ETV Bharat / health

ನಿಮ್ಮನ್ನು ನಿರಂತರವಾಗಿ ಈ ಸಮಸ್ಯೆಗಳು ಕಾಡುತ್ತಿವೆಯೇ? ಹಾಗಿದ್ರೆ, ಕಿಡ್ನಿ ವೈಫಲ್ಯದ ಸೂಚನೆ: ಅಧ್ಯಯನ - KIDNEY FAILURE SYMPTOMS

Kidney Failure Symptoms: ಇಂದಿನ ಜೀವನಶೈಲಿ ಬದಲಾವಣೆಗಳು ಹಾಗೂ ಆಹಾರ ಪದ್ಧತಿಗಳಿಂದಾಗಿ ಕಿಡ್ನಿ ಸಮಸ್ಯೆಗಳು ಎದುರಾಗುತ್ತಿವೆ. ಈ ರೀತಿಯ ಲಕ್ಷಣಗಳು ನಿಮಗೂ ಕಂಡುಬಂದರೆ ಎಚ್ಚರಿಕೆವಹಿಸಲು ಎಂದು ತಜ್ಞರು ಸಲಹೆ ನೀಡಿದ್ದಾರೆ.

TIPS FOR HEALTHY KIDNEYS  SYMPTOMS OF KIDNEY DISEASE  KIDNEY FAILURE SYMPTOMS  SIGNS OF KIDNEY DISEASE
ಸಾಂದರ್ಭಿಕ ಚಿತ್ರ (freepik)
author img

By ETV Bharat Health Team

Published : Feb 3, 2025, 4:51 PM IST

Kidney Failure Symptoms: ಮಧುಮೇಹ, ಅಧಿಕ ರಕ್ತದೊತ್ತಡ ಹಾಗೂ ಹೃದಯ ಸಮಸ್ಯೆಗಳಂತೆ ಮೂತ್ರಪಿಂಡದ ಕಾಯಿಲೆಗಳು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿವೆ. ಹತ್ತು ಜನರಲ್ಲಿ ಒಬ್ಬರು ಇಂಥ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಮೂತ್ರಪಿಂಡಗಳು ಹಾನಿಗೊಳಗಾದ ನಂತರ ಡಯಾಲಿಸಿಸ್ ಅಥವಾ ಮೂತ್ರಪಿಂಡ ಕಸಿ ಮಾಡುವುದನ್ನು ಬಿಟ್ಟು ಬೇರೆ ಯಾವುದೇ ದಾರಿಯಿಲ್ಲ. ವೈದ್ಯಕೀಯ ತಜ್ಞರು ತಿಳಿಸುವಂತೆ ಹಾನಿಗೊಳಗಾದ ಮೂತ್ರಪಿಂಡಗಳು ಸಾಮಾನ್ಯ ಸ್ಥಿತಿಗೆ ಮರಳುವುದು ಬಹುತೇಕ ಅಸಾಧ್ಯ.

ಮೂತ್ರಪಿಂಡದ ಕಾಯಿಲೆಗಳನ್ನು ಆರಂಭಿಕ ಹಂತದಲ್ಲಿ ಪತ್ತೆ ಮಾಡಿದರೆ ಸಮಸ್ಯೆ ಗಂಭೀರವಾಗುವುದನ್ನು ತಡೆಯಬಹುದು. ಹೆಚ್ಚಿನ ಜನರಿಗೆ ಮೂತ್ರಪಿಂಡದ ಹಾನಿಯ ಲಕ್ಷಣಗಳ ಕುರಿತು ಗೊತ್ತಿಲ್ಲ. ಇದರಿಂದ ಮೂತ್ರಪಿಂಡಗಳು ಸಂಪೂರ್ಣವಾಗಿ ಹಾನಿಗೊಳಗಾಗುವವರೆಗೂ ಈ ಬಗ್ಗೆ ಅವರ ಗಮನಕ್ಕೆ ಬರುವುದಿಲ್ಲ. ಬೆಳಗ್ಗೆ ಈ ಲಕ್ಷಣಗಳು ಕಾಣಿಸಿಕೊಂಡರೆ ತಕ್ಷಣವೇ ನೀವು ಎಚ್ಚರದಿಂದಿರಲು ತಜ್ಞರು ಸಲಹೆ ನೀಡಿದ್ದಾರೆ.

ಆಯಾಸ, ಆಲಸ್ಯ: ಅನೇಕರು ಆಯಾಸ ಹಾಗೂ ಆಲಸ್ಯದಿಂದ ಬಳಲುತ್ತಿದ್ದಾರೆ. ಈ ಕಾರಣದಿಂದ ಅವರಿಗೆ ಬೆಳಿಗ್ಗೆ ಏಳಲೂ ಸಹ ತೊಂದರೆಯಾಗುತ್ತದೆ. ನಿಮಗೂ ಹಾಗೆಯೇ ಅನಿಸುತ್ತಿದೆಯೇ? ಹಾಗಾದ್ರೆ, ನೀವು ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಏಕೆಂದರೆ, ಈ ಲಕ್ಷಣಗಳು ಮೂತ್ರಪಿಂಡ ವೈಫಲ್ಯದ ಲಕ್ಷಣಗಳಾಗಿವೆ ಎಂದು ಹೈದರಾಬಾದ್‌ನ ಪ್ರಮುಖ ಆಸ್ಪತ್ರೆಯೊಂದರ ಮೂತ್ರಪಿಂಡಶಾಸ್ತ್ರಜ್ಞ ಡಾ.ಶ್ರೀಭೂಷಣ್ ರಾಜು ವಿವರಿಸಿದ್ದಾರೆ.

ಮೂತ್ರಪಿಂಡಗಳು ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ, ಅದು ರಕ್ತಹೀನತೆಗೆ ಕಾರಣವಾಗಬಹುದು. ಇದು ದೇಹದಲ್ಲಿನ ಕೆಂಪು ರಕ್ತ ಕಣಗಳ ಸಂಖ್ಯೆ ಕಡಿಮೆಯಾಗಲು ಕಾರಣವಾಗುತ್ತದೆ. ಸ್ನಾಯುಗಳು ಹಾಗೂ ಅಂಗಾಂಶಗಳು ಕಾರ್ಯನಿರ್ವಹಿಸದ ಕಾರಣ ದೌರ್ಬಲ್ಯ, ಆಲಸ್ಯ ಮತ್ತು ಆಯಾಸದಂತಹ ಲಕ್ಷಣಗಳನ್ನು ಉಂಟುಮಾಡುತ್ತದೆ. ಸಾಕಷ್ಟು ಆಮ್ಲಜನಕ ಪಡೆಯಬೇಕಾಗುತ್ತದೆ. ನ್ಯಾಷನಲ್ ಕಿಡ್ನಿ ಫೌಂಡೇಶನ್ ವೆಬ್‌ಸೈಟ್‌ನಲ್ಲಿ ಪ್ರಕಟವಾದ ಲೇಖನದಲ್ಲಿ ಈ ವಿಷಯವನ್ನು ಸ್ಪಷ್ಟಪಡಿಸಲಾಗಿದೆ (ಸಂಶೋಧನಾ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ). ಕೇವಲ ಆಯಾಸ ಹಾಗೂ ಆಲಸ್ಯ ಮಾತ್ರವಲ್ಲ. ಇತರ ಲಕ್ಷಣಗಳನ್ನೂ ಮೂತ್ರಪಿಂಡ ವೈಫಲ್ಯದ ಸಂಕೇತಗಳು ಕಾಣಿಸುತ್ತವೆ.

ಹಸಿವಾಗದೇ ಇರುವುದು: ರಕ್ತದಲ್ಲಿ ವಿಷಕಾರಿ ಅಂಶಗಳು ಹೆಚ್ಚಾದಂತೆ ಹಸಿವು ಕಡಿಮೆಯಾಗುತ್ತದೆ. ಜೊತೆಗೆ ವಾಕರಿಕೆ ಕಂಡುಬರುತ್ತದೆ. ಇದು ನಿಮಗೆ ಆಹಾರ ಸೇವಿಸಲು ಬಯಕೆಯನ್ನು ಕಡಿಮೆಯಾಗಿಸುತ್ತದೆ. ಪರಿಣಾಮವಾಗಿ ನಿಮ್ಮ ತೂಕ ಕಡಿಮೆಯಾಗುತ್ತದೆ.

ಒಣ ಚರ್ಮ ಹಾಗೂ ತುರಿಕೆ: ಕಿಡ್ನಿಗಳು ಸರಿಯಾಗಿ ಕೆಲಸ ಮಾಡದೇ ಇರುವುದು ನಮ್ಮ ದೇಹದಲ್ಲಿ ಕ್ಯಾಲ್ಸಿಯಂ ಮತ್ತು ಫಾಸ್ಫೇಟ್‌ನಂತಹ ಖನಿಜಗಳ ಸಮತೋಲನದಲ್ಲಿ ತೊಂದರೆಯಾಗುತ್ತದೆ. ಒಣ ಚರ್ಮ, ತುರಿಕೆ ಹಾಗೂ ಕಿರಿಕಿರಿಯಂತಹ ಸಮಸ್ಯೆಗಳನ್ನು ಉಂಟುಮಾಡುತ್ತದೆ ಎಂದು ತಜ್ಞರು ಹೇಳಿದ್ದಾರೆ.

ಪಾದ, ಕಣ್ಣುಗಳ ಸುತ್ತ ಊತ: ಮೂತ್ರಪಿಂಡಗಳು ಆರೋಗ್ಯವಾವಾಗಿಲ್ಲದಿದ್ದರೆ ದೇಹದಲ್ಲಿರುವ ತ್ಯಾಜ್ಯ ಉತ್ಪನ್ನಗಳನ್ನು ಹೊರಹಾಕಲು ಸಾಧ್ಯವಿಲ್ಲ. ಇದು ನಮ್ಮ ದೇಹದಲ್ಲಿ ವಿಶೇಷವಾಗಿ ಕಾಲುಗಳು, ಹಿಮ್ಮಡಿಗಳು, ಪಾದಗಳು ಮತ್ತು ಕಣ್ಣುಗಳ ಸುತ್ತಲೂ ಊತ ಉಂಟುಮಾಡುತ್ತದೆ.

ಅತಿಯಾದ ಮೂತ್ರ ವಿಸರ್ಜನೆ: ಕಿಡ್ನಿಗಳು ಹಾನಿಗೊಳಗಾಗಿದ್ದರೆ ಮೂತ್ರ ವಿಸರ್ಜನೆಯಲ್ಲಿ ಬದಲಾವಣೆಗಳು ಉಂಟಾಗಬಹುದು. ಇದು ರಾತ್ರಿಯಲ್ಲಿ ಅತಿಯಾದ ಮೂತ್ರ ವಿಸರ್ಜನೆ ಮೂತ್ರದಲ್ಲಿ ರಕ್ತ ಮತ್ತು ನೊರೆ ಮೂತ್ರದಂತಹ ಲಕ್ಷಣಗಳು ಕಂಡಬರುತ್ತವೆ.

ತಲೆನೋವು, ಗಮನ ಕೇಂದ್ರೀಕರಿಸುವಲ್ಲಿ ಸಮಸ್ಯೆ: ರಕ್ತದಲ್ಲಿ ತ್ಯಾಜ್ಯ ಸಂಗ್ರಹವಾಗುವುದರಿಂದ ಮೆದುಳಿನ ಕಾರ್ಯನಿರ್ವಹಣೆಯ ಮೇಲೆ ನಕಾರಾತ್ಮಕ ಪರಿಣಾಮ ಉಂಟಾಗುತ್ತದೆ. ಗಮನ ಕೇಂದ್ರೀಕರಿಸುವಲ್ಲಿ ತೊಂದರೆ ಹಾಗೂ ತಲೆನೋವು, ತಲೆತಿರುಗುವಿಕೆ ಸೇರಿದಂತೆ ವಿವಿಧ ಲಕ್ಷಣಗಳನ್ನು ಕಂಡುಬರುತ್ತವೆ. ಈ ಸಮಸ್ಯೆ ತೀವ್ರಗೊಂಡರೆ ಅದು ರೋಗಗ್ರಸ್ತವಾಗುವಿಕೆಗಳಿಗೆ ಕಾರಣವಾಗಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ನಿದ್ರೆ ಸಮಸ್ಯೆ: ಮೂತ್ರಪಿಂಡಗಳು ಸರಿಯಾಗಿ ಕೆಲಸ ಮಾಡದಿದ್ದರೆ ಮೂತ್ರದ ಮೂಲಕ ದೇಹದಲ್ಲಿರುವ ವಿಷಕಾರಿ ಅಂಶಗಳು ಹೊರಗೆ ಹೋಗಿದ್ದರೆ, ರಕ್ತದಲ್ಲಿ ಸಂಗ್ರಹವಾಗುತ್ತದೆ. ಇದು ನಿದ್ರೆಗೆ ಅಡ್ಡಿಯಾಗುತ್ತದೆ. ಮೂತ್ರಪಿಂಡದ ಸಮಸ್ಯೆಗಳಿಂದ ಬಳಲುತ್ತಿರುವ ಜನರಲ್ಲಿ ಸ್ಲೀಪ್ ಅಪ್ನಿಯಾ (ಗಂಭೀರವಾದ ನಿದ್ರೆಯ ಅಸ್ವಸ್ಥತೆ) ಸಾಮಾನ್ಯವಾಗಿ ಕಂಡುಬರುತ್ತದೆ ಎಂದು ತಜ್ಞರು ತಿಳಿಸುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ಈ ವೆಬ್​ಸೈಟ್ ವೀಕ್ಷಿಸಬಹುದು:

https://www.kidney.org/news-stories/10-signs-you-may-have-kidney-disease#:~:text=A%20severe%20decrease%20in%20kidney,Learn%20more%20about%20anemia.

ಓದುಗರಿಗೆ ವಿಶೇಷ ಸೂಚನೆ: ಈ ಲೇಖನದಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ, ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ಒದಗಿಸುತ್ತಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣಿತ ವೈದ್ಯರ ಸಲಹೆಗಳನ್ನು ತೆಗೆದುಕೊಳ್ಳುವುದು ಉತ್ತಮ.

ಇವುಗಳನ್ನೂ ಓದಿ:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.