ನಾವು ಮನೆ ಸ್ವಚ್ಛವಾಗಿಟ್ಟುಕೊಳ್ಳುವಂತೆ ಶೌಚಾಲಯಗಳನ್ನು ಸ್ವಚ್ಛವಾಗಿಡಬೇಕು. ಇಲ್ಲವಾದರೆ ನಾನಾ ಸೂಕ್ಷ್ಮಾಣುಗಳು ಮತ್ತು ಬ್ಯಾಕ್ಟೀರಿಯಾಗಳು, ಟಾಯ್ಲೆಟ್ ರೂಂ ಸೇರಿ ಕೊಳೆಯ ರಾಶಿಯಾಗಿ ಮಾರ್ಪಡುತ್ತದೆ. ಇದರಿಂದ ಕಮೋಡ್ ನೋಡಲು ಅಸಹ್ಯವಾಗುತ್ತದೆ. ಅಲ್ಲದೇ ಟಾಯ್ಲೆಟ್ ಪಾಟ್‌ನಲ್ಲಿ ರೂಪುಗೊಂಡ ಹಳದಿ ಕಲೆಗಳು ಹೋಗುವುದೇ ಇಲ್ಲ. ಇದನ್ನು ಸ್ವಚ್ಛಗೊಳಿಸಲು ಹಲವು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಆದರೆ ಈ ಸಲಹೆಗಳನ್ನು ಅನುಸರಿಸಿದರೆ, ನಿಮ್ಮ ಟಾಯ್ಲೆಟ್ ಬಾಸ್ಕೆಟ್ ಅನ್ನು ಲಕ ಲಕ ಹೊಳೆಯುವಂತೆ ಮಾಡಬಹುದು.
ಟಾಯ್ಲೆಟ್ ಪಾಟ್‌ನಲ್ಲಿ ರೂಪುಗೊಂಡ ಹಳದಿ ಕಲೆಗಳನ್ನು 'ಲೈಮ್‌ಸ್ಕೇಲ್' ಎಂದು ಕರೆಯಲಾಗುತ್ತದೆ. ಆದಾಗ್ಯೂ ಈ ಕಲೆಗಳು ಅಸಹ್ಯವನ್ನುಂಟು ಮಾಡುತ್ತದೆ. ಅಷ್ಟೇ ಏಕೆ ದೀರ್ಘಾವಧಿಯ ಕೊಳಾಯಿ ಸಮಸ್ಯೆಗಳಿಗೂ ಇದು ಕಾರಣವಾಗಬಹುದು. ಆದ್ದರಿಂದ, ಅವುಗಳನ್ನು ತಕ್ಷಣವೇ ತೊಡೆದುಹಾಕಬೇಕಾಗಿರುವುದು ಬಹಳ ಮುಖ್ಯ ಅಂತಾರೆ ಆರೋಗ್ಯ ತಜ್ಞರು. ಇದಕ್ಕಾಗಿ ನಾವು ಸರಿಯಾದ ಶುಚಿಗೊಳಿಸುವ ಉತ್ಪನ್ನಗಳನ್ನು ಆಯ್ಕೆ ಮಾಡಬೇಕಾಗುತ್ತದೆ. ನಿತ್ಯದ ಶುಚಿಗೊಳಿಸುವಿಕೆಯ ಹೊರತಾಗಿಯೂ ಈ ಕಲೆಗಳು ಉಂಟಾಗಲು ಕಾರಣ ಎಂದರೆ ನಾವು ಬಳಸುವ ನೀರಿನಲ್ಲಿರುವ ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್. ಗಡಸು ನೀರಿನ ಬಳಕೆಯಿಂದಾಗಿ ಈ ಖನಿಜಗಳು ಸಂಗ್ರಹವಾಗುತ್ತವೆ ಮತ್ತು ಹಳದಿ, ಕೆಂಪು, ಕಂದು ಅಥವಾ ಹಸಿರು ಬಣ್ಣದ ಕಲೆಗಳನ್ನು ರೂಪಿಸುತ್ತವೆ. ನೈಸರ್ಗಿಕವಾಗಿ ಈ ಕಲೆಗಳನ್ನು ಸುಲಭವಾಗಿ ತೆಗೆಯಬಹುದು.
ಅದಕ್ಕಾಗಿ ನೀವು ಮಾಡಬೇಕಿರುವುದು ಇಷ್ಟು. ಮೊದಲು ಅರ್ಧ ಲೀಟರ್ ಬಿಳಿ ವಿನೆಗರ್ ತೆಗೆದುಕೊಂಡು ಅದರಲ್ಲಿ ನಿಂಬೆಹಣ್ಣನ್ನು ಕತ್ತರಿಸಿ ಹಿಂಡಬೇಕು. ನಂತರ ಸ್ವಲ್ಪ ಬಿಸಿ ನೀರನ್ನು ತೆಗೆದುಕೊಂಡು ಅದರಲ್ಲಿ ಈಗಾಗಲೇ ರೆಡಿ ಮಾಡಿಟ್ಟುಕೊಂಡಿರುವ ಮಿಶ್ರಣವನ್ನು ಸೇರಿಸಿ. ನಂತರ ಅದನ್ನು ಟಾಯ್ಲೆಟ್ ಟಬ್ನಲ್ಲಿ ಸುರಿಯಿರಿ. ಇಷ್ಟಾದ ಮೇಲೆ ಒಂದು ಗಂಟೆ ಕಾಲ ಹಾಗೇ ಬಿಡಿ. ಒಂದು ಗಂಟೆಯ ಬಳಿಕ, ಟಾಯ್ಲೆಟ್ ಬ್ರಷ್ನೊಂದಿಗೆ ಬಣ್ಣ ಅಂಟಿಕೊಂಡಿರುವ ಪ್ರದೇಶವನ್ನು ಸ್ಕ್ರಬ್ ಮಾಡಿ. ನೀವು ಬಳಕೆ ಮಾಡುತ್ತಿರುವ ಟಾಯ್ಲೆಟ್ ಪಾಶ್ಚಿಮಾತ್ಯ ಶೈಲಿಯದ್ದಾಗಿದ್ದಾರೆ. ಫ್ಲಶ್ ಮಾಡಿ. ಅದೇ ಸಾಮಾನ್ಯ ಟಾಯ್ಲೆಟ್ ಆಗಿದ್ದರೆ ನೀರು ಸುರಿದು ಸ್ವಚ್ಛಗೊಳಿಸಿ
ಪ್ರತಿ 2 ರಿಂದ 4 ವಾರಗಳಿಗೊಮ್ಮೆ ಈ ವಿಧಾನವನ್ನು ಬಳಸುವುದರಿಂದ ಹಳದಿ ಕಲೆಗಳು ನಿಮ್ಮ ಟಾಯ್ಲೆಟ್ನಲ್ಲಿ ಇಲ್ಲದಂತೆ ಮಾಡಬಹುದು. 2016 ರಲ್ಲಿ 'ಇಂಟರ್ನ್ಯಾಷನಲ್ ಜರ್ನಲ್ ಆಫ್ ಎನ್ವಿರಾನ್ಮೆಂಟಲ್ ರಿಸರ್ಚ್ ಅಂಡ್ ಪಬ್ಲಿಕ್ ಹೆಲ್ತ್' ನಲ್ಲಿ ಪ್ರಕಟವಾದ ವರದಿಯು ಶೌಚಾಲಯಗಳನ್ನು ಸ್ವಚ್ಛಗೊಳಿಸಲು ಬಿಳಿ ವಿನೆಗರ್ ಅನ್ನು ಬಳಸುವುದರಿಂದ ಅತಿಸಾರವನ್ನು ಉಂಟುಮಾಡುವ ಬ್ಯಾಕ್ಟೀರಿಯಾವನ್ನು ಗಣನೀಯವಾಗಿ ಕಡಿಮೆ ಮಾಡಬಹುದು ಎಂಬುದನ್ನು ಕಂಡುಕೊಂಡಿದೆ. ಟೆಕ್ಸಾಸ್ A&M ವಿಶ್ವವಿದ್ಯಾಲಯದ ಡಾ. ಜೀನ್ ಹೋಂಗ್ ಈ ಸಂಶೋಧನೆಯಲ್ಲಿ ಭಾಗವಹಿಸಿದ್ದರು. ಶೌಚಾಲಯವನ್ನು ಸ್ವಚ್ಛಗೊಳಿಸಲು ವಿನೆಗರ್ ಅನ್ನು ಬಳಸುವುದರಿಂದ ಬ್ಯಾಕ್ಟೀರಿಯಾ ಹಿಮ್ಮೆಟ್ಟಿಸಲು ಉತ್ತಮವಾದ ಮಾರ್ಗ ಅಂತಾರೆ ಇವರು,