ನವದೆಹಲಿ: ಇಂದು ಬಹುತೇಕರನ್ನು ಕಾಡುತ್ತಿರುವ ಅಧಿಕ ರಕ್ತದೊತ್ತಡ ನಿವಾರಣೆಗೆ ಹಣ್ಣು ಮತ್ತು ತರಕಾರಿ ಸೇವನೆ ಹೆಚ್ಚು ನಿರ್ಣಾಯಕ ಎಂದು ಹೊಸ ಸಂಶೋಧನೆ ತಿಳಿಸಿದೆ. ದೈನಂದಿನ ಆಹಾರದಲ್ಲಿ ಇವುಗಳನ್ನು ಸೇವಿಸುವುದರಿಂದ ರಕ್ತದೊತ್ತಡದೊಂದಿಗೆ ಹೃದಯ ರಕ್ತನಾಳ ಸಮಸ್ಯೆ ಅಪಾಯವೂ ಕಡಿಮೆಯಾಗುತ್ತದೆ. ಮೂತ್ರಪಿಂಡ ಆರೋಗ್ಯ ಸುಧಾರಣೆಯೂ ಆಗುತ್ತದೆ ಎಂದು ವರದಿ ತಿಳಿಸಿದೆ. ಅಮೆರಿಕನ್ ಜರ್ನಲ್ ಆಫ್ ಮೆಡಿಸಿನ್ನಲ್ಲಿ ಈ ಅಧ್ಯಯನ ವರದಿ ಪ್ರಕಟವಾಗಿದೆ.
ರೋಗಿಗಳ ಮೇಲೆ ನಡೆಸಲಾದ ಅಧ್ಯಯನದಲ್ಲಿ, ಆಮ್ಲತೆ ಉಂಟುಮಾಡುವ ಡಯಟ್ಗಳು ಮೂತ್ರಪಿಂಡ ಆರೋಗ್ಯಕ್ಕೆ ಹಾನಿಕಾರಕ. ಹಣ್ಣು, ತರಕಾರಿ ಹೊಂದಿರುವ ಆಹಾರಗಳು ಪ್ರಯೋಜನಕಾರಿ. ಹಣ್ಣು ಮತ್ತು ತರಕಾರಿಗಳು ಆಹಾರದ ಆಮ್ಲತೆಯನ್ನು ಕಡಿಮೆ ಮಾಡಿ ಹೃದಯ ಮತ್ತು ಮೂತ್ರ ಪಿಂಡದ ಆರೋಗ್ಯ ಸುಧಾರಿಸಿ ರಕ್ತದೊತ್ತಡ ಕಡಿಮೆ ಮಾಡಿದೆ ಎಂದು ದಿ ಯುನಿವರ್ಸಿಟಿ ಆಫ್ ಟೆಕ್ಸಾಸ್ನ ಡೆಲ್ ಮೆಡಿಕಲ್ ಸ್ಕೂಲ್ನ ಡೋನಾಲ್ಡ್ ಇ ವೆಸ್ಸೊನ್ ತಿಳಿಸಿದ್ದಾರೆ.