ಕರಾವಳಿ ಪ್ರತಿಭೆ ರೂಪೇಶ್ ಶೆಟ್ಟಿ ಅವರ ಮುಂದಿನ ಬಹುನಿರೀಕ್ಷಿತ ಚಿತ್ರ 'ಜೈ'. ರೂಪೇಶ್ ಶೆಟ್ಟಿ ನಟಿಸಿ, ನಿರ್ದೇಶಿಸುತ್ತಿರುವ ಸಿನಿಮಾದಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ಸುನೀಲ್ ಶಟ್ಟಿ ಕೂಡಾ ಪ್ರಮುಖ ಪಾತ್ರ ವಹಿಸಿದ್ದಾರೆ. ಚಿತ್ರೀಕರಣದಲ್ಲಿ ಪಾಲ್ಗೊಳ್ಳುವ ಸಲುವಾಗಿ ಶೆಟ್ಟಿ ಮಂಗಳವಾರದಂದು ಮಂಗಳೂರಿಗೆ ಆಗಮಿದ್ದಾರೆ. ವಿಮಾನ ನಿಲ್ದಾಣದಲ್ಲಿ ಬಾಲಿವುಡ್ ಸ್ಟಾರ್ಗೆ ಅದ್ಧೂರಿ ಸ್ವಾಗತ ಸಿಕ್ಕಿತ್ತು. ಏರ್ಪೋರ್ಟ್ ವಿಡಿಯೋಗಳು ಆನ್ಲೈನ್ನಲ್ಲಿ ಲಭ್ಯವಿದೆ.
ಮಂಗಳೂರು ವಿಮಾನ ನಿಲ್ದಾಣದಲ್ಲಿ ತುಳು ಭಾಷೆಯಲ್ಲೇ ಮಾತನಾಡಿದ ನಟ ಸುನೀಲ್ ಶೆಟ್ಟಿ, ''ನನ್ನ ಮೊದಲ ತುಳು ಚಿತ್ರ. ಬಹಳ ಖುಷಿ ಆಗುತ್ತಿದೆ. ತುಳು ಸಿನಿಮಾ ಮಾಡಬೇಕು ಎಂದುಕೊಂಡಿದ್ದೆ. ತುಳು ಸಿನಿಮಾಗಳಲ್ಲಿ ಬಹಳ ಬೆಳವಣಿಗೆ ಆಗಿದೆ. ಜೈ ಸಿನಿಮಾ ಬಗ್ಗೆ ರೂಪೇಶ್ ತಿಳಿಸಿದರು. ಸಬ್ಜೆಕ್ಟ್ ಕೇಳಿದಾಗ ಈ ಸಿನಿಮಾ ಮಾಡಲೇಬೇಕು ಎಂದನಿಸಿತು'' ಎಂದು ತಿಳಿಸಿದರು.
ಮಾತು ಮುಂದುವರಿಸಿದ ಬಾಲಿವುಡ್ ಸ್ಟಾರ್ ಹೀರೋ, ''ನಾವು ತುಳುನಾಡಿನವರು. ಎಂದೆಂದಿಗೂ ಅಮ್ಮನ ಆಶೀರ್ವಾದ ಇದೆ. ವರ್ಷ ವರ್ಷವೂ ಬಪ್ಪನಾಡಿಗೆ ಬರುತ್ತೇನೆ. ಧರ್ಮಸ್ಥಳ, ಸುಬ್ರಹ್ಮಣ್ಯ ಸೇರಿ ಎಲ್ಲಾ ಕಡೆಗೂ ಭೇಟಿ ಕೊಡುತ್ತಿರುತ್ತೇನೆ. ಇವತ್ತು ಇಲ್ಲಿ ಬಂದು ಸಿನಿಮಾ ಮಾಡುತ್ತಿರುವುದು ಬಹಳ ಖುಷಿಯ ವಿಷಯ. ಹಾಗೇ ಹೆಮ್ಮೆಯ ಕ್ಷಣ. ತುಳುನಾಡು ಬಹಳ ಚಿಕ್ಕ ಜಾಗ. ಅದಾಗ್ಯೂ, ಬೆಳವಣಿಗೆಗಳು ನಡೆಯುತ್ತಿವೆ. ಒಳ್ಳೊಳ್ಳೆ ಸಬ್ಜೆಕ್ಟ್ನ ಸಿನಿಮಾ ಬರುತ್ತಿವೆ. ನಾನು ಈ ಸಿನಿಮಾದ ಭಾಗವಾಗಿದ್ದು, ರೂಪೇಶ್ಗೆ ಧನ್ಯವಾದಗಳು'' ಎಂದು ತಿಳಿಸಿದರು.
ಜೈ ಚಿತ್ರದ ಸಾರಥಿ ರೂಪೇಶ್ ಶೆಟ್ಟಿ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋ ಹಂಚಿಕೊಂಡು, ಅಣ್ಣಾ ಆನ್ ಜೈ ಸೆಟ್ ಎಂದು ಬರೆದುಕೊಂಡಿದ್ದಾರೆ. ಸುನೀಲ್ ಶೆಟ್ಟಿಗೆ ಚಿತ್ರರಂಗದ ಸದಸ್ಯರು ಅಣ್ಣಾ ಎಂದು ಕರೆಯೋದು ನಿಮಗೆ ತಿಳಿದೇ ಇದೆ. ಶೂಟಿಂಗ್ ಸ್ಪಾಟ್ಗೆ ಎಂಟ್ರಿ ಕೊಟ್ಟು, ತಮ್ಮ ಶೂಟಿಂಗ್ ವಾಹನದೊಳಗೆ ಸುನೀಲ್ ಶೆಟ್ಟಿ ಹೋಗುತ್ತಿರೋದನ್ನು ಈ ವಿಡಿಯೋದಲ್ಲಿ ಕಾಣಬಹುದು.
ಇದನ್ನೂ ಓದಿ: ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದ ನಟ ಸರಿಗಮ ವಿಜಯ್ ನಿಧನ: 250ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟನೆ
ಇತ್ತೀಚೆಗಷ್ಟೇ ಪೋಸ್ಟ್ ಶೇರ್ ಮಾಡಿದ್ದ ರೂಪೇಶ್ ಶೆಟ್ಟಿ, ಎಲ್ಲರೂ ಕಾಯುತ್ತಿದ್ದ ಆ ಕ್ಷಣ ಬಂದೇ ಬಿಟ್ಟಿದೆ. ಅಂತಿಮವಾಗಿ ಆ ಇಂಡಿಯನ್ ಸೂಪರ್ ಸ್ಟಾರ್ ಜೈ ತುಳು ಚಿತ್ರದಲ್ಲಿ ನಟಿಸಲು ಬರುತ್ತಿದ್ದಾರೆ. ಲೆಜೆಂಡ್ ವೆಲ್ಕಮ್ ಮಾಡೋಣ ಎಂದು ಬರೆದುಕೊಂಡಿದ್ದರು. ಬಾಲಿವುಡ್ ನಟ ತುಳು ಸಿನಿಮಾಗಾಗಿ ತುಳುನಾಡಿಗೆ ಬರುತ್ತಿರೋದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿತ್ತು.
ಇದನ್ನೂ ಓದಿ: ತಂಗಿ ಮೋಕ್ಷಿತಾ ಬಳಿ ಕ್ಷಮೆಯಾಚಿಸಿದ ಮಂಜಣ್ಣ: ಸ್ಪರ್ಧಿಗಳ ಮಾತು ಮನದಾಳವೇ ಅಥವಾ ಪ್ರೇಕ್ಷಕರನ್ನು ಸೆಳೆಯುವ ತಂತ್ರವೇ?
ಕಳೆದ ದಿನ ನಟ ಮಂಗಳೂರಿಗೆ ಬಂದ ಪೋಟೋ ವಿಡಿಯೋಗಳನ್ನು ಶೇರ್ ಮಾಡಿದ ರೂಪೇಶ್, ಅಣ್ಣಾ ಮಂಗಳೂರಿಗೆ ಬಂದಿದ್ದಾರೆ. ಸುನೀಲ್ ಶೆಟ್ಟಿ ಅವರು ಜೈ ಚಿತ್ರೀಕರಣದ ಸಲುವಾಗಿ ಮಂಗಳೂರಿಗೆ ಆಗಮಿಸಿದ್ದಾರೆ ಎಂದು ತಿಳಿಸಿದ್ದರು. ಜೊತೆಗೆ ಆಶೀರ್ವದಿಸಲ್ಪಟ್ಟಿದ್ದೇನೆಂದು ಹೇಳಿಕೊಂಡಿದ್ದರು.