Kidney Failure Symptoms:ದೇಹಕ್ಕೆ ಪ್ರತಿಯೊಂದು ಭಾಗವೂ ತುಂಬಾ ಮುಖ್ಯವಾಗಿದೆ. ನಮ್ಮ ಕೈಮುಷ್ಟಿ ಗಾತ್ರದಷ್ಟಿರುವ ಕಿಡ್ನಿಗಳು ನಿರ್ದಿಷ್ಟವಾಗಿ ಅನೇಕ ಕಾರ್ಯಗಳನ್ನು ನಿರ್ವಹಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಕಿಡ್ನಿ ಮಾನವ ದೇಹದಲ್ಲಿರುವ ಬಹಳ ಮುಖ್ಯವಾದ ಅಂಗವಾಗಿದೆ. ದೇಹವು ಸರಿಯಾಗಿ ಕಾರ್ಯನಿರ್ವಹಿಸಲು ಕಿಡ್ನಿಗಳು ಆರೋಗ್ಯಕರವಾಗಿರುವುದು ಮುಖ್ಯವಾಗಿದೆ. ವ್ಯಕ್ತಿಯ ಮೂತ್ರಪಿಂಡಗಳು ಸರಿಯಾಗಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿದರೆ, ಈ ಸ್ಥಿತಿಯನ್ನು ಮೂತ್ರಪಿಂಡ ವೈಫಲ್ಯ ಅಥವಾ ಯುರೇಮಿಯಾ ಎಂದು ಹೇಳಲಾಗುತ್ತದೆ. ಈ ಸ್ಥಿತಿಯಲ್ಲಿ ದೇಹದಲ್ಲಿ ಹೆಚ್ಚುವರಿ ನೀರು ಹಾಗೂ ತ್ಯಾಜ್ಯ ವಸ್ತುಗಳು ಸಂಗ್ರಹವಾಗುತ್ತವೆ, ಇದರಿಂದಾಗಿ ಆ ವ್ಯಕ್ತಿ ಮೃತಪಡುತ್ತಾನೆ.
ಕಿಡ್ನಿ ಕಾಯಿಲೆ ಅನುವಂಶಿಕವಾಗಿದ್ದರೆ ಅಪಾಯಕಾರಿ: ಒಬ್ಬ ವ್ಯಕ್ತಿಗೆ ಕಿಡ್ನಿ ಕಾಯಿಲೆ ಬಂದ ನಂತರ ದೇಹದ ಸ್ಥಿತಿ ಕ್ರಮೇಣ ಹದಗೆಡುತ್ತದೆ. ಇದರಿಂದ ಕ್ರಿಯಾತ್ಮಕ ಸಾಮರ್ಥ್ಯ ನಷ್ಟವಾಗುತ್ತದೆ. ಮೂತ್ರಪಿಂಡದ ಕಾಯಿಲೆಯ ಅನುವಂಶಿಕ ಇಲ್ಲವೇ ಕುಟುಂಬದ ಇತಿಹಾಸ ಹೊಂದಿರುವ ಜನರಲ್ಲಿ ಮಧುಮೇಹ ಹಾಗೂ ಅಧಿಕ ರಕ್ತದೊತ್ತಡದಂತಹ ತೊಂದರೆಗಳು ವಿಶೇಷವಾಗಿ ಸಾಮಾನ್ಯವಾಗಿದೆ. ಕಡಿಮೆ ತೂಕದ ಶಿಶು ಜನನ, ದೀರ್ಘಕಾಲೀನ ಔಷಧಗಳು, ತೀವ್ರ ಮೂತ್ರನಾಳದ ಸೋಂಕುಗಳು, ಬೊಜ್ಜುತನ, ಕಿಡ್ನಿ ಸ್ಟೋನ್ಗಳು ಇವೆಲ್ಲವೂ ಮೂತ್ರಪಿಂಡದ ಕಾಯಿಲೆಗೆ ಕಾರಣವಾಗುತ್ತದೆ.
ಕಿಡ್ನಿ ವೈಫಲ್ಯಕ್ಕೆ ಕಾರಣಗಳೇನು?:
ಕಿಡ್ನಿ ವೈಫಲ್ಯಕ್ಕೆ ಚಿಕಿತ್ಸೆ ನೀಡಲು ಡಯಾಲಿಸಿಸ್ ಅಥವಾ ಮೂತ್ರಪಿಂಡ ಕಸಿ ಮಾಡಬಹುದು. ಆದರೆ, ಡಯಾಲಿಸಿಸ್‌ನಲ್ಲಿರುವ ಕೆಲವರು ಕೇವಲ 30 ವರ್ಷ ಅಥವಾ ಅದಕ್ಕಿಂತ ಕಡಿಮೆ ಕಾಲ ಬದುಕುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ ಕಿಡ್ನಿ ವೈಫಲ್ಯವನ್ನು ತಪ್ಪಿಸಲು ಸರಿಯಾದ ಆಹಾರವನ್ನು ತೆಗೆದುಕೊಳ್ಳುವುದು ಹಾಗೂ ಜೀವನಶೈಲಿಯನ್ನು ಬದಲಾಯಿಸುವುದು ಮುಖ್ಯವಾಗಿದೆ.
ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಮೂತ್ರಪಿಂಡದ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಅನೇಕ ಜನರು ಚಿಕ್ಕ ವಯಸ್ಸಿನಲ್ಲಿಯೇ ಮೂತ್ರಪಿಂಡದ ಸೋಂಕಿನಿಂದ ಬಳಲುತ್ತಿದ್ದಾರೆ. ಇದೆಲ್ಲವೂ ಅನಾರೋಗ್ಯಕರ ಆಹಾರ ಪದ್ಧತಿ ಹಾಗೂ ಕೆಟ್ಟ ಜೀವನಶೈಲಿಯೇ ಪ್ರಮುಖ ಕಾರಣವಾಗಿದೆ. ಮೂತ್ರಪಿಂಡದ ಸೋಂಕು ಉಂಟಾದಾಗ ದೇಹದಲ್ಲಿ ಯಾವ ರೀತಿಯ ಲಕ್ಷಣಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ನಿಮ್ಮ ಕಿಡ್ನಿ ಆರೋಗ್ಯಕರವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಹೇಗೆ ತಿಳಿಯಬಹುದು?
ಕಿಡ್ನಿ ಶುದ್ಧೀಕರಣಕಾರಕದಂತೆ ಕಾರ್ಯ ಮಾಡುತ್ತೆ:ಮಾನವ ದೇಹದಲ್ಲಿ ಮೂತ್ರಪಿಂಡವು ಶುದ್ಧೀಕರಣಕಾರಕದಂತೆ ಕಾರ್ಯನಿರ್ವಹಿಸುತ್ತದೆ. ಈ ಪರಿಸ್ಥಿತಿಯಲ್ಲಿ ಮೂತ್ರಪಿಂಡ ವೈಫಲ್ಯ ಸಂಭವಿಸಿದಲ್ಲಿ ಇಡೀ ದೇಹದ ಮೇಲೆ ಪರಿಣಾಮ ಬೀರಬಹುದು. ವಾಸ್ತವವಾಗಿ ಮೂತ್ರ ವ್ಯವಸ್ಥೆ ಹಾಗೂ ಮೂತ್ರನಾಳವು ದೇಹದಿಂದ ಹಾನಿಕಾರಕ ವಸ್ತುಗಳನ್ನು ತೆಗೆದುಹಾಕಲು ಕೆಲಸ ಮಾಡುತ್ತದೆ. ಮೂತ್ರಪಿಂಡಗಳು ರಕ್ತದಿಂದ ತ್ಯಾಜ್ಯ ವಸ್ತುಗಳು ಮತ್ತು ಹೆಚ್ಚುವರಿ ನೀರನ್ನು ಶೋಧಿಸಿ ಮೂತ್ರವನ್ನು ಉತ್ಪಾದಿಸುತ್ತವೆ.
ದೇಹವನ್ನು ಆರೋಗ್ಯವಾಗಿಡಲು ಮೂತ್ರ ವ್ಯವಸ್ಥೆಯು ಬಹಳ ಮುಖ್ಯ. ಅದು ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ, ದೇಹದಲ್ಲಿ ತ್ಯಾಜ್ಯ ವಸ್ತುಗಳು ಹಾಗೂ ಹೆಚ್ಚುವರಿ ನೀರು ಸಂಗ್ರಹವಾಗಬಹುದು. ಇದು ಹೃದಯರಕ್ತನಾಳ ವ್ಯವಸ್ಥೆಯಂತಹ ಇತರ ವ್ಯವಸ್ಥೆಗಳನ್ನು ಹಾನಿಗೊಳಿಸುತ್ತದೆ ಹಾಗೂ ಗಂಭೀರ ಕಾಯಿಲೆಗಳಿಗೆ ಕಾರಣವಾಗುತ್ತದೆ. ಮೂತ್ರಪಿಂಡಗಳನ್ನು ಆರೋಗ್ಯವಾಗಿಡಲು ಕೇವಲ ನೀರು ಕುಡಿಯುವುದು ಸಾಕಾಗುವುದಿಲ್ಲ. ಕಿಡ್ನಿ ವೈಫಲ್ಯವು ಜೀವಕ್ಕೆ ಅಪಾಯಕಾರಿಯಾಗುತ್ತದೆ.