ಕರ್ನಾಟಕ

karnataka

ETV Bharat / health

ಕಾಜು ಮಶ್ರೂಮ್​ ಮಸಾಲಾ ಕರಿ: ಅನ್ನ, ಚಪಾತಿ, ರೊಟ್ಟಿಯ ಜೊತೆಗೂ ಸೂಪರ್​ ಕಾಂಬಿನೇಷನ್​! - Kaju Mushroom Masala Curry

ರೆಸ್ಟೋರೆಂಟ್​ಗಳಲ್ಲಿ ಮಾಡುವ ಕೆಲವು ರೆಸಿಪಿಗಳು ತುಂಬಾ ರುಚಿಕರವಾಗಿರುತ್ತವೆ. ಅದರಲ್ಲೂ ಕಾಜು ಮಶ್ರೂಮ್ ಮಸಾಲಾ ಕರಿ ತುಸು ಹೆಚ್ಚೇ ಟೇಸ್ಟಿ. ಈ ಭಾನುವಾರದ ಊಟಕ್ಕೆ ಮನೆಯಲ್ಲೇ ಈ ಕರಿ ಪ್ರಯತ್ನಿಸಿ, ರುಚಿಯಂತೂ ಅದ್ಭುತ. ರೆಸಿಪಿ ಹೀಗಿದೆ.

By ETV Bharat Karnataka Team

Published : Jul 7, 2024, 3:41 PM IST

CURRY MAKING PROCESS  KAJU MUSHROOM MASALA CURRY  MASALA CURRY IN KANNADA  HOW TO PREPARE KAJU MUSHROOM MASALA
ಕಾಜು ಮಶ್ರೂಮ್​ ಮಸಾಲ ಕರಿ (ETV Bharat)

ಭಾನುವಾರ ಬಂತೆಂದರೆ ಮಾಂಸಪ್ರಿಯರ ಅಡುಗೆ ಮನೆ ವಿಚಾರ ಕೇಳಬೇಕಿಲ್ಲ. ಆದರೆ ಈ ಬಾರಿ ಚಿಕನ್, ಮಟನ್ ಅಡುಗೆ ಮಾಡುವ ಬದಲು, ಕಾಜು ಮಶ್ರೂಮ್ ಮಸಾಲಾ ಕರಿಯನ್ನೇಕೆ ಟ್ರೈ ಮಾಡಬಾರದು?. ಇಲ್ಲಿ ನಾವು ನೀಡುವ ಪಾಕವಿಧಾನವನ್ನು ಪ್ರಯತ್ನಿಸಿದರೆ, ಮತ್ತೆ ಮತ್ತೆ ಮಾಡುತ್ತಲೇ ಇರುವಿರಿ. ಏಕೆಂದರೆ ಇದು ಅದ್ಭುತ ರುಚಿ ನೀಡುತ್ತದೆ. ಹಾಗಂತ ಇದನ್ನು ಮಾಡುವುದೇನೂ ಕಷ್ಟವಲ್ಲ. ಈ ಕರಿಯನ್ನು ಅನ್ನ ಮಾತ್ರವಲ್ಲ ಚಪಾತಿ, ಪರೋಟಾ, ರೊಟ್ಟಿ.. ಹೀಗೆ ಯಾವುದೇ ಕಾಂಬಿನೇಷನ್ ಜೊತೆಗೂ ಸವಿಯಬಹುದು.

ಗ್ರೇವಿಗೆ ಬೇಕಾಗುವ ಪದಾರ್ಥಗಳು:

  • ಟೊಮೆಟೊ - 3
  • ಒಂದು ಸಣ್ಣ ತುಂಡು ಶುಂಠಿ
  • ಗೋಡಂಬಿ - 1/4 ಕಪ್ (15 ನಿಮಿಷಗಳ ಕಾಲ ನೆನೆಸಿಡಿ)
  • ಮೆಣಸಿನಕಾಯಿ-3
  • ಬೆಳ್ಳುಳ್ಳಿ ಎಸಳು - 4
  • ಏಲಕ್ಕಿ - 2
  • ಲವಂಗ - 3
  • ಒಣ ಮೆಣಸಿನಕಾಯಿ - 2
  • ಕರಿ ಮೆಣಸು - 1/2 ಟೀ ಸ್ಪೂನ್
  • ಮೊಸರು - 1/4 ಕಪ್

ಕರಿ ಮಾಡಲು ಬೇಕಿರುವ ಪದಾರ್ಥಗಳು:

  • ಅಣಬೆ - 150 ಗ್ರಾಂ
  • ಗೋಡಂಬಿ - 3/4 ಕಪ್
  • ಎಣ್ಣೆ - ಬೇಕಾಗುವಷ್ಟು
  • ಈರುಳ್ಳಿ - 1
  • ಜೀರಿಗೆ - 1 ಟೀ ಸ್ಪೂನ್
  • ಮೆಣಸಿನಕಾಯಿ - 1/2 ಟೀ ಸ್ಪೂನ್
  • ಕಾಶ್ಮೀರಿ ಮೆಣಸಿನಕಾಯಿ - 2 ಟೀ ಸ್ಪೂನ್
  • ಗರಂ ಮಸಾಲಾ - 1/2 ಟೀ ಸ್ಪೂನ್
  • ಧನಿಯಾ ಪುಡಿ-1/2 ಟೀ ಸ್ಪೂನ್
  • ಉಪ್ಪು - ಬೇಕಾಗುವಷ್ಟು
  • ನೀರು - ಬೇಕಾಗುವಷ್ಟು
  • ತುಪ್ಪ - 1 ಟೀ ಸ್ಪೂನ್
  • ಕೊತ್ತಂಬರಿ ಸೊಪ್ಪು
  • ನಿಂಬೆ ರಸ - ಸ್ವಲ್ಪ

ಈಗ ಕರಿ ಮಾಡುವ ವಿಧಾನ:

  • ಮೊದಲು ಗ್ರೇವಿಗೆ ಬೇಕಾಗುವ ಪದಾರ್ಥಗಳನ್ನು ರುಬ್ಬಿಕೊಳ್ಳಬೇಕು. ಟೊಮೆಟೊ, ಒಂದು ತುಂಡು ಶುಂಠಿ, ಹಸಿರು ಮೆಣಸಿನಕಾಯಿ, ಬೆಳ್ಳುಳ್ಳಿ, ಲವಂಗ, ಏಲಕ್ಕಿ, ಕರಿ ಮೆಣಸು, ನೆನೆಸಿದ ಗೋಡಂಬಿ, ಒಂದು ಕಪ್ ಮೊಸರು, ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.
  • ನಂತರ ಸ್ಟವ್ ಆನ್ ಮಾಡಿ ಬಾಣಲೆ ಇಟ್ಟು ಎಣ್ಣೆ ಹಾಕಿ. 1/4 ಕಪ್​ ಗೋಡಂಬಿ ಹಾಕಿ ಒಂದು ನಿಮಿಷ ಹುರಿಯಿರಿ. ಈಗ ಅರ್ಧಕ್ಕೆ ಕತ್ತರಿಸಿದ ಮಶ್ರೂಮ್ ಸೇರಿಸಿ. ಅಣಬೆ ಮತ್ತು ಗೋಡಂಬಿ ತಿಳಿ ಗೋಲ್ಡನ್ ಬ್ರೌನ್ ಆಗುವವರೆಗೆ ಫ್ರೈ ಮಾಡಿ. ನಂತರ ಅವುಗಳನ್ನು ಒಂದು ತಟ್ಟೆಯಲ್ಲಿ ತೆಗೆದುಕೊಂಡು ಪಕ್ಕಕ್ಕಿಡಿ .
  • ಈಗ ಅದೇ ಎಣ್ಣೆಯಲ್ಲಿ ಜೀರಿಗೆ ಮತ್ತು ಈರುಳ್ಳಿ ತುಂಡುಗಳನ್ನು ಹಾಕಿ ಹೊಂಬಣ್ಣ ಬರುವವರೆಗೆ ಹುರಿಯಿರಿ. ನಂತರ ಮೆಣಸಿನಕಾಯಿ, ಕಾಶ್ಮೀರಿ ಮೆಣಸಿನಕಾಯಿ, ಗರಂ ಮಸಾಲ ಮತ್ತು ಕೊತ್ತಂಬರಿ ಪುಡಿ ಹಾಕಿ ಮಿಶ್ರಣ ಮಾಡಿ.
  • ರುಬ್ಬಿದ ಗೋಡಂಬಿ ಮಿಶ್ರಣ ಸೇರಿಸಿ ಮತ್ತು ಎಣ್ಣೆ ಮೇಲಕ್ಕೆ ತೇಲುವವರೆಗೆ ಬೇಯಿಸಿ. ನಂತರ ನೀರು ಸೇರಿಸಿ ಮತ್ತು ಗ್ರೇವಿ ದಪ್ಪವಾಗುವವರೆಗೆ ಬೇಯಿಸಿ.
  • ಈಗ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮತ್ತೆ ಬೇಯಿಸಿ.
  • ಹುರಿದ ಗೋಡಂಬಿ, ಮಶ್ರೂಮ್ ಹಾಕಿ 5 ನಿಮಿಷ ಬೇಯಿಸಿ.
  • ಈಗ ಒಂದು ಚಮಚ ತುಪ್ಪ ಮತ್ತು ಕೊತ್ತಂಬರಿ ಸೊಪ್ಪನ್ನು ಹಾಕಿ ಕಡಿಮೆ ಉರಿಯಲ್ಲಿ 2-3 ನಿಮಿಷ ಬೇಯಿಸಿರಿ.
  • ಸ್ಟವ್ ಆಫ್ ಮಾಡುವ ಮೊದಲು ಸ್ವಲ್ಪ ನಿಂಬೆ ರಸ ಹಿಂಡುವುದು ಒಳ್ಳೆಯದು. ಈಗ ರೆಸ್ಟೋರೆಂಟ್ ಶೈಲಿಯ ಕಾಜು ಮಶ್ರೂಮ್ ಕರಿ ಸಿದ್ಧ.

ಇದನ್ನೂ ಓದಿ:ಆಹಾರ ​ಪೊಟ್ಟಣದ ಮೇಲೆ ಸಕ್ಕರೆ, ಉಪ್ಪಿನಂಶದ ಮಾಹಿತಿ ಮುದ್ರಣ ಕಡ್ಡಾಯ - Packaged Food Items

ABOUT THE AUTHOR

...view details