ETV Bharat / state

ಪೋಷಣ್​ ಆ್ಯಪ್​ ಹ್ಯಾಕ್ ಮಾಡದಂತೆ ಕ್ರಮಕೈಗೊಳ್ಳಿ: ಕೇಂದ್ರಕ್ಕೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮನವಿ - POSHAN APP - POSHAN APP

ಪೋಷಣ್​ ಆ್ಯಪ್ ಅನ್ನು ವಂಚಕರು ಹ್ಯಾಕ್ ಮಾಡದಂತೆ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು. ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಗರ್ಭಿಣಿಯರು ಮೋಸಕ್ಕೆ ಒಳಗಾಗದಂತೆ ಹುಷಾರಾಗಿ ಇರುವಂತೆ ಸಂದೇಶ ಕಳಿಸಿರುವುದಾಗಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (ETV Bharat)
author img

By ETV Bharat Karnataka Team

Published : Oct 5, 2024, 10:21 PM IST

Updated : Oct 5, 2024, 10:47 PM IST

ಬೆಳಗಾವಿ: ಪೋಷಣ್​ ಆ್ಯಪ್​ ಹ್ಯಾಕ್ ಮಾಡದಂತೆ ಕ್ರಮ ವಹಿಸುವಂತೆ ಕೇಂದ್ರ ಸರ್ಕಾರದ ಗಮನ ಸೆಳೆಯುತ್ತೇವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದರು. ಬಾಣಂತಿಯರಿಗೆ ಸೈಬರ್ ವಂಚಕರು ಮೋಸ ಮಾಡಿರುವ ಕುರಿತು ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇತ್ತಿಚಿನ ದಿನಗಳಲ್ಲಿ ಸೈಬರ್ ಅಪರಾಧಗಳು ಹೆಚ್ಚಾಗುತ್ತಿವೆ. ಶೇರ್ ಮಾರ್ಕೆಟ್ ಸೇರಿ ಅನೇಕ ಕಡೆ ವಂಚನೆ ಪ್ರಕರಣಗಳು ಕಂಡು ಬರುತ್ತಿವೆ. ಇನ್ನು ಪೋಷಣ್​ ಆ್ಯಪ್​ನಲ್ಲಿ ಫಲಾನುಭವಿಗಳ ಮಾಹಿತಿ ಹಾಕುತ್ತಿರುತ್ತೇವೆ. ಈ ವಂಚನೆ ಕುರಿತು ಮಾಧ್ಯಮಗಳಿಂದ ನನಗೆ ಗೊತ್ತಾಗಿದೆ ಎಂದರು.

ಪೋಷಣ್​ ಅಭಿಯಾನ ಆ್ಯಪ್ಅನ್ನು​ ಸಂಪೂರ್ಣವಾಗಿ ಕೇಂದ್ರ ಸರ್ಕಾರ ನಿರ್ವಹಿಸುತ್ತದೆ. ಇದು ನಮ್ಮ ಹಂತದಲ್ಲಿ ನಿರ್ವಹಣೆ ಆಗೋದಿಲ್ಲ. ಆದರೆ, ನನ್ನ ಗಮನಕ್ಕೆ ಬಂದ ತಕ್ಷಣ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಾರ್ಯದರ್ಶಿಗೆ ಕರೆ ಮಾಡಿ ಮಾತಾಡಿದ್ದೇನೆ. 70 ಸಾವಿರ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಹಾಗೂ ಗರ್ಭಿಣಿಯರು ಮೋಸಕ್ಕೆ ಒಳಗಾಗದಂತೆ ಹುಷಾರಾಗಿ ಇರುವಂತೆ ಸಂದೇಶ ಕಳಿಸಿದ್ದೇವೆ ಎಂದು ತಿಳಿಸಿದರು.

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (ETV Bharat)

ಗರ್ಭಿಣಿ ಮಹಿಳೆಯರ ಮಾಹಿತಿಯನ್ನು ವಂಚಕರು ಪಡೆದಿರುವ ಕುರಿತು ಪ್ರತಿಕ್ರಿಯಿಸಿ, ಪೋಷಣ್​ ಅಭಿಯಾನ ಟ್ರ್ಯಾಕರ್ ನಲ್ಲಿ ಅಂಗನವಾಡಿ ಮಕ್ಕಳ ಹಾಜರಾತಿ, ಗರ್ಭಿಣಿಯರು ಮತ್ತು ಬಾಣಂತಿಯರ ಸಂಖ್ಯೆ ಎಷ್ಟಿದೆ?. ಅದೇ ರೀತಿ ಅವರಿಗೆ ಏನೆಲ್ಲಾ ಯೋಜನೆಗಳಿವೆ? ಮತ್ತು ಎಷ್ಟು ಹಣ ಬಿಡುಗಡೆ ಮಾಡುತ್ತೇವೆ ಎನ್ನುವುದು ಸೇರಿ ಎಲ್ಲವನ್ನು ಹಾಕಿರುತ್ತೇವೆ. ವಂಚಕರು ಹ್ಯಾಕ್ ಮಾಡಿದರೆ ಮಾಹಿತಿ ಸಿಗುತ್ತದೆ. ಹೀಗಾಗದಂತೆ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಲಕ್ಷ್ಮಿ ಹೆಬ್ಬಾಳ್ಕರ್ ವಿನಂತಿಸಿದ್ದಾರೆ.

ಮುಡಾ ಹಗರಣವನ್ನು ವಿಷಯಾಂತರ ಮಾಡಲು ತಮ್ಮ ಮೇಲೆ ಕೇಸ್ ಹಾಕಲಾಗಿದೆ ಎಂದು ಕೇಂದ್ರ ಸಚಿವ ಹೆಚ್. ಡಿ. ಕುಮಾರಸ್ವಾಮಿ ಆರೋಪವನ್ನು ತಳ್ಳಿ ಹಾಕಿದ ಲಕ್ಷ್ಮಿ ಹೆಬ್ಬಾಳ್ಕರ್, ಕಾನೂನು ಪ್ರಕಾರ ಏನು ಕ್ರಮಕೈಗೊಳ್ಳಬೇಕು ಅದನ್ನು ಕೈಗೊಳ್ಳಲಾಗಿದೆ. ಯಾವುದೇ ಪ್ರಕರಣವನ್ನು ವಿಷಯಾಂತರ ಮಾಡಲು ನಾವು ಬಯಸುವುದಿಲ್ಲ. ಕಾನೂನು ಹೋರಾಟಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸನ್ನದ್ಧರಾಗಿದ್ದಾರೆ. ಅದನ್ನು ಮುಚ್ಚಿಕೊಳ್ಳಲು ಇನ್ನೊಬ್ಬರ ಮೇಲೆ ಪ್ರಕರಣ ದಾಖಲಿಸುವ ಅನಿವಾರ್ಯತೆ ನಮಗಿಲ್ಲ ಎಂದು ತಿರುಗೇಟು ಕೊಟ್ಟರು.

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ರಮೇಶ್​ ಕತ್ತಿ ರಾಜೀನಾಮೆ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿ, ನಾನೇನು ಡಿಸಿಸಿ ಬ್ಯಾಂಕ್ ನಿರ್ದೇಶಕಿ ಅಲ್ಲ. ಚುನಾಯಿತ ಪ್ರತಿನಿಧಿಗಳು ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿದ್ದಾರೆ ಅಂತಾ ಮಾಧ್ಯಮಗಳಲ್ಲಿ ನೋಡಿದ್ದೇನೆ ಅಷ್ಟೆ. ಇದನ್ನು ಬಿಟ್ಟು ಬೇರೆ ವಿಚಾರ ಏನೂ ಗೊತ್ತಿಲ್ಲ ಎಂದರು.

ಇದನ್ನೂ ಓದಿ: ಕಾಲ್ ಮಾಡಿ ಒಟಿಪಿ ಕೇಳ್ತಾರೆ, ನಿಮ್ಮ ದುಡ್ಡು ಹೊಡಿತಾರೆ: ಬಾಣಂತಿಯರೇ ಎಚ್ಚರ, ಎಚ್ಚರ! - Cyber Case

Last Updated : Oct 5, 2024, 10:47 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.