ನವದೆಹಲಿ: ಆರೋಗ್ಯದ ವಿಚಾರದಲ್ಲಿ ಮಧುಮೇಹಿಗಳು ಹೆಚ್ಚಿನ ಜಾಗ್ರತೆ ವಹಿಸುವುದು ಅಗತ್ಯ. ಅದರಲ್ಲೂ ಪಾದಗಳ ನಿರ್ವಹಣೆ ಮಾಡುವುದು ಕೂಡ ಅವಶ್ಯ. ನರಗಳು ಮತ್ತು ರಕ್ತ ಪೂರೈಕೆಯ ಮೇಲೆ ಪಾದಗಳು ಗಮನಾರ್ಹವಾಗಿ ಪರಿಣಾಮ ಬೀರುತ್ತವೆ. ಇದರ ನಿರ್ವಹಣೆ ಉತ್ತಮವಾಗಿಲ್ಲದಿದ್ದಾಗ ಅದು ಹುಣ್ಣುಗಳಿಗೆ ಕಾರಣವಾಗುತ್ತದೆ ಎಂದು ಪ್ರಮುಖ ಮಧುಮೇಹಿ ತಜ್ಞರು ತಿಳಿಸಿದ್ದಾರೆ.
ಪಾದಗಳಿಗೆ ಕಡಿಮೆ ರಕ್ತ ಪೂರೈಕೆಯಿಂದಾಗಿ ಮಧುಮೇಹಿಗಳಲ್ಲಿ ಅಂಗ ಛೇದನ (limb amputations) ಉಂಟಾಗುತ್ತದೆ. ಈ ಹಿನ್ನೆಲೆ ಪಾದದ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಸುವುದು ಅಗತ್ಯ ಎನ್ನುತ್ತಾರೆ ಡಾ ಮೋಹನ್ ಡಯಾಬಿಟೀಸ್ ಸ್ಪೆಷಲಿಸ್ಟ್ ಸೆಂಟರ್ನ ಮುಖ್ಯಸ್ಥರಾಗಿರುವ ಡಾ ವಿ ಮೋಹನ್.
ನರಗಳು ಹಾನಿಗಳನ್ನು ಅಂದಾಜಿಸಲು ಸಾಧ್ಯವಿಲ್ಲ. ಪಾದದ ಬೆರಳು, ಕಾಲಿನಲ್ಲಿ ನೋವು, ಉರಿಯೂತ ಸೇರಿದಂತೆ ಇನ್ನಿತರ ಸಮಸ್ಯೆ ಅಥವಾ ಬದಲಾವಣೆಗಳು ಕಾಣಿಸಿಕೊಂಡಾಕ್ಷಣ ವೈದ್ಯರನ್ನು ಭೇಟಿ ಮಾಡುವುದು ಸೂಕ್ತ.
ಮಧುಮೇಹಿಗಳ ಕಾಲಿನ ಸಮಸ್ಯೆಗಳು ಬಾಹ್ಯ ಅಪಧಮನಿ ಕಾಯಿಲೆ ಮತ್ತು ಡಯಾಬಿಟಿಕ್ ನರರೋಗ (ನರ ಹಾನಿ) ಕಾರಣದಿಂದಾಗಿ ಉಂಟಾಗುತ್ತದೆ. ರಕ್ತದಲ್ಲಿನ ಸಕ್ಕರೆಯ ಅಂಶವೂ ಸಾಮಾನ್ಯ ಸಮಸ್ಯೆಗೆ ಕಾರಣವಾಗಿದೆ. ಸುಮಾರು 85 ಪ್ರತಿಶತದಷ್ಟು ಮಧುಮೇಹ ಸಂಬಂಧಿತ ಕಾಲು ಅಥವಾ ಕಾಲಿನ ಅಂಗಚ್ಛೇದನೆಗಳು ಪಾದದ ಹುಣ್ಣಿನಿಂದ ಪ್ರಾರಂಭವಾಗುತ್ತವೆ ಎಂದು ಅಧ್ಯಯನಗಳು ತೋರಿಸಿವೆ.
ಮಧುಮೇಹಿಗಳ ಕಾಲಿನ ಆರೈಕೆ ಸಂಬಂಧ ಡಾ ಮೋಹನ್ ಕೆಲವು ಸಲಹೆಗಳನ್ನು ಹಂಚಿಕೊಂಡಿದ್ದಾರೆ. ಅದರ ಅನುಸಾರ, ರಕ್ತದಲ್ಲಿನ ಗ್ಲೂಕೋಸ್ ಅನ್ನು ನಿಯಂತ್ರಣ, ಪ್ರತಿದಿನ ಪಾದಗಳನ್ನು ಸ್ವಚ್ಛಗೊಳಿಸಿ, ಒಣಗಿಸುವಂತಹ ಪಾದದ ಆರೈಕೆಗಳು ನಿರ್ಣಾಯಕವಾಗಿವೆ.