ETV Bharat / health

ಬೆಳಗ್ಗೆದ್ದು ಟೀ ಇಲ್ಲವೇ ಕಾಫಿ ಕುಡಿಯುವಿರಾ? ಇವುಗಳ ಬದಲು ಇಲ್ಲಿವೆ ನೋಡಿ ಹೆಲ್ದಿ ಡ್ರಿಂಕ್ಸ್‌ - HEALTHY EMPTY STOMACH DRINKS

ಬೆಳಿಗ್ಗೆ ಟೀ ಇಲ್ಲವೇ ಕಾಫಿ ಕುಡಿಯುವ ಬದಲು ಈ ಆರೋಗ್ಯಕರ ಪಾನೀಯಗಳನ್ನು ಸೇವಿಸಿದರೆ, ತೂಕ ಇಳಿಕೆಯ ಜೊತೆಗೆ ರೋಗನಿರೋಧಕ ಶಕ್ತಿಯೂ ಸುಧಾರಣೆಯಾಗುತ್ತದೆ. ಮನೆಯಲ್ಲಿ ಲಭ್ಯವಿರುವ ವಸ್ತುಗಳಿಂದಲೇ ಈ ಪಾನೀಯಗಳನ್ನು ತಯಾರಿಸಬಹುದು.

HEALTHY EMPTY STOMACH DRINKS  EMPTY STOMACH LEMON WATER BENEFITS  EMPTY STOMACH HONEY LEMON WATER  EMPTY STOMACH AMLA BENEFITS
ಸಾಂದರ್ಭಿಕ ಚಿತ್ರ (Getty Images)
author img

By ETV Bharat Health Team

Published : Feb 19, 2025, 3:54 PM IST

Empty Stomach Drinks for Weight Loss: ನಮ್ಮಲ್ಲಿ ಹಲವರು ಬೆಳಗ್ಗೆದ್ದ ತಕ್ಷಣ ಕಾಫಿ ಅಥವಾ ಚಹಾವನ್ನು ಮಿಸ್​ ಮಾಡದೇ ಕುಡಿಯುತ್ತಾರೆ. ಇವುಗಳ ಬದಲಿಗೆ ಮನೆಯಲ್ಲಿ ಲಭ್ಯವಿರುವ ಕೆಲವು ಪದಾರ್ಥಗಳಿಂದ ಆರೋಗ್ಯಕರ ಪಾನೀಯಗಳನ್ನು ಸಿದ್ಧಪಡಿಸಿ ಸೇವಿಸುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಿಸಬಹುದು ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ.

ಆಮ್ಲಾ: ಆಮ್ಲಾ ವಿಟಮಿನ್ ಸಿಯಲ್ಲಿ ಮಾತ್ರವಲ್ಲದೆ, ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಇವು ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತವೆ. ಅದಕ್ಕಾಗಿಯೇ ಆಮ್ಲಾ ತಿರುಳುಗಳನ್ನು ಬೆಚ್ಚಗಿನ ನೀರಿನೊಂದಿಗೆ ಬೆರೆಸಿ ಕಷಾಯದಂತೆ ಸೇವಿಸುವುದರಿಂದ ಉತ್ತಮ ಫಲಿತಾಂಶ ಸಿಗುತ್ತದೆ.

HEALTHY EMPTY STOMACH DRINKS  EMPTY STOMACH LEMON WATER BENEFITS  EMPTY STOMACH HONEY LEMON WATER  EMPTY STOMACH AMLA BENEFITS
ಜೇನುತುಪ್ಪ (Getty Images)

ಜೇನುತುಪ್ಪ: ವಿಶೇಷವಾಗಿ ತಂಪಾಗಿನ ವಾತಾವರಣದಲ್ಲಿ ಬೆಚ್ಚಗಿನ ನೀರಿನಲ್ಲಿ ಜೇನುತುಪ್ಪ ಹಾಗೂ ನಿಂಬೆ ರಸ ಬೆರೆಸಿ ಕುಡಿಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬಹುದು. ಇದರ ಉತ್ಕರ್ಷಣ ನಿರೋಧಕ, ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳು ದೇಹಕ್ಕೆ ಹಾನಿಕಾರಕ ಬ್ಯಾಕ್ಟೀರಿಯಾ ಹಾಗೂ ದೇಹದ ಇತರ ಸೂಕ್ಷ್ಮಜೀವಿಗಳ ವಿರುದ್ಧ ಹೋರಾಡಲು ಅಗತ್ಯ ಶಕ್ತಿ ಒದಗಿಸುತ್ತದೆ ಎಂದು ತಜ್ಞರು ಹೇಳುತ್ತಾರೆ.

ನೀವು ಬೆಳಿಗ್ಗೆ ಟೀ ಇಲ್ಲವೇ ಕಾಫಿ ಕುಡಿಯುತ್ತೀರಾ? - ಸಾಂದರ್ಭಿಕ ಚಿತ್ರ (Getty Images)

ನಿಮ್ಮ ದೈನಂದಿನ ಆಹಾರದಲ್ಲಿ ಜೇನುತುಪ್ಪ ಸೇರಿಸುವುದರಿಂದ ಹೆಚ್ಚುವರಿ ತೂಕ ಕಳೆದುಕೊಳ್ಳಲು ಸಹಾಯ ಮಾಡುತ್ತದೆ. 2020ರಲ್ಲಿ ನ್ಯೂಟ್ರಿಷನ್ ಆ್ಯಂಡ್ ಮೆಟಾಬಾಲಿಸಮ್ ಜರ್ನಲ್‌ನಲ್ಲಿ ಪ್ರಕಟವಾದ 'ಬೊಜ್ಜು ವ್ಯಕ್ತಿಗಳಲ್ಲಿ ತೂಕ ನಷ್ಟದ ಮೇಲೆ ಜೇನುತುಪ್ಪ ಹಾಗೂ ನಿಂಬೆ ರಸದ ಪರಿಣಾಮ: ಯಾದೃಚ್ಛಿಕ ನಿಯಂತ್ರಿತ ಪ್ರಯೋಗ' (The impact of honey and lemon juice on weight loss in obese individuals: A randomized controlled trial) ಎಂಬ ಅಧ್ಯಯನದಲ್ಲಿ ತಿಳಿದು ಬಂದಿದೆ. (ಸಂಶೋಧನಾ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ)

ತುಳಸಿ: ಪ್ರತಿದಿನ ತುಳಸಿ ಎಲೆಗಳನ್ನು ಅಗಿಯುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಇದಕ್ಕಾಗಿ ಐದು ತುಳಸಿ ಎಲೆಗಳನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿಟ್ಟು ಮರುದಿನ ಬೆಳಗಾಗುವ ಮೊದಲು ಸೇವಿಸಿ ಆ ನೀರನ್ನು ಕುಡಿಯಬೇಕು ಎಂದು ಹೇಳಲಾಗುತ್ತದೆ. ಹೀಗೆ ಮಾಡುವುದರಿಂದ ಕೆಮ್ಮು ಮತ್ತು ಶೀತದಂತಹ ಸೋಂಕುಗಳಿಂದ ತಕ್ಷಣವೇ ಪರಿಹಾರ ದೊರೆಯುತ್ತದೆ. ಇದಲ್ಲದೆ, ತುಳಸಿ ರಸ ಕುಡಿಯುವುದು ಚರ್ಮ, ಕೂದಲು ಮತ್ತು ಹಲ್ಲುಗಳಿಗೆ ತುಂಬಾ ಒಳ್ಳೆಯದು ಎಂದು ತಜ್ಞರು ತಿಳಿಸುತ್ತಾರೆ.

ಬೆಳ್ಳುಳ್ಳಿ (Getty Images)

ಬೆಳ್ಳುಳ್ಳಿ: ನೈಸರ್ಗಿಕ ಪ್ರತಿಜೀವಕ ಎಂದು ಕರೆಯಲ್ಪಡುವ ಬೆಳ್ಳುಳ್ಳಿಯು ಹೆಚ್ಚಿನ ಆ್ಯಂಟಿಮೈಕ್ರೊಬಿಯಲ್ ಮತ್ತು ಆ್ಯಂಟಿವೈರಲ್ ಗುಣಗಳನ್ನು ಹೊಂದಿದೆ. ಇವು ದೇಹಕ್ಕೆ ಶೀತ, ಕೆಮ್ಮು ಸೇರಿದಂತೆ ಇತರೆ ಸೋಂಕುಗಳ ವಿರುದ್ಧ ಹೋರಾಡಲು ಅಗತ್ಯವಾದ ಶಕ್ತಿಯನ್ನು ಒದಗಿಸುತ್ತವೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಹೃದಯ, ಶ್ವಾಸಕೋಶದ ಸಮಸ್ಯೆಗಳನ್ನೂ ತಡೆಯುತ್ತದೆ.

ನಿಮ್ಮ ದೈನಂದಿನ ಆಹಾರದಲ್ಲಿ ಬೆಳ್ಳುಳ್ಳಿಯನ್ನು ಸೇರಿಸಿಕೊಳ್ಳಲು ಹಾಗೂ ಮಲಗುವ ಮುನ್ನ ಎರಡು ಹಸಿ ಬೆಳ್ಳುಳ್ಳಿ ಎಸಳುಗಳನ್ನು ಅಗಿಯಬೇಕು. ಬಳಿಕ ಬೆಚ್ಚಗಿನ ನೀರು ಕುಡಿಯಬೇಕು. ಇದು ರೋಗನಿರೋಧಕ ಶಕ್ತಿ ಹೆಚ್ಚಿಸುವುದಲ್ಲದೆ ಜೀರ್ಣಾಂಗ ವ್ಯವಸ್ಥೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

ಹೆಚ್ಚಿನ ಮಾಹಿತಿಗೆ ಈ ವೆಬ್​ಸೈಟ್​ಗಳನ್ನು ವೀಕ್ಷಿಸಬಹುದು:

ಓದುಗರಿಗೆ ಮುಖ್ಯ ಸೂಚನೆ: ಈ ಲೇಖನದಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ, ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ಒದಗಿಸುತ್ತಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣಿತ ವೈದ್ಯರ ಸಲಹೆಗಳನ್ನು ತೆಗೆದುಕೊಳ್ಳುವುದು ಉತ್ತಮ.

ಇವುಗಳನ್ನೂ ಓದಿ:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.