ETV Bharat / bharat

ದೆಹಲಿ ವಿಧಾನಸಭಾ ಚುನಾವಣೆ: ಇಂದು ಅರವಿಂದ್​​ ಕೇಜ್ರಿವಾಲ್​ ನಾಮಪತ್ರ ಸಲ್ಲಿಕೆ - DELHI ASSEMBLY POLLS 2025

ನಾಮಪತ್ರ ಸಲ್ಲಿಕೆಗೆ ಮುನ್ನ ಅರವಿಂದ್​​ ಕೇಜ್ರಿವಾಲ್​ ವಾಲ್ಮೀಕಿ ಮತ್ತು ಹನುಮಾನ್​ ದೇಗುಲಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆಯಲಿದ್ದಾರೆ.

delhi-assembly-polls-kejriwal-to-file-nomination-papers-from-new-delhi-constituency
ಅರವಿಂದ್​​ ಕೇಜ್ರಿವಾಲ್​ (ಎಎನ್​ಐ)
author img

By ETV Bharat Karnataka Team

Published : Jan 15, 2025, 11:47 AM IST

ನವದೆಹಲಿ: ಎಎಪಿ ರಾಷ್ಟ್ರೀಯ ಸಂಚಾಲಕ ಮತ್ತು ಮಾಜಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಇಂದು ನವದೆಹಲಿ ವಿಧಾನಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಈ ನಾಮಪತ್ರ ಸಲ್ಲಿಕೆ ವೇಳೆ ರಾಜಧಾನಿಯ ಅನೇಕ ತಾಯಂದಿರು ಮತ್ತು ಸಹೋದರಿಯರು ಜೊತೆಯಾಗಲಿದ್ದು, ತಮಗೆ ಆಶೀರ್ವಾದ ಮಾಡಲಿದ್ದಾರೆ ಎಂದು ಅರವಿಂದ್​ ಕೇಜ್ರಿವಾಲ್​ ತಿಳಿಸಿದ್ದಾರೆ.

ನಾಮಪತ್ರ ಸಲ್ಲಿಕೆಗೆ ಮುನ್ನ ಅರವಿಂದ್​​ ಕೇಜ್ರಿವಾಲ್​ ವಾಲ್ಮೀಕಿ ಮತ್ತು ಹನುಮಾನ್​ ದೇಗುಲಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆಯಲಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, "ಇಂದು ನಾನು ಚುನಾವಣಾ ನಾಮಪತ್ರ ಸಲ್ಲಿಕೆ ಮಾಡುತ್ತಿದ್ದು, ಈ ಸಂದರ್ಭದಲ್ಲಿ ಅನೇಕ ತಾಯಂದಿರು ಮತ್ತು ಸಹೋದರಿಯರು ನನಗೆ ಆಶೀರ್ವದಿಸಲಿದ್ದಾರೆ. ಹಾಗೇ ಹನುಮಾನ್​ ಮತ್ತು ವಾಲ್ಮೀಕಿ ದೇಗುಲಕ್ಕೆ ಭೇಟಿ ನೀಡುವುದಾಗಿ ಅವರು ತಿಳಿಸಿದ್ದಾರೆ".

ಕೇಜ್ರಿವಾಲ್​ ವಿರುದ್ದ ನವದೆಹಲಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಯಿಂದ ಪ್ರವೇಶ್​ ವರ್ಮಾ ಅವರು ಕಣಕ್ಕೆ ಇಳಿಯಲಿದ್ದಾರೆ. ಕಾಂಗ್ರೆಸ್​ನಿಂದ ದೆಹಲಿ ಮಾಜಿ ಸಿಎಂ ಶೀಲಾ ದೀಕ್ಷಿತ್​ ಪುತ್ರ ಸಂದೀಪ್​ ದೀಕ್ಷಿತ್​ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ.

2013ರಿಂದ ದೆಹಲಿಯಲ್ಲಿ ಅಧಿಕಾರ ಚುಕ್ಕಾಣಿ ಹಿಡಿದಿರುವ ಆಮ್​ ಆದ್ಮಿ ಪಕ್ಷ, ಮೂರನೇ ಬಾರಿ ಕೂಡ ಅಧಿಕಾರ ಗದ್ದುಗೆ ಏರುವ ಆಕಾಂಕ್ಷೆ ಹೊಂದಿದೆ. ಈ ನಡುವೆ ಇಡಿ ಸುಳಿ ಕೂಡ ಕೇಜ್ರಿವಾಲ್ ಅವರನ್ನು​ ಸುತ್ತಿಕೊಂಡಿದ್ದು, ಅವರು ನಾಮಪತ್ರ ಸಲ್ಲಿಸುವ ದಿನವೇ ಜಾಮೀನಿನ ಮೇಲೆ ಹೊರಗೆ ಇರುವ ಕೇಜ್ರಿವಾಲ್​ ಅವರನ್ನು ಇಡಿ ವಿಚಾರಣೆಗೆ ಒಳಪಡಿಸಲು ಕೇಂದ್ರ ಗೃಹ ಸಚಿವಾಲಯ ಒಪ್ಪಿಗೆ ನೀಡಿದೆ. ಅಬಕಾರಿ ನೀತಿ ಹಗರಣದಲ್ಲಿ ಈಗಾಗಲೇ ಆರು ತಿಂಗಳ ಸೆರೆವಾಸ ಅನುಭವಿಸಿರುವ ಕೇಜ್ರಿವಾಲ್​ ಜಾಮೀನಿನ ಮೇಲೆ ಹೊರಗಿದ್ದಾರೆ.

ಬಿಜೆಪಿ ಅಭ್ಯರ್ಥಿಯಿಂದ ನಾಮಪತ್ರ ಸಲ್ಲಿಕೆ: ಇನ್ನು ನವದೆಹಲಿ ವಿಧಾನಸಭಾ ಕ್ಷೇತ್ರದಿಂದ ಕೇಜ್ರಿವಾಲ್​ ವಿರುದ್ಧ ಕಣಕ್ಕೆ ಇಳಿದಿರುವ ದೆಹಲಿ ಮಾಜಿ ಸಂಸದ ಪ್ರವೇಶ್​ ವರ್ಮಾ ಕೂಡ ಇಂದು ನಾಮಪತ್ರ ಸಲ್ಲಿಕೆ ಮಾಡಿದರು. ಇಂದು ಬೆಳಗ್ಗೆ ಬೃಹತ್​ ಬೆಂಬಲಿಗರೊಂದಿಗೆ ಗೌರಿ ಶಂಕ ದೇಗುಲಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಬೃಹತ್​ ರೋಡ್​ಶೋ ಮೂಲಕ ಆಗಮಿಸಿದ ಅವರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಚುನಾವಣಾ ನಾಮಪತ್ರ ಸಲ್ಲಿಕೆ ಮಾಡಿದರು.

70 ವಿಧಾನಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ದೆಹಲಿ ಚುನಾವಣೆಯ ಮತದಾನವೂ ಫೆ. 5ಕ್ಕೆ ನಿಗದಿಯಾಗಿದ್ದು, ಫೆ. 8ರಂದು ಮತದಾನ ಹೊರ ಬೀಳಲಿದೆ.

ಇದನ್ನೂ ಓದಿ: ದೆಹಲಿ ಚುನಾವಣೆಗೂ ಮುನ್ನ ಸಂಕಷ್ಟ; ಕೇಜ್ರಿವಾಲ್​ ವಿರುದ್ಧ ಇಡಿ ವಿಚಾರಣೆಗೆ ಕೇಂದ್ರ ಅಸ್ತು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.