ETV Bharat / health

ನೀವು ಸಸ್ಯಾಹಾರಿಯಾಗಿದ್ದರೆ ಯಾವ ಆಹಾರ ಸೇವಿಸಬೇಕು ಗೊತ್ತೇ? ತಜ್ಞರು ಸೂಚಿಸಿದ ಪ್ರೋಟೀನ್ ಭರಿತ ಆಹಾರಗಳ ಲಿಸ್ಟ್ ಇಲ್ಲಿದೆ - PROTEIN RICH VEGETARIAN FOOD

Protein Rich Food Vegetarian: ಸಸ್ಯಾಹಾರಿಯಾಗಿರುವ ನೀವು ಅಪೌಷ್ಟಿಕತೆಯಿಂದ ಬಳಲುತ್ತಿದ್ದೀರಾ? ನಿಮಗಾಗಿ ತಜ್ಞರು ತಿಳಿಸಿರುವ ಪ್ರೋಟೀನ್ ಭರಿತ ಆಹಾರಗಳ ಪಟ್ಟಿ ಇಲ್ಲಿದೆ ನೋಡಿ.

PROTEIN RICH FOOD VEGETARIAN  PROTEIN RICH FOOD  VEGETARIAN FOOD SOURCES OF PROTEIN  PROTEIN RICH VEGETARIAN FOOD
ಸಾಂದರ್ಭಿಕ ಚಿತ್ರ (Getty Images)
author img

By ETV Bharat Health Team

Published : Jan 15, 2025, 1:09 PM IST

Protein Rich Food Vegetarian: ನಮ್ಮ ದೇಹದಲ್ಲಿ ಸರಿಯಾದ ಚಯಾಪಚಯ ಕ್ರಿಯೆಗೆ ಹಾಗೂ ಸ್ನಾಯುಗಳು ಸದೃಢಗೊಳ್ಳಲು ಪ್ರೋಟೀನ್ ತುಂಬಾ ಅವಶ್ಯವಾಗಿದೆ. ನೀವು ಕೈಗೊಳ್ಳುವ ಕಾರ್ಯಗಳಲ್ಲಿ ಕ್ರಿಯಾಶೀಲ ಮತ್ತು ಚೈತನ್ಯಶೀಲರಾಗಿರಲು ಹೆಚ್ಚಿನ ಪ್ರೋಟೀನ್ ಭರಿತ ಆಹಾರಗಳನ್ನು ಸೇವಿಸಬೇಕಾಗುತ್ತದೆ. ಸಸ್ಯಾಹಾರಿಗಳು ಪ್ರೋಟೀನ್ ಪಡೆಯಲು ಈ ಆಹಾರ ಪದಾರ್ಥಗಳನ್ನು ತಮ್ಮ ದೈನಂದಿನ ಆಹಾರದಲ್ಲಿ ಸೇರಿಸಿಕೊಳ್ಳಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ.

ಪ್ರೋಟೀನ್ ಭರಿತ ಆಹಾರಗಳು ಯಾವುವು?

ಬೇಳೆಕಾಳುಗಳು: ತೊಗರಿಬೇಳೆ, ಹೆಸರು ಕಾಳು ಮತ್ತು ಉದ್ದಿನ ಬೇಳೆಗಳಲ್ಲಿರುವ ಪೋಷಕಾಂಶಗಳು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ. ದ್ವಿದಳ ಧಾನ್ಯಗಳಲ್ಲಿ ವಿಶೇಷವಾಗಿ ಪ್ರೋಟೀನ್‌ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. ಈ ಬೇಳೆ ಕಾಳುಗಳಲ್ಲಿರುವ ಫೈಬರ್ ಅಂಶವು ದೇಹದ ತೂಕವನ್ನು ಸಹ ನಿಯಂತ್ರಿಸುತ್ತದೆ. ಈ ಆಹಾರಗಳಲ್ಲಿರುವ ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳು ಹೃದಯ ಸಮಸ್ಯೆಗಳು ಹಾಗೂ ಕ್ಯಾನ್ಸರ್‌ನಂತಹ ದೀರ್ಘಕಾಲದ ಕಾಯಿಲೆಗಳಿಂದ ರಕ್ಷಿಸುತ್ತವೆ ಎಂದು ತಜ್ಞರು ತಿಳಿಸುತ್ತಾರೆ.

ದ್ವಿದಳ ಧಾನ್ಯಗಳು: ಕಿಡ್ನಿ ಬೀನ್ಸ್‌ ಅಥವಾ ರಾಜ್ಮಾ, ಕಪ್ಪು ಬೀನ್ಸ್​ನಂತಹ ದ್ವಿದಳ ಧಾನ್ಯಗಳಲ್ಲಿ ಅಧಿಕ ಪ್ರೋಟೀನ್ ಇರುತ್ತದೆ. ಇವುಗಳನ್ನು ಆಹಾರದಲ್ಲಿ ಸೇರಿಸುವುದರಿಂದ ದೇಹಕ್ಕೆ ಸಾಕಷ್ಟು ಪ್ರೋಟೀನ್, ವಿಟಮಿನ್ ಬಿ ಮತ್ತು ಫೈಬರ್ ಲಭಿಸುತ್ತದೆ. ಈ ಆಹಾರಗಳಲ್ಲಿರುವ ಉತ್ಕರ್ಷಣ ನಿರೋಧಕಗಳು ಹಾಗೂ ಉರಿಯೂತ ನಿವಾರಕ ಗುಣಗಳು ಹೃದ್ರೋಗ ಮತ್ತು ಕ್ಯಾನ್ಸರ್​ನಂತಹ ಕಾಯಿಲೆಗಳಿಂದ ರಕ್ಷಿಸಲು ಪೂರಕವಾಗಿವೆ ಎಂದು ತಜ್ಞರು ಹೇಳುತ್ತಾರೆ.

ಡ್ರೈ ಫ್ರೂಟ್ಸ್: ಬಾದಾಮಿ, ಪಿಸ್ತಾ ಹಾಗೂ ವಾಲ್ನಟ್​ನಂತಹ ಹೆಚ್ಚು ಪ್ರೋಟೀನ್ ಭರಿತ ಡ್ರೈ ಫ್ರೂಟ್ಸ್ ಪ್ರತಿದಿನ ಸೇವಿಸುವುದು ಹೃದಯದ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇವು ದೇಹಕ್ಕೆ ಪ್ರೋಟೀನ್‌, ಕೆಲವು ಜೀವಸತ್ವಗಳು, ನಾರಿನಂಶದಂತಹ ಪೋಷಕಾಂಶಗಳನ್ನು ಒದಗಿಸುತ್ತವೆ. ಈ ಡ್ರೈ ಫ್ರೂಟ್ಸ್ ಹೆಚ್ಚಿನ ಕ್ಯಾಲೋರಿಗಳನ್ನು ಹೊಂದಿರುತ್ತವೆ. ಇವುಗಳನ್ನು ಮಿತವಾಗಿ ಸೇವಿಸಬೇಕು ಎಂದು ತಜ್ಞರು ತಿಳಿಸುತ್ತಾರೆ. 2023ರಲ್ಲಿ ನ್ಯೂಟ್ರಿಯೆಂಟ್ಸ್ ಜರ್ನಲ್‌ನಲ್ಲಿ ಪ್ರಕಟವಾದ 'ನಟ್ಸ್​ ಮತ್ತು ಹೃದಯರಕ್ತನಾಳದ ಕಾಯಿಲೆಗಳ ಫಲಿತಾಂಶಗಳು: ಪುರಾವೆಗಳು ಮತ್ತು ಭವಿಷ್ಯದ ನಿರ್ದೇಶನಗಳ ವಿಮರ್ಶೆ' (Nuts and Cardiovascular Disease Outcomes: A Review of the Evidence and Future Directions) ಎಂಬ ಅಧ್ಯಯನದಲ್ಲಿ ಈ ವಿಷಯ ಬಹಿರಂಗವಾಗಿದೆ (ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ).

ಹಸಿಬಟಾಣಿ: ಹಸಿಬಟಾಣಿ ಬ್ಯಾಕ್ಟೀರಿಯಾ ವಿರೋಧಿ, ಶಿಲೀಂಧ್ರ ವಿರೋಧಿ, ಉರಿಯೂತ ನಿವಾರಕ ಹಾಗೂ ಉತ್ಕರ್ಷಣ ನಿರೋಧಕ ಗುಣಗಳು ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯವಾಗುತ್ತದೆ. ಜೊತೆಗೆ ವಿವಿಧ ರೋಗಗಳನ್ನು ತಪ್ಪಿಸಬಹುದು. ಒಂದು ಕಪ್ ಹಸಿಬಟಾಣಿಯಲ್ಲಿ 8 ಗ್ರಾಂ ವರೆಗೆ ಪ್ರೋಟೀನ್ ಇರುತ್ತದೆ. ಇದರೊಂದಿಗೆ ವಿಟಮಿನ್ ಎ, ಕೆ ಮತ್ತು ಸಿ ಮತ್ತು ಫೈಬರ್‌ನಂತಹ ಪೋಷಕಾಂಶಗಳು ಸಮೃದ್ಧವಾಗಿವೆ ಎಂದು ತಜ್ಞರು ವಿವರಿಸುತ್ತಾರೆ.

ಸೋಯಾಬೀನ್: ತಜ್ಞರು ತಿಳಿಸುವ ಪ್ರಕಾರ, ಸೋಯಾಬೀನ್ ಮಾಂಸಕ್ಕೆ ಹೋಲಿಸಬಹುದು. ಅಷ್ಟೊಂದು ಪ್ರೋಟೀನ್ ಮಟ್ಟವನ್ನು ಹೊಂದಿರುತ್ತದೆ. ಇದರಲ್ಲಿರುವ ಬಿ, ಡಿ ಹಾಗೂ ಇ ಜೀವಸತ್ವಗಳು, ಕ್ಯಾಲ್ಸಿಯಂ, ಕಬ್ಬಿಣ, ಸತು ಹಾಗೂ ಅಪರ್ಯಾಪ್ತ ಕೊಬ್ಬಿನಾಮ್ಲಗಳು ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡುತ್ತದೆ. ಇದು ರಕ್ತದೊತ್ತಡ ನಿಯಂತ್ರಣದಲ್ಲಿಡುತ್ತದೆ ಎಂದು ತಜ್ಞರು ತಿಳಿಸುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ಈ ವೆಬ್​ಸೈಟ್​ನ್ನು ವೀಕ್ಷಿಸಬಹುದು: https://pmc.ncbi.nlm.nih.gov/articles/PMC5748761/

ಓದುಗರಿಗೆ ಸೂಚನೆ : ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆ ಆಧರಿಸಿ ನಾವು ಈ ಮಾಹಿತಿ ನಿಮಗೆ ನೀಡಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣಿತ ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.

ಇವುಗಳನ್ನೂ ಓದಿ:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.