ETV Bharat / health

ಅಪಾಯಕಾರಿ ಅಲ್ಲ, ಮಾರಣಾಂತಿಕವಲ್ಲ: ಚಿಕೂನ್‌ಗುನ್ಯಾ ಜ್ವರ, ಶೀತ, ತುಂಬಾ ಕೀಲು ನೋವು: ವೈದ್ಯರ ಸಲಹೆಗಳೇನು? - SYMPTOMS OF CHIKUNGUNYA

ಅಷ್ಟು ಅಪಾಯಕಾರಿ ಅಲ್ಲ, ಮಾರಣಾಂತಿಕವಲ್ಲ. ಆದ್ರೆ, ಚಿಕೂನ್‌ಗುನ್ಯಾದಿಂದ ಜ್ವರ, ಶೀತ, ತುಂಬಾ ಮೈ ಕೈ ನೋವು ಕಾಣಿಸುತ್ತದೆ. ಚಿಕೂನ್‌ಗುನ್ಯಾ ರೋಗದ ಲಕ್ಷಣಗಳು ಮತ್ತು ತಡೆಗಟ್ಟುವ ಕುರಿತು ವೈದ್ಯರು ನೀಡುವ ಸಲಹೆಗಳನ್ನು ಈ ಸ್ಟೋರಿಯಲ್ಲಿ ತಿಳಿಯೋಣ.

HOW IS CHIKUNGUNYA VIRUS SPREAD  CHIKUNGUNYA VIRUS  HOW IS CHIKUNGUNYA TREATED
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Health Team

Published : Oct 5, 2024, 5:36 PM IST

Symptoms of chikungunya disease: ಸೊಳ್ಳೆಗಳಿಂದ ಹರಡುವ ಚಿಕೂನ್‌ಗುನ್ಯಾ ಕಾಯಿಲೆಯು ಅಷ್ಟು ಅಪಾಯಕಾರಿ ಅಲ್ಲ, ಮಾರಣಾಂತಿಕವಲ್ಲ. ಆದರೆ, ಚಿಕೂನ್‌ಗುನ್ಯಾ ಜ್ವರ, ಶೀತ ಮತ್ತು ಕೀಲು ನೋವು ಮತ್ತು ಮೈ ಕೈ ತುಂಬಾ ನೋವಿನಿಂದ ಕೂಡಿರುತ್ತದೆ. ಹಾಸಿಗೆಯಿಂದ ಎದ್ದು ಓಡಾಡಲು ಮನುಷ್ಯನಿಗೆ ತುಂಬಾ ಕಷ್ಟವಾಗುತ್ತದೆ. ಜ್ವರ ಕಡಿಮೆಯಾದರೂ, ನೋವು ದೀರ್ಘಕಾಲದವರೆಗೆ ಇರುತ್ತದೆ ಎಂದು ಹೈದರಾಬಾದ್​ನ ವೈದ್ಯರಾದ ಡಾ. ಎಂ.ವಿ. ರಾವ್ ತಿಳಿಸುತ್ತಾರೆ.

ಈ ಕಾಯಿಲೆಯಿಂದ ಚೇತರಿಸಿಕೊಳ್ಳಲು ಹೆಚ್ಚು ದಿನಗಳು ಬೇಕಾಗುತ್ತವೆ. ಸಂಧಿವಾತವು ದೀರ್ಘಾವಧಿಯಲ್ಲಿ ಕಾಡುವ ಒಂದು ಸಮಸ್ಯೆಯಾಗಿದೆ. ವಿಶೇಷವಾಗಿ ವಯಸ್ಸಾದವರು ಮತ್ತು ಚಿಕ್ಕ ಮಕ್ಕಳಲ್ಲಿ. ಅನೇಕರು ತಿಂಗಳಿಗೂ ಹೆಚ್ಚು ಕಾಲ ಇವುಗಳಿಂದ ನರಳುತ್ತಿರುವುದು ಗಮನಾರ್ಹ. ಈ ಹಿನ್ನೆಲೆಯಲ್ಲಿ ವೈದ್ಯರ ಸಲಹೆಗಳನ್ನು ಪಡೆದುಕೊಳ್ಳುವುದು ಒಳ್ಳೆಯದು. ಚಿಕೂನ್‌ಗನ್ಯಾ ಇದೀಗ ಮತ್ತೊಮ್ಮೆ ರಣಕಹಳೆ ಮೊಳಗಿಸುತ್ತಿದೆ. ಕಾರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಡೆಂಗ್ಯೂ ಹೆಚ್ಚು ಹರಡಿದೆ. ಚಿಕ್ಕವಯಸ್ಸಿನವರಿಂದ ಹಿಡಿದು ಹಿರಿಯರಿಗೂ ಈ ಕಾಯಿಲೆ ಹರಡಿದೆ.

ಚಿಕೂನ್‌ಗುನ್ಯಾ ವೈರಸ್‌ ಹೇಗೆ ಹರಡುತ್ತೆ? ಆಲ್ಫಾವೈರಸ್ ಕುಲಕ್ಕೆ ಸೇರಿದ ಚಿಕೂನ್‌ಗುನ್ಯಾ ವೈರಸ್‌ನಿಂದ ಈ ರೋಗ ಹರಡುತ್ತದೆ. ಮುಖ್ಯವಾಗಿ ಈಡಿಸ್ ಈಜಿಪ್ಟಿ ಮತ್ತು ಏಡಿಸ್ ಅಲ್ಬೋಪಿಕ್ಟಸ್ ಸೊಳ್ಳೆಗಳಿಂದ ಹರಡುತ್ತದೆ. ಸೋಂಕಿತ ವ್ಯಕ್ತಿಯನ್ನು ಕಚ್ಚಿದ ಸೊಳ್ಳೆ ಇನ್ನೊಬ್ಬ ವ್ಯಕ್ತಿಯನ್ನು ಕಚ್ಚಿದಾಗ ವೈರಸ್ ಇತರರಿಗೆ ಹರಡುತ್ತದೆ. ಈ ರೋಗವು ಮೊದಲು 1952ರಲ್ಲಿ ಟಾಂಜಾನಿಯಾದಲ್ಲಿ ಪತ್ತೆಯಾಗಿತ್ತು.

ರೋಗ ಲಕ್ಷಣಗಳೇನು? ಚಿಕೂನ್‌ಗುನ್ಯಾ ಕಾಯಿಲೆ ಬಂದರೆ, 102 ಡಿಗ್ರಿಗಿಂತ ಹೆಚ್ಚು ಜ್ವರ ಕಾಣಿಸಿಕೊಳ್ಳುತ್ತದೆ. ನಂತರ, ತೀವ್ರವಾದ ಕೀಲು ಮತ್ತು ಸ್ನಾಯು ನೋವು ಪ್ರಾರಂಭವಾಗುತ್ತದೆ. ಸಣ್ಣ ಕೀಲುಗಳ ಮೇಲೆ ಹೆಚ್ಚು ಪರಿಣಾಮ ಬೀರುತ್ತವೆ. ನೋವು ಮುಖ್ಯವಾಗಿ ಕೈಗಳು, ಮಣಿಕಟ್ಟುಗಳು, ಕಾಲುಗಳು, ಹಿಮ್ಮಡಿ ಮತ್ತು ಭುಜಗಳಲ್ಲಿ ಇರುತ್ತದೆ. ಹೇಳತೀರದಂತಹ ನೋವು ಇರುತ್ತದೆ. ತೀವ್ರವಾದ ಜ್ವರ ಮತ್ತು ನೋವಿನಿಂದ ಮನುಷ್ಯ ಒಂದು ಇಂಚು ಚಲಿಸಲು ಸಾಧ್ಯವಾಗುವುದಿಲ್ಲ. ಒಂದು ಹೆಜ್ಜೆ ಇಡುವುದಕ್ಕೂ ತೀವ್ರ ಸಮಸ್ಯೆಯಾಗುತ್ತದೆ. ಬೆಳಗಿನ ಸಮಯದಲ್ಲಿ ನೋವು ತೀವ್ರವಾಗಿರುತ್ತದೆ ಎಂದು ಡಾ. ಎಂ. ವಿ. ರಾವ್ ಮಾಹಿತಿ ನೀಡುತ್ತಾರೆ.

ಕೆಲವರಿಗೆ ಚರ್ಮದ ಮೇಲೆ ದದ್ದು ಮತ್ತು ತುರಿಕೆ ಉಂಟಾಗಬಹುದು. ಅನೇಕ ಜನರ ಚರ್ಚದಲ್ಲಿ ಕಪ್ಪು ಕಲೆಗಳು ಕಾಣಿಸಿಕೊಳ್ಳುತ್ತದೆ. ವಿಶೇಷವಾಗಿ ಮೂಗಿನ ಮೇಲೆ ಕಪ್ಪು ಕಲೆಗಳು ಗೋಚರಿಸುತ್ತವೆ. ಜ್ವರವು ಒಂದು ಅಥವಾ ಎರಡು ದಿನಗಳಲ್ಲಿ ಕಡಿಮೆಯಾಗುತ್ತದೆ. ಆದರೆ, ನೋವು ದೀರ್ಘಕಾಲದವರೆಗೆ ಇರುತ್ತದೆ. ಕೆಲವರಿಗೆ ಸೊಳ್ಳೆ ಕಚ್ಚಿದ ಎರಡು ದಿನಗಳಲ್ಲಿ ಚಿಕೂನ್‌ಗುನ್ಯಾ ವೈರಸ್‌ನ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಕೆಲವರು 12 ದಿನಗಳ ನಂತರ ಕಾಯಿಲೆ ಕಾಣಿಸುತ್ತದೆ ಎಂದು ಡಾ. ಎಂ.ವಿ. ರಾವ್ ತಿಳಿಸುತ್ತಾರೆ.

ಚಿಕೂನ್‌ಗುನ್ಯಾ ರೋಗಕ್ಕೆ ಚಿಕಿತ್ಸೆ ಹೇಗೆ? ಜ್ವರದ ಆರಂಭದ ದಿನಗಳಲ್ಲಿ ಡೆಂಗ್ಯೂ ಮತ್ತು ಚಿಕೂನ್‌ಗುನ್ಯಾ ಒಂದೇ ರೀತಿ ಇರುತ್ತದೆ. ಆದ್ದರಿಂದ ನೋವಿನ ಔಷಧಿಯನ್ನು ಬಳಸದಿರುವುದು ಉತ್ತಮ. ಪ್ಯಾರಸಿಟಮಲ್ ಮಾತ್ರೆಗಳನ್ನು ತೆಗೆದುಕೊಳ್ಳಿ. ಚಿಕೂನ್‌ಗುನ್ಯಾ ರೋಗನಿರ್ಣಯದ ನಂತರ, ಐಬುಪ್ರೊಫೇನ್ ಮತ್ತು ಡಿಕ್ಲೋಫೆನಾಕ್‌ನಂತಹ NSAID ಮಾದರಿಯ ನೋವು ಔಷಧಿಗಳನ್ನು ಬಳಸಬಹುದು. ದೇಹದಲ್ಲಿ ನೀರಿನ ಅಂಶ ಕಡಿಮೆಯಾಗದಂತೆ ನೋಡಿಕೊಳ್ಳುವುದು ಮುಖ್ಯ. ಸಾಕಷ್ಟು ನೀರು ಮತ್ತು ದ್ರವ ಪದಾರ್ಥ ತೆಗೆದುಕೊಳ್ಳಿ. ಚೆನ್ನಾಗಿ ವಿಶ್ರಾಂತಿ ಪಡೆಯಬೇಕಾಗುತ್ತದೆ ಎಂದು ಡಾ. ಎಂ. ವಿ. ರಾವ್ ವಿವರಿಸಿದರು.

ನೋವು ತುಂಬಾ ತೀವ್ರವಾಗಿದ್ದರೆ ಟ್ರೆಮಡಾಲ್ ಉಪಯುಕ್ತವಾಗಿದೆ. ವೈರಸ್ ಒಂದು ವಾರದವರೆಗೆ ರಕ್ತದಲ್ಲಿ ಉಳಿಯುವುದರಿಂದ, ಪ್ರತಿರಕ್ಷಣಾ ವ್ಯವಸ್ಥೆಯನ್ನು ನಿಗ್ರಹಿಸಲು ಸ್ಟೀರಾಯ್ಡ್​ಗಳಂತಹ ಯಾವುದೇ ಔಷಧಿಗಳನ್ನು ನೀಡಲಾಗುವುದಿಲ್ಲ. ಕೆಲವರಲ್ಲಿ ಒಂದು ವಾರ ಅಥವಾ ಎರಡು ವಾರ ಕಳೆದರೂ ನೋವು ಕಡಿಮೆಯಾಗದೇ ಇರಬಹುದು. ಕೆಲವರು ನಡೆಯಲು ಸಾಧ್ಯವಿಲ್ಲ ಮತ್ತು ಗಾಲಿಕುರ್ಚಿಗಳಿಗೆ ಸೀಮಿತರಾಗಿದ್ದಾರೆ. ಕಡಿಮೆ ಡೋಸ್ ಸ್ಟೀರಾಯ್ಡ್​ಗಳ ಮತ್ತು ಹೈಡ್ರಾಕ್ಸಿಕ್ಲೋರೋಕ್ವಿನ್ ಸಲ್ಫೇಟ್ ಅಂತಹ ರೋಗಿಗಳಿಗೆ ಪರಿಹಾರವನ್ನು ನೀಡಬಹುದು. ಕೆಲವರಿಗೆ ಗ್ಯಾಬಪೆಂಟಿನ್‌ನಂತಹ ಔಷಧಿಗಳೂ ಬೇಕಾಗಬಹುದು ಎಂದು ಡಾ. ಎಂ.ವಿ. ರಾವ್ ತಿಳಿಸಿದರು.

ಚಿಕೂನ್‌ಗುನ್ಯಾ ಎಷ್ಟು ಅಪಾಯಕಾರಿ? ಗನ್ಯಾ ಮಾರಣಾಂತಿಕವಲ್ಲ, ಆದರೆ, ದೀರ್ಘಕಾಲದ ನೋವನ್ನು ಉಂಟುಮಾಡುತ್ತದೆ. ವಯಸ್ಸಾದವರು ಮತ್ತು ಚಿಕ್ಕ ಮಕ್ಕಳಲ್ಲಿ ರೋಗಲಕ್ಷಣಗಳು ಮತ್ತು ತೊಂದರೆ ಹೆಚ್ಚು ಇರುತ್ತದೆ. ವಯಸ್ಸಾದವರಲ್ಲಿ ಕೆಲವರು ಆರು ತಿಂಗಳು ಅಥವಾ ಕೆಲವು ವರ್ಷಗಳವರೆಗೆ ನೋವು ಅನುಭವಿಸಬಹುದು. ಸಂಧಿವಾತದಂತೆಯೇ, ಬೆಳಗ್ಗೆ ಎದ್ದಾಗ ಕೀಲುಗಳ ಬಿಗಿತ ಮತ್ತು ಕೀಲು ಊತವು ಕಂಡುಬರುತ್ತದೆ. ಅದಕ್ಕಾಗಿಯೇ ಕೆಲವರು ಇದನ್ನು ಸಂಧಿವಾತ ಎಂದು ತಪ್ಪಾಗಿ ಭಾವಿಸುತ್ತಾರೆ. ಚಿಕೂನ್‌ಗುನ್ಯಾ ಯಾವಾಗ ಬೇಕಾದರೂ ಬರಬಹುದು. ಹೆಚ್ಚಿನ ಜ್ವರದಿಂದ ಕೀಲು ನೋವು ಪ್ರಾರಂಭವಾಗುತ್ತದೆ. ಆದ್ದರಿಂದ ಲಕ್ಷಣಗಳನ್ನು ಸುಲಭವಾಗಿ ಗುರುತಿಸಬಹುದು. ಬಹಳ ವಿರಳವಾಗಿ ಹೃದಯ, ಮೆದುಳು, ಯಕೃತ್ತು(ಲಿವರ್​) ಮತ್ತು ನರಮಂಡಲದ ಮೇಲೆ ಪರಿಣಾಮ ಬೀರಬಹುದು.

ಗುರುತಿಸುವುದು ಹೇಗೆ: ಚಿಕೂನ್‌ಗುನ್ಯಾವನ್ನು ಹೆಚ್ಚಿನ ರೋಗಲಕ್ಷಣಗಳಿಂದ ಗುರುತಿಸಬಹುದು. ಇದು ಮೊದಲ ವಾರದಲ್ಲಿ ಪಿಸಿಆರ್ ಪರೀಕ್ಷೆಯಿಂದ ದೃಢೀಕರಿಸಲ್ಪಡುತ್ತದೆ. ರೋಗಲಕ್ಷಣಗಳು ಪ್ರಾರಂಭವಾದ ಒಂದು ವಾರದ ನಂತರ ಐಜಿಎಂ ಪ್ರತಿಕಾಯ ಪರೀಕ್ಷೆಯೊಂದಿಗೆ ರೋಗನಿರ್ಣಯ ಮಾಡಲಾಗುತ್ತದೆ.

ಚಿಕೂನ್‌ಗುನ್ಯಾ ಏನು ಮಾಡಬೇಕು? ಚಿಕೂನ್‌ಗುನ್ಯಾ ಕಾಯಿಲೆಯ ನೋವುಗಳಿಗೆ ಹೆಚ್ಚಿನ ಶಾಖವು ಸೂಕ್ತವಲ್ಲ. ಇದು ಕೀಲುಗಳ ಊತವನ್ನು ಹೆಚ್ಚಿಸುತ್ತದೆ. ಫಿಸಿಯೋಥೆರಪಿಯನ್ನು ನಿಧಾನವಾಗಿ ಮಾಡಬೇಕು. ವಿಶೇಷ ಆಹಾರದ ಅಗತ್ಯವಿಲ್ಲ. ಸಮಯಕ್ಕೆ ಸರಿಯಾಗಿ ಊಟ ಮಾಡಬೇಕು. ಸಮತೋಲಿತ ಆಹಾರ ಸೇವಿಸಿ. ಪಪ್ಪಾಯಿ ಮತ್ತು ಕಿವಿ ಹಣ್ಣುಗಳು ಚಿಕೂನ್‌ಗುನ್ಯಾವನ್ನು ಕಡಿಮೆ ಮಾಡುವುದಿಲ್ಲ ಎಂದು ಗಮನಿಸಬೇಕು ಅನ್ನೋದು ವೈದ್ಯರ ಸಲಹೆಯಾಗಿದೆ.

ಒಮ್ಮೆ ಬಂದರೆ ಮತ್ತೆ ಬರುತ್ತಾ? ಚಿಕೂನ್‌ಗುನ್ಯಾ ಕಾಯಿಲೆಯಿಂದ ಗುಣಮುಖವಾದವರಿಗೆ ತಮ್ಮ ಜೀವನದುದ್ದಕ್ಕೂ ಅದನ್ನು ಎದುರಿಸಲು ರೋಗನಿರೋಧಕ ಶಕ್ತಿಯನ್ನು ಪಡೆಯುತ್ತಾರೆ. ಹಾಗಾಗಿ ಒಮ್ಮೆ ತುತ್ತಾದವರಿಗೆ ಮತ್ತೆ ಈ ರೋಗ ಕಾಣಿಸಿಕೊಳ್ಳುವುದಿಲ್ಲ ಎನ್ನುತ್ತಾರೆ ವೈದ್ಯರು.

ಲಸಿಕೆ ಇದೆಯೇ? ನಮ್ಮ ದೇಶದಲ್ಲಿ ಇನ್ನೂ ಚಿಕೂನ್‌ಗುನ್ಯಾಗೆ ಲಸಿಕೆ ಇಲ್ಲ. ಅಮೆರಿಕದಲ್ಲಿ ಲಭ್ಯವಿದೆ. ನಮ್ಮ ದೇಶದಲ್ಲಿ ಭಾರತ್ ಬಯೋಟೆಕ್ ಇದಕ್ಕಾಗಿ ಲಸಿಕೆ ಅಭಿವೃದ್ಧಿಪಡಿಸಲು ಸಂಶೋಧನೆ ನಡೆಸುತ್ತಿದೆ ಎಂದು ವೈದ್ಯರು ತಿಳಿಸಿದರು.

ಹೇಗೆ ತಡೆಗಟ್ಟುವುದು? ಸೊಳ್ಳೆ ಕಡಿತವನ್ನು ತಪ್ಪಿಸುವ ಮೂಲಕ ಚಿಕೂನ್‌ಗುನ್ಯಾವನ್ನು ಸಂಪೂರ್ಣವಾಗಿ ತಪ್ಪಿಸಬಹುದು. ಉದ್ದನೆಯ ಶರ್ಟ್, ಪ್ಯಾಂಟ್ ಮತ್ತು ಸಾಕ್ಸ್ ಧರಿಸಿ. ಸೊಳ್ಳೆ ನಿವಾರಕ ಮತ್ತು ಮುಲಾಮುಗಳನ್ನು ಬಳಸಬೇಕು. ಹಾಸಿಗೆಗೆ ಸೊಳ್ಳೆ ಪರದೆ ಕಟ್ಟಬೇಕು. ಈ ಸೊಳ್ಳೆಗಳು ಉತ್ತಮ ನೀರಿನಲ್ಲಿ ಬೆಳೆಯುವುದರಿಂದ ಮನೆಯಲ್ಲಿ ನೀರು ಸಂಗ್ರಹವಾಗುವ ಪಾತ್ರೆಗಳನ್ನು ಮುಚ್ಚಬೇಕು. ಹೂವಿನ ಕುಂಡ, ಏರ್ ಕೂಲರ್, ತೆಂಗಿನ ಚಿಪ್ಪು ಇತ್ಯಾದಿಗಳಲ್ಲಿ ನೀರು ಸಂಗ್ರಹಿಸಬೇಡಿ.

ಡೆಂಗ್ಯೂ ಮತ್ತು ಕೂನ್‌ಗುನ್ಯಾ ಒಂದೇ ಆಗಿದೆಯಾ? ಪ್ರಸ್ತುತ ಡೆಂಗ್ಯೂ ಮತ್ತು ಚಿಕೂನ್‌ಗುನ್ಯಾ ಎರಡೂ ಹೆಚ್ಚುತ್ತಿವೆ. ಕೆಲವು ರೋಗಲಕ್ಷಣಗಳ ಹೋಲಿಕೆಯಿಂದಾಗಿ, ಕೆಲವರು ಚಿಕೂನ್‌ಗುನ್ಯಾವನ್ನು ಡೆಂಗ್ಯೂ ಎಂದು ತಪ್ಪಾಗಿ ಭಾವಿಸುತ್ತಾರೆ. ಒಂದೇ ಸೊಳ್ಳೆಯಿಂದ ಹರಡಿದರೂ ಇವೆರಡೂ ಬೇರೆ ಬೇರೆ. ಚಿಕೂನ್‌ಗುನ್ಯಾ ಬರುವ ಮೊದಲ ದಿನಗಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಡೆಂಗ್ಯೂನಲ್ಲಿ ಪ್ಲೇಟ್​ಲೆಟ್​ಗಳು ಕಡಿಮೆಯಾಗುತ್ತವೆ.

ರಕ್ತದೊತ್ತಡದ ಕುಸಿತ, ಪ್ಲಾಸ್ಮಾ ಸೋರಿಕೆ, ರಕ್ತಸ್ರಾವ ಅಥವಾ ಆಘಾತಕ್ಕೆ ಹೋಗುವಂತಹ ಯಾವುದೇ ಗಂಭೀರ ತೊಡಕುಗಳಿಲ್ಲ. ಚಿಕೂನ್‌ಗುನ್ಯಾ ಕೆಲವು ಜನರಲ್ಲಿ ದೀರ್ಘಕಾಲದ ನೋವನ್ನು ಉಂಟುಮಾಡಬಹುದು. ಇತರರಲ್ಲಿ ಖಿನ್ನತೆ ಮತ್ತು ಆತಂಕದಂತಹ ಮಾನಸಿಕ ಸಮಸ್ಯೆಗಳನ್ನು ಉಂಟುಮಾಡಬಹುದು ಎಂದು ಡಾ. ಎಂ. ವಿ. ರಾವ್ ತಿಳಿಸುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ಈ ವೆಬ್​ಸೈಟ್​ನ್ನು ವೀಕ್ಷಿಸಬಹುದು: https://www.ncbi.nlm.nih.gov/pmc/articles/PMC5530543/

ಓದುಗರಿಗೆ ಪ್ರಮುಖ ಸೂಚನೆ: ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳುವಳಿಕೆಗಾಗಿ ಮಾತ್ರವೇ ಒದಗಿಸಲಾಗಿದೆ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ನಿಮಗೆ ನೀಡಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣತರ ಸಲಹೆ ಪಡೆದುಕೊಳ್ಳುವುದು ಉತ್ತಮ.

ಇದನ್ನೂ ಓದಿ:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.