ ಅಪಾಯವೇ ಹೆಚ್ಚು!

ಪ್ರತಿನಿತ್ಯ ವಾಕ್​ ಮಾಡುವುದರಿಂದ ಏನ್‌ ಪ್ರಯೋಜನ ಅನ್ಬೇಡಿ! 5 ಅತ್ಯಂತ ಪ್ರಮುಖ ಸಂಗತಿಗಳು ನಿಮಗೆ ಗೊತ್ತಾ?

ವಾಕಿಂಗ್​ನಿಂದ ಹಲವು ಪ್ರಯೋಜನ: ಉತ್ತಮ ಆರೋಗ್ಯಕ್ಕಾಗಿ ಪ್ರತಿದಿನ ಎಷ್ಟು ಸ್ಟೇಪ್ಸ್​ ನಡೆಯಬೇಕು ಗೊತ್ತಾ?

Last Updated : Nov 23, 2024, 12:21 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.