ನಟ ದರ್ಶನ್ ಇದೇ ಫೆಬ್ರವರಿ 16ರಂದು 48ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಆದರೆ ಈ ಬಾರಿ ತಮ್ಮ ಅಭಿಮಾನಿಗಳೊಂದಿಗೆ ಜನ್ಮದಿನ ಆಚರಿಸಿಕೊಂಡಿಲ್ಲ. ಈ ಬಗ್ಗೆ ತಮ್ಮ ಕೋಟ್ಯಂತರ ಅಭಿಮಾನಿಗಳಿಗೆ ಮೊದಲೇ ತಿಳಿಸಿದ್ದರು. ಇದೀಗ ತಮ್ಮ ಅಭಿಮಾನಿಗಳ ಪುಣ್ಯಕಾರ್ಯಕ್ಕೆ ದಾಸ ಹೃದಯಪೂರ್ವಕ ನಮನ ಸಲ್ಲಿಸಿದ್ದಾರೆ.
ದರ್ಶನ್ ಪೋಸ್ಟ್ನಲ್ಲೇನಿದೆ? ಸ್ಯಾಂಡಲ್ವುಡ್ನ ಚಾಲೆಂಜಿಂಗ್ ಸ್ಟಾರ್ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ಸರಣಿ ಪೋಸ್ಟ್ಗಳನ್ನು ಹಂಚಿಕೊಂಡಿದ್ದಾರೆ. ಸ್ಪೆಷಲ್ ಪೋಸ್ಟ್ಗಳಿಗೆ, ''ಈ ಪುಣ್ಯ ಕಾರ್ಯದಲ್ಲಿ ಪಾಲ್ಗೊಂಡ ಎಲ್ಲಾ ನನ್ನ ಸೆಲೆಬ್ರಿಟಿಸ್ಗಳಿಗೆ ಹೃದಯಪೂರ್ವಕ ಧನ್ಯವಾದಗಳು'' ಎಂದು ಬರೆದುಕೊಂಡಿದ್ದಾರೆ. ಪ್ರತೀ ಪೋಸ್ಟ್ಗಳೂ ಕೂಡಾ ಅವರ ಅಭಿಮಾನಿಗಳ ಸಮಾಜ ಸೇವೆಯನ್ನು ಒತ್ತಿ ಹೇಳಿದೆ. ರಾಜ್ಯದ ಹಲವೆಡೆ ಫ್ಯಾನ್ಸ್ ತಮ್ಮದೇ ಆದ ರೀತಿಯಲ್ಲಿ ತಮ್ಮ ಮೆಚ್ಚಿನ ನಟನ ಜನ್ಮದಿನ ಆಚರಿಸಿದ್ದಾರೆ. ಪಟಾಕಿ ಸಿಡಿಸಿ ಕೇಕ್ ಕತ್ತರಿಸುವುದರಿಂದ ಹಿಡಿದು ಪುಣ್ಯಕಾರ್ಯಗಳ ಫೋಟೋ ವಿಡಿಯೋಗಳನ್ನು ಈ ಪೋಸ್ಟ್ಗಳಲ್ಲಿ ಕಾಣಬಹುದು.
ದರ್ಶನ್ ಜನ್ಮದಿನ ಆಚರಣೆಗೆ ಸಂಬಂಧಿಸಿದ ಮೊದಲ ಪೋಸ್ಟ್ನಲ್ಲಿ ಅಭಿಮಾನಿ ಬಳಗ ಒಂದೆಡೆ ಸೇರಿ ನಟನ ಜನ್ಮದಿನ ಆಚರಿಸಿದ್ದಾರೆ. ಇಲ್ಲಿ ಎರಡು ಫೋಟೋಗಳನ್ನು ಹಂಚಿಕೊಳ್ಳಲಾಗಿದ್ದು, ಜನಸಮೂಹವನ್ನು ಕಾಣಬಹುದು.
ಎರಡನೇ ಪೋಸ್ಟ್ನಲ್ಲಿ ಸರ್ಕಾರಿ ಆಸ್ಪತ್ರೆಗೆ ಕೊಡುಗೆ ನೀಡೋ ಮೂಲಕ ದರ್ಶನ್ ಬರ್ತ್ಡೇ ಸೆಲೆಬ್ರೇಟ್ ಮಾಡಲಾಗಿದೆ. ಇಲ್ಲಿ ವೈದ್ಯಕೀಯ ತಂಡ, ಆಸ್ಪತ್ರೆ ಸಿಬ್ಬಂದಿಯನ್ನೊಳಗೊಂಡ ಫೋಟೋವನ್ನು ಕಾಣಬಹುದು. ಮೂರನೇ ಪೋಸ್ಟ್ನಲ್ಲಿ, ಶಾಲಾ ಮಕ್ಕಳಿಗೆ ಬೇಕಾದ ಅಗತ್ಯ ವಸ್ತುಗಳನ್ನು ಕೊಡುಗೆಯಾಗಿ ನೀಡಲಾಗಿದೆ. ನಾಲ್ಕನೇ ಪೋಸ್ಟ್ನಲ್ಲಿ, ಶಾಲಾ ಮಕ್ಕಳೊಂದಿಗೆ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಲಾಗಿದೆ. ಹೀಗೆ ದರ್ಶನ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ 30ಕ್ಕೂ ಹೆಚ್ಚು ಪೋಸ್ಟ್ಗಳನ್ನು ಹಂಚಿಕೊಂಡಿದ್ದು, ಎಲ್ಲವೂ ಅವರ ಅಭಿಮಾನಿಗಳ ಪುಣ್ಯಕಾರ್ಯಗಳಾಗಿವೆ.
ಇದನ್ನೂ ಓದಿ: 'ನಿಷ್ಕಲ್ಮಶ ಹೃದಯಗಳಿಗೆ ನಾನು ಸದಾ ಚಿರಋಣಿ': ಅಭಿಮಾನಿಗಳಿಗೆ ದಾಸ ದರ್ಶನ್ ಹೇಳಿದ್ದಿಷ್ಟು
ನಿಷ್ಕಲ್ಮಶ ಹೃದಯಗಳಿಗೆ ನಾನು ಸದಾ ಚಿರಋಣಿ: ಜನ್ಮದಿನದ ಬಳಿಕ ಪೋಸ್ಟ್ ಹಂಚಿಕೊಂಡ ನಟ, ''ಪ್ರೀತಿಯ ಸೆಲೆಬ್ರಿಟಿಸ್ಗಳೇ, ನಿಮ್ಮ ಬಗ್ಗೆ ಎಷ್ಟು ಹೇಳಿದರೂ ಕಡಿಮೆ ಎಂದು ಭಾಸವಾಗುತ್ತದೆ. ಕಷ್ಟದಲ್ಲಿದ್ದಾಗ ಸದಾ ಬೆಂಬಲದಲ್ಲಿ ನಿಲ್ಲುವಂತ ಈ ನಿಷ್ಕಲ್ಮಶ ಹೃದಯಗಳಿಗೆ ನಾನು ಸದಾ ಚಿರಋಣಿ. ನಿಮ್ಮ ಪ್ರೀತಿ-ಪ್ರೋತ್ಸಾಹ ಮತ್ತು ಬೆಂಬಲವೇ ನನ್ನ ಜೀವನದ ನಿಜವಾದ ಆಸ್ತಿ. ನನ್ನ ಹುಟ್ಟುಹಬ್ಬವನ್ನು ವಿಶೇಷವಾಗಿಸುವ ನಿಮ್ಮ ಪ್ರೀತಿಯ ಆಶೀರ್ವಾದಕ್ಕೆ ನಾನು ಮನದಾಳದಿಂದ ಕೃತಜ್ಞನಾಗಿದ್ದೇನೆ. ನೀವು ಹಲವೆಡೆ ಮಾಡುತ್ತಿರುವ ದಾನ-ಧರ್ಮ ಕಾರ್ಯಗಳು ಸಹಸ್ರಾರು ಹೃದಯಗಳನ್ನು ಸ್ಪರ್ಶಿಸುವಂತಹದ್ದು. ನಿಮ್ಮ ಈ ಕೆಲಸಗಳು ಅನೇಕರಿಗೆ ದಾರಿದೀಪವಾಗಲಿ. ನಿಮ್ಮ ಮನದಾಳದ ಪ್ರೀತಿಯ ಹಾರೈಕೆಗಳು ನನ್ನ ಮುಂದಿನ ಹೆಜ್ಜೆಗೆ ದಾರಿ ತೋರುವ ಬೆಳಕು ಎಂದರೆ ಅತಿಶಯೋಕ್ತಿಯಲ್ಲ. ಆದಷ್ಟು ಬೇಗ ನಿಮ್ಮನ್ನು ಕಾಣುವ ಹಂಬಲ, ಕಾತುರ ನನ್ನಲಿಯೂ ಇದೆ. ನಿಮ್ಮನ್ನು ಪಡೆದಿರುವ ನಾನೇ ಧನ್ಯ. ನಿಮ್ಮ ದಾಸ ದರ್ಶನ್'' ಎಂದು ಬರೆದುಕೊಂಡಿದ್ದರು.
ಇದನ್ನೂ ಓದಿ: ಛತ್ರಪತಿ ಶಿವಾಜಿ ಮಹಾರಾಜರ ಪಾತ್ರದಲ್ಲಿ ರಿಷಬ್ ಶೆಟ್ಟಿ: ತಜ್ಞರೊಂದಿಗೆ ಚಿತ್ರೀಕರಣ, ಕೇನ್ಸ್‌ನಲ್ಲಿ ಫಸ್ಟ್ ಲುಕ್ ರಿಲೀಸ್