ನವದೆಹಲಿ: ಕಾಲಿನ ಚಲನಶೀಲತೆಯಲ್ಲಿ ಕಾಣುವ ಅಸಾಧ್ಯವಾದ ನೋವಿನ ಒಂದು ಸ್ಥಿತಿ ಆಗಿದೆ. ಇದನ್ನು ರೆಸ್ಟ್‌ಲೆಸ್ ಲೆಗ್ ಸಿಂಡ್ರೋಮ್ ಅಂತಾ ಹೇಳಲಾಗುತ್ತದೆ. ಅನೇಕರನ್ನು ಈ ನೋವು ಬಾಧಿಸುತ್ತಲೇ ಇದೆ. ಇದು ವಯಸ್ಸಾದವರ ಮೊಣಕಾಲಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತದೆ. ಈ ರೆಸ್ಟ್‌ಲೆಸ್ ಲೆಗ್ ಸಿಂಡ್ರೋಮ್ ಇದೀಗ ಅನುವಂಶಿಕ ಆಧಾರಿತ ಚಿಕಿತ್ಸೆ ಕುರಿತು ಅಂತಾರಾಷ್ಟ್ರೀಯ ವಿಜ್ಞಾನಿಗಳು ಹೊಸ ದಾರಿಯೊಂದನ್ನು ಪತ್ತೆಮಾಡಿದ್ದಾರೆ.
ರೆಸ್ಟ್‌ಲೆಸ್ ಲೆಗ್ ಸಿಂಡ್ರೋಮ್ ಹೊಂದಿರುವರ ಕಾಲಿನಲ್ಲಿ ಅಸಾಧ್ಯವಾದ ನೋವು, ಚಲನಶೀಲತೆ ಸಾಧ್ಯವಾಗದಂತಹ ಪರಿಸ್ಥಿತಿ ಏರ್ಪಡುತ್ತದೆ. ಜೊತೆಗೆ ಎಳೆತ ಮತ್ತು ಉರಿ, ಕರೆತದಂತಹ ಪರಿಸ್ಥಿತಿ ಕಾಣುತ್ತದೆ. ಅದರಲ್ಲೂ ಸಂಜೆ ಅಥವಾ ರಾತ್ರಿ ವೇಳೆ ಈ ನೋವು ಅಗಾಧವಾಗಿರುತ್ತದೆ. ಈ ಸಹಿಸಲು ಅಸಾಧ್ಯವಾದ ನೋವು, ನಿದ್ರೆ ಭಂಗ ಮಾಡುವುದಲ್ಲದೇ, ಖಿನ್ನತೆ ಅಥವಾ ಆತಂಕ, ಹೃದಯ ರಕ್ತನಾಳ ಸಮಸ್ಯೆ, ಅಧಿಕ ರಕ್ತದೊತ್ತಡ ಮತ್ತು ಮಧುಮೇಹದಂತಹ ಸಮಸ್ಯೆಗೆ ಕಾರಣವಾಗುತ್ತದೆ.
ಈ ರೆಸ್ಟ್ಲೆಗ್ ಸಿಂಡ್ರೋಮ್ ಕಾರಣ ಇನ್ನೂ ತಿಳಿಯದಾಗಿದೆ. ಈ ಕುರಿತು ಜರ್ಮನಿಯ ಮ್ಯೂನಿಚ್ ವಿಶ್ವವಿದ್ಯಾನಿಲಯ ಮತ್ತು ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದ ಸಂಶೋಧಕರು 100,000 ಕ್ಕಿಂತ ಹೆಚ್ಚು ರೋಗಿಗಳ ಮೇಲೆ ಅಧ್ಯಯನ ನಡೆಸಿದ್ದಾರೆ. 1.5 ಮಿಲಿಯನ್‌ಗಿಂತಲೂ ಹೆಚ್ಚು ಪರಿಣಾಮ ಬೀರದ ನಿಯಂತ್ರಣಗಳೊಂದಿಗೆ ಮೂರು ಅನುವಂಶಿಕ ಸಂಬಂಧದೊಂದಿಗೆ ದತ್ತಾಂಶ ಸಂಗ್ರಹಿಸಿ, ವಿಶ್ಲೇಷಣೆ ನಡೆಸಿದ್ದಾರೆ.