ETV Bharat / bharat

ಮೂರು ಯುದ್ದ ನೌಕೆಗಳನ್ನು ದೇಶಕ್ಕೆ ಸಮರ್ಪಿಸಿದ ಪ್ರಧಾನಿ ಮೋದಿ: ಹೀಗಿದೆ ಇವುಗಳ ಶಕ್ತಿ ಸಾಮರ್ಥ್ಯ - THREE FRONTLINE NAVAL COMBATANTS

ರಕ್ಷಣೆಯಲ್ಲಿ ದೇಶ ಜಾಗತಿಕ ನಾಯಕನಾಗುವ ನಿಟ್ಟಿನಲ್ಲಿನ ನಮ್ಮ ಪ್ರಯತ್ನಕ್ಕೆ ಮೂರು ನೌಕೆಗಳ ಸೇರ್ಪಡೆ ಬಲ ತುಂಬಲಿದೆ ಎಂದು ನರೇಂದ್ರ ಮೋದಿ ಬಣ್ಣಿಸಿದ್ದಾರೆ.

Unwavering commitment to building robust self reliant defence sector
ಪ್ರಧಾನಿ ಮೋದಿ (ಐಎಎನ್​ಎಸ್​)
author img

By ETV Bharat Karnataka Team

Published : Jan 15, 2025, 2:00 PM IST

ಮುಂಬೈ, ಮಹಾರಾಷ್ಟ್ರ: ಪ್ರಧಾನಿ ನರೇಂದ್ರ ಮೋದಿ ಇಂದು ಮುಂಬೈನ ನೌಕನೆಲೆಯಲ್ಲಿ ಐಎನ್​ಎಸ್​ ಸೂರತ್​, ಐಎನ್​ಎಸ್​ ನೀಲ್​ಗಿರಿ ಮತ್ತು ಐಎನ್​ಎಸ್​ ವಾಘ್​ಶೀರ್​​ ಎಂಬ ಮೂರು ಯುದ್ಧ ನೌಕೆಗಳನ್ನು ದೇಶಕ್ಕೆ ಸಮರ್ಪಣೆ ಮಾಡಿದರು.

ಈ ಮೂರೂ ಯುದ್ಧ ನೌಕೆಗಳು, ರಕ್ಷಣಾ ಕ್ಷೇತ್ರದಲ್ಲಿ ದೇಶ ಜಾಗತಿಕ ನಾಯಕ ಆಗುವ ನಿಟ್ಟಿನಲ್ಲಿನ ನಮ್ಮ ಪ್ರಯತ್ನಕ್ಕೆ ಬಲ ತುಂಬಲಿದೆ. ಸ್ವಾವಲಂಬಿ ರಕ್ಷಣಾ ವಲಯವನ್ನು ನಿರ್ಮಿಸಲು ಭಾರತದ ಬದ್ಧತೆಯನ್ನು ಇದು ಒತ್ತಿ ಹೇಳುತ್ತದೆ ಎಂದು ಪ್ರಧಾನಿಗಳು ಬಣ್ಣಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಮಹಾರಾಷ್ಟ್ರ ರಾಜ್ಯಪಾಲ ಸಿ.ಪಿ. ರಾಧಾಕೃಷ್ಣನ್, ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಇಬ್ಬರು ಉಪಮುಖ್ಯಮಂತ್ರಿಗಳಾದ ಏಕನಾಥ್ ಶಿಂಧೆ ಮತ್ತು ಅಜಿತ್ ಪವಾರ್ ಕೂಡ ಹಾಜರಿದ್ದರು.

ರಕ್ಷಣಾ ಉತ್ಪಾದನೆ ಮತ್ತು ಸಾಗರ ಭದ್ರತೆಯಲ್ಲಿ ಜಾಗತಿಕ ನಾಯಕನಾಗಬೇಕು ಎಂಬ ಭಾರತದ ದೂರದೃಷ್ಟಿಗೆ ಈ ಮೂರು ಪ್ರಮುಖ ಯುದ್ಧ ನೌಕೆಗಳು ಪ್ರಮುಖ ಮುನ್ನೆಡಯಾಗಿದೆ ಎಂದು ಸರ್ಕಾರದ ಪ್ರಕಣೆಯಲ್ಲಿ ತಿಳಿಸಿದೆ.

ಈ ಯುದ್ದ ನೌಕೆಗಳನ್ನು ಆತ್ಮನಿರ್ಭರ್​ ಭಾರತದ ಗೌರವಾರ್ಥವಾಗಿ ಮಜಾಗನ್​ ಡಾಕ್​ಶಿಪ್​​ ಸಂಸ್ಥೆಯ ನೇತೃತ್ವದಲ್ಲಿ ನಿರ್ಮಿಸಲಾಗಿದೆ. ಐಎನ್​ಎಸ್​ ಸೂರತ್​​ ಪಿ15ಬಿ ಮಾರ್ಗಸೂಚಿತ ಕ್ಷಿಪಣಿ ವಿಧ್ವಂಸಕ ವ್ಯವಸ್ಥೆ ನಾಲ್ಕನೇ ಮತ್ತು ಅಂತಿಮ ನೌಕೆಯಾಗಿದೆ. ಇದನ್ನು ಶೇ 75ರಷ್ಟು ದೇಶಿಯವಾಗಿ ನಿರ್ಮಾಣ ಮಾಡಲಾಗಿದ್ದು, ಇದು ಅತ್ಯಾಧುನಿಕ ಶಸ್ತ್ರಾಸ್ತ್ರ- ಸೆನ್ಸರ್​ ಪ್ಯಾಕೇಜ್​ ಹಾಗೂ ಸುಧಾರಿತ ನೆಟ್​ವರ್ಕ್​ ಕೇಂದ್ರಿತ ಸಾಮರ್ಥ್ಯವನ್ನು ಹೊಂದಿದೆ ಎಂದು ರಕ್ಷಣಾ ಪಡೆ ಹೇಳಿದೆ.

INS​ ನೀಲಗಿರಿ ಪಿ17ಎ ಸ್ಟೆಲ್ತ್​​ ಫ್ರಿಗೇಟ್​ ಪ್ರಾಜೆಕ್ಟ್​​ನ ಮೊದಲ ಶಿಪ್​ ಆಗಿದ್ದು, ಇದನ್ನು ಭಾರತೀಯ ನೌಕ ವಾರ್ಶಿಪ್​​ ಡಿಸೈನ್​ ಬ್ಯುರೋ ವಿನ್ಯಾಸ ಮಾಡಿದೆ. ಇದು ಸಾಗರ ಮೇಲ್ವಿಚಾರಣೆಗಾಗಿಯೇ ಅಭಿವೃದ್ಧಿ ಮಾಡಲಾಗಿದ್ದು, ದೇಶೀಯ ಫ್ರಿಗೇಟ್​​ನ ಮುಂದಿನ ಪೀಳಿಗೆಯನ್ನು ಪ್ರತಿಬಿಂಬಿಸುತ್ತದೆ. ಇದು ಎಂಟು ಬ್ರಹ್ಮೋಸ್ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿಗಳನ್ನು ಒಳಗೊಂಡಂತೆ ಸುಧಾರಿತ ಶಸ್ತ್ರಾಸ್ತ್ರಗಳನ್ನು ಒಳಗೊಂಡಿದೆ. 8 ಸೆಪ್ಟೆಂಬರ್ 2019 ರಂದು ಪ್ರಾರಂಭಿಸಲಾಯಿತು. ಈ ನೌಕೆ ಸುಮಾರು 6,670 ಟನ್ ತೂಕ ಹೊಂದಿದ್ದು, 149 ಮೀಟರ್ ಉದ್ದ ಹೊಂದಿದೆ.

ಐಎನ್​ಎಸ್​ ವಾಘಶೀರ್​: ಇದು ಪಿ75 ಸ್ಕೋರ್​ಪೆನೆ ಯೋಜನೆಯ ಆರು ಮತ್ತು ಅಂತಿಮ ಹಂತದ ಜಲಾಂತರ್ಗಾಮಿ ಆಗಿದೆ. ಇದನ್ನು ಫ್ರಾನ್ಸ್‌ನ ನೇವಲ್ ಗ್ರೂಪ್‌ನ ಸಹಯೋಗದೊಂದಿಗೆ ನಿರ್ಮಿಸಲಾಗಿದೆ. ಈ ಜಲಾಂತರ್ಗಾಮಿ ಭಾರತೀಯ ನೌಕಾಪಡೆಯ ಬಲವನ್ನು ಮತ್ತಷ್ಟು ಹೆಚ್ಚಿಸಿದೆ. ಈ ನೌಕೆ 67 ಮೀಟರ್ ಉದ್ದ ಮತ್ತು 1,550 ಟನ್ ಬಾರ ಹೊಂದಿದೆ (ಐಎಎನ್​ಎಸ್​)

ಇದನ್ನೂ ಓದಿ: ದೆಹಲಿ ವಿಧಾನಸಭಾ ಚುನಾವಣೆ: ಇಂದು ಅರವಿಂದ್​​ ಕೇಜ್ರಿವಾಲ್​ ನಾಮಪತ್ರ ಸಲ್ಲಿಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.