ETV Bharat / health

ಹುಣಸೆಹಣ್ಣು ಸೇವಿಸುವುದರಿಂದ ಶುಗರ್​ ಹೆಚ್ಚಾಗುತ್ತಾ?: ಸಂಶೋಧನೆ ತಿಳಿಸಿದ ಆ ಮಹತ್ವದ ವಿಚಾರವೇನು ಗೊತ್ತಾ? - TAMARIND HEALTH BENEFITS

ಮಧುಮೇಹಿಗಳು ಹುಣಸೆಹಣ್ಣು ಸೇವಿಸಿದರೆ ಉತ್ತಮವೇ ಅಥವಾ ಇಲ್ಲವೇ ಎಂಬುದರ ಬಗ್ಗೆ ಇತ್ತೀಚಿಗೆ ನಡೆದ ಸಂಶೋಧನೆಯಿಂದ ಕೆಲವು ಸಂಗತಿಗಳು ಬಹಿರಂಗಪಡಿಸಿದೆ.

TAMARIND HEALTH BENEFITS  RELATION OF TAMARIND AND DIABETES  DIABETIC PATIENTS EAT TAMARIND  IS DIABETES CAN EAT TAMARIND
ಸಾಂದರ್ಭಿಕ ಚಿತ್ರ (Getty Images)
author img

By ETV Bharat Health Team

Published : Feb 3, 2025, 1:46 PM IST

Is Diabetic Patients Can Eat Tamarind: ಇತ್ತೀಚಿನ ದಿನಗಳಲ್ಲಿ ಮಧುಮೇಹದ ಸಮಸ್ಯೆಯಿಂದ ಅನೇಕ ಜನರು ಬಳಲುತ್ತಿದ್ದಾರೆ. ಒಮ್ಮೆ ಸಕ್ಕರೆ ಕಾಯಿಲೆ ಬಂದರೆ ನಿಮ್ಮ ಜೀವನಶೈಲಿಯಲ್ಲಿ ಅನೇಕ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಆಹಾರ ಪದ್ಧತಿಯಲ್ಲಿ ಕೆಲವು ಬದಲಾವಣೆ ಮಾಡಿಕೊಳ್ಳಬೇಕು. ಜೊತೆಗೆ ಔಷಧಗಳನ್ನು ಬಳಸುವುದನ್ನು ಬಿಟ್ಟು ಬಿಡಬಾರದು. ಇದರಿಂದಾಗಿ ಆರಂಭದಿಂದಲೇ ಈ ಕಾಯಿಲೆಯ ಹೆಚ್ಚು ಎಚ್ಚರಿಕೆವಹಿಸಬೇಕಾಗುತ್ತದೆ. ಮಧುಮೇಹಿಗಳು ಹುಣಸೆಹಣ್ಣು ಸೇವಿಸಬಹುದು ಎಂಬುದರ ಬಗ್ಗೆ ಅನೇಕರಿಗೆ ಹಲವು ಅನುಮಾನಗಳಿವೆ. ಹುಣಸೆಹಣ್ಣು ಸೇವಿಸುವುದರಿಂದ ರಕ್ತದಲ್ಲಿನ ಶುಗರ್ ಲೆವಲ್ ಹೆಚ್ಚಾಗುತ್ತದೆ ಅಥವಾ ನಿಯಂತ್ರಣವಾಗುತ್ತದೆ ಎಂಬುದರ ಬಗ್ಗೆ ಸಂಶೋಧನೆ ಏನು ಹೇಳುತ್ತಿದೆ ಎಂಬುದನ್ನು ತಿಳಿಯೋಣ.

ಹುಣಸೆಹಣ್ಣು ಸೇವಿಸಬಹುದೇ?: ಇತರ ಹಣ್ಣುಗಳಂತೆ ಹುಣಸೆಹಣ್ಣು ಕೂಡ ನಮಗೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಹುಣಸೆಹಣ್ಣಿನಲ್ಲಿ ಫೈಬರ್, ಪೊಟ್ಯಾಸಿಯಮ್, ಮೆಗ್ನೀಸಿಯಮ್, ವಿಟಮಿನ್ ಬಿ, ವಿಟಮಿನ್ ಸಿ ಹಾಗೂ ಇತರ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಶುಗರ್ ಪೇಷಂಟ್​ಗಳ ವಿಷಯಕ್ಕೆ ಬಂದರೆ ಹುಣಸೆಹಣ್ಣು ಸೇವಿಸುವುದು ಒಳ್ಳೆಯದು. ಇದರ ಉರಿಯೂತ ನಿವಾರಕ ಗುಣಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಎಂದು ತಜ್ಞರು ತಿಳಿಸುತ್ತಾರೆ.

ಹುಣಸೆಹಣ್ಣು ಮಧುಮೇಹಿಗಳಲ್ಲಿ ಮೇದೋಜ್ಜೀರಕ ಗ್ರಂಥಿಯ ಅಂಗಾಂಶ ಹಾನಿಯಾಗುವುದನ್ನು ಹಿಮ್ಮೆಟ್ಟಿಸುತ್ತದೆ. ಹುಣಸೆಹಣ್ಣಿನಲ್ಲಿರುವ ಫೈಬರ್, ಹೈಡ್ರಾಕ್ಸಿಸಿಟ್ರಿಕ್ ಆಮ್ಲ (HCA) ರಕ್ತದಲ್ಲಿನ ಶುಗರ್​ ಲೆವಲ್​ ನಿಯಂತ್ರಿಸಲು ಸಹಾಯ ಮಾಡುತ್ತದೆ. ವಿಶೇಷವಾಗಿ ಟೈಪ್-2 ಮಧುಮೇಹ ಇರುವವರಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಹುಣಸೆಹಣ್ಣು ಇನ್ಸುಲಿನ್ ಬಿಡುಗಡೆಯಾಗುವುದನ್ನು ಹೆಚ್ಚಿಸುತ್ತದೆ. ಜರ್ನಲ್ ಆಫ್ ಮೆಡಿಸಿನಲ್ ಫುಡ್‌ನಲ್ಲಿ ಪ್ರಕಟವಾದ 2018ರ ಅಧ್ಯಯನವು ಹುಣಸೆಹಣ್ಣಿನ ರಸವು ಇನ್ಸುಲಿನ್ ಬಿಡುಗಡೆಯಾಗುವುದನ್ನು ಹೆಚ್ಚಿಸುತ್ತದೆ ಹಾಗೂ ಟೈಪ್ 2 ಮಧುಮೇಹ ಹೊಂದಿರುವ ರೋಗಿಗಳಲ್ಲಿ ಉರಿಯೂತ ಕಡಿಮೆ ಮಾಡಲು ಸಹಾಯವಾಗುತ್ತದೆ ಎಂದು ಕಂಡು ಹಿಡಿದಿದೆ.

ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್​ನ ರಾಷ್ಟ್ರೀಯ ವೈದ್ಯಕೀಯ ಗ್ರಂಥಾಲಯದಲ್ಲಿ ಪ್ರಕಟವಾದ ಅಧ್ಯಯನದಲ್ಲಿ ಈ ಸಂಗತಿಯು ಬಹಿರಂಗವಾಗಿದೆ (ಸಂಶೋಧನಾ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ). ಹುಣಸೆಹಣ್ಣು ಒಳ್ಳೆಯದೇ ಇರಲಿ ಅಥವಾ ಇಲ್ಲದೇ ಇರಲಿ, ಅತಿಯಾಗಿ ಸೇವಿಸುವುದರಿಂದ ಅನೇಕ ಸಮಸ್ಯೆಗಳು ಉಂಟಾಗಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.

ಹುಣಸೆಹಣ್ಣಿನ ಮತ್ತಷ್ಟು ಲಾಭಗಳೇನು?:

  • ಹುಣಸೆಹಣ್ಣು ನಾವು ಸೇವಿಸುವ ಆಹಾರದಲ್ಲಿರುವ ಖನಿಜಗಳನ್ನು ದೇಹವು ಸರಳವಾಗಿ ಹೀರಿಕೊಳ್ಳಲು ಸಹಾಯ ಮಾಡುತ್ತದೆ. ದೇಹದಿಂದ ವಿಷವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.
  • ಅಜೀರ್ಣದಿಂದ ಉಂಟಾಗುವ ಅಸ್ವಸ್ಥತೆ ನಿಯಂತ್ರಿಸುವಲ್ಲಿ ಹಾಗೂ ದೇಹದಲ್ಲಿನ ಕೊಲೆಸ್ಟ್ರಾಲ್ ಕಡಿಮೆ ಮಾಡುವಲ್ಲಿ ಮುಖ್ಯ ಪಾತ್ರವಹಿಸುತ್ತದೆ.
  • ಹುಣಸೆಹಣ್ಣು ಸೌಂದರ್ಯ ಆರೈಕೆಯಲ್ಲೂ ಹೆಚ್ಚು ಉಪಯುಕ್ತವಾಗಿದೆ. ಮೊಡವೆ ಹಾಗೂ ಕಲೆಗಳಂತಹ ಚರ್ಮದ ಸಮಸ್ಯೆಗಳನ್ನು ಕಡಿಮೆ ಮಾಡುವುದರಿಂದ ಹಿಡಿದು ಮುಖದ ಕಾಂತಿ ಹೆಚ್ಚಿಸುವವರೆಗೆ ಹುಣಸೆಹಣ್ಣು ಉಪಯುಕ್ತವಾಗಿದೆ.
  • ಹುಣಸೆಹಣ್ಣಿನಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಹುಣಸೆಹಣ್ಣು ತಿಂದರೆ ದೇಹವು ಕಬ್ಬಿಣಾಂಶ ಉತ್ತಮವಾಗಿ ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಕಬ್ಬಿಣಾಂಶದ ಕೊರತೆ ಕಡಿಮೆಯಾಗುತ್ತದೆ.
  • ಹುಣಸೆಹಣ್ಣಿನಲ್ಲಿರುವ ಲೋಳೆ, ಪೆಕ್ಟಿನ್ ಹಾಗೂ ಅರಾಬಿನೋಸ್ ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ. ಕರುಳಿನಲ್ಲಿ ಆರೋಗ್ಯಕರ ಬ್ಯಾಕ್ಟೀರಿಯಾಗಳ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಇದು ವಿಶೇಷವಾಗಿ ಮಲಬದ್ಧತೆಯ ಸಮಸ್ಯೆ ದೂರವಾಗಿಸುತ್ತದೆ ಎಂದು ಸಂಶೋಧಕರು ತಿಳಿಸುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ಈ ವೆಬ್​ಸೈಟ್​ನ್ನು ವೀಕ್ಷಿಸಬಹುದು:

https://pmc.ncbi.nlm.nih.gov/articles/PMC9273433/#sec4

ಓದುಗರಿಗೆ ವಿಶೇಷ ಸೂಚನೆ: ಈ ಲೇಖನದಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ, ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ಒದಗಿಸುತ್ತಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣಿತ ವೈದ್ಯರ ಸಲಹೆಗಳನ್ನು ತೆಗೆದುಕೊಳ್ಳುವುದು ಉತ್ತಮ.

ಇವುಗಳನ್ನೂ ಓದಿ:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.