ETV Bharat / bharat

ಕಾಂಗ್ರೆಸ್​ನ ನೂತನ ಪ್ರಧಾನ ಕಚೇರಿ 'ಇಂದಿರಾ ಭವನ' ಉದ್ಘಾಟಿಸಿದ ಸೋನಿಯಾ ಗಾಂಧಿ; ಸಿಎಂ ಸಿದ್ದರಾಮಯ್ಯ ಭಾಗಿ - CONGRESS PARTY NEW HQ

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಕಾಂಗ್ರೆಸ್ ಪಕ್ಷದ ನೂತನ ಕೇಂದ್ರ ಕಚೇರಿಯ ಕಟ್ಟಡ ಇಂದು ಉದ್ಘಾಟನೆಯಾಗಿದೆ.

ಕಾಂಗ್ರೆಸ್ ಪಕ್ಷದ ನೂತನ ಪ್ರಧಾನ ಕಚೇರಿ ಕಟ್ಟಡ
ಕಾಂಗ್ರೆಸ್ ಪಕ್ಷದ ನೂತನ ಪ್ರಧಾನ ಕಚೇರಿ ಕಟ್ಟಡ (ians)
author img

By ETV Bharat Karnataka Team

Published : Jan 15, 2025, 1:31 PM IST

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಕಾಂಗ್ರೆಸ್ ಪಕ್ಷದ ಪ್ರಧಾನ ಕಚೇರಿ 'ಇಂದಿರಾ ಭವನ'ವನ್ನು ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಬುಧವಾರ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಹಿರಿಯ ಕಾಂಗ್ರೆಸ್ ನಾಯಕರು ಮತ್ತು ದೇಶಾದ್ಯಂತದ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೂತನ ಕೇಂದ್ರ ಕಚೇರಿಯಲ್ಲಿ ಧ್ವಜಾರೋಹಣ ನೆರವೇರಿಸಿದರು. ಕರ್ನಾಟಕದ ಸಿಎಂ ಸಿದ್ದರಾಮಯ್ಯ ಸಹ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.

ಹೊಸ ವಿಳಾಸದಲ್ಲಿ ಕಾಂಗ್ರೆಸ್​ ಪ್ರಧಾನ ಕಚೇರಿ: ಕೋಟ್ಲಾ ರಸ್ತೆಯ 9ಎ ವಿಳಾಸದಲ್ಲಿ ಪಕ್ಷದ ಹೊಸ ಪ್ರಧಾನ ಕಚೇರಿ ನಿರ್ಮಾಣವಾಗಿದೆ. ಕಳೆದ 47 ವರ್ಷಗಳಿಂದ ಅಕ್ಬರ್ ರಸ್ತೆಯ ಕಚೇರಿಯಿಂದ ಕಾರ್ಯನಿರ್ವಹಿಸುತ್ತಿರುವ ಗ್ರ್ಯಾಂಡ್ ಓಲ್ಡ್ ಪಕ್ಷದ ಇತಿಹಾಸದಲ್ಲಿ ಇದೊಂದು ಪ್ರಮುಖ ಮೈಲಿಗಲ್ಲಾಗಿದೆ.

ಹೊಸ ಪ್ರಧಾನ ಕಚೇರಿಯು ಪ್ರಜಾಪ್ರಭುತ್ವ, ರಾಷ್ಟ್ರೀಯತೆ, ಜಾತ್ಯತೀತತೆ, ಅಂತರ್ಗತ ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯದ ತತ್ವಗಳ ಆಧಾರದಲ್ಲಿ ನಿರ್ಮಾಣವಾಗಿರುವ ಸ್ಮಾರಕವಾಗಿದೆ ಎಂದು ಕಾಂಗ್ರೆಸ್ ಪಕ್ಷ ಬಣ್ಣಿಸಿದೆ.

140 ವರ್ಷಗಳ ಭವ್ಯ ಇತಿಹಾಸ ಸಾರುವ ನೂತನ ಕಟ್ಟಡ: "ಕಾಂಗ್ರೆಸ್​ನ 140 ವರ್ಷಗಳ ಭವ್ಯ ಇತಿಹಾಸವನ್ನು ಸಾರುವ ಇಲ್ಲಿನ ಗೋಡೆಗಳು ಸತ್ಯ, ಅಹಿಂಸೆ, ತ್ಯಾಗ, ಹೋರಾಟ ಮತ್ತು ದೇಶಭಕ್ತಿಯ ಕಥೆಯನ್ನು ಹೇಳುತ್ತವೆ. ಹೊಸ ಶಕ್ತಿ, ಸಂಕಲ್ಪ ಮತ್ತು ವಿಶ್ವಾಸದೊಂದಿಗೆ, ಭಾರತದ ಉಜ್ವಲ ಭವಿಷ್ಯವನ್ನು ರೂಪಿಸಲು, ಜನರ ಒಳಗೊಳ್ಳುವಿಕೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ನ್ಯಾಯದ ಧ್ವಜವನ್ನು ಹಾರಿಸಲು ಕಾಂಗ್ರೆಸ್ ಸಿದ್ಧವಾಗಿದೆ" ಎಂದು ಕಾಂಗ್ರೆಸ್ ಪಕ್ಷ ಸಾಮಾಜಿಕ ಮಾಧ್ಯಮ ಎಕ್ಸ್​ನಲ್ಲಿ ಪೋಸ್ಟ್ ಮಾಡಿದೆ. ಈ ಕಟ್ಟಡವು ಸೇವೆ, ಸಾಮರಸ್ಯ, ಸಮರ್ಪಣೆ ಮತ್ತು ದೇಶಭಕ್ತಿಯ ಸಂಕೇತವಾಗಿದೆ ಎಂದು ಪಕ್ಷ ಹೇಳಿದೆ.

ಸತ್ಯ, ಅಹಿಂಸೆ, ತ್ಯಾಗ ಮತ್ತು ಹೋರಾಟದ ಪ್ರತೀಕ- ಮಲ್ಲಿಕಾರ್ಜುನ್​ ಖರ್ಗೆ: ಈ ಸಂದರ್ಭದಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, "ಕಾಂಗ್ರೆಸ್ ಪಕ್ಷದ ಹೊಸ ಪ್ರಧಾನ ಕಚೇರಿ 'ಇಂದಿರಾ ಭವನ'ವು ಪ್ರಜಾಪ್ರಭುತ್ವ, ರಾಷ್ಟ್ರೀಯತೆ, ಜಾತ್ಯತೀತತೆ, ಅಂತರ್ಗತ ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯದ ಅಡಿಪಾಯದ ಮೇಲೆ ನಿರ್ಮಾಣವಾಗಿದೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್​ನ 140 ವರ್ಷಗಳ ಭವ್ಯ ಇತಿಹಾಸವನ್ನು ಸಂಕೇತಿಸುವ ಇಲ್ಲಿನ ಗೋಡೆಗಳು ಸತ್ಯ, ಅಹಿಂಸೆ, ತ್ಯಾಗ, ಹೋರಾಟ ಮತ್ತು ದೇಶಭಕ್ತಿಯ ಮಹಾನ್ ಕಥೆಯನ್ನು ಹೇಳುತ್ತವೆ." ಎಂದರು.

ಅತ್ಯಂತ ಮಹತ್ವದ ಸಂದರ್ಭದಲ್ಲಿ ಕಟ್ಟಡ ಉದ್ಘಾಟಿಸುತ್ತಿದ್ದೇವೆ - ರಾಹುಲ್​ ಗಾಂಧಿ: ಸಮಾರಂಭದಲ್ಲಿ ಮಾತನಾಡಿದ ರಾಹುಲ್ ಗಾಂಧಿ, "ನಾವು ನಮ್ಮ ಹೊಸ ಪ್ರಧಾನ ಕಚೇರಿಯನ್ನು ಬಹಳ ಮಹತ್ವದ ಸಮಯದಲ್ಲಿ ಉದ್ಘಾಟಿಸುತ್ತಿದ್ದೇವೆ. ಭಾರತಕ್ಕೆ 1947 ರಲ್ಲಿ ನಿಜವಾದ ಸ್ವಾತಂತ್ರ್ಯ ಸಿಗಲಿಲ್ಲ, ಬದಲಾಗಿ ರಾಮ ಮಂದಿರ ನಿರ್ಮಾಣದ ನಂತರ ನಿಜವಾದ ಸ್ವಾತಂತ್ರ್ಯ ಸಿಕ್ಕಿದ್ದು ಎಂದು ನಿನ್ನೆ ಆರ್​ಎಸ್​​ಎಸ್​ ಮುಖ್ಯಸ್ಥರು ಹೇಳಿರುವುದು ಸಾಂಕೇತಿಕವಾಗಿದೆ. ಈ ಕಟ್ಟಡವು ಸಾಮಾನ್ಯ ಕಟ್ಟಡವಲ್ಲ. ಇದು ನಮ್ಮ ದೇಶದ ಮಣ್ಣಿನಿಂದ ಹೊರಹೊಮ್ಮಿದೆ, ಇದು ಲಕ್ಷಾಂತರ ಜನರ ಕಠಿಣ ಪರಿಶ್ರಮ ಮತ್ತು ತ್ಯಾಗವನ್ನು ಪ್ರತಿನಿಧಿಸುತ್ತದೆ. ಸ್ವಾತಂತ್ರ್ಯ ಚಳವಳಿಯ ಫಲ ನಮ್ಮ ಸಂವಿಧಾನ. ಆದರೆ ಮೋಹನ್ ಭಾಗವತ್ ನಮ್ಮ ಸಂವಿಧಾನವನ್ನೇ ಸಾಂಕೇತಿಕವಾಗಿ ಟೀಕಿಸಿದ್ದಾರೆ. ಸಂವಿಧಾನವು ನಮ್ಮ ಸ್ವಾತಂತ್ರ್ಯವನ್ನು ಸಂಕೇತಿಸುವುದಿಲ್ಲ ಎಂದು ಹೇಳಿದ್ದಾರೆ. ಆದರೆ, ಕಾಂಗ್ರೆಸ್ ಪಕ್ಷವು ಯಾವಾಗಲೂ ಒಂದು ನಿರ್ದಿಷ್ಟ ಮೌಲ್ಯಗಳ ಪರವಾಗಿ ನಿಂತಿದೆ, ಅದು ಈ ಕಟ್ಟಡದಲ್ಲಿ ಪ್ರತಿಬಿಂಬಿತವಾಗಿದೆ." ಎಂದರು.

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಗೌರವಾರ್ಥ ಇಂದಿರಾ ಭವನ್ ಎಂದು ಹೆಸರಿಸಲಾದ ಪ್ರಧಾನ ಕಚೇರಿ 15 ವರ್ಷಗಳಿಂದ ನಿರ್ಮಾಣ ಹಂತದಲ್ಲಿತ್ತು.

ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ಸದಸ್ಯರು, ಖಾಯಂ ಮತ್ತು ವಿಶೇಷ ಆಹ್ವಾನಿತರು, ಪ್ರದೇಶ ಕಾಂಗ್ರೆಸ್ ಸಮಿತಿ (ಪಿಸಿಸಿ) ಅಧ್ಯಕ್ಷರು, ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್​ಪಿ) ನಾಯಕರು, ಉಭಯ ಸದನಗಳ ಸಂಸದರು, ಮಾಜಿ ಮುಖ್ಯಮಂತ್ರಿಗಳು, ಮಾಜಿ ಪಿಸಿಸಿ ಅಧ್ಯಕ್ಷರು, ಮಾಜಿ ಸಿಎಲ್​ಪಿ ನಾಯಕರು ಮತ್ತು ಮಾಜಿ ಕೇಂದ್ರ ಸಚಿವರು ಸೇರಿದಂತೆ ಕನಿಷ್ಠ 400 ಪ್ರಮುಖ ಕಾಂಗ್ರೆಸ್ ಮುಖಂಡರು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ : ಮಹಾಕುಂಭ ಮೇಳ: 3.5 ಕೋಟಿ ಭಕ್ತರು, ಸಾಧು - ಸಂತರಿಂದ 'ಅಮೃತ ಸ್ನಾನ' - MAHAKUMBHA MELA

ETV Bharat Logo

Copyright © 2025 Ushodaya Enterprises Pvt. Ltd., All Rights Reserved.