ETV Bharat / health

ನಿಮ್ಮ ಮೆದುಳು ಚುರುಕಾಗಿ ಕೆಲಸ ಮಾಡಲು ವ್ಯಾಯಾಮ ಉತ್ತಮ ಮದ್ದು: ಸಂಶೋಧನೆ - EXERCISE IMPROVES BRAIN FUNCTION

ವಾರಕ್ಕೊಮ್ಮೆ ಒಂದೂವರೆ ಗಂಟೆ ರೋಬಿಕ್ಸ್​ ವ್ಯಾಯಾಮ ಮಾಡುವುದರಿಂದ ನಿಮ್ಮ ಮೆದುಳು ಚುರುಕಾಗುತ್ತದೆ. ಮೆದುಳಿನ ಆರೋಗ್ಯ ಸೇರಿದಂತೆ ಒಟ್ಟಾರೆ ದೇಹದ ಆರೋಗ್ಯಕ್ಕೆ ಪ್ರಯೋಜನಗಳು ಲಭಿಸುತ್ತವೆ ಎಂದು ಸಂಶೋಧನೆ ತಿಳಿಸುತ್ತದೆ.

EXERCISE IMPROVES BRAIN FUNCTION  DOES EXERCISE IMPROVE MEMORY  DOES EXERCISE INCREASE MEMORY POWER  DOES EXERCISE INCREASE BRAIN POWER
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Health Team

Published : Jan 14, 2025, 7:02 AM IST

Exercise Improves Brain Function: ವ್ಯಾಯಾಮದಿಂದ ಅನೇಕ ಆರೋಗ್ಯದ ಪ್ರಯೋಜನಗಳನ್ನು ದೊರೆಯುತ್ತವೆ. ಇದರಿಂದ ದೇಹವನ್ನು ಮಾತ್ರವಲ್ಲದೇ ಮೆದುಳಿನ ಆರೋಗ್ಯವನ್ನು ಸದೃಢವಾಗಿಸುತ್ತದೆ ಎಂದು ಅಧ್ಯಯನಗಳು ತಿಳಿಸಿವೆ. ವಾರಕ್ಕೆ ಕನಿಷ್ಠ 150 ನಿಮಿಷಗಳವರೆಗೆ ಯಾವುದಾದರೂ ಒಂದು ರೀತಿಯ ಹುರುಪಿನ ಏರೋಬಿಕ್ಸ್​ ವ್ಯಾಯಾಮ ಮಾಡಲು ತಜ್ಞರು ಶಿಫಾರಸು ಮಾಡುತ್ತಾರೆ. ವೇಗವಾಗಿ ವಾಕಿಂಗ್​ ಮಾಡುವುದು, ಟೆನಿಸ್, ಸೈಕ್ಲಿಂಗ್ ಮತ್ತು ಈಜು ಸೇರಿದಂತೆ ಮುಂತಾದ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಬೇಕು. ವಾರದಲ್ಲಿ ಕನಿಷ್ಠ ಎರಡು ದಿನ ತೂಕ ಎತ್ತುವುದು, ಪುಷ್ಅಪ್‌ಗಳು ಹಾಗೂ ಸ್ಕ್ವಾಟ್‌ಗಳಂತಹ ಶಕ್ತಿ ಪ್ರದರ್ಶನದ ವ್ಯಾಯಾಮಗಳನ್ನು ಮಾಡಲು ತಜ್ಞರು ಶಿಫಾರಸು ಮಾಡುತ್ತಾರೆ.

ಪ್ರತಿಯೊಂದು ವ್ಯಾಯಾಮ ವಿಧವು ತನ್ನದೇ ಆದ ಪ್ರಯೋಜನವನ್ನು ಹೊಂದಿದೆ. ವಿಶೇಷವಾಗಿ ಹುರುಪಿನ ಏರೋಬಿಕ್ಸ್​ ವ್ಯಾಯಾಮವು ಕೊಬ್ಬನ್ನು ಕರಗಿಸಲು ಹಾಗೂ ತೂಕವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದು ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಶಕ್ತಿ ಪ್ರದರ್ಶನದಂತಹ ವ್ಯಾಯಾಮಗಳು ಸ್ನಾಯುವಿನ ದ್ರವ್ಯರಾಶಿ ಮತ್ತು ಮೂಳೆ ಸಾಂದ್ರತೆ ಹೆಚ್ಚಿಸುತ್ತವೆ. ಸ್ಟ್ರೆಚಿಂಗ್ ವ್ಯಾಯಾಮಗಳು ದೇಹವು ಸುಲಭವಾಗಿ ಚಲಿಸಲು ಮತ್ತು ಗಾಯಗಳನ್ನು ತಡೆಯಲು ಸಹಾಯ ಮಾಡುತ್ತದೆ. ಸಮತೋಲನ ವ್ಯಾಯಾಮಗಳಿಂದ ಬೀಳುವುದನ್ನು ತಡೆಯುವುದಲ್ಲದೆ, ಮೆದುಳನ್ನು ಸಕ್ರಿಯವಾಗಿಡುತ್ತವೆ.

ಏರೋಬಿಕ್ ವ್ಯಾಯಾಮದಿಂದ ಏನಾಗುತ್ತದೆ?: ನಾವು ವ್ಯಾಯಾಮ ಮಾಡುವಾಗ ವಿವಿಧ ಅಣುಗಳು ರಕ್ತಕ್ಕೆ ಬಿಡುಗಡೆಯಾಗುತ್ತವೆ. ಇವು ವಿವಿಧ ಅಂಗಗಳು ಮತ್ತು ಅಂಗಾಂಶಗಳನ್ನು ತಲುಪಿ ಅಲ್ಲಿ ಬದಲಾವಣೆಗಳನ್ನು ಉಂಟು ಮಾಡುತ್ತವೆ. ಈ ಬದಲಾವಣೆಗಳು ವ್ಯಾಯಾಮದಿಂದ ಉಂಟಾಗುವ ಒತ್ತಡವನ್ನು ತಡೆದುಕೊಳ್ಳಲು ಸಹಾಯ ಮಾಡುತ್ತದೆ. ಜೀವಕೋಶಗಳು ವಯಸ್ಸಾದ ಪರಿಣಾಮಗಳನ್ನು ತಡೆದುಕೊಳ್ಳಲು ಹೊಂದಿಕೊಳ್ಳುತ್ತವೆ ಎಂದು ಅಧ್ಯಯನ ಬಹಿರಂಗಪಡಿಸುತ್ತದೆ. 2011ರಲ್ಲಿ ನರವಿಜ್ಞಾನದಲ್ಲಿ ಪ್ರಕಟವಾದ ಅಧ್ಯಯನವು, ಏರೋಬಿಕ್ ವ್ಯಾಯಾಮವು ಸೌಮ್ಯ ಅರಿವಿನ ದುರ್ಬಲತೆ ಹೊಂದಿರುವ ವಯಸ್ಸಾದವರಲ್ಲಿ ಹಿಪೊಕ್ಯಾಂಪಲ್ ಪರಿಮಾಣವನ್ನು ಹೆಚ್ಚಿಸುತ್ತದೆ ಎಂದು ತಿಳಿದಿದೆ.

ಅಧ್ಯಯನ ಏನು ತಿಳಿಸುತ್ತೆ?: ನಾವು ವಯಸ್ಸಾದಂತೆ, ನಮ್ಮ ಅರಿವಿನ ಸಾಮರ್ಥ್ಯಗಳು ಕಡಿಮೆಯಾಗುತ್ತವೆ. ನಿರ್ದಿಷ್ಟವಾಗಿ ಹೇಳುವುದಾದರೆ, ಕಲಿಯುವುದು ಹಾಗೂ ನೆನಪಿಸಿಕೊಳ್ಳುವುದು ತುಂಬಾ ಕಷ್ಟಕರವಾಗುತ್ತದೆ. ವಯಸ್ಸಾದಂತೆ ಮೆದುಳಿನಲ್ಲಿನ ಸೆಲ್ಯುಲಾರ್ ಮಟ್ಟದಲ್ಲಿ ಸಂಭವಿಸುವ ಬದಲಾವಣೆಗಳೇ ಇದಕ್ಕೆ ಮುಖ್ಯ ಕಾರಣವಾಗುತ್ತದೆ. ಮೆದುಳಿನ ಸುತ್ತಲಿನ ರಕ್ಷಣಾತ್ಮಕ ಪದರವೂ ಬದಲಾಗಿದ್ದು, ಹಾನಿಕಾರಕ ಅಂಶಗಳು ಅದನ್ನು ತಲುಪುವ ಅಪಾಯವಿದೆ. ಇಲಿಗಳ ಮೇಲೆ ನಡೆಸಿದ ಅಧ್ಯಯನ ವ್ಯಾಯಾಮದಿಂದ ಅಂತಹ ಬದಲಾವಣೆಗಳು ಭಾಗಶಃ ಹಿಮ್ಮುಖವಾಗುತ್ತವೆ. ವಯಸ್ಸಾಗುವಿಕೆಗೆ ಸಂಬಂಧಿಸಿದ ಅರಿವಿನ ಕುಸಿತವು ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತಿದೆ ಎಂದು ಅಧ್ಯಯನವು ತೋರ್ಪಡಿಸುತ್ತದೆ.

ಪ್ರಯೋಜನಗಳು ಮನುಷ್ಯರಿಗೂ ಅನ್ವಯ: ಈ ಪ್ರಯೋಜನಗಳು ಇಲಿಗಳಿಗೆ ಮಾತ್ರ ಸೀಮಿತವಾಗಿಲ್ಲ. ಬದಲಿಗೆ ಮಾನವರಲ್ಲಿ ಕೂಡ ಉತ್ತಮ ಸ್ಮರಣಶಕ್ತಿಗೆ ಸಂಬಂಧಿಸಿವೆ. ವ್ಯಾಯಾಮದ ಸಮಯದಲ್ಲಿ ಬಿಡುಗಡೆಯಾಗುವ ಕೆಲವು ಅಣುಗಳು ಇಲಿಗಳಲ್ಲಿ ಅರಿವಿನ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ. ವಯಸ್ಸಾದ ಇಲಿಗಳಲ್ಲಿ ಹೊಸ ಮೆದುಳಿನ ಕೋಶಗಳ ರಚನೆಗೆ ವ್ಯಾಯಾಮ ಉತ್ತಮ ಕೊಡುಗೆ ನೀಡುತ್ತದೆ ಎಂದು ಸಂಶೋಧಕರು ತಿಳಿದುಕೊಂಡಿದ್ದಾರೆ.

ಇದು ಕಲಿಕೆ ಹಾಗೂ ಸ್ಮರಣಶಕ್ತಿಯನ್ನು ಸುಧಾರಿಸಲು ಸಾಧ್ಯವಾಗುತ್ತದೆ. ಸಕ್ರಿಯ ವಯಸ್ಸಾದವರ ರಕ್ತದಲ್ಲಿ GPLD1 ಮಟ್ಟಗಳು ಹೆಚ್ಚಿರುವುದು ಕಂಡುಬಂದಿದೆ. ಇದು ಮನುಷ್ಯರ ಮೇಲೂ ಇದೇ ರೀತಿಯ ಪರಿಣಾಮ ಬೀರುತ್ತದೆ ಎಂದು ವಿಜ್ಞಾನಿಗಳು ವಿವರಿಸುತ್ತಾರೆ. 2018 ರಲ್ಲಿ ಇಲೈಫ್‌ನಲ್ಲಿ ಪ್ರಕಟವಾದ 'ವ್ಯಾಯಾಮವು ಕೀಟೋನ್ ಬಾಡಿ β-ಹೈಡ್ರಾಕ್ಸಿಬ್ಯುಟೈರೇಟ್‌ನ ಕ್ರಿಯೆಯ ಮೂಲಕ ಮೆದುಳಿನಿಂದ ಪಡೆದ ನ್ಯೂರೋಟ್ರೋಫಿಕ್ ಅಂಶದ (BDNF) ಅಭಿವ್ಯಕ್ತಿಯನ್ನು ಉತ್ತೇಜಿಸುತ್ತದೆ' ಎಂಬ ಅಧ್ಯಯನದಲ್ಲಿ ಈ ವಿಷಯ ಸ್ಪಷ್ಟವಾಗಿ ತಿಳಿದುಬರುತ್ತದೆ (ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ).

ಸ್ವಲ್ಪ ಸ್ವಲ್ಪವೇ ವ್ಯಾಯಾಮ ಮಾಡಿ: ನಿಗದಿತ ಸಮಯದೊಳಗೆ ವ್ಯಾಯಾಮ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಚಿಂತಿಸುವ ಅಗತ್ಯವಿಲ್ಲ. ಸಣ್ಣ ವ್ಯಾಯಾಮಗಳಿಂದ ಪ್ರಾರಂಭಿಸುವುದು ಸಹ ಪ್ರಯೋಜನಕಾರಿಯಾಗಿದೆ. ಕುಟುಂಬ ಸದಸ್ಯರು, ನೆರೆಹೊರೆಯವರು ಮತ್ತು ಸ್ನೇಹಿತರೊಂದಿಗೆ ಒಟ್ಟಾಗಿ ವ್ಯಾಯಾಮ ಮಾಡುವುದು ಉತ್ತಮ. ನಿಮ್ಮ ಗುರಿಗಳನ್ನು ನೀವು ಎಷ್ಟು ಚೆನ್ನಾಗಿ ಸಾಧಿಸುತ್ತಿದ್ದೀರಿ ಎಂಬುದನ್ನು ಪತ್ತೆಹಚ್ಚಲು ಫಿಟ್‌ನೆಸ್ ಟ್ರ್ಯಾಕರ್ ಬಳಸಲು ಶಿಫಾರಸು ಮಾಡಲಾಗುತ್ತದೆ. ಗುಂಪಾಗಿ ವ್ಯಾಯಾಮ ಮಾಡುವುದು, ಕ್ಲಾಸ್​ಗಳಿಗೆ ಸೇರುವುದು, ನೃತ್ಯ ಹಾಗೂ ಸಂಗೀತವನ್ನು ಕೇಳುವ ಮೂಲಕ ವ್ಯಾಯಾಮವನ್ನು ಖುಷಿ ಖುಷಿಯಾಗಿ ಮಾಡಬೇಕು. ಇವುಗಳ ಮೂಲಕ ಹೆಚ್ಚು ಹೊತ್ತು ವ್ಯಾಯಾಮ ಮಾಡಬಹುದು ಎಂದು ತಜ್ಞರು ಸಲಹೆ ನೀಡುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ಈ ವೆಬ್​ಸೈಟ್​ನ್ನು ವೀಕ್ಷಿಸಬಹುದು:

ಓದುಗರಿಗೆ ಸೂಚನೆ : ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆ ಆಧರಿಸಿ ನಾವು ಈ ಮಾಹಿತಿ ನಿಮಗೆ ನೀಡಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣಿತ ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.

ಇದನ್ನೂ ಓದಿ: ಪ್ರತಿದಿನ ವಾಲ್‌ನಟ್ಸ್ ಸೇವಿಸಿದರೆ ಹೃದಯದ ಆರೋಗ್ಯಕ್ಕೆ ಉತ್ತಮ: ಸಂಶೋಧನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.