ENERGY DRINKS SIDE EFFECTS:ಎನರ್ಜಿ ಡ್ರಿಂಕ್ಸ್ ತ್ವರಿತ ಶಕ್ತಿಯನ್ನು ನೀಡಲು ಜನಪ್ರಿಯವಾಗಿವೆ. ಆದರೆ, ಅವು ನಿಮ್ಮ ಹೃದಯ ಮತ್ತು ಒಟ್ಟಾರೆ ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳನ್ನು ಬೀರುತ್ತವೆ. ಈ ಪಾನೀಯಗಳು ಹೆಚ್ಚು ಸಾಮಾನ್ಯವಾಗುತ್ತಿದ್ದಂತೆ, ಅವುಗಳ ಅಪಾಯಗಳನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ. ವಿಶೇಷವಾಗಿ ಹೃದ್ರೋಗ ಅಥವಾ ಅಧಿಕ ರಕ್ತದೊತ್ತಡ ಹೊಂದಿರುವ ಜನರು ಎನರ್ಜಿ ಡ್ರಿಂಕ್ಸ್ ಸೇವನೆ ಮಾಡುವ ಮುನ್ನ ವೈದ್ಯರ ಸಲಹೆಗಳನ್ನು ಪಡೆಯವುದು ಮುಖ್ಯವಾಗಿದೆ.
ಎನರ್ಜಿ ಡ್ರಿಂಕ್ಸ್ ಕುಡಿಯುವುದರಿಂದ ಹೃದಯ ಬಡಿತ ಹೆಚ್ಚಾಗುತ್ತದೆ. ವಿಶೇಷವಾಗಿ ಯಾರಾದರೂ ಈಗಾಗಲೇ ಹೃದಯ ಸಮಸ್ಯೆಗಳನ್ನು ಹೊಂದಿದ್ದರೆ ಅವರು ಎಚ್ಚರಿಕೆ ವಹಿಸುವುದು ಮುಖ್ಯವಾಗಿದೆ. ಈ ಪಾನೀಯಗಳಲ್ಲಿ ಹೆಚ್ಚಿನ ಮಟ್ಟದ ಕೆಫೀನ್ ಮತ್ತು ಇತರ ಉತ್ತೇಜಕಗಳು ಹೃದಯ ಬಡಿತ ಮತ್ತು ರಕ್ತದೊತ್ತಡವನ್ನು ಹೆಚ್ಚಿಸಬಹುದು. ಹೃದ್ರೋಗ ಮತ್ತು ಹೃದಯದ ಬಡಿದ ಲಯಕ್ಕೆ ಅಪಾಯ ಹೆಚ್ಚಿಸುತ್ತದೆ.
ದೇಹದ ಆರೋಗ್ಯದ ಮೇಲೆ ಬೀರುವ ಪರಿಣಾಮಗಳೇನು?:
ಕೆಫೀನ್: ಅತಿಯಾಗಿ ಸೇವಿಸಿದರೆ ಹೃದಯ ಬಡಿತ ಮತ್ತು ಅಧಿಕ ರಕ್ತದೊತ್ತಡ ಉಂಟುಮಾಡುವ ಮುಖ್ಯ ಉತ್ತೇಜಕವಾಗಿದೆ.
ಟೌರಿನ್: ಎನರ್ಜಿ ಡ್ರಿಂಕ್ಸ್ನಲ್ಲಿ ಟೌರಿನ್ ಇರುತ್ತದೆ. ಎನರ್ಜಿ ಡ್ರಿಂಕ್ಸ್ ಪರಿಣಾಮಗಳನ್ನು ಹೆಚ್ಚಿಸಲು ಕೆಫೀನ್‌ನೊಂದಿಗೆ ಸಂಯೋಜಿಸುತ್ತದೆ. ಹೃದಯ ಬಡಿತ ಮತ್ತು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ.
ಗೌರಾನಾ: ಇದರಲ್ಲಿ ಗೌರಾನಾ ಮತ್ತು ಕೆಫೀನ್ ಒಳಗೊಂಡಿರುತ್ತದೆ.
ಜಿನ್ಸೆಂಗ್:ಸಾಮಾನ್ಯವಾಗಿ ಸುರಕ್ಷಿತವಾಗಿದ್ದರೂ, ಔಷಧಿಗಳೊಂದಿಗೆ ಅದರ ಪರಸ್ಪರ ಕ್ರಿಯೆಯು ಅಪಾಯಕಾರಿಯಾಗಿದೆ.
ಸಕ್ಕರೆ ಮಟ್ಟ ಹೆಚ್ಚುತ್ತೆ: ಇದನ್ನು ಅತಿಯಾಗಿ ಸೇವಿಸುವುದರಿಂದ ಬೊಜ್ಜು ಉಂಟಾಗುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ. ಇದು ಹೃದಯ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ.
ವಿಟಮಿನ್ ಬಿ: ವಿಟಮಿನ್ ಬಿ ಅತ್ಯಗತ್ಯ, ಆದರೆ ಹೆಚ್ಚಿನ ಪ್ರಮಾಣದಲ್ಲಿ ಇದನ್ನು ಸೇವಿಸುವುದರಿಂದ ದೇಹದಲ್ಲಿ ವಿಷ ಉಂಟುಮಾಡಬಹುದು. ವಿಶೇಷವಾಗಿ ಯಕೃತ್ತು, ಮೂತ್ರಪಿಂಡದ ಸಮಸ್ಯೆಗಳಿರುವ ಜನರಿಗೆ ಹೆಚ್ಚು ಪರಿಣಾಮ ಬೀರುತ್ತದೆ.
ಕೃತಕ ಸಿಹಿಕಾರಕಗಳು: ಸಕ್ಕರೆ ಬದಲಿಯಾಗಿ ಬಳಸುವ ಕೃತಕ ಸಿಹಿಕಾರಕಗಳು ಸಂಭಾವ್ಯ ಹೃದಯರಕ್ತನಾಳದ ಅಪಾಯ ಕಾಣಿಸುವ ಸಾಧ್ಯತೆಯಿದೆ.