Coffee Side Effects on Health: ನಮ್ಮಲ್ಲಿ ಹೆಚ್ಚಿನವರು ಬೆಳಗ್ಗೆ ಕಾಫಿ ಕುಡಿಯದೇ ದಿನವನ್ನು ಪ್ರಾರಂಭಿಸುವುದಿಲ್ಲ. ಬಿಸಿ ಬಿಸಿ ಕಾಫಿ ಗಂಟಲಿಗೆ ಇಳಿದೇ ಇದ್ದರೆ ಏನೋ ಕಳೆದುಕೊಂಡಂತಹ ಅನುಭವವಾಗುತ್ತದೆ. ಕಾಫಿ ಕುಡಿಯುವುದು ನಿಮಗೆ ಒಳ್ಳೆಯದು ಎಂದು ಅನೇಕ ಅಧ್ಯಯನಗಳು ಸೂಚಿಸುತ್ತವೆ.
2019ರಲ್ಲಿ 'ಎನ್ಪಿಜೆ ಸೈಕಲಾಜಿಕಲ್ ಸೈನ್ಸಸ್' ಜರ್ನಲ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಕಾಫಿ ಕುಡಿಯುವುದರಿಂದ ಮನಸ್ಥಿತಿ ಸುಧಾರಿಸುತ್ತದೆ. ಜೊತೆಗೆ ಒತ್ತಡ ಮತ್ತು ಆತಂಕದಂತಹ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ವೆಸ್ಟರ್ನ್ ಆಸ್ಟ್ರೇಲಿಯಾ ವಿಶ್ವವಿದ್ಯಾನಿಲಯದ ಡಾ. ಆಸ್ಟ್ರಿಡ್ ಮೊಡ್ರಿಕ್- ಪರ್ಸಿವಲ್ ಈ ಅಧ್ಯಯನದಲ್ಲಿ ಭಾಗವಹಿಸಿದ್ದರು.
ಅತಿಯಾಗಿ ಕಾಫಿ ಕುಡಿದರೆ ಏನಾಗುತ್ತೆ?:
- ಅತಿಯಾಗಿ ಕಾಫಿ ಕುಡಿಯುವುದರಿಂದಲೂ ಕೆಲವು ಸಮಸ್ಯೆಗಳಿವೆ ಎನ್ನುತ್ತಾರೆ ತಜ್ಞರು. ಅದಕ್ಕಾಗಿಯೇ ಅದನ್ನು ಮಿತವಾಗಿ ತೆಗೆದುಕೊಳ್ಳಲು ಸೂಚಿಸಲಾಗುತ್ತದೆ.
ಹೆಚ್ಚು ಕಾಫಿ ಕುಡಿಯುವುದರಿಂದ ಹೆಚ್ಚು ಮೂತ್ರ ವಿಸರ್ಜನೆಯಾಗಬಹುದು. ಇದರಿಂದ ಉಪ್ಪು ಮತ್ತು ನೀರು ಹೆಚ್ಚು ಹೊರಹೋಗಿ ನಿರ್ಜಲೀಕರಣವಾಗುವ ಅಪಾಯವಿದೆ ಎನ್ನುತ್ತಾರೆ ತಜ್ಞರು.
- ವಿಶೇಷವಾಗಿ ಎದೆಯುರಿ ಮುಂತಾದ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಮಿತವಾಗಿ ಕಾಫಿ ಕುಡಿಯುವಂತಡ ತಜ್ಞರು ಸಲಹೆ ನೀಡುತ್ತಾರೆ.
- ಕಾಫಿಯಲ್ಲಿರುವ ಕೆಫೀನ್ ಹೊಟ್ಟೆಯಲ್ಲಿ ಹೆಚ್ಚು ಆಮ್ಲವನ್ನು ಉತ್ಪಾದಿಸಲು ಕಾರಣವಾಗುತ್ತದೆ. ಇದರ ಪರಿಣಾಮ ಎದೆಯಲ್ಲಿ ಉರಿ, ಪೈಲ್ಸ್ನಂತಹ ಸಮಸ್ಯೆಗಳಿಗೆ ಕಾರಣವಾಗಲಿದೆ ಎಂದು ತಜ್ಞರು ಎಚ್ಚರಿಕೆ ನೀಡುತ್ತಾರೆ.
- ಇದರ ಹೊರತಾಗಿ ಕೆಫೀನ್ ರಕ್ತದೊತ್ತಡವನ್ನು ಹೆಚ್ಚಿಸಬಹುದು. ಆದ್ದರಿಂದ ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರು ಸಹ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಲಾಗುತ್ತದೆ.
- ನಾವು ಸೇವಿಸುವ ಆಹಾರದಿಂದ ದೇಹವು ಕ್ಯಾಲ್ಸಿಯಂ ಅನ್ನು ಹೀರಿಕೊಳ್ಳುವಲ್ಲಿ ಕೆಫೀನ್ ಅಡ್ಡಿಪಡಿಸುತ್ತದೆ ಎಂದು ತಜ್ಞರು ಹೇಳುತ್ತಾರೆ. ಆದ್ದರಿಂದ ಸಾಧ್ಯವಾದಷ್ಟು ಕಡಿಮೆ ಸೇವಿಸುವುದು ಉತ್ತಮ.
- ಅದರಲ್ಲೂ ಕಾಫಿ ಕುಡಿದ ಒಂದು ಗಂಟೆಯೊಳಗೆ ರಕ್ತದಲ್ಲಿ ಕೆಫೀನ್ ಪ್ರಮಾಣ ವಿಪರೀತವಾಗಿ ಹೆಚ್ಚಾಗುತ್ತದೆ. ಅದರ ನಂತರ, ಪರಿಣಾಮವು 4 ರಿಂದ 6 ಗಂಟೆಗಳವರೆಗೆ ಕಂಡುಬರುತ್ತದೆ ಎಂದು ತಜ್ಞರು ವಿವರಿಸುತ್ತಾರೆ.
ಸಂಜೆ ಕಾಫಿ ಸೇವಿಸಿದರೆ ಏನಾಗುತ್ತೆ? ಸಂಶೋಧನೆ ಏನು ಹೇಳುತ್ತೆ?: ಕಾಫಿಯನ್ನು ಒಂದು ಅಥವಾ ಎರಡು ಬಾರಿಗೆ ಸೀಮಿತಗೊಳಿಸುವುದು ಉತ್ತಮ ಎಂದು ತಜ್ಞರು ಹೇಳುತ್ತಾರೆ. ಆದಾಗ್ಯೂ, ನಿದ್ರಾಹೀನತೆಯಿಂದ ಬಳಲುತ್ತಿರುವವರು ಸಂಜೆ ಕಾಫಿ ಕುಡಿಯಬಾರದು ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. ಏಕೆಂದರೆ.. ಈಗಾಗಲೇ ನಿದ್ರಾಹೀನತೆಯಿಂದ ಬಳಲುತ್ತಿರುವವರು ಕಾಫಿ ಕುಡಿದರೆ ಆ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಹೆಚ್ಚು ಎನ್ನಲಾಗಿದೆ. 2018 ರಲ್ಲಿ 'ಸ್ಲೀಪ್ ಮೆಡಿಸಿನ್'ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಸಂಜೆ ಕೆಫೀನ್ ಸೇವಿಸುವುದರಿಂದ ನಿದ್ರೆಯ ಸಮಯ ಮತ್ತು ನಿದ್ರೆಯ ಗುಣಮಟ್ಟವನ್ನು ಕಡಿಮೆ ಮಾಡಬಹುದು. ಹಾಗಾಗಿ ಸಂಜೆ ಕಾಫಿ ಸೇವಿಸದಿರುವುದು ಉತ್ತಮ ಎಂದು ತಜ್ಞರು ಸಲಹೆ ನೀಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಈ ವೆಬ್ಸೈಟ್ನ್ನು ವೀಕ್ಷಿಸಬಹುದು: https://www.ncbi.nlm.nih.gov/pmc/articles/PMC6413001/
ಓದುಗರಿಗೆ ವಿಶೇಷ ಸೂಚನೆ: ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳುವಳಿಕೆಗಾಗಿ ಮಾತ್ರವೇ ಒದಗಿಸಲಾಗಿದೆ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ನಿಮಗೆ ನೀಡಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣತರ ಸಲಹೆ ಪಡೆದುಕೊಳ್ಳುವುದು ಉತ್ತಮ.