ಕರ್ನಾಟಕ

karnataka

ETV Bharat / health

ತುಂಬಾ ತುಂಬಾ ದಪ್ಪಗಾಗಿದ್ದೀರಾ..? Don't worry ಇಲ್ಲಿದೆ ಕೊಬ್ಬು ಕರಗಿಸಲು ನೈಸರ್ಗಿಕ ವಿಧಾನ - BAD CHOLESTEROL REDUCING TIPS - BAD CHOLESTEROL REDUCING TIPS

ಕೊಬ್ಬ ಕರಗಿಸಲು ಔಷಧಗಳನ್ನು ಸೇವಿಸುತ್ತಿದ್ದೀರಾ? ಹಾಗಾದರೆ ಔಷಧಗಳನ್ನು ಸೇವಿಸುವುದನ್ನು ನಿಲ್ಲಿಸಿ, ಇಲ್ಲಿದೆ ನೈಸರ್ಗಿಕ ವಿಧಾನಗಳ ಮೂಲಕ ಕೊಬ್ಬ ಕರಗಿಸುವ ಕೆಲವು ಸಲಹೆಗಳು.

BAD CHOLESTEROL REDUCING TIPS
ತುಂಬಾ ತುಂಬಾ ದಪ್ಪಗಾಗಿದ್ದೀರಾ..? Don't worry ಇಲ್ಲಿದೆ ಕೊಬ್ಬು ಕರಗಿಸಲು ನೈಸರ್ಗಿಕ ವಿಧಾನ (ETV Bharat)

By ETV Bharat Karnataka Team

Published : Jul 13, 2024, 10:57 AM IST

ಇತ್ತೀಚೆಗೆ ಅಧಿಕ ಕೊಲೆಸ್ಟ್ರಾಲ್ ಸಮಸ್ಯೆಯಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಕೊರೆಸ್ಟ್ರಾಲ್​ ಅಪಾಯಕಾರಿ ಸಮಸ್ಯೆಯಾಗಿರುವುದರಿಂದ ಇದನ್ನು ಕರಗಿಸಲು ಅನೇಕರು ಔಷಧ ಬಳಸುತ್ತಾರೆ. ಆದರೆ, ಔಷಧಗಳ ಬಳಕೆಯಿಂದ ಅಡ್ಡಪರಿಣಾಮಗಳಿರುವುದರಿಂದ, ನೈಸರ್ಗಿಕ ವಿಧಾನಗಳ ಮೂಲಕ ನೀವು ಕೊಬ್ಬನ್ನು ಕರಗಿಸಿಕೊಳ್ಳಬಹುದು ಎಂದು ತಜ್ಞರು ಹೇಳುತ್ತಾರೆ.

ದೇಹದಲ್ಲಿ ಎರಡು ರೀತಿಯ ಕೊಬ್ಬುಗಳಿವೆ. ಒಂದು LDL ಮತ್ತು ಇನ್ನೊಂದು HDL. ಇದನ್ನು ಸಾಮಾನ್ಯ ಭಾಷೆಯಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಎಂದು ಕರೆಯಲಾಗುತ್ತದೆ. ರಕ್ತದಲ್ಲಿ ಕೆಟ್ಟ ಕೊಬ್ಬು ಸಂಗ್ರಹವಾಗುವುದರಿಂದ ಹೃದಯಾಘಾತದಿಂದ ಹಠಾತ್ ಸಾವು ಮತ್ತು ಬ್ರೈನ್ ಸ್ಟ್ರೋಕ್‌ನಿಂದ ಪಾರ್ಶ್ವವಾಯು ಉಂಟಾಗುತ್ತದೆ. ಅದಕ್ಕಾಗಿಯೇ ಕೊಬ್ಬನ್ನು ಕಡಿಮೆ ಮಾಡುವುದು ಮುಖ್ಯ.

ಆದರೆ, ಈ ಕೊಬ್ಬು ಕರಗಿಸುವ ಭರದಲ್ಲಿ ಅನೇಕ ಜನರು ಹೊಟ್ಟೆಯ ಕೊಬ್ಬನ್ನು ಕರಗಿಸಲು ಔಷಧಗಳನ್ನು ಆಶ್ರಯಿಸುತ್ತಾರೆ. ಆದರೆ, ದೀರ್ಘಕಾಲದವರೆಗೆ ಔಷಧಗಳನ್ನು ಬಳಸಿದರೆ ಅದರಿಂದ ಹಲವು ಅಡ್ಡ ಪರಿಣಾಮಗಳು ಉಂಟಾಗುತ್ತವೆ ಎನ್ನುತ್ತಾರೆ ತಜ್ಞರು. ಔಷಧಗಳ ಮೊರೆ ಹೋಗುವ ಬದಲು ನೈಸರ್ಗಿಕವಾಗಿ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಬಹುದು. ಅದಕ್ಕಾಗಿ ಕೆಲವು ಸಲಹೆಗಳನ್ನು ಇಲ್ಲಿ ನೀಡಲಾಗಿದೆ.

ವ್ಯಾಯಾಮ: ದೈನಂದಿನ ವ್ಯಾಯಾಮದಿಂದ ಅಧಿಕ ಕೊಲೆಸ್ಟ್ರಾಲ್ ಕಡಿಮೆ ಮಾಡಬಹುದು ಎಂದು ತಜ್ಞರು ಹೇಳುತ್ತಾರೆ. ವ್ಯಾಯಾಮವು ಕೊಲೆಸ್ಟ್ರಾಲ್ ಅನ್ನು ಕರಗಿಸುವುದಲ್ಲದೇ, ಸ್ನಾಯುಗಳನ್ನು ಬಲಪಡಿಸುತ್ತದೆ. ಟೈಪ್ 2 ಮಧುಮೇಹವನ್ನು ಕಡಿಮೆ ಮಾಡುವುದು ಸೇರಿದಂತೆ ಇತರ ಆರೋಗ್ಯ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಹೇಳಲಾಗುತ್ತದೆ.

ಮೊನೊಸಾಚುರೇಟೆಡ್ ಕೊಬ್ಬುಗಳು: ನೀವು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಬಯಸಿದರೆ, ನಿಮ್ಮ ಆಹಾರದಲ್ಲಿ ಸ್ಯಾಚುರೇಟೆಡ್ ಕೊಬ್ಬಿನ ಬದಲು ಮೋನೋ ಸ್ಯಾಚುರೇಟೆಡ್​ ಕೊಬ್ಬನ್ನು ತೆಗೆದುಕೊಳ್ಳುವುದು ಉತ್ತಮ. ಈ ರೀತಿಯ ಕೊಬ್ಬು ನಮ್ಮ ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಒಳ್ಳೆಯ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅನೇಕ ಅಧ್ಯಯನಗಳು ಕೂಡ ಇದೇ ವಿಷಯವನ್ನು ಬಹಿರಂಗಪಡಿಸಿವೆ. ಆಲಿವ್ ಎಣ್ಣೆ, ಆವಕಾಡೊ, ಮತ್ತು ಬೀಜಗಳು ಮೊನೊಸಾಚುರೇಟೆಡ್ ಕೊಬ್ಬಿಗೆ ಉದಾಹರಣೆಗಳಾಗಿವೆ.

"ದಿ ಲ್ಯಾನ್ಸೆಟ್ ಜರ್ನಲ್" ನಲ್ಲಿ ಪ್ರಕಟವಾದ 2002 ರ ಅಧ್ಯಯನವು ಮೆಡಿಟರೇನಿಯನ್ ಆಹಾರವನ್ನು ಸೇವಿಸುವ ಜನರು (ಅಧಿಕವಾದ ಮೊನೊಸಾಚುರೇಟೆಡ್ ಕೊಬ್ಬುಗಳು, ಹಣ್ಣುಗಳು, ತರಕಾರಿಗಳು, ಧಾನ್ಯಗಳು ಮತ್ತು ಕಾಳುಗಳು) ಕಡಿಮೆ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಹೊಂದಿರುತ್ತಾರೆ. ಮತ್ತು ಅವರಿಗೆ ಹೃದ್ರೋಗದ ಅಪಾಯವೂ ಕಡಿಮೆ ಇರುತ್ತದೆ ಎಂದು ಹೇಳಿದೆ. ಸ್ಪೇನ್‌ನಲ್ಲಿರುವ ಬಾರ್ಸಿಲೋನಾದ ಪ್ರಾಥಮಿಕ ಆರೈಕೆ ಸಂಶೋಧನಾ ಸಂಸ್ಥೆ (IMIM)ಯ ನಿರ್ದೇಶಕ ಡಾ. ಸೆರ್ಗಿಯೋ ಡಿ ನ್ಯೂರಿಸ್ ಅವರು ಈ ಸಂಶೋಧನೆಯಲ್ಲಿದ್ದರು.

ತೂಕ ನಿಯಂತ್ರಣ: ಅನಾರೋಗ್ಯಕರ ಆಹಾರದಿಂದ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ. ಅದೇನೇ ಇರಲಿ, ತೆಳ್ಳಗಿನವರಲ್ಲಿಯೂ ಹೀಗೆ ಆಗುವ ಭಯವಿದೆ. ಆದ್ದರಿಂದ ನಾವು ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಬೇಕು. ಅದಕ್ಕಾಗಿ ಹೊರಗಿನ ಆಹಾರ ತ್ಯಜಿಸಿ ಹಣ್ಣು, ತರಕಾರಿ, ಧಾನ್ಯಗಳಂತಹ ಉತ್ತಮ ಆಹಾರ ಸೇವಿಸಿ. ಸಾಕಷ್ಟು ನಿದ್ರೆ ಮಾಡುವಂತಹ ವಿಧಾನಗಳ ಮೂಲಕ ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಬಹುದು ಎಂದು ತಜ್ಞರು ಹೇಳುತ್ತಾರೆ.

ಕರಗುವ ನಾರಿನಂಶ: ಕರಗುವ ನಾರಿನಂಶವಿರುವ ಆಹಾರವನ್ನು ಸೇವಿಸುವುದರಿಂದ ಎಲ್​ಡಿಎಲ್ ಮಟ್ಟವನ್ನು ಕಡಿಮೆ ಮಾಡಬಹುದು ಎಂದು ತಜ್ಞರು ಹೇಳುತ್ತಾರೆ. "ಅಮೆರಿಕನ್ ಜರ್ನಲ್ ಆಫ್ ಕ್ಲಿನಿಕಲ್ ನ್ಯೂಟ್ರಿಷನ್" ಕೂಡ ಇದೇ ವಿಷಯವನ್ನು ಬಹಿರಂಗಪಡಿಸಿದೆ. ಹಾಗಾಗಿ ಓಟ್ಸ್, ಬಾರ್ಲಿ, ಕಡಲೆ, ಕಿಡ್ನಿ ಬೀನ್ಸ್, ಸೇಬು, ಪೇರಳೆಗಳನ್ನು ಸೇವಿಸುವುದು ಉತ್ತಮ ಎನ್ನುತ್ತಾರೆ.

ಸೂಚನೆ: ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ಒದಗಿಸುತ್ತಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣತ ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.

ಇದನ್ನೂ ಓದಿ:ಮಲಬದ್ಧತೆಯಿಂದ ಬಳಲುತ್ತಿದ್ದೀರಾ? ಟಾಯ್ಲೆಟ್​​ನಲ್ಲಿ ಕಷ್ಟಪಡ್ತಿದ್ದೀರಾ?; ರಾತ್ರಿ ಈ ನೀರು ಕುಡಿದರೆ ಎಲ್ಲವೂ ಸರಿಯಾಗುತ್ತೆ! - Chia Seed Benefits And Side Effects

ABOUT THE AUTHOR

...view details