ಪ್ರತೀ ಜೂನ್ 14ರಂದು ಅಂತಾರಾಷ್ಟ್ರೀಯ ಸ್ನಾನ ದಿನವನ್ನು (International Bath Day) ಆಚರಿಸಲಾಗುತ್ತದೆ. ಈ ದಿನವು ಸ್ನಾನದ ಮೇಲಿನ ಪ್ರೀತಿಯನ್ನು ಆಚರಿಸುವ ಗುರಿಯನ್ನು ಹೊಂದಿದೆ. ಸ್ನಾನ ಸಾಮಾನ್ಯ ವಿಷಯವೆನಿಸಿದರೂ ಅತ್ಯಗತ್ಯ.
ಮಾನಸಿಕ ಆರೋಗ್ಯಕ್ಕೂ ಪೂರಕ: ದಿನಕ್ಕೆ ಎರಡು ಬಾರಿ ಸ್ನಾನ ಮಾಡುತ್ತೀರಾ?. ಸ್ನಾನ ಕೇವಲ ದೈಹಿಕ ಶುದ್ಧೀಕರಣಕ್ಕೆ ಸೀಮಿತವಾಗಿಲ್ಲ. ನಮ್ಮ ಮಾನಸಿಕ ಮತ್ತು ಭಾವನಾತ್ಮಕ ಯೋಗಕ್ಷೇಮವನ್ನೂ ಸುಧಾರಿಸುತ್ತದೆ. ಜೊತೆಗೆ, ನಮ್ಮ ಪ್ರಶಾಂತತೆಯನ್ನೂ ವರ್ಧಿಸುತ್ತದೆ. ಬೆಚ್ಚಗಿನ ನೀರು ಮೈ ಮೇಲೆ ಬೀಳುವುದರಿಂದ ಆರೋಗ್ಯಕ್ಕೂ ಪೂರಕ. ಅಷ್ಟೇ ಅಲ್ಲ, ಎಲೆಕ್ಟ್ರಾನಿಕ್ ಸಾಧನಗಳಿಂದ ಬೇರ್ಪಟ್ಟು, ನಮ್ಮ ಇಂದ್ರಿಯಗಳ ಅನುಭವವನ್ನು ಸಂಪೂರ್ಣವಾಗಿ ಆನಂದಿಸಲು ಇದು ನಮಗೆ ಒಂದು ಕ್ಷಣವನ್ನು ಒದಗಿಸುತ್ತದೆ. ನೀರು ನಮ್ಮ ಚರ್ಮವನ್ನು ಸ್ಪರ್ಶಿಸಿ, ಶಾಂತಿ ಸಿಕ್ಕಂತೆ ಅನಿಸಿದಾಗ ನಾವು ಆ ಕ್ಷಣವನ್ನು ಸಂಪೂರ್ಣವಾಗಿ ಅನುಭವಿಸಬಹುದು.
ಅಂತಾರಾಷ್ಟ್ರೀಯ ಸ್ನಾನ ದಿನದ ಇತಿಹಾಸ:ಶವರ್, ಬಾತ್ ಟಬ್ಗಳು, ಸ್ಪೆಷಲೈಸ್ಡ್ ವಾಟರ್ ಟ್ಯಾಪ್ಸ್ ಇಂದಿನ ಆಧುನಿಕ ಬಾತ್ರೂಮ್ನ ಒಂದು ಸಾಮಾನ್ಯ ದೃಶ್ಯ. ಆದರೆ ಹಿಂದಿನ ದಿನಗಳಲ್ಲಿ ಜನರಿಗೆ ಸ್ನಾನ ಕಠಿಣ, ಅಹಿತಕರ ಅನುಭವ. ಉದಾಹರಣೆಗೆ, ಸ್ನಾನಕ್ಕೆ ಸೂಕ್ತ ಕೊಳಾಯಿ ವ್ಯವಸ್ಥೆ ಇರಲಿಲ್ಲ. 19ನೇ ಶತಮಾನದಲ್ಲಿ ಇಂಗ್ಲೆಂಡ್‌ನಲ್ಲಿ ಕಂಟೇನರ್ ರೀತಿ ವ್ಯವಸ್ಥೆ ಇರುತ್ತಿತ್ತು. ಪ್ರಪಂಚದ ಇತರ ಪ್ರದೇಶಗಳಲ್ಲಿನ ಜನರು ತಮ್ಮನ್ನು ಸ್ವಚ್ಛಗೊಳಿಸಲು ಸ್ಥಳೀಯ ಕೊಳ ಅಥವಾ ನದಿಯ ಮೊರೆ ಹೋಗುತ್ತಿದ್ದರು. ಪರಿಣಾಮ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತಿತ್ತು.
ಒಂದು ವಸ್ತುವನ್ನು ನೀರಿನಲ್ಲಿ ಮುಳುಗಿಸುವ ಮೂಲಕ ಅದರ ಪರಿಮಾಣವನ್ನು ನಿಖರವಾಗಿ ಲೆಕ್ಕಹಾಕಬಹುದು ಎಂದು ಹೆಸರಾಂತ ಗ್ರೀಕ್ ವಿಜ್ಞಾನಿ ಆರ್ಕಿಮೆಡೆಸ್ (Archimedes) ಮಾಡಿದ ಆವಿಷ್ಕಾರವನ್ನು ಅಂತಾರಾಷ್ಟ್ರೀಯ ಸ್ನಾನದ ದಿನ ನೆನಪಿಸುತ್ತದೆ. ಅಂದು, ಸ್ನಾನ ಎಂಬ ಪರಿಕಲ್ಪನೆ ಹುಟ್ಟಿಕೊಂಡಿತು. ಈ ಆವಿಷ್ಕಾರವನ್ನು ಮಾಡಿದ ನಂತರ, ಸ್ನಾನದ ಬಗ್ಗೆ ಇತರರಿಗೆ ಹೇಳಲು ಅವರು ಉತ್ಸುಕರಾಗಿದ್ದರು. ಬಾತ್ಟಬ್ನಿಂದ ಹೊರಬಂದು ಈ ವಿಚಾರವನ್ನು ಎಲ್ಲರಿಗೂ ಹೇಳಲಿಚ್ಛಿಸಿದರು. ಸಿರಾಕ್ಯೂಸ್‌ನ ಬೀದಿಗಳಲ್ಲಿ ಓಡಿದರು. ಎಲ್ಲರೊಂದಿಗೂ ಈ ವಿಚಾರವನ್ನು ಹಂಚಿಕೊಂಡರು.